ಕನ್ನಡ ಕಿರುತೆರೆಯಲ್ಲಿ ಸೀರಿಯಲ್ಗಳ (Kannada Serial) ಲೆಕ್ಕಾಚಾರ ವಾರದಿಂದ ವಾರಕ್ಕೆ ಬದಲಾಗುತ್ತ ಇರುತ್ತದೆ. ಪ್ರತಿವಾರ ನಿರ್ದೇಶಕರು ಜನರನ್ನು ಸೆಳೆಯಲು ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಾ ಇರುತ್ತಾರೆ. ಯಾವ ಧಾರಾವಾಹಿ ಹಿಟ್ ಆಯಿತು-ಫ್ಲಾಫ್ ಆಯಿತು ಎಂಬುದು ಪ್ರತಿ ವಾರದ ಟಿಆರ್‌ಪಿ ಮೂಲಕ ತಿಳಿಯಲಿದೆ. ಇದೀಗ 24ನೇ ವಾರದ ಟಿಆರ್‌ಪಿ ರೇಟಿಂಗ್ಸ್ ಹೊರಬಿದ್ದಿದೆ. ಈ ವಾರದ ವಿಶೇಷ ಎಂದರೆ ಹೊಸ ಧಾರಾವಾಹಿ ನಂಬರ್ ಒನ್ ಪಟ್ಟ ಪಡೆದುಕೊಂಡಿದೆ.
ಟಿಆರ್‌ಪಿ ರೇಸ್ನಲ್ಲಿ ಈ ಬಾರಿ ಮೊದಲ ಸ್ಥಾನದಲ್ಲಿ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಇದೆ. ಈ ಧಾರಾವಾಹಿ ಇಷ್ಟು ದಿನ ಟಾಪ್ ಐದರಲ್ಲಿ ಸ್ಥಾನ ಪಡೆದುಕೊಳ್ಳುತ್ತಿತ್ತು. ಆದರೆ, ಟಾಪ್ ಒಂದಕ್ಕೆ ಬಂದಿರಲಿಲ್ಲ. ಆದರೀಗ ಅಚ್ಚರಿ ಎಂಬಂತೆ ಧಾರಾವಾಹಿಗೆ ಮೊದಲ ಸ್ಥಾನ ಸಿಕ್ಕಿದೆ. 8.9 ಟಿವಿಆರ್ ದಾಖಲಿಸುವ ಮೂಲಕ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಅಗ್ರಸ್ಥಾನದಲ್ಲಿದೆ. ಇನ್ನೂ 8.6 ಟಿವಿಆರ್ ಪಡೆದು ನಾ ನಿನ್ನ ಬಿಡಲಾರೆ ಸೀರಿಯಲ್ ಎರಡನೇ ಸ್ಥಾನ ಗಿಟ್ಟಿಸಿದೆ.
ಮೂರನೇ ಸ್ಥಾನದಲ್ಲಿ 7.8 ಟಿವಿಆರ್ ನೊಂದಿಗೆ ಅಣ್ಣಯ್ಯ ಧಾರಾವಾಹಿ ಇದೆ. ನಿಶಾ ರವಿಕೃಷ್ಣನ್ ಅವರು ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರೋ ಧಾರಾವಾಹಿ ಜನರಿಂದ ಹೆಚ್ಚು ಮೆಚ್ಚುಗೆ ಪಡೆದು ಮೂರನೇ ಸ್ಥಾನದಲ್ಲಿ ಇದೆ. 7.4 ಟಿವಿಆರ್ ಪಡೆಯುವ ಮೂಲಕ ಲಕ್ಷ್ಮೀ ನಿವಾಸ ಧಾರಾವಾಹಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಈ ಧಾರಾವಾಹಿಗೆ ಹಲವು ಬದಲಾವಣೆ ಆಗಿದೆ. ಲಕ್ಷ್ಮೀ ಪಾತ್ರಧಾರಿ ಹೊರ ನಡೆದಿದ್ದು, ಹಿರಿಯ ನಟಿ ಮಾಧುರಿ ಹೊಸ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ವಾರ ಪಿಕ್-ಅಪ್ ಪಡೆದುಕೊಳ್ಳುತ್ತ ನೋಡಬೇಕು. ಐದನೇ ಸ್ಥಾನದಲ್ಲಿ ಅಮೃತಧಾರೆ ಹಾಗೂ ಬ್ರಹ್ಮಗಂಟು ಧಾರಾವಾಹಿ ಇದೆ.
Bhavya Gowda: ಒಂದು ಶೋಗೆ ಸಹಿ ಹಾಕಿದ್ಮೇಲೆ..: ಭವ್ಯಾ ಗೌಡ ರೂಲ್ಸ್ ಬ್ರೇಕ್ ಬಗ್ಗೆ ಪ್ರಥಮ್ ಮಾತು
ಇನ್ನು ಮಹಾನಟಿ ಸೀಸನ್ 2 ಕಾರ್ಯಕ್ರಮದ ಲಾಂಚ್ ಎಪಿಸೋಡ್‌ಗೆ ಗ್ರಾಮೀಣ ಭಾಗದಲ್ಲಿ 10.5 ಟಿವಿಆರ್ ಲಭಿಸಿದೆ. ಬರೀ ನಗರ ಪ್ರದೇಶದಲ್ಲಿ 7.5 ಟಿವಿಆರ್ ದಾಖಲಿಸಿದೆ. ಹಾಗೇ, ಅರ್ಬನ್ + ರೂರಲ್‌ನಲ್ಲಿ 9.0 ಟಿವಿಆರ್ ಪಡೆದಿದೆ. ಆ ಮೂಲಕ ಮೊದಲ ವಾರವೇ ಮಹಾನಟಿ ಸೀಸನ್ 2 ಶೋಗೆ ಭರ್ಜರಿ ಓಪನಿಂಗ್ ಸಿಕ್ಕಿದೆ.