ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಭಾಗ್ಯಾಳನ್ನು ಎಂಡಿ ಮಾಡಿ ಬಹುದೊಡ್ಡ ಸಂಕಷ್ಟಕ್ಕೆ ಸಿಲುಕಿದ ಆದೀ

ರಾಮ್ದಾಸ್ ಕೂಡ ಆದೀ ಮೇಲೆ ಕೋಪಗೊಂಡು ರೂಲ್ಸ್ ಅಂದಮೇಲೆ ಅದು ಎಲ್ಲರಿಗೂ ಒಂದೇ ಎಂದಿದ್ದಾರೆ. ಬಳಿಕ ಕನ್ನಿಕಾಳೇ ಒಂದು ಪ್ಲ್ಯಾನ್ ಕೊಟ್ಟಿದ್ದಾಳೆ. ನಾಳೆನೇ ನಾವು ಒಂದು ಆ್ಯಡ್ ಹಾಕೋಣ ಎಂಡಿ ಪೋಸ್ಟ್ಗೆ ಖಾಲಿ ಇದೆ ಎಂದು.. ಕರ್ನಾಟಕದಿಂದ ಎಷ್ಟೋ ಜನ ಬರಬಹುದು.. ಯಾರಿಗೆ ಗೊತ್ತು ಭಾಗ್ಯಾಗಿಂದ ಉತ್ತಮ ಕ್ಯಾಂಡಿಡೇಟ್ ಸಿಗಬಹುದು ಎಂದಿದ್ದಾಳೆ.

ಭಾಗ್ಯಾಳನ್ನು ಎಂಡಿ ಮಾಡಿ ಬಹುದೊಡ್ಡ ಸಂಕಷ್ಟಕ್ಕೆ ಸಿಲುಕಿದ ಆದೀ

Bhagya Lakshmi Serial -

Profile Vinay Bhat Sep 13, 2025 12:07 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಒಂದರ ಹಿಂದೆ ಒಂದರಂತೆ ಟ್ವಿಸ್ಟ್ ನೀಡಲಾಗುತ್ತಿದೆ. ಆದೀ ಯಾರ ಬಳಿಯೂ ಕೇಳದೆ ಭಾಗ್ಯಾಳನ್ನು ನೇರವಾಗಿ ತನ್ನ ತೊಟ್ಟಿಲು ಚಾರಿಟೆಬಲ್ ಟ್ರಸ್ಟ್​ಗೆ ಎಂಡಿ ಆಗಲು ಆಫರ್ ಕೊಟ್ಟಿದ್ದಾನೆ. ಮರುದಿನ ಇದಕ್ಕೆ ಭಾಗ್ಯ ಕೂಡ ಒಪ್ಪಿಗೆ ಸೂಚಿಸಿ ಆಫೀಸ್ ಬಂದಿದ್ದಾಳೆ. ಆದರೆ, ಈ ವಿಚಾರ ಈಗ ಕಾಮತ್ ಫ್ಯಾಮಿಲಿಯಲ್ಲಿ ಸ್ಫೋಟಗೊಂಡಿದೆ. ಯಾವುದೇ ಇಂಟರ್​ವ್ಯೂ.. ಏನೂ ನಿಯಮ ಪಾಲಿಸದೆ ನೇರವಾಗಿ ಭಾಗ್ಯಾಳನ್ನು ಎಂಡಿ ಪೋಸ್ಟ್​ಗೆ ಅಪಾಯಿಂಟ್ ಮಾಡಿರುವ ಆದೀಶ್ವರ್​ಗೆ ಸಂಕಷ್ಟ ಎದುರಾಗಿದೆ.

ಹಿಂದಿನ ಎಪಿಸೋಡ್​ನಲ್ಲಿ, ಈ ಸಂಸ್ಥೆಯಲ್ಲಿ ಎಂಡಿ ಅಂದರೆ ಮ್ಯಾನೇಜಿಂಗ್ ಡೈರೆಕ್ಟರ್ ಪೋಸ್ಟ್ ಖಾಲಿ ಇದೆ ನೀವು ಆ ಪೋಸ್ಟ್ ತೆಗೋತೀರಾ? ಎಂದು ಆದೀ ಭಾಗ್ಯ ಬಳಿ ಕೇಳಿದ್ದಾನೆ. ಇದನ್ನ ಕೇಳಿ ಭಾಗ್ಯಾಗೆ ಶಾಕ್ ಆಗಿತ್ತು. ಏನು ಎಂಡಿ ಪೋಸ್ಟ್?, ನೀವೇನು ಆಟ ಆಡ್ತಾ ಇದ್ದೀರಾ.. ನಾನು ಓರ್ವ ಸಾಮಾನ್ಯ ಮಹಿಳೆ.. ಇದನ್ನೆಲ್ಲ ನಿಭಾಹಿಸಲು ನನ್ನಿಂದ ಸಾಧ್ಯವಿಲ್ಲ.. ನನ್ನದು ಒಂದು ಸಣ್ಣ ಕ್ಯಾಂಟೀನ್ ಇದೆ ಅಷ್ಟೆ.. ನಾನು ಅದರಲ್ಲೇ ಖುಷಿ ಆಗಿದ್ದೇನೆ.. ನನಗೆ ಅದೇ ಸಾಕು ಇದೆಲ್ಲ ಬೇಡ ಎಂದಿದ್ದಾಳೆ.

ಬಳಿಕ ಭಾಗ್ಯ ಟ್ರಸ್ಟ್ ಹೇಗಿದೆ ಎಂದು ನೋಡೋಣ ಅಂತ ಒಳಗೆ ಹೋದಾಗ ಈ ಟ್ರಸ್ಟ್​ನಲ್ಲಿ ನಡೆಯುತ್ತಿರುವ ಕರ್ಮಕಾಂಡ ಭಾಗ್ಯಾಗೆ ಗೊತ್ತಾಗಿದೆ. ಚಾರಿಟಿ ಸಂಸ್ಥೆಯಿಂದ ಕನ್ನಿಕಾ ಸುಳ್ಳು ಲೆಕ್ಕ ಕೊಟ್ಟು ದುಡ್ಡು ಬಾಚುತ್ತಿರುತ್ತಾಳೆ. ಎಂಡಿ ಆಗಿ ಬೇರೆಯವರು ಬಂದರೆ ತಮ್ಮ ಕೆಲಸ ಸಲೀಸಾಗಿ ಆಗುವುದಿಲ್ಲ, ತಮ್ಮವರೇ ಎಂಡಿ ಆಗಬೇಕು ಅಂತ ಕನ್ನಿಕಾ ಪ್ಲಾನ್ ಮಾಡಿದ್ದಾಳೆ. ಇದಕ್ಕಾಗಿ ತನ್ನ ಕಡೆಯವರನ್ನು ಎಂಡಿ ಆಗಿ ಮಾಡಬೇಕು ಎಂದು ಕನ್ನಿಕಾ ಓರ್ವನನ್ನು ರೆಡಿ ಮಾಡಿದ್ದಾಳೆ. ಆತನನ್ನು ಆದೀ ಬಳಿ ಕರೆದುಕೊಂಡು ಹೋಗಿ ಇವನೇ ಕರೆಕ್ಟ್ ವ್ಯಕ್ತಿ ಎಂದು ಒಪ್ಪಿಸುವ ಪ್ಲ್ಯಾನ್ ಕನ್ನಿಕಾಳದ್ದು. ಇದೇ ವಿಚಾರವಾಗಿ ಕನ್ನಿಕಾ ಹಾಗೂ ಟ್ರಸ್ಟ್​ನ ಇನ್ನೋರ್ವ ಸಿಬ್ಬಂದಿ ಮಾತನಾಡುತ್ತ ಇರುತ್ತಾರೆ. ಅವರ ಮಾತು ಭಾಗ್ಯಾಗೆ ಕೇಳಿಸುತ್ತದೆ.

ಭಾಗ್ಯ ಮನೆಗೆ ಬಂದು ಈ ಕುರಿತು ಸಾಕಷ್ಟು ಯೋಚನೆ ಮಾಡಿ ಮರುದಿನ ಆದೀ ಆಫೀಸ್​ಗೆ ಬಂದು ನಾನು ಎಂಡಿ ಆಗಲು ಒಪ್ಪಿದ್ದೇನೆ ಎಂದಿದ್ದಾಳೆ. ಅಸಲಿಗೆ ಭಾಗ್ಯ ಒಪ್ಪಿರುವುದು ಈ ಸಂಸ್ಥೆಯಲ್ಲಿ ನಡೆಯುತ್ತಿರುವ ಹಗರಣವನ್ನು ಸಾಕ್ಷಿ ಅಮೇತ ಬಯಲು ಮಾಡಲು. ಆದೀಶ್ವರ್ ತಮ್ಮ ಆಫೀಸ್​ನ ಎಲ್ಲ ಸ್ಟಾಫ್​ಗಳಿಗೆ ಭಾಗ್ಯ ನಮ್ಮ ಹೊಸ ಎಂಡಿ ಎಂದು ಪರಿಚಯಿಸುತ್ತಾನೆ. ಈ ಸಂದರ್ಭ ಕನ್ನಿಕಾಳ ಏಜೆಂಟ್ ಅಂದರೆ ಟ್ರಸ್ಟ್​ನ ಇನ್ನೋರ್ವ ಸಿಬ್ಬಂದಿ ಕನ್ನಿಕಾಗೆ ಕಾಲ್ ಮಾಡಿ ಭಾಗ್ಯ ಅವರನ್ನು ಎಂಡಿ ಆಗಿ ನೇಮಕ ಮಾಡಿದ್ದಾರೆ.. ನಾವು ಸೆಲೆಕ್ಟ್ ಮಾಡಿರೋ ಕ್ಯಾಂಡಿಡೇಟ್ ಇಲ್ವಾ.. ಏನು ಕಥೆ ಎನ್ನುತ್ತಾನೆ.



ಯಾರಲ್ಲೂ ಹೇಳದೆ-ಕೇಳದೆ ಭಾಗ್ಯಾಳನ್ನು ಎಂಡಿ ಮಾಡಿರುವುದು ಕನ್ನಿಕಾಗೆ ಕೋಪ ತರಿಸಿದೆ. ನೇರವಾಗಿ ತಂದೆ ರಾಯ್​ದಾಸ್ ಬಳಿ ಹೋಗಿ ಈ ವಿಚಾರವಾಗಿ ಕಿರುಚಾಡಿದ್ದಾಳೆ. ಬ್ರೋ ಏನು ಅಂತ ಅಂದುಕೊಂಡಿದ್ದಾನೆ.. ಅವನೇ ಎಲ್ಲ ಡಿಸಿಷನ್ ತೆಗೋತಾನೆ ಅಂತದ್ರೆ ಆ ಬೋರ್ಡ್​ ಮೆಂಬರ್ ಆಗಿ ನಾನು ಯಾಕೆ ಇರುವುದು.. ನನ್ನ ಬಿಡಿ.. ಡ್ಯಾಡ್ ನೀವು ಈ ಬೋರ್ಡ್​ನ ಪ್ರೆಸಿಡೆಂಟ್ ಕನಿಷ್ಠ ನಿಮ್ಮ ಬಳಿ ಆದ್ರೂ ಕೇಳಬೇಕಲ್ವಾ?, ಅಂತಹ ದೊಡ್ಡ ಪೋಸ್ಟ್​​ಗೆ ಒಬ್ಬರನ್ನು ಜಾಯಿನ್ ಮಾಡಬೇಕು ಅಂದ್ರೆ ಅದಕ್ಕೆ ಎಷ್ಟು ಪ್ರೊಸೀಜರ್ ಇದೆ ಎಂದು ರೇಗಾಡಿದ್ದಾಳೆ.

ರಾಮ್​ದಾಸ್ ತಕ್ಷಣವೇ ಆದೀಯನ್ನು ಮನೆಗೆ ಬರಲು ಹೇಳಿದ್ದಾರೆ. ಆದೀ ಬಂದು ಏನಾಯಿತು.. ಎಂದು ಕೇಳಿದಾಗ ಕನ್ನಿಕಾ ಮತ್ತೆ ಕೆರಳಿ ಕೆಂಡವಾಗಿದ್ದಾಳೆ. ಅಲ್ಲ ಹೋಗಿ ಹೋಗಿ ಆ ಭಾಗ್ಯಾನ ಟ್ರಸ್ಟ್​ನ ಎಂಡಿ ಆಗಿ ಮಾಡಿದ್ದಿ ಅಲ್ವಾ?, ನಮ್ಮ ಕಂಪನಿಯ ಪಾಲಿಸಿ ಏನು ಅಂತ ನಿನ್ಗೆ ಗೊತ್ತಿಲ್ವ.. ಇದಕ್ಕೆ ನಮ್ಮೆಲ್ಲರ ಒಪ್ಪಿಗೆ ಬೇಕು ಅಂತ ಗೊತ್ತಿಲ್ವಾ.. ಈ ಪೋಸ್ಟ್​ಗೆ ಆಯ್ಕೆ ಆಗಬೇಕು ಅಂದ್ರೆ ರೆಸ್ಯೂಮ್ ತೆಗೊಬೇಕು.. ಹೆಚ್​ಆರ್ ಭೇಟಿ ಆಗಬೇಕು.. ಇಂಟರ್​ವ್ಯೂ ಆಗಬೇಕು.. ಅದರಲ್ಲಿ ಪಾಸ್ ಆಗಬೇಕು ಎಂದಿದ್ದಾಳೆ.



ರಾಮ್​ದಾಸ್ ಕೂಡ ಆದೀ ಮೇಲೆ ಕೋಪಗೊಂಡು ರೂಲ್ಸ್ ಅಂದಮೇಲೆ ಅದು ಎಲ್ಲರಿಗೂ ಒಂದೇ ಎಂದಿದ್ದಾರೆ. ಬಳಿಕ ಕನ್ನಿಕಾಳೇ ಒಂದು ಪ್ಲ್ಯಾನ್ ಕೊಟ್ಟಿದ್ದಾಳೆ. ನಾಳೆನೇ ನಾವು ಒಂದು ಆ್ಯಡ್ ಹಾಕೋಣ ಎಂಡಿ ಪೋಸ್ಟ್​ಗೆ ಖಾಲಿ ಇದೆ ಎಂದು.. ಕರ್ನಾಟಕದಿಂದ ಎಷ್ಟೋ ಜನ ಬರಬಹುದು.. ಯಾರಿಗೆ ಗೊತ್ತು ಭಾಗ್ಯಾಗಿಂದ ಉತ್ತಮ ಕ್ಯಾಂಡಿಡೇಟ್ ಸಿಗಬಹುದು ಎಂದಿದ್ದಾಳೆ. ಇದಕ್ಕೆ ರಾಮ್​ದಾಸ್ ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಭಾಗ್ಯ ಬಳಿ ರೆಸ್ಯೂಮ್ ರೆಡಿ ಮಾಡೋಕೆ ಹೇಳು.. ಅವಳು ಇಂಟರ್​ವ್ಯೂ ಅಟೆಂಡ್ ಆಗಲಿ ಎಂದು ರಾಮ್​ದಾಸ್ ಆದೀ ಬಳಿ ಹೇಳಿದ್ದಾರೆ.

ಇದರ ಜೊತೆಗೆ ಕನ್ನಿಕಾ ಒಂದು ಕಂಡೀಷನ್ ಕೂಡ ಹಾಕಿದ್ದಾಳೆ. ಇಂಟರ್​ವ್ಯೂ ಮುಗಿಯುವ ತನಕ ನೀನು ಭಾಗ್ಯ ಮನೆಗೆ ಹೋಗುವಂತಿಲ್ಲ ಎಂದು ಆದೀ ಬಳಿ ಹೇಳಿದ್ದಾಳೆ. ಇದಕ್ಕೆ ಒಕೆ ಎಂದಿರುವ ಆದೀ ಸದ್ಯ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈ ಎಲ್ಲ ವಿಚಾರವನ್ನು ಆದೀಶ್ವರ್ ಭಾಗ್ಯಾಗೆ ಹೇಗೆ ಹೇಳುತ್ತಾನೆ.. ಭಾಗ್ಯ ರೆಸ್ಯೂಮ್ ರೆಡಿ ಮಾಡಿ.. ಇಂಟರ್​ವ್ಯೂ ಪಾಸ್ ಮಾಡ್ತಾಳ ಅಥವಾ ಇದನ್ನ ಇಲ್ಲಿಗೆ ಕೈಬಿಡ್ತಾಳ ಎಂಬುದು ಮುಂದಿನ ಎಪಿಸೋಡ್​ನಲ್ಲಿ ನೋಡಬೇಕಿದೆ.

Amruthadhare Serial: ಅಮೃತಧಾರೆ ಧಾರಾವಾಹಿಯಲ್ಲಿ ಮತ್ತೊಂದು ಟ್ವಿಸ್ಟ್: ಮುಖಾಮುಖಿಯಾದರು ಅಪ್ಪ-ಮಗ