BBK 12: ಎರಡೇ ದಿನಕ್ಕೆ ಹೊತ್ತಿ ಉರಿದ ಬಿಗ್ ಬಾಸ್ ಮನೆ: ಗಿಲ್ಲಿ-ಅಶ್ವಿನಿ ನಡುವೆ ಮಾತಿನ ಚಕಮಕಿ
ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ನಡುವೆ ನಾಮಿನೇಷನ್ ವಿಚಾರಕ್ಕೆ ಜಗಳ ಶುರುವಾಗಿದೆ. ಗಿಲ್ಲಿ ಹಾಗೂ ಕಾವ್ಯಾ ಜಂಟಿ ಆಗಿದ್ದಾರೆ. ಅಶ್ವಿನಿ ಅವರು ನಾಮಿನೇಷನ್ನಲ್ಲಿ ಇವರಿಬ್ಬರನ್ನು ನಾಮಿನೇಟ್ ಮಾಡಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿರುವ ಅವರು, ನಾವು ನಿಮ್ಗೆ ಏನೋ ಹೇಳಿದಾಗ ನೀವು ಅದನ್ನ ತುಂಬಾ ಪರ್ಸನಲ್ ಆಗಿ ತೆಗೆದುಕೊಳ್ಳುತ್ತೀರಿ.. ಎಂದು ಕಾರಣ ಕೊಟ್ಟಿದ್ದಾರೆ.

Ashwini and Gilli Nata Fight BBK 12 -

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶುರುವಾಗಿ ಎರಡು ದಿನ ಕಳೆದಿದೆ. ಸಾಮಾನ್ಯವಾಗಿ ಹೊಸ ಸೀಸನ್ ಶುರುವಾದಾಗ ಮೊದಲ ವಾರ ಎಲ್ಲರೂ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ. ಪರಸ್ಪರ ಪ್ರೀತಿಯಿಂದ ಮಾತನಾಡಿಕೊಂಡು ಸಮಯ ಕಳೆಯುತ್ತಾರೆ. ಜಗಳಗಳ ಸನ್ನಿವೇಶ ಎರಡು-ಮೂರು ವಾರಗಳ ನಂತರ ಶುರುವಾಗುತ್ತೆ. ಆದರೆ, ಈ ಬಾರಿಯ ಬಿಗ್ ಬಾಸ್ನಲ್ಲಿ ಶುರುವಾದ ಎರಡೇ ದಿನಕ್ಕೆ ಜಗಳ ಶುರುವಾಗಿದೆ. ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ನಡುವೆ ಬಿಗ್ ಫೈಟ್ ನಡೆದಿದೆ.
ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ನಡುವೆ ನಾಮಿನೇಷನ್ ವಿಚಾರಕ್ಕೆ ಜಗಳ ಶುರುವಾಗಿದೆ. ಗಿಲ್ಲಿ ಹಾಗೂ ಕಾವ್ಯಾ ಜಂಟಿ ಆಗಿದ್ದಾರೆ. ಅಶ್ವಿನಿ ಅವರು ನಾಮಿನೇಷನ್ನಲ್ಲಿ ಇವರಿಬ್ಬರನ್ನು ನಾಮಿನೇಟ್ ಮಾಡಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿರುವ ಅವರು, ನಾವು ನಿಮ್ಗೆ ಏನೋ ಹೇಳಿದಾಗ ನೀವು ಅದನ್ನ ತುಂಬಾ ಪರ್ಸನಲ್ ಆಗಿ ತೆಗೆದುಕೊಳ್ಳುತ್ತೀರಿ.. ಎಂದು ಕಾರಣ ಕೊಟ್ಟಿದ್ದಾರೆ.
ಇಲ್ಲಿಂದ ಇವರಿಬ್ಬರ ನಡುವೆ ಜಗಳ ಶುರುವಾಗಿದೆ. ಅಶ್ವಿನಿ ಅವರು, ನೀವು ಗೌರವಯುತವಾಗಿ ನಡೆದುಕೊಂಡರೆ ಮಾತ್ರ ನಮಗೂ ಒಂದು ಗೌರವ ಎಂದು ಗಿಲ್ಲಿಗೆ ಹೇಳಿದ್ದಾರೆ. ಇವರ ಮಾತಿನಿಂದ ಕೋಪಗೊಂಡ ಗಿಲ್ಲಿ, ಗೌರವ ಇರೋದಕ್ಕೆ ಮೇಡಂ ಅಂತ ಕರೀತಾ ಇರೋದು ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಆಗ ಅಶ್ವಿನಿ ಅವರು, ಇಲ್ಲಾಂದ್ರೆ ಏನು ಅಂತ ಮಾತಾಡ್ತಾ ಇದ್ರಿ ಎಂದು ಕೇಳಿದ್ದಾರೆ. ಅದಕ್ಕೆ ಗಿಲ್ಲಿ, ಇಲ್ಲಾಂದ್ರೆ ಹೋಗೆ.. ಬಾರೆ.. ಅಂತ ಮಾತಾಡ್ತಾ ಇದ್ದೆ ಎಂದು ನೇರವಾಗಿ ಹೇಳಿದ್ದಾರೆ.
ಗಿಲ್ಲಿಯ ಈ ಮಾತು ಅಶ್ವಿನಿ ಅವರನ್ನು ಮತ್ತಷ್ಟು ಕೆರಳಿಸಿದೆ. ಹೋಗೆ.. ಬಾರೆ ಅಂತ ಏಕವಚನ ಎಲ್ಲ ನನ್ನ ಹತ್ರ ನಡೆಯೋದಿಲ್ಲ.. ಹೋಗೆ.. ಬಾರೆ.. ಅಂತ ಮಾತಾಡ್ತೀನಿ ಅಂತ ಯಾರತ್ರ ಮಾತಾಡ್ತಾ ಇದ್ದೀಯಾ.. ಮರಿಯಾದೆ ಕೊಟ್ಟು ಮರಿಯಾದೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಒಟ್ಟಾರೆ ದೊಡ್ಮನೆಯಲ್ಲಿ ನಾಮಿನೇಷನ್ ಬಿಸಿಯ ನಡುವೆ ಜಗಳಗಳ ಕಾವು ಕೂಡ ಎರಡನೇ ದಿನಕ್ಕೆ ಏರಲು ಶುರುವಾಗಿದೆ.
BBK 12: ಬಿಗ್ ಬಾಸ್ನಲ್ಲಿ ರಕ್ಷಿತಾ ಶೆಟ್ಟಿಗೆ ಅವಮಾನ: ಸಾಮಾಜಿಕ ತಾಣಗಳಲ್ಲಿ ಭುಗಿಲೆದ್ದ ಆಕ್ರೋಶ