ಹಿಂದಿನ ಸೀಸನ್ಗಳನ್ನು ನೋಡಿಕೊಂಡು ಬಂದು ಈ ಬಾರಿಯೂ ಅದೇರೀತಿ ಇದ್ರೆ ಆಯ್ತು ಅಂತ ಅಂದುಕೊಂಡು ಬಂದ ಸ್ಪರ್ಧಿಗಳಿಗೆ ಬಿಗ್ ಬಾಸ್ (Bigg Boss Kannada 12) ಒಂದರ ಮೇಲೊಂದು ಶಾಕ್ ನೀಡಿ ನಡುಕ ಹುಟ್ಟಿಸುತ್ತಿದ್ದಾರೆ. ಮೊದಲ ದಿನವೇ ಬಿಗ್ ಬಾಸ್ ಈ ಬಾರಿ ಮಾರಿಹಬ್ಬ ಇರಲಿದೆ ಎಂದು ಹೇಳಿದ್ದರು. ಅದರಂತೆ ದೊಡ್ಮನೆಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡಲಾಗುತ್ತಿದೆ. ಸ್ಪರ್ಧಿಗಳು ಊಹಿಸಲೂ ಆಗದಂತಹ ಪ್ಲ್ಯಾನ್ ಬಿಗ್ ಬಾಸ್ ಮಾಡಿ ಸ್ಪರ್ಧಿಗಳ ಮೇಲೆ ಪ್ರಯೋಗ ಮಾಡುತ್ತಿದ್ದಾರೆ.
ಈಗಾಗಲೇ ಬಿಗ್ ಬಾಸ್ ಮೂರನೇ ವಾರದಲ್ಲೇ ಒಂದು ಫಿನಾಲೆ ನಡೆಯಲಿದೆ.. ಅಲ್ಲಿಯ ವರೆಗು ಈ ಮನೆಯಲ್ಲಿ ನೀವು ಯಾರು ಶಾಶ್ವತವಲ್ಲ.. ಯಾರೋಬ್ಬರೂ ಸೇಫ್ ಅಲ್ಲ.. ನಿಮಲ್ಲಿ ಯಾರು, ಯಾವಾಗ ಹೇಗೆ ಬೇಕಾದರೂ ಎಲಿಮಿನೇಟ್ ಆಗಬಹುದು.. ಒಬ್ಬೊಬ್ಬರಾಗಿ ಹೋಗಬಹುದು.. ಗುಂಪು-ಗುಂಪಾಗಿ ಎಲಿಮಿನೇಟ್ ಆಗಬಹುದು ಎಂದು ಹೇಳಿದ್ದಾರೆ. ಅಲ್ಲದೆ ಈ ಎಲಿಮಿನೇಷನ್ ಭಯದಿಂದ ಮುಕ್ತರಾಗಿ ಸ್ಪರ್ಧಿಗಳು ಫೈನಲ್ ತಲುಪಬೇಕು ಎಂದರೆ ಸರಣಿ ಟಾಸ್ಕ್ ಗೆಲ್ಲಬೇಕು ಎಂದಿದ್ದಾರೆ.
ಪ್ರತೀ ವಾರದ ಅಂತ್ಯದಲ್ಲಿ ಸರಣಿ ಟಾಸ್ಕ್ ಗೆಲ್ಲುವವರು ನೇರವಾಗಿ ಫೈನಲಿಸ್ಟ್ ಆಗಿ ಆಯ್ಕೆ ಆಗುತ್ತಾರೆ. ಆ ಫೈನಲಿಸ್ಟ್ಗಳ ಪೈಕಿ ಒಬ್ಬರು ಮೂರನೇ ವಾರ ನಡೆಯಲಿರುವ ಮೊದಲ ಫಿನಾಲೆಯನ್ನು ಗೆಲ್ಲುತ್ತಾರೆ. ಹೀಗಿರುವಾಗ ಸ್ಪರ್ಧಿಗಳಿಗೆ ಒಂದೊಂದೆ ಟಾಸ್ಕ್ ನೀಡಲಾಗುತ್ತಿದೆ. ಇಲ್ಲಿ ಮತ್ತೊಂದು ಟ್ವಿಸ್ಟ್ ಎಂದರೆ ಈಟ ಟಾಸ್ಕ್ನೊಳಗೂ ಮತ್ತೊಂದು ಟಾಸ್ಕ್ ಬಿಗ್ ಬಾಸ್ ನೀಡಿದ್ದಾರೆ.
ಮನೆಯೊಳಗೆ ಜಂಟಿ ಆಗಿರುವ ಡಾಗ್ ಸತೀಶ್ ಹಾಗೂ ಚಂದ್ರಪ್ರಭ ಅವರನ್ನು ಬಿಗ್ ಬಾಸ್ ಕನ್ಫೆಷನ್ ರೂಮ್ಗೆ ಕರೆದಿದ್ದಾರೆ. ಇಲ್ಲಿ ಇವರಿಗೊಂಡು ಸೀಕ್ರೆಟ್ ಟಾಸ್ಕ್ ನೀಡಲಾಗಿದೆ. ಈಗಾಗಲೇ ಎರಡು ಬಾರಿ ನಿಮ್ಮ ತಂಡ ಸೋತಿದೆ. ಮೂರನೇ ಬಾರಿಯೂ ಸೋತರೆ ನೀವು ಗೆಲ್ಲುತ್ತೀರಿ ಎಂದು ಬಿಗ್ ಬಾಸ್ ಹೇಳಿದ್ದಾರೆ. ಅಂದರೆ ತಮ್ಮದೇ ತಂಡವನ್ನು ಸತೀಶ್ ಹಾಗೂ ಚಂದ್ರಪ್ರಭ ಸೋಲಿಸಿದರೆ ಇವರಿಬ್ಬರು ಫೈನಲ್ ಕಂಟೆಂಡರ್ ಆಗುತ್ತಾರೆ.
ಇಬ್ಬರೂ ಇದಕ್ಕೆ ಒಪ್ಪಿದ್ದು ತಮ್ಮ ತಂಡವನ್ನು ಸೋಲಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಅದರಂತೆ ಇಬ್ಬರೂ ಟಾಸ್ಕ್ಗೆ ಇಳಿದಿದ್ದಾರೆ. ಟಾಸ್ಕ್ ಏನಪ್ಪ ಅಂದ್ರೆ ಜಂಟಿ ಟೀಮ್ ಸ್ವಿಮ್ಮಿಂಗ್ ಪೂಲ್ ಒಳಗೆ ಹೋಗಿ ಅದರೊಳಗೆ ಬಿಗ್ ಬಾಸ್ ಏನೀ ಇಟ್ಟಿರುತ್ತಾರೆ ನಿರ್ಧಿಷ್ಟ ಸಮಯದ ಒಳಗೆ ಅದನ್ನು ತೆಗೆದುಕೊಂಡು ಬಂದು ಟೇಬಲ್ ಮೇಲೆ ಇಡಬೇಕು. ಸತೀಶ್-ಚಂದ್ರ ಈ ಟಾಸ್ಕ್ ಮಾಡಲು ಸ್ವಿಮ್ಮಿಂಗ್ ಪೂಲ್ಗೆ ಜಿಗಿದಿದ್ದಾರೆ. ಆದರೆ, ಬೇಕಂತಲೇ ಅಲ್ಲಿ ಸಮಯ ವ್ಯರ್ಥ ಮಾಡಿಕೊಂಡು ಕಾಲ ಕಳೆದಂತಿದೆ.
ಸದ್ಯ ಈ ಟಾಸ್ಕ್ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ತಮ್ಮ ತಂಡವನ್ನು ಸೋಲಿಸಿ ಸತೀಶ್-ಚಂದ್ರ ಫೈನಲ್ ಕಂಟೆಂಡರ್ ಆಗುತ್ತಾರ ಎಂಬುದು ನೋಡಬೇಕಿದೆ.
BBK 12: ಮಲ್ಲಮ್ಮನ ಮುಂದೆ ವಿಚ್ಛೇದನ ಕುರಿತು ಮನಬಿಚ್ಚಿ ಮಾತನಾಡಿದ ಜಾನ್ವಿ: ಏನು ಹೇಳಿದ್ರು ನೋಡಿ