ಪಾರು ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ (Mokshitha Pai) ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲೂ ಭಾಗವಹಿಸಿ, ಕನ್ನಡಿಗರ ಮನ ಗೆದ್ದಿದ್ದಾರೆ. ದೊಡ್ಮನೆಯೊಳಗೆ ತಮ್ಮ ಸೌಂದರ್ಯ, ಬೋಲ್ಡ್ ಆಗಿ ಆಟವಾಡುವ ರೀತಿ ಹಾಗೂ ನೇರವಾದ ಮಾತುಗಳಿಂದಲೇ ಜನರಿಗೆ ಇಷ್ಟವಾಗಿದ್ದರು. ಬಿಗ್ ಬಾಸ್ ಬಳಿಕ ಮೋಕ್ಷಿತಾ ಪೈ ಸದಾ ಸುತ್ತಾಟದಲ್ಲಿ ಬ್ಯುಸಿ ಇರುತ್ತಿದ್ದರು. ಐಶ್ವರ್ಯಾ ಸಿಂಧೋಗಿ ಹಾಗೂ ಶಿಶಿರ್ ಜೊತೆ ಟೆಂಪಲ್ ರನ್, ವಿವಿಧ ತಾಣಗಳಿಗೆ ಟ್ರಾವೆಲ್ ಮಾಡುತ್ತಾ ಬ್ಯುಸಿಯಾಗಿ ಬಿಟ್ಟಿದ್ದರು.
ಆದರೆ, ಮೋಕ್ಷಿತಾ ಅವರ ಮುಂದಿನ ಪ್ಲ್ಯಾನ್ ಏನು?, ಹೊಸ ಸೀರಿಯಲ್ನಲ್ಲಿ ನಟಿಸುತ್ತಾರ ಅಥವಾ ಸಿನಿಮಾ ಆಫರ್ ಬಂದಿದೆಯೇ ಎಂಬ ಬಗ್ಗೆ ಯಾವುದೇ ಅಪ್ಡೇಟ್ ಇರಲಿಲ್ಲ. ಆದರೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಮೋಕ್ಷಿತಾ ಪೈ ಅವರು ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ವಿನಯ್ ಗೌಡ ಜೊತೆ ಕಾಣಿಸಿಕೊಂಡಿದ್ದಾರೆ.
ಹೌದು, ಈಗ ಬಿಗ್ ಬಾಸ್ ಸೀಸನ್ 10 ಹಾಗೂ 11ರ ಸ್ಪರ್ಧಿಗಳು ಒಂದಾಗಿದ್ದಾರೆ. ವಿನಯ್ ಹಾಗೂ ಮೋಕ್ಷಿ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ. ಇವರಿಬ್ಬರು ಅಪ್ಪಿಕೊಂಡಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇವರಿಬ್ಬರೂ ಸೇರಿ ವೆಬ್ಸೀರಿಸ್ ಒಂದರಲ್ಲಿ ನಟಿಸುತ್ತಿದ್ದು, ಈ ದೃಶ್ಯದ ತುಣುಕು ಎಲ್ಲೆಡೆ ಹರಿದಾಡುತ್ತಿದೆ. ಧೃತಿ ಕ್ರಿಯೇಷನ್ಸ್ನಲ್ಲಿ ನಿರ್ಮಾಣವಾಗುತ್ತಿರುವ ವೆಬ್ ಸೀರಿಸ್ ಇದಾಗಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಬಗ್ಗೆ ಮೋಕ್ಷಿತಾ ಪೈ ಹಾಗೂ ವಿನು್ ಗೌಡ ಇನ್ನಷ್ಟು ಮಾಹಿತಿ ನೀಡಬೇಕಿದೆ.
ಇದರ ಮಧ್ಯೆ ಮೋಕ್ಷಿತಾ ನಟಿಸಿರುವ ಮಿಡಲ್ ಕ್ಲಾಸ್ ರಾಮಾಯಣ ಸಿನಿಮಾ ರಿಲೀಸ್ಗೆ ರೆಡಿ ಆಗಿದೆ. ಈ ಚಿತ್ರದಲ್ಲಿ ಮೋಕ್ಷಿ ಕಪ್ಪು ಬಣ್ಣದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಹುಡುಗಿ ಕಪ್ಪಿದ್ದರೂ ಹುಡುಗ ಏಕೆ ಮದುವೆ ಆಗುತ್ತಾನೆ? ಮದುವೆ ಆದ ಮೇಲೆ ಏನೇನು ಆಗುತ್ತದೆ ಎಂಬುದು ಸಿನಿಮಾದ ಕಥೆ. ಬಿಗ್ ಬಾಸ್ಗೂ ಮೊದಲೇ ಇದರ ಶೂಟಿಂಗ್ ಆಗಿತ್ತು. ಧನುಷ್ ಗೌಡ ನಿರ್ದೇಶನ ಮಾಡಿದ್ದಾರೆ. ವಿನು ಚಿತ್ರದ ನಾಯಕ. ಜಯರಾಮ್ ಗಂಗಪ್ಪನಹಳ್ಳಿ ಈ ಚಿತ್ರದಲ್ಲಿ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಈ ಚಿತ್ರದಲ್ಲಿ ಹಿರಿಯ ನಟ, ನಿರ್ದೇಶಕ ಎಸ್. ನಾರಾಯಣ್ ಅವರು ಮೋಕ್ಷಿತಾ ಅವರ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ವಿಶೇಷ.
Bhagya Lakshmi Serial: ಭಾಗ್ಯ ಮನೆಯವರಿಗೆ ಗೊತ್ತಾಗಿಲ್ಲ ಸತ್ಯ: ಎಸ್ಕೇಪ್ ಆದ ಕಿಶನ್