ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಮಲ್ಲಮ್ಮನ ಮುಂದೆ ವಿಚ್ಛೇದನ ಕುರಿತು ಮನಬಿಚ್ಚಿ ಮಾತನಾಡಿದ ಜಾನ್ವಿ: ಏನು ಹೇಳಿದ್ರು ನೋಡಿ

ಜಾನ್ವಿ ತಮ್ಮ ಮಾಜಿ ಪತಿ ಕಾರ್ತಿಕ್‌ ಅವರಿಂದ ಡಿವೋರ್ಸ್‌ ಪಡೆದಿದ್ದರು. ಸದ್ಯ ಜಾನ್ವಿ ಹಾಗೂ ಇವರ ಮಗ ಇಬ್ಬರೇ ಇದ್ದಾರೆ. ಇವರ ವಿಚ್ಛೇದನ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಒಂದಲ್ಲ ಒಂದು ಪೋಸ್ಟ್‌ ಹರಿದಾಡುತ್ತಲೇ ಇತ್ತು. ಇದೀಗ ಮೊದಲ ಬಾರಿ ಬಿಗ್ ಬಾಸ್ ಶೋನಲ್ಲಿ ಜಾನ್ವಿ ಮಲ್ಲಮ್ಮ ಮುಂದೆ ವಿಚ್ಛೇದನ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ಮಲ್ಲಮ್ಮ ಮುಂದೆ ವಿಚ್ಛೇದನ ಕುರಿತು ಮಾತನಾಡಿದ ಜಾನ್ವಿ

jhanvi bigg boss kannada -

Profile Vinay Bhat Oct 1, 2025 2:19 PM

ಈ ಬಾರಿ ಬಿಗ್ ಬಾಸ್ ಕನ್ನಡಕ್ಕೆ (Bigg Boss Kannada) ಪತ್ರಿಕೋದ್ಯಮ ಕೋಟಾದಿಂದ ಜಾನ್ವಿ ಅವರು ಬಂದಿದ್ದಾರೆ. ಈಗಾಗಲೇ ಎರಡು ದಿನ ಕಳೆದಿದ್ದು ಎಲ್ಲರ ಜೊತೆ ಉತ್ತಮ ಬಾಂಧವ್ಯದಲ್ಲಿದ್ದಾರೆ. ಇವರು ಸುದ್ದಿ ನಿರೂಪಕಿ ಆಗಿ ವಿವಿಧ ನ್ಯೂಸ್ ಚಾನೆಲ್‌ಗಳಲ್ಲಿ ಕೆಲಸ ಮಾಡಿ ಗಮನ ಸೆಳೆದಿದ್ದರು. ಸುದ್ದಿವಾಹಿನಿಗಳಲ್ಲಿ ನಿರೂಪಕಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರಾದರೂ ಬಳಿಕ ಅದರಿಂದ ಬ್ರೇಕ್ ಪಡೆದುಕೊಂಡು ನಟನಾ ಕ್ಷೇತ್ರಕ್ಕೆ ಕಾಲಿಟ್ಟರು. ಮೊದಲಿಗೆ ಗಿಚ್ಚಿ ಗಿಲಿಗಿಲಿ, ನನ್ನಮ್ಮ ಸೂಪರ್‌ ಸ್ಟಾರ್​ನಂತಹ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದರು. ಬಳಿಕ ರೂಪೇಶ್‌ ಶೆಟ್ಟಿ ನಟನೆಯ ಅಧಿಪತ್ರ ಸಿನಿಮಾದಲ್ಲಿ ನಟಿಸಿ ಚಿತ್ರರಂಗಕ್ಕೂ ಪ್ರವೇಶಿಸಿದರು.

ಜಾನ್ವಿ ತಮ್ಮ ಮಾಜಿ ಪತಿ ಕಾರ್ತಿಕ್‌ ಅವರಿಂದ ಡಿವೋರ್ಸ್‌ ಪಡೆದಿದ್ದರು. ಸದ್ಯ ಜಾನ್ವಿ ಹಾಗೂ ಇವರ ಮಗ ಇಬ್ಬರೇ ಇದ್ದಾರೆ. ಇವರ ವಿಚ್ಛೇದನ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಒಂದಲ್ಲ ಒಂದು ಪೋಸ್ಟ್‌ ಹರಿದಾಡುತ್ತಲೇ ಇತ್ತು. ನಟನಾ ಕ್ಷೇತ್ರಕ್ಕೆ ಬರಲು ಇವರು ಗಂಡನಿಗೆ ಡಿವೋರ್ಸ್ ಕೊಟ್ಟರು.. ಹೀಗೆ ಅನೇಕ ವದಂತಿ ಹಬ್ಬಿತ್ತು. ಆದರೆ, ಇದೀಗ ಮೊದಲ ಬಾರಿ ಬಿಗ್ ಬಾಸ್ ಶೋನಲ್ಲಿ ಜಾನ್ವಿ ಮಲ್ಲಮ್ಮ ಮುಂದೆ ವಿಚ್ಛೇದನ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ಜಾನ್ವಿ, ಮಲ್ಲಮ್ಮ ಹಾಗೂ ಕಾಕ್ರೋಚ್ ಸುಧಿ ಒಂದು ಕಡೆ ಕುಳಿತು ಮಾತನಾಡುತ್ತಿದ್ದರು. ನೀವು ಸ್ಫೂರ್ತಿದಾಯಕ ಎಂದು ಜಾನ್ವಿ ಅವರು ಮಲ್ಲಮ್ಮಗೆ ಹೇಳಿದರು. ಅವರಿಗೋಸ್ಕರ ಅವರು ಬದುಕಲೇ ಇಲ್ಲ. 15ನೇ ವಯಸ್ಸಿಗೆ ಮದುವೆ ಆಯ್ತು. ಆ ಬಳಿಕ ಮಕ್ಕಳಾಯ್ತು. ಮಕ್ಕಳಿಗೋಸ್ಕರ ಬದುಕಿದರು ಎಂದು ಜಾನ್ವಿ ಹೇಳುವಾಗ ಮಲ್ಲಮ್ಮ ಅಳಲು ಆರಂಭಿಸಿದರು. ಆ ಬಳಿಕ ಜಾನ್ವಿ, ಮದುವೆ ಆದಾಗ ನಾನು ಇನ್ನೂ ಬೆಂಗಳೂರಿಗೆ ಬಂದಿರಲಿಲ್ಲ ಎಂದು ತಮ್ಮ ಕಷ್ಟ ಹೇಳಿಕೊಳ್ಳಲು ಆರಂಭಿಸಿದರು. ಆಗ ಮಲ್ಲಮ್ಮ ಅವರು, ‘ಈಗ ನಿಮ್ಮ ಪತಿ ಏನು ಮಾಡುತ್ತಿದ್ದಾರೆ ಎಂದು ಕೇಳಿದರು.

BBK 12: ಬಿಗ್ ಬಾಸ್ ಕನ್ನಡ ಮನೆಯಲ್ಲಿರುವ ಈ ಸ್ಪರ್ಧಿ ಮೇಲಿದೆ 23 ಕೇಸ್: ಒಂದೊಂದೆ ವಿಚಾರ ಬಹಿರಂಗ

ಆಗ, ಜಾನ್ವಿ ಡಿವೋರ್ಸ್ ಆಗಿದೆ ಎಂದರು. ಲಿಕ್ಕರ್ ಪ್ರಾಬ್ಲಂ? ಅಂತ ಕಾಕ್ರೋಚ್ ಸುಧಿ ಕೇಳಿದ್ದಕ್ಕೆ ಹೂಂ.. ಡಿವೋರ್ಸ್ ಆಯ್ತು ಅಂದರು ಕೂಡಲೆ, ಯಾಕೆ? ಹಾಗೆ ಮಾಡಿಕೊಳ್ಳಬಾರದಮ್ಮ. ಒಂದ್ಸಲ ಮದುವೆಯಾದ್ಮೇಲೆ ಎಷ್ಟೇ ಕಷ್ಟವಾದರೂ ಅವರ ಜೊತೆಗೇ ಬದುಕಬೇಕು ಅಂತ ಮಲ್ಲಮ್ಮ ಹೇಳಿದ್ದಕ್ಕೆ, ತುಂಬಾ ಸಹಿಸಿಕೊಂಡು ಬರ್ತೀವಲ್ಲ.. ಅದು ಆಗಲ್ಲ.! ಸುಮ್ಮನೆ ನನಗೆ ಹೇಳೋಕೆ ಇಷ್ಟವಿಲ್ಲ. ಎಲ್ಲಾ ದೈವ ಇಚ್ಛೆ ಅಷ್ಟೇ ಎಂದರು ಜಾಹ್ನವಿ. ಮುಂದುವರಿದು ಮಕ್ಕಳು ಎಷ್ಟಿದ್ದಾವೆ? ಅಂತ ಮಲ್ಲಮ್ಮ ಕೇಳಿದ್ದಕ್ಕೆ, ಒಬ್ಬ ಮಗ ಇದ್ದಾನೆ. ನಾನು ಜೊತೆಯಲ್ಲಿ ಇರೋವಾಗಲೇ ಅವರಿಗೆ ಬೇರೆ ಮದುವೆ ಆಗಿ ಮಗು ಇತ್ತು. ಅದಕ್ಕೆ ನಾನು ಬಿಟ್ಟಿದ್ದು. ಸುಮ್ಮನೆ ಏನಲ್ಲ ಅಂತ ಡಿವೋರ್ಸ್ ರಹಸ್ಯವನ್ನ ಜಾನ್ವಿ ಬಯಲು ಮಾಡಿದ್ದಾರೆ.