ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ ಧಾರಾವಾಹಿ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ನಟ ಕಿರಣ್ ರಾಜ್ಗೆ (Kiran Raj) ದೊಡ್ಡ ಅಭಿಮಾನಿಗಳ ಬಳಗವಿದೆ. 2020 ಜನವರಿಯಲ್ಲಿ ಶುರುವಾದ ಈ ಧಾರಾವಾಹಿಯು 2023ರಲ್ಲಿ ಮುಕ್ತಾಯಗೊಂಡರೂ ಇಂದಿಗೂ ಹರ್ಷ ಪಾತ್ರ ಹಸಿರಾಗಿದೆ. ಇವರ ಸ್ಟೈಲ್, ಮಾತುಗಾರಿಕೆಗೆ ಅನೇಕ ಮಂದಿ ಫ್ಯಾನ್ಸ್ ಇದ್ದಾರೆ. ಕೇವಲ ಕಿರುತೆರೆಯಲ್ಲಿ ಮಾತ್ರವಲ್ಲದೆ ಹಿರಿತೆರೆಯಲ್ಲೂ ಗುರುತಿಸಿಕೊಂಡಿದ್ದಾರೆ. ಆದರೆ, ಅವರಿಗೆ ಹೆಚ್ಚು ಯಶಸ್ಸು ತಂದುಕೊಟ್ಟಿದ್ದು ಸೀರಿಯಲ್. ಹೀಗಿದ್ದರೂ ಇವರು ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸಿಲ್ಲ.
ಸದ್ಯ ಕಿರಣ್ ರಾಜ್ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕರ್ಣ ಧಾರಾವಾಹಿಯಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ. ಇದರಲ್ಲಿ ಇವರ ನಟನೆಗೆ ಅದ್ಭುತ ಪ್ರತಿಕ್ರಿಯೆ ಕೇಳಿಬರುತ್ತಿದೆ. ಜೊತೆಗೆ ಧಾರಾವಾಹಿಯ ಕೂಡ ಸತತವಾಗಿ ನಂಬರ್ ಒನ್ ಟಿಆರ್ಪಿಯಲ್ಲಿ ದಾಖಲೆ ನಿರ್ಮಿಸಿದೆ. ಕರ್ಣ ಧಾರಾವಾಹಿಯ ಜೊತೆಗೆ ಕಿರಣ್ ರಾಜ್ ಜಾಕಿ 42 ಎಂಬ ಹೊಸ ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದಾರೆ. ಇದಿಷ್ಟೆ ಅಲ್ಲದೆ ಮೈಕ್ರೋ ಸೀರೀಸ್ ಅನ್ನು ಕೂಡ ನಿರ್ಮಾಣ ಮಾಡುತ್ತಿದ್ದಾರೆ.
ಹೌದು, ಕಿರಣ್ ನಟನೆ ಜೊತೆಗೆ ನಿರ್ದೇಶಕ ಕೂಡ ಆಗಿದ್ದಾರೆ. ಇವರ ನಿರ್ಮಾಣದಲ್ಲಿ ಲವ್ ಕೊಕ್ಟೈಲ್ ಎಂಬ ಮೈಕ್ರೋ ಸೀರೀಸ್ ನಿರ್ಮಾಣ ಆಗಿದೆ. ನೀವು ವೆಬ್ ಸೀರೀಸ್ ಕೇಳಿರಬಹುದು.. ಅದರಲ್ಲಿ ಒಂದು ಎಪಿಸೋಡ್ ಸುಮಾರು 30-40 ನಿಮಿಷ ಇರುತ್ತದೆ. ಆದರೆ, ಮೈಕ್ರೋ ಸೀರೀಸ್‌ನಲ್ಲಿ ಒಂದು ಎಪಿಸೋಡ್ ಇರುವುದು ಕೇವಲ 2 ನಿಮಿಷ ಮಾತ್ರ. ಇದರಿಂದ ಲಾಭ ಇದೆಯೇ?, ಹಾಕಿದ ದುಡ್ಡು ಬರುತ್ತ ಎಂದು ಕೇಳಿದ್ದಕ್ಕೆ ಸ್ವತಃ ಕಿರಣ್ ರಾಜ್ ಅವರೇ ಉತ್ತರಿಸಿದ್ದಾರೆ.
ತನ್ನ ಹೊಸ ಮೈಕ್ರೋ ಸೀರೀಸ್ ಬಗ್ಗೆ ವಿಶ್ವವಾಣಿ ಸಂದರ್ಶನದಲ್ಲಿ ಮಾತನಾಡಿದ ಕಿರಣ್ ರಾಜ್, ಈ ಮೈಕ್ರೋ ಸೀರೀಸ್ನಿಂದ ಇನ್ನೊಂದು ಸೀರೀಸ್ ಮಾಡೋವಷ್ಟು ದುಡ್ಡು ಬರುತ್ತೆ ಎಂದು ಹೇಳಿದ್ದಾರೆ. ಅಲ್ಲದೆ ಇನ್ನೂ ಮೂರು ಮೈಕ್ರೋ ಸೀರೀಸ್ ಮಾಡುತ್ತ ಇದ್ದೇವೆ ಎಂದಿದ್ದಾರೆ. ನಾವು ಸದ್ಯ ಮೈಕ್ರೋ ಸೀರೀಸ್ಗೆ ಕಾಲಿಟ್ಟಿದ್ದೇವೆ.. ಮುಂದೆ ನೋಡಬೇಕು ಆದ್ರೆ ವೆಬ್ ಸೀರೀಸ್ ಕೂಡ ಮಾಡುತ್ತೇವೆ. ಜನಗಳಿಗೆ ಕನೆಕ್ಟ್ ಆಗಲು ಈಗಿನ ಕಥೆ ಅಥವಾ ಹಿಂದಿ ಕಥೆ ಆಗಲ್ಲ.. ಮುಂದಿನ ಮೂರು ವರ್ಷಗಳ ಕಥೆ ಇರಬೇಕು ಅಥವಾ ಅವರ ಜೀವನದಲ್ಲಿ ನಡೆಯಬೇಕು ಎಂದಿರುವ ಹಾಗೂ ನಡೆಯದಿರುವ ಕಥೆ ಇರಬೇಕು ಆಗ ಅದು ಜನಗಳಿಗೆ ಹೆಚ್ಚು ಕನೆಕ್ಟ್ ಆಗುತ್ತೆ.. ನೋಡುತ್ತಾರೆ ಎಂದು ಹೇಳಿದ್ದಾರೆ.
Bhagya Lakshmi Serial: ಭಾಗ್ಯಾಳನ್ನು ಎಂಡಿ ಮಾಡಿ ಬಹುದೊಡ್ಡ ಸಂಕಷ್ಟಕ್ಕೆ ಸಿಲುಕಿದ ಆದೀ