ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ದೊಡ್ಮನೆಯಲ್ಲಿ ಜಂಟಿಗಳ ತಪ್ಪಿಗೆ ಒಂಟಿಗಳಿಗೆ ಶಿಕ್ಷೆ: ಏನು ಮಾಡಿದ್ರು ಬಿಗ್ ಬಾಸ್

ಬಿಗ್ ಬಾಸ್ ಮನೆಯಲ್ಲಿ ಎಲ್ಲ ಜಂಟಿಗಳು ತಾವು ಮಲಗುವ ಹಾಗೂ ಶೌಚಾಲಯ (ಸ್ನಾನ ಮತ್ತು ಟಾಯ್ಲೆಟ್) ಬಳಸುವ ಸಮಯವನ್ನು ಹೊರತುಪಡಿಸಿ ಉಳಿದೆಲ್ಲಾ ಸಮಯದಲ್ಲಿಯೂ ಜಂಟಿಯಾಗಿಯೇ ಇರಬೇಕು ಎಂಬ ನಿಯಮವನ್ನು ಮಾಡಲಾಗಿದೆ. ಆದರೆ, ಈ ನಿಯಮವನ್ನು ಅವರು ಮುರಿದಿದ್ದಾರೆ.

Bigg Boss

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶುರುವಾಗಿ ಕೇವಲ ಎರಡು ದಿನ ಆಗಿದೆಯಷ್ಟೆ. ಅದಾಗಲೇ ಮನೆ ಟ್ವಿಸ್ಟ್​ಗಳಿಂದ ರೋಸಿ ಹೋಗಿದೆ. ಗ್ರ್ಯಾಂಡ್ ಓಪನಿಂದ ದಿನ ಕಿಚ್ಚ ಸುದೀಪ್ ಓಟಿಂಗ್ ಮೂಲಕ ಸ್ಪರ್ಧಿಗಳನ್ನು ಒಂಟಿ ಮತ್ತು ಜಂಟಿ ಎಂಬ ಟ್ವಿಸ್ಟ್ ಮೂಲಕ ಕಳುಹಿಸಿದರು. ಬಳಿಕ ಮನೆಗೆ ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ಒಬ್ಬರನ್ನು ಎಲಿಮಿನೇಷನ್ ಮಾಡಬೇಕಾಗಿ ಬಂತು. ಇದರಲ್ಲಿ ರಕ್ಷಿತಾ ಶೆಟ್ಟಿ ದೊಡ್ಮನೆಯಿಂದ ಆಚೆ ಹೋದರು. ಇದಾದ ಬಳಿಕ ಇಂದು ಎರಡನೇ ದಿನ ಕೂಡ ಬಿಗ್ ಬಾಸ್ ಸ್ಪರ್ಧಿಗಳಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದ್ದಾರೆ.

ಈ ಶಾಕ್ ಮಧ್ಯೆ ಸ್ಪರ್ಧಿಗಳು ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಕಠಿಣ ಶಿಕ್ಷೆ ವಿಧಿಸಿದ್ದಾರೆ. ಸದ್ಯ ಬಿಗ್​ ಬಾಸ್ ಮನೆಯಲ್ಲಿ 6 ಕಂಟೆಸ್ಟೆಂಟ್​ಗಳು ಒಂಟಿಗಳು ಇದ್ದು 12 ಸ್ಪರ್ಧಿಗಳು ಜಂಟಿಗಳಾಗಿದ್ದಾರೆ. ಇದರಲ್ಲಿ ಒಂದು ರೀತಿ ಒಂಟಿಗಳು ರಾಜನಂತೆ ಅಧಿಕಾರ ಇರುತ್ತದೆ. ಇವರ ಅಡಿಯಾಳುಗಳಾಗಿ ಜಂಟಿಗಳು ಇರಬೇಕು. ಜಂಟಿಗಳಿಬ್ಬರು ಕೆಲ ಸಂದರ್ಭಗಳಲ್ಲಿ ಬಿಟ್ಟು ಉಳಿದ ಎಲ್ಲ ಸಮಯದಲ್ಲಿ ಪರಸ್ಪರ ಹಗ್ಗ ಕಟ್ಟಿಕೊಂಡು ಜೊತೆಯೆಲ್ಲೇ ಇರಬೇಕು. ಜಂಟಿಗಳು ಯಾವುದೇ ರೂಲ್ಸ್ ಬ್ರೇಕ್ ಮಾಡದಂತೆ ನೋಡಿಕೊಳ್ಳುವುದು ಕೂಡ ಒಂಟಿಗಳ ಕೆಲಸವಾಗಿದೆ.

BBK 12: ಎರಡೇ ದಿನಕ್ಕೆ ಹೊತ್ತಿ ಉರಿದ ಬಿಗ್ ಬಾಸ್ ಮನೆ: ಗಿಲ್ಲಿ-ಅಶ್ವಿನಿ ನಡುವೆ ಮಾತಿನ ಚಕಮಕಿ

ಬಿಗ್ ಬಾಸ್ ಮನೆಯಲ್ಲಿ ಎಲ್ಲ ಜಂಟಿಗಳು ತಾವು ಮಲಗುವ ಹಾಗೂ ಶೌಚಾಲಯ (ಸ್ನಾನ ಮತ್ತು ಟಾಯ್ಲೆಟ್) ಬಳಸುವ ಸಮಯವನ್ನು ಹೊರತುಪಡಿಸಿ ಉಳಿದೆಲ್ಲಾ ಸಮಯದಲ್ಲಿಯೂ ಜಂಟಿಯಾಗಿಯೇ ಇರಬೇಕು ಎಂಬ ನಿಯಮವನ್ನು ಮಾಡಲಾಗಿದೆ. ಆದರೆ, ಈ ನಿಯಮವನ್ನು ಜಂಟಿಗಳು ಮರೆತಿದ್ದಾರೆ. ಜಂಟಿಗಳು ಹಗ್ಗವನ್ನು ಕಟ್ಟಿಕೊಳ್ಳದೇ ಒಬ್ಬಂಟಿಯಾಗಿ ಸುತ್ತಾಡಿದ್ದಾರೆ. ಇದು ಬಿಗ್ ಬಾಸ್ ಗಮನಕ್ಕೆ ಬಂದಿದ್ದು, ಮೇಲ್ವಿಚಾರಣೆ ಜವಾಬ್ದಾರಿ ಹೊಂದಿರುವ ಒಂಟಿಗಳಿಗೆ ಶಿಕ್ಷೆ ನೀಡಲಾಗಿದೆ.

ತಪ್ಪು ಮಾಡಿದ್ದು ಜಂಟಿಗಳಾದರೂ ಶಿಕ್ಷೆ ಮಾತ್ರ ಒಂಟಿಗಳಿಗೆ. ನಿನ್ನೆ ರಾತ್ರಿ ಒಂಟಿಗಳು ಗಳಿಸಿದ್ದ 14 ದಿನಸಿಗಳ ಪೈಕಿ 11 ದಿನಸಿ ಸಾಮಾಗ್ರಿಗಳನ್ನು ಈ ಕೂಡಲೇ ಸ್ಟೋರ್​ ರೂಮ್​ಗೆ ತಂದಿಡಬೇಕು ಎಂದು ಬಿಗ್​ ಬಾಸ್ ಆದೇಶಿಸಿದ್ದಾರೆ. ಇದರಿಂದ ಬಿಗ್ ಬಾಸ್ ನೀಡಿದ ಮೊದಲ ಟಾಸ್ಕ್‌ನಲ್ಲಿ ಒಂಟಿಗಳು ಗಳಿಸಿದ್ದ ದಿನಸಿ ಸಾಮಗ್ರಿಗಳು ವಾಪಸ್ ಹೋಗಿದ್ದು, ಅವರು ಬಹುತೇಕ ಉಪವಾಸ ಇರುವ ಸಾಧ್ಯತೆ ಹೆಚ್ಚಾಗಿದೆ.

BBK 12: ಎರಡೇ ದಿನಕ್ಕೆ ಹೊತ್ತಿ ಉರಿದ ಬಿಗ್ ಬಾಸ್ ಮನೆ: ಗಿಲ್ಲಿ-ಅಶ್ವಿನಿ ನಡುವೆ ಮಾತಿನ ಚಕಮಕಿ