ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ninagagi Serial: ದೃಷ್ಟಿಬೊಟ್ಟು ಬೆನ್ನಲ್ಲೇ ಕಲರ್ಸ್​ನ ಮತ್ತೊಂದು ಧಾರಾವಾಹಿ ಅಂತ್ಯ: ಫೋಟೋ ಹಂಚಿಕೊಂಡ ತಂಡ

ಈಗಾಗಲೇ ಕಲರ್ಸ್ ಕನ್ನಡದಲ್ಲಿ ಸುಮಾರು ಒಂದು ವರ್ಷ ಪ್ರಸಾರ ಕಂಡ ದೃಷ್ಟಿಬೊಟ್ಟು ಧಾರಾವಾಹಿ ಅಂತ್ಯಕಂಡಿದೆ. ಇದೀಗ ದೃಷ್ಟಿಬೊಟ್ಟು ಬಳಿಕ ನಿನಗಾಗಿ ಧಾರಾವಾಹಿ ಕೊನೆಯಾಗಲಿದೆ. ಈಗಾಗಲೇ ಚಿತ್ರೀಕರಣ ಅಂತ್ಯಗೊಂಡಿದ್ದು, ಕ್ಲೈಮ್ಯಾಕ್ಸ್ ಶೂಟಿಂಗ್ ಮುಗಿಸಿ ಕೊನೆಯ ದಿನದ ಚಿತ್ರೀಕರಣದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ.

Ninagagi Serial

ಬಿಗ್ ಬಾಸ್ ಕನ್ನಡ (Bigg Boss Kannada 12) ಹೊಸ ಸೀಸನ್​ಗೆ ಇನ್ನೇನು ಕೆಲವೇ ದಿನಗಳಷ್ಟೆ ಬಾಕಿ ಉಳಿದಿದೆ. ಇದೇ ಸೆಪ್ಟೆಂಬರ್ 28 ರಿಂದ ಬಿಬಿಕೆ 12 ಆರಂಭವಾಗಲಿದೆ. ಈಗಾಗಲೇ ಎರಡು ಪ್ರೋಮೋ ಬಿಡುಗಡೆ ಆಗಿದ್ದು ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಸೆಪ್ಟೆಂಬರ್ 28 ಭಾನುವಾರದಂದು ಗ್ರ್ಯಾಂಡ್ ಓಪನಿಂಗ್ ನಡೆಯಲಿದೆ. ಇದಾದ ಬಳಿಕ ಸೆ. 29 ರಿಂದ ಪ್ರತಿ ರಾತ್ರಿ 9:30ಕ್ಕೆ ಡೊಡ್ಮನೆ ಆಟ ಪ್ರಸಾರ ಕಾಣಲಿದೆ. 1:30 ಗಂಟೆಗಳ ಕಾಲ ಬಿಗ್ ಬಾಸ್ ಶೋ ಟೆಲಿಕಾಸ್ಟ್ ಆಗಲಿದೆ. ಹೀಗಾಗಿ ಬಿಗ್ ಬಾಸ್​ಗೋಸ್ಕರ ಕೆಲ ಧಾರಾವಾಹಿಗಳು ಮುಕ್ತಾಯ ಕಾಣಲಿದೆ.

ಈಗಾಗಲೇ ಕಲರ್ಸ್ ಕನ್ನಡದಲ್ಲಿ ಸುಮಾರು ಒಂದು ವರ್ಷ ಪ್ರಸಾರ ಕಂಡ ದೃಷ್ಟಿಬೊಟ್ಟು ಧಾರಾವಾಹಿ ಅಂತ್ಯಕಂಡಿದೆ. ಸೆಪ್ಟಂಬರ್​ 21 ರಂದು ತನ್ನ ಕೊನೆ ಸಂಚಿಕೆ ಪ್ರಸಾರ ಮಾಡುವ ಮೂಲಕ ಧಾರಾವಾಹಿಗೆ ಶುಭಂ ಬೋರ್ಡ್ ಬಿತ್ತು. ಈ ಧಾರಾವಾಹಿಯಿ ಮುಕ್ತಾಯಕ್ಕು ಮುನ್ನವೇ ಪ್ರಮುಖ ಪಾತ್ರಧಾರಿ ವಿಜಯ್ ಸೂರ್ಯ ಸೀರಿಯಲ್​ನಿಂದ ಹೊರಬಂದಿದ್ದರು. ಇದೀಗ ದೃಷ್ಟಿಬೊಟ್ಟು ಬಳಿಕ ನಿನಗಾಗಿ ಧಾರಾವಾಹಿ ಕೊನೆಯಾಗಲಿದೆ.

ಕಳೆದ ವರ್ಷಮೇ 27 ರಿಂದ ನಿನಗಾಗಿ ಸೀರಿಯಲ್‌ ಪ್ರಸಾರ ಶುರುವಾಯಿತು. ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಹಾಗೂ ರಿತ್ವಿಕ್ ಮಠದ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿ 403 ಸಂಚಿಕೆಗಳನ್ನ ಪೂರ್ಣಗೊಳಿಸಿದೆ. ಒಂದುಕಾಲು ವರ್ಷ ಧಾರಾವಾಹಿ ಪ್ರಸಾರ ಕಂಡಿದ್ದು ಈಗ ಅಂತ್ಯವಾಗಲಿದೆ. ಈಗಾಗಲೇ ಚಿತ್ರೀಕರಣ ಅಂತ್ಯಗೊಂಡಿದ್ದು, ಕ್ಲೈಮ್ಯಾಕ್ಸ್ ಶೂಟಿಂಗ್ ಮುಗಿಸಿ ಕೊನೆಯ ದಿನದ ಚಿತ್ರೀಕರಣದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ.



ಸದ್ಯ ಈ ಧಾರಾವಾಹಿ ಕಥೆ ವೇಗ ಪಡೆದುಕೊಂಡಿದ್ದು, ದೇವಿ ಸತ್ಯ ಬಯಲು ಮಾಡಿದ್ದಾಳೆ ರಚನಾ. ಅತ್ತ ಬ್ಯುಸಿನೆಸ್​ನಲ್ಲಿ ನಡೆಯುತ್ತಿರುವ ಅನ್ಯಾಯದ ಸುಳಿವು ಜೀವಾಗೆ ಸಿಕ್ಕಿದೆ. ಈ ನಡುವೆ ದುಷ್ಟ ಕಪಿಲ್ ಹಂತಹಂತವಾಗಿ ಬದಲಾಗುತ್ತಿದ್ದಾನೆ. ಈ ವಾರ ಪೂರ್ತಿ ಕಲರ್ಸ್ ಕನ್ನಡ ವಾಹಿನಿಯ ಧಾರಾವಾಹಿಗಳ ಮಹಾಸಂಚಿಕೆಗಳು ಪ್ರಸಾರವಾಗುತ್ತಿವೆ. ನಿನಗಾಗಿ ಧಾರಾವಾಹಿಯ ಮಹಾಸಂಚಿಕೆ ಇದೇ ಶುಕ್ರವಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ಅದೇ ದಿನದಂದು ನಿನಗಾಗಿ ಎಂಡ್ ಆಗುತ್ತಾ ಎಂಬುದು ನೋಡಬೇಕಿದೆ.

Bhagya Lakshmi Serial: ಕೋಪದಲ್ಲಿ ಅಮ್ಮನ ಮನೆಬಿಟ್ಟು ತಾಂಡವ್ ಮನೆಗೆ ಹೋದ ತನ್ವಿ