ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಓಪನಿಂಗ್ ಶುರುವಾಗಿದೆ. ಇಷ್ಟು ದಿನ ಬಿಗ್ ಬಾಸ್ ಮನೆಗೆ ಯಾರೆಲ್ಲ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಎಂದು ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದರು. ಆದರೆ ಈಗ ಒಂದೊಂದೆ ಹೆಸರು ರಿವೀಲ್ ಆಗುತ್ತಿದೆ. ದೊಡ್ಮನೆಯೊಳಗೆ ಮೊದಲ ಸ್ಪರ್ಧಿಯಾಗಿ ಕಾಕ್ರೋಚ್ ಸುಧಿ ಎಂಟ್ರಿ ಕೊಟ್ಟಿದ್ದಾರೆ. ನಿನ್ನೆಯೇ ಬಿಗ್ ಬಾಸ್ ಆರಂಭಕ್ಕೂ ಮುನ್ನವೇ ಮನೆಗೆ ಎಂಟ್ರಿ ಕೊಡುತ್ತಿರುವ ಮೂರು ಸ್ಪರ್ಧಿಗಳ ಹೆಸರನ್ನು ಹಾಗೂ ಪ್ರೊಮೋವನ್ನು ಕಲರ್ಸ್ ಕನ್ನಡ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿತ್ತು. ಇದರಲ್ಲಿ ಒಂದು ಹೆಸರು ಸುಧಿ ಅವರದ್ದಾಗಿತ್ತು.
ಅದರಂತೆ ಈಗ ಸುಧಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಇವರ ನಿಜವಾದ ಹೆಸರು ಸುಧೀರ್ ಬಾಲರಾಜ್. ಇವರು ಶಿವರಾಜ್ ಕುಮಾರ್ ನಟನೆಯ ಟಗರು ಸಿನಿಮಾದಲ್ಲಿ ಕಾಕ್ರೊಚ್ ಪಾತ್ರದಲ್ಲಿ ನಟಿಸಿದ್ದರು. ಹೀಗಾಗಿ ಇವರು ಕಾಕ್ರೋಚ್ ಸುಧಿ ಎಂದೇ ಜನಪ್ರಿಯರಾಗಿದ್ದಾರೆ.
ದುನಿಯ ವಿಜಿತ ಸಲಗ, ಭೀಮ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಸುಧಿ ಅವರು ಹೆಚ್ಚಾಗಿ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಹೀರೋ ಆಗಿಯೂ ಮಿಂಚಿದ್ದಾರೆ. ಇತ್ತೀಚಿಗಷ್ಟೇ ಕಾಕ್ರೋಚ್ ಸುಧಿ ಅವರು ಹೀರೋ ಆಗಿ ನಟಿಸುತ್ತಿರುವ ಹೊಸ ಸಿನಿಮಾ ಸೆಟ್ಟೇರಿತ್ತು. ಆ ಸಿನಿಮಾಗೆ ಚೈಲ್ಡು ಎಂದು ಶೀರ್ಷಿಕೆ ಇಡಲಾಗಿತ್ತು. ಹೆಚ್ಚಾಗಿ ವಿಲನ್ ಪಾತ್ರಗಳಲ್ಲಿ ನಟಿಸುತ್ತಿರುವ ಸುಧಿ ಸದ್ಯ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದು, ಅಲ್ಲಿ ಅವರ ಅಸಲಿ ವ್ಯಕ್ತಿತ್ವ ರಿವೀಲ್ ಆಗಲಿದೆ.
BBK 12: ಇಂಟರೆಸ್ಟಿಂಗ್ ಸ್ಪರ್ಧಿಗಳು: ಮೊದಲ ದಿನದ ಶೂಟಿಂಗ್ ಮುಗಿಸಿ ಕಿಚ್ಚ ಸುದೀಪ್ ಟ್ವೀಟ್