Bhagya Lakshmi Serial: ಭಾಗ್ಯ ಮನೆಯವರಿಗೆ ಗೊತ್ತಾಗಿಲ್ಲ ಸತ್ಯ: ಎಸ್ಕೇಪ್ ಆದ ಕಿಶನ್
ನಿಜಾಂಶ ಈಗಲೇ ಗೊತ್ತಾಗೋದು ಬೇಡ ಎಂದು ಕಿಶನ್ ಅಲ್ಲಿಂದ ನೇರವಾಗಿ ಜಿಮ್ಗೆ ಹೋಗುತ್ತಾನೆ. ಫಂಕ್ಷನ್ ಎಲ್ಲ ಮುಗಿದ ಬಳಿಕ ಕಿಶನ್ ಬರುತ್ತಾನೆ. ಬಂದ ಕೂಡಲೇ ಕುಸುಮಾ, ಎಲ್ಲೋಗಿದ್ದೆ, ಹಿಂಗೋಗಿ ಬರ್ತೇನೆ ಎಂದವನ ಪತ್ತೆನೇ ಇಲ್ಲ ಎಂದು ಕೇಳಿದ್ದಾರೆ. ಇದಕ್ಕೆ ಹಾಗೊ-ಹೀಗೊ ಒಂದು ಕಾರಣ ನೀಡಿ ಎಸ್ಕೇಪ್ ಆಗಿದ್ದಾನೆ.

Bhagya Lakshmi serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ (Bhagya Lakshmi) ಸಾಕಷ್ಟು ಕುತೂಹಲ ಕೆರಳಿಸುತ್ತಿದೆ. ಭಾಗ್ಯಾಳ ತಂಗಿ ಪೂಜಾಳ ಮದುವೆ ಆಗುತ್ತೊ ಇಲ್ಲವೊ ಎಂಬುದು ರೋಚಕತೆ ಸೃಷ್ಟಿಸಿದೆ. ಯಾಕೆಂದರೆ ಪೂಜಾ ಮದುವೆ ಆಗುವ ಹುಡುಗ ಕಿಶನ್ ಮತ್ಯಾರು ಅಲ್ಲ ಭಾಗ್ಯಾಳ ಬದ್ಧವೈರಿ ಕನ್ನಿಕಾಳ ಸ್ವಂತ ಅಣ್ಣ. ಆದರೆ, ಈ ವಿಚಾರ ಭಾಗ್ಯ ಫ್ಯಾಮಿಲಿಗೆ ಯಾರಿಗೂ ತಿಳಿದಿಲ್ಲ. ಆದರೆ, ಕಿಶನ್ಗೆ ಹಾಗೂ ತಾಂಡವ್ಗೆ ಈ ಸುದ್ದಿ ಗೊತ್ತಾಗಿದೆ.
ಕಿಶನ್ ಭಾಗ್ಯಾಳ ಮನೆಗೆ ಊಟಕ್ಕೆ ಬಂದು ಹೋಗುವಾಗ ನಮ್ಮದೊಂದು ಫಂಕ್ಷನ್ ಇದೆ ನೀವೆ ಕೇಟರಿಂಗ್ ಮಾಡಬೇಕು ಎಂದು ಆರ್ಡರ್ ಕೊಟ್ಟಿದ್ದಾನೆ. ಭಾಗ್ಯ ಕುಟುಂಬ ಮತ್ತು ನನ್ನ ಕುಟುಂಬ ಮೊದಲ ಭೇಟಿಯಲ್ಲಿಯೇ ಒಂದಾಗಲಿ ಎಂದು ಕಿಶನ್ ಪ್ರಾರ್ಥನೆ ಮಾಡಿದ್ದಾನೆ. ಆದರೆ ಕಿಶನ್ ಲೆಕ್ಕಾಚಾರ ತಲೆ ಕೆಳಗಾಗಿದೆ. ಅಲ್ಲಿ ಹೋದ ಭಾಗ್ಯಗೆ ಪದೇ ಪದೇ ಹಿಂಸೆ ಕೊಟ್ಟ, ಮತ್ತೆ ಮತ್ತೆ ಹೀಯಾಳಿಸುತ್ತಿದ್ದ ಕನ್ನಿಕಾ ಎದುರಾಗಿದ್ದಾಳೆ. ಕಿಶನ್ ಆರ್ಡರ್ ನೀಡಿದ ನಂತರ ದೇವಸ್ಥಾನಕ್ಕೆ ಪೂಜಾ ಜೊತೆ ಬರುವ ಭಾಗ್ಯ ಮತ್ತು ಕುಸುಮಾ ಅಡುಗೆ ಮಾಡಲು ಶುರು ಮಾಡಿದ್ದಾರೆ.
ಇದೇ ಸಮಯದಲ್ಲಿ ಅಲ್ಲಿ ಕನ್ನಿಕಾ ಬಂದಿದ್ದಾಳೆ. ಕನ್ನಿಕಾಳನ್ನು ಕಂಡು ಭಾಗ್ಯಾಗೆ ಕೋಪ ಬರುತ್ತದೆ. ಆದರೆ, ಕನ್ನಿಕಾಳೇ ಕಿಶನ್ ಸಹೋದರಿ ಎನ್ನುವ ವಿಚಾರ ಭಾಗ್ಯಗೆ ಗೊತ್ತಾಗಿಲ್ಲ. ಭಾಗ್ಯ-ಕನ್ನಿಕಾ ಎದುರೆದುರು ಆದಾಗ ಎಂದಿನಂತೆ ಮಾತಿನ ಚಕಮಕಿ ನಡೆದಿದೆ. ಭಾಗ್ಯ ಮತ್ತು ಕುಟುಂಬವನ್ನು ಕನ್ನಿಕಾ ಅವಮಾನಿಸಿದ್ದಾಳೆ. ಅಲ್ಲಿ ಪೂಜಾ ಕೂಡ ಇದ್ದಾಳೆ. ಇವರ ನಡುವೆ ಮಾತಿನ ಜಟಾಪಟಿ ನಡೆದಾಗ ಕನ್ನಿಕಾಳಿಗೆ ಪೂಜಾ ತಿರುಗೇಟು ನೀಡಿದ್ದು ಯಾಕೆ ಕನ್ನಿಕಾ ಹೊಟ್ಟೆ ಉರಿಯುತ್ತಿದೆಯಾ, ಹೊಟ್ಟೆ ತಣ್ಣಗಾಗಲು ಲೈಮ್ ಸೋಡಾ ಮಾಡಿ ಕೊಡಲಾ ಎಲ್ಲ ಸರಿ ಹೋಗುತ್ತೆ ಎನ್ನುತ್ತಾಳೆ. ಇದರಿಂದ ಕೆರಳುವ ಕನ್ನಿಕಾ ಏಯ್ ಎಂದು ಕೈ ತೋರಿಸುತ್ತಾಳೆ. ಆಗ ಕನ್ನಿಕಾ ಕೈಯನ್ನು ಪೂಜಾ ತಿರುವುತ್ತಾಳೆ.
ಈ ಎಲ್ಲ ಘಟನೆಯನ್ನು ಕಿಶನ್ ನೋಡುತ್ತಾನೆ. ನಿಜಾಂಶ ಈಗಲೇ ಗೊತ್ತಾಗೋದು ಬೇಡ ಎಂದು ಕಿಶನ್ ಅಲ್ಲಿಂದ ನೇರವಾಗಿ ಜಿಮ್ಗೆ ಹೋಗುತ್ತಾನೆ. ಫಂಕ್ಷನ್ ಎಲ್ಲ ಮುಗಿದ ಬಳಿಕ ಕಿಶನ್ ಬರುತ್ತಾನೆ. ಬಂದ ಕೂಡಲೇ ಕುಸುಮಾ, ಎಲ್ಲೋಗಿದ್ದೆ, ಹಿಂಗೋಗಿ ಬರ್ತೇನೆ ಎಂದವನ ಪತ್ತೆನೇ ಇಲ್ಲ ಎಂದು ಕೇಳಿದ್ದಾರೆ. ಇದಕ್ಕೆ ಹಾಗೊ-ಹೀಗೊ ಒಂದು ಕಾರಣ ನೀಡಿ ಎಸ್ಕೇಪ್ ಆಗಿದ್ದಾನೆ.
ಬಳಿಕ ಮನೆಗೆ ಹೋಗಿ ಪೂಜಾ ಕಿಶನ್ಗೆ ಕಾಲ್ ಮಾಡಿ, ನಾಳೆ ನಿನಗೆ ರಜೆ ಅಲ್ವಾ.. ನಿನಗೊಂದು ಸರ್ಪ್ರೈಸ್ ಇದೆ ಎಂದು ಹೇಳಿ ಕಾಲ್ ಕಟ್ ಮಾಡಿದ್ದಾಳೆ. ಮೊದಲೇ ಟೆನ್ಶನ್ನಲ್ಲಿರುವ ಕಿಶನ್ಗೆ ಈ ಸರ್ಪ್ರೈಸ್ ಏನು ಎಂಬುದು ತಲೆ ಹಾಳು ಮಾಡಿಸಿದೆ. ಪೂಜಾ ಡೈರೆಕ್ಟ್ ಮನೆಗೇ ಬರುತ್ತಾಳ..?, ಇಲ್ಲಿ ಕನ್ನಿಕಾ ಎದುರಾಗುತ್ತಾಳ..?, ನಿಜಾಂಶ ಎಲ್ಲ ಬಯಲಾಗುತ್ತ..? ಎಂಬುದು ಮುಂದಿನ ಎಪಿಸೋಡ್ನಲ್ಲಿ ನೋಡಬೇಕಿದೆ.
Seetha Rama Serial: ಸಿಹಿಯ ಕೃಪೆಯಿಂದ ಕೊನೆಗೂ ಸೀತಮ್ಮಳಿಗೆ ಸಿಕ್ಕಳು ಸುಬ್ಬಿ