ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Telugu: ಈ ಬಾರಿ ತೆಲುಗು ಬಿಗ್ ಬಾಸ್​ನಲ್ಲಿ ಕನ್ನಡದ ಕುವರಿ ಹವಾ: ಯಾರು ನೋಡಿ

2013ರಲ್ಲಿ ಬಂದ ನಮ್ ದುನಿಯಾ ನಮ್ ಸ್ಟೈಲ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ ಕಾವ್ಯಾ ಶೆಟ್ಟಿ, ಈ ಬಾರಿ ಬಿಗ್ ಬಾಸ್‌ ತೆಲುಗು ಮನೆಯನ್ನು ಪ್ರವೇಶಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ತಮ್ಮ ಗ್ಲಾಮರಸ್ ಲುಕ್‌ನಿಂದ ಸಾಮಾಜಿಕ ಜಾಲತಾಣಗಳಲ್ಲಿ ಕಾವ್ಯಾ ಬಹಳ ಜನಪ್ರಿಯರಾಗಿದ್ದಾರೆ.

ಈ ಬಾರಿ ತೆಲುಗು ಬಿಗ್ ಬಾಸ್​ನಲ್ಲಿ ಕನ್ನಡದ ಕುವರಿ ಹವಾ

Kavya Shetty

Profile Vinay Bhat Jul 28, 2025 7:42 AM

ಭಾರತದ ಪ್ರಸಿದ್ಧ ಹಾಗೂ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss) ಕನ್ನಡ, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಪ್ರಸಾರವಾಗುತ್ತದೆ. ಇದೀಗ ಬಿಗ್ ಬಾಸ್ ತೆಲುಗು ಸೀಸನ್ 9 ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ. ಕಿಂಗ್ ಅಕ್ಕಿನೇನಿ ನಾಗಾರ್ಜುನ ಈ ಬಾರಿಯೂ ನಿರೂಪಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಹಿಂದೆ ನಾಗಾರ್ಜುನ ಜಾಗಕ್ಕೆ ವಿಜಯ್ ದೇವರಕೊಂಡ, ಬಾಲಯ್ಯ ಸೇರಿದಂತೆ ಕೆಲ ಸ್ಟಾರ್​ಗಳ ಹೆಸರು ಕೇಳಿಬಂದಿತ್ತು. ಆದರೆ, ಅಂತಿಮವಾಗಿ ಅಕ್ಕಿನೇನಿ ನಾಗಾರ್ಜುನ ಅವರೇ ಈ ಬಾರಿ ಸಾರಥ್ಯ ವಹಿಸಲಿದ್ದಾರೆ.

ಬಿಗ್ ಬಾಸ್ ತೆಲುಗು ಪ್ರೋಮೊ ಇತ್ತೀಚೆಗಷ್ಟೆ ರಿಲೀಸ್‌ ಆಗಿತ್ತು. ಪ್ರೋಮೋ ಸೌಂಡ್‌ ಮಾಡಿರುವ ಬೆನ್ನಲ್ಲೇ ಆಯೋಜಕರು, ಹೊಸ ಅನೌನ್ಸ್‌ಮೆಂಟ್‌ ಮಾಡಿದ್ದರು. ಬಿಗ್‌ ಬಾಸ್‌ ತೆಲುಗು ಸೀಸನ್‌ 9ನಲ್ಲಿ ಈ ಬಾರಿ ಸೆಲೆಬ್ರಿಟಿಗಳಿಗೆ ಮಾತ್ರವಲ್ಲದೆ, ಸಾಮಾನ್ಯರಿಗೂ ಸ್ಪರ್ಧಿಗಳಾಗಿ ದೊಡ್ಡನೆಗೆ ಪ್ರವೇಶಿಸಲು ಅವಕಾಶವಿದೆ ಎಂದಿದ್ದರು. ಹೀಗಿರುವಾಗ ತೆಲುಗು ಬಿಗ್ ಬಾಸ್​ಗೆ ಹೋಗುವ ಸ್ಪರ್ಧಿಗಳ ಒಂದೊಂದೆ ಹೆಸರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ಬಾರಿ ತೆಲುಗು ಬಿಗ್ ಬಾಸ್ ಮನೆಗೆ ಜ್ಯೋತಿ ರೈ, ಕಲ್ಪಿಕಾ ಗಣೇಶ್, ಕಾವ್ಯಾ, ತೇಜಸ್ವಿನಿ, ಕಿರುತೆರೆ ನಟಿ ನವ್ಯಾ ಸ್ವಾಮಿ, ಶ್ರಾವಣಿ ವರ್ಮಾ, ಆರ್‌ ಜೆ ರಾಜ್, ಸಾಯಿ ಕಿರಣ್, ಮುಖೇಶ್ ಗೌಡ, ಚತ್ರಪತಿ ಶೇಖರ್, ನಿರೂಪಕಿ ಸತ್ಯಶ್ರೀ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇವರಲ್ಲಿ ಯಾರೆಲ್ಲ ಈ ಬಾರಿ ಬಿಗ್ ಬಾಸ್‌ ಮನೆಯನ್ನು ಪ್ರವೇಶಿಸಲಿದ್ದಾರೆ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯಕ್ಕೆ ಕನ್ನಡದ ‘ಕಾವ್ಯಾ ಶೆಟ್ಟಿ’ ತೆಲುಗು ದೊಡ್ಮನೆಗೆ ಕಾಲಿಡಲಿದ್ದಾರೆ ಎಂಬ ಮಾತು ಆಂಧ್ರದಲ್ಲಿ ಕೇಳಿ ಬರುತ್ತಿದೆ.

BBK 19: ಬಿಗ್ ಬಾಸ್ ಆರಂಭಕ್ಕೆ ಕೌಂಟ್ಡೌನ್ ಶುರು: ಮೊದಲ ಟೀಸರ್ ಔಟ್

2013ರಲ್ಲಿ ಬಂದ ನಮ್ ದುನಿಯಾ ನಮ್ ಸ್ಟೈಲ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ ಕಾವ್ಯಾ ಶೆಟ್ಟಿ, ಆನಂತರ ತಮಿಳು, ಮಲಯಾಳಂ ಸಿನಿಮಾಗಳಲ್ಲೂ ನಟಿಸಿದ್ದಾರೆ. ಜೊತೆಗೆ ಗುರ್ತುಂದ ಶೀತಕಾಲಂ ಸಿನಿಮಾದ ಮೂಲಕ ತೆಲುಗು ಚಿತ್ರರಂಗದಲ್ಲೂ ಮಿಂಚಿದ್ದಾರೆ. ಆದರೆ ಈವರೆಗೂ ಅವರು ಕಿರುತೆರೆಗೆ ಎಂಟ್ರಿ ನೀಡಿಲ್ಲ. ಆದರೆ ದಿಢೀರನೇ ಅವರ ಹೆಸರು ತೆಲುಗು ಬಿಗ್ ಬಾಸ್ 9 ಶೋನಲ್ಲಿ ಸ್ಪರ್ಧಿಗಳ ಸಂಭಾವ್ಯ ಪಟ್ಟಿಯಲ್ಲಿ ಕಂಡುಬಂದಿರುವುದು ಅಚ್ಚರಿ ಮೂಡಿಸಿದೆ.

ತಮ್ಮ ಗ್ಲಾಮರಸ್ ಲುಕ್‌ನಿಂದ ಸಾಮಾಜಿಕ ಜಾಲತಾಣಗಳಲ್ಲಿ ಕಾವ್ಯಾ ಬಹಳ ಜನಪ್ರಿಯರಾಗಿದ್ದಾರೆ. ಸದ್ಯ ಇವರು ತೆಲುಗು ಬಿಗ್ ಬಾಸ್​ಗೆ ಹೋಗುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದರೆ ತೆಲುಗು ಡಿಜಿಟಲ್ ಮಾಧ್ಯಮಗಳಲ್ಲಿ ಕಾವ್ಯಾ ಶೆಟ್ಟಿ ಅವರು ಈ ಬಾರಿ ಬಿಗ್ ಬಾಸ್ ತೆಲುಗು 9 ಶೋಗೆ ಹೋಗುವುದು ಖಚಿತ ಎಂಬಂತೆ ಬರೆದಿದ್ದಾರೆ. ಸೀಸನ್ 7ರಲ್ಲಿ ಕನ್ನಡದ ಶೋಭಾ ಶೆಟ್ಟಿ ಕೂಡ ತಮ್ಮ ಗ್ಲಾಮರ್ ಲುಕ್‌ನಿಂದ ಆಕರ್ಷಿಸುವುದಲ್ಲದೆ, ಮನೆಯಲ್ಲಿ ಒಂದು ರೇಂಜ್‌ನಲ್ಲಿ ಫೈರ್ ಬ್ರ್ಯಾಂಡ್ ಆಗಿ ಗದ್ದಲ ಎಬ್ಬಿಸಿದ್ದರು. ಈಗ ಕಾವ್ಯಾ ಶೆಟ್ಟಿ ಕೂಡ ಅದೇ ರೀತಿಯಲ್ಲಿ ಬಿಗ್ ಬಾಸ್ ಶೋನಲ್ಲಿ ಹೈಲೈಟ್ ಆಗುತ್ತಾರಾ ಎಂಬುದು ನೋಡಬೇಕಿದೆ.