BBK 12: ಇಂಟರೆಸ್ಟಿಂಗ್ ಸ್ಪರ್ಧಿಗಳು: ಮೊದಲ ದಿನದ ಶೂಟಿಂಗ್ ಮುಗಿಸಿ ಕಿಚ್ಚ ಸುದೀಪ್ ಟ್ವೀಟ್
ಬಿಗ್ ಬಾಸ್ ಕನ್ನಡ ಸೀಸನ್ 12 ಕಾರ್ಯಕ್ರಮದ ಮೊದಲ ದಿನದ ಶೂಟಿಂಗ್ ಮುಗಿಸಿದ ನಳಿಕ ಸುದೀಪ್ ಅವರು ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದಾರೆ. ‘‘ಈ ದಿನ ತುಂಬ ದೀರ್ಘವಾಗಿತ್ತು. ಎಲ್ಲ ಸ್ಪರ್ಧಿಗಳು ಇಂಟರೆಸ್ಟಿಂಗ್ ಆಗಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭ ಆಗಿದೆ. ಇಡೀ ತಂಡಕ್ಕೆ ಮತ್ತು ಎಲ್ಲ ಸ್ಪರ್ಧಿಗಳಿಗೆ ಶುಭವಾಗಲಿ’’ ಎಂದು ಪೋಸ್ಟ್ ಮಾಡಿದ್ದಾರೆ.

Kichcha Sudeep -

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಆರಂಭಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿದೆ. ಇಂದು ಸಂಜೆ 6 ಗಂಟೆಗೆ ಬಿಬಿಕೆ 12 ಗ್ರ್ಯಾಂಡ್ ಓಪನಿಂಗ್ ಪ್ರಸಾರ ಕಾಣಲಿದೆ. ಒಟ್ಟು 17 ಅಥವಾ 18 ಸ್ಪರ್ಧಿಗಳು ದೊಡ್ಮನೆಯೊಳಗೆ ಎಂಟ್ರಿ ಕೊಡಲಿದ್ದಾರೆ. ಈಗಾಗಲೇ ಮೊದಲ ಹಂತದ ಶೂಟಿಂಗ್ ಕೂಡ ಮುಕ್ತಾಯಗೊಂಡಿದೆ. ನಿನ್ನೆ ತಡರಾತ್ರಿ ಶೂಟಿಂಗ್ ಮಾಡಲಾಗಿದೆ. ಈ ಕುರಿತು ಕಿಚ್ಚ ಸುದೀಪ್ ಇಂದು ಬೆಳಗ್ಗೆ ಟ್ವೀಟ್ ಮಾಡಿ ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಕಾರ್ಯಕ್ರಮದ ಮೊದಲ ದಿನದ ಶೂಟಿಂಗ್ ಮುಗಿಸಿದ ನಳಿಕ ಸುದೀಪ್ ಅವರು ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದಾರೆ. ‘‘ಈ ದಿನ ತುಂಬ ದೀರ್ಘವಾಗಿತ್ತು. ಎಲ್ಲ ಸ್ಪರ್ಧಿಗಳು ಇಂಟರೆಸ್ಟಿಂಗ್ ಆಗಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭ ಆಗಿದೆ. ಇಡೀ ತಂಡಕ್ಕೆ ಮತ್ತು ಎಲ್ಲ ಸ್ಪರ್ಧಿಗಳಿಗೆ ಶುಭವಾಗಲಿ’’ ಎಂದು ಪೋಸ್ಟ್ ಮಾಡಿದ್ದಾರೆ.
Was a very long day and the contestants look pretty interesting. #BBK12 starts rolling.
— Kichcha Sudeepa (@KicchaSudeep) September 28, 2025
Best wshs to all the contestants and the entire team. pic.twitter.com/KMrqpwl0L7
ಕಲರ್ಸ್ ಕನ್ನಡ ವಾಹಿನಿಯ ಮತ್ತೊಂದು ಜನಪ್ರಿಯ ರಿಯಾಲಿಟಿ ಶೋ ಕ್ವಾಟ್ಲೆ ಕಿಚನ್‌ನ ಫಿನಾಲೆ ನಿನ್ನೆ ನಡೆದಿದ್ದು, ಅದರಲ್ಲಿ ಬಿಗ್ ಬಾಸ್‌ನ ಮೂವರು ಸ್ಪರ್ಧಿಗಳ ಹೆಸರು ರಿವೀಲ್ ಮಾಡಲಾಗಿದೆ. ಕಾಕ್ರೋಚ್ ಸುಧಿ, ಮಂಜು ಭಾಷಿಣಿ ಮತ್ತು ಮಲ್ಲಮ್ಮ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಟಗರು ಸಿನಿಮಾದಲ್ಲಿ ಕಾಕ್ರೋಚ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಸುಧೀರ್ ಬಾಲರಾಜ್ ಬಳಿಕ ಕಾಕ್ರೋಚ್ ಸುಧಿ ಎಂದೇ ಜನಪ್ರಿಯರಾದರು. ಸಿಲ್ಲಿ ಲಲ್ಲಿ ಧಾರಾವಾಹಿ ಮೂಲಕ ಜನರನ್ನು ನಗಿಸಿದ ಮಂಜು ಭಾಷಿಣಿ ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಝೀ ಕನ್ನಡದ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲೂ ಅವರು ಕಾಣಿಸಿಕೊಂಡಿದ್ದರು.
ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಓಪನಿಂಗ್ ಸೆಪ್ಟೆಂಬರ್ 28 ಭಾನುವಾರ ಸಂಜೆ 6 ಗಂಟೆಗೆ ಶುರುವಾಗಲಿದೆ. ಇದನ್ನು ಕಲರ್ಸ್ ಕನ್ನಡ ಚಾನೆಲ್ನಲ್ಲಿ ವೀಕ್ಷಿಸಬಹುದು. ಆನ್ಲೈನ್ನಲ್ಲಿ ಜಿಯೋ ಹಾಟ್ಸ್ಟಾರ್ ಆ್ಯಪ್ ಮೂಲಕ ನೋಡಬಹುದು.