ಟ್ಯಾಗ್ ಲೈನ್ಗೆ ಹೇಳಿ ಮಾಡಿಸಿದಂತೆ ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Season 12) ಶುರುವಾಗಿ ಒಂದು ದಿನ ಕೂಡ ಆಗಿಲ್ಲ.. ಅದಾಗಲೇ ದೊಡ್ಮನೆಯಲ್ಲಿ ಶಾಕ್ ಮೇಲೆ ಶಾಕ್ ನೀಡಲಾಗುತ್ತಿದೆ. ‘‘Expect the Unexpected’’ ಎಂಬ ಟ್ಯಾಗ್ಲೈನ್ನೊಂದಿಗೆ ಶೋ ಆರಂಭವಾಯಿತು. ಇದಕ್ಕೆ ತಕ್ಕಂತೆ ಮೊದಲ ದಿನವೇ ದೊಡ್ಮನೆಯೊಳಗೆ ಮಹಾ ಟ್ವಿಸ್ಟ್ ನೀಡಲಾಗಿದೆ. ಎಂತಹ ಟ್ವಿಸ್ಟ್ ಎಂದರೆ ಮೊದಲ ದಿನವೇ ಬಿಗ್ ಬಾಸ್ ಮನೆಯಿಂದ ಓರ್ವ ಸ್ಪರ್ಧಿ ಎಲಿಮಿನೇಟ್ ಆಗಿ ಹೋಗಲಿದ್ದಾರೆ. ಸದ್ಯ ಮೂವರು ಈ ಡೇಂಜರ್ಝೋನ್ನಲ್ಲಿದ್ದಾರೆ.
ಹಾಯ್ ಹೇಳೋಕು ಮುನ್ನವೇ ಟಾಟಾ-ಬಾಯ್ ಹೇಳೋರು ಯಾರು? ಎಂಬ ಶೀರ್ಷಿಕೆಯೊಂದಿಗೆ ಕಲರ್ಸ್ ಕನ್ನಡ ಮೊದಲ ದಿನದ ಎಪಿಸೋಡ್ನ ಪ್ರೋಮೋ ಬಿಡುಗಡೆ ಮಾಡಿತ್ತು. ಇದರಲ್ಲಿ ಬಿಗ್ ಬಾಸ್, ಇದು ಬಿಗ್ ಬಾಸ್.. ನಾನು ಬಂದಿರೊ ಉದ್ದೇಶ ಸ್ವಾಗತ ಮಾಡೋಕೆ ಅಲ್ಲ.. ನಿಮ್ಮಲ್ಲಿ ಒಬ್ಬರಿಗೆ ವಿದಾಯ ಹೇಳೋದಕ್ಕೆ ಪರಸ್ಪರ ಚರ್ಚಿಸಿ ಒಬ್ಬರಿಗೆ ಮುಖ್ಯ ದ್ವಾರ ತೋರಿಸಿ ಎಂದು ಬಿಗ್ ಬಾಸ್ ಹೇಳಿದ್ದರು.
ಇದೀಗ ಕಲರ್ಸ್ ಕನ್ನಡ ಒಂದು ಪೋಸ್ಟರ್ ಹಂಚಿಕೊಂಡಿದ್ದು, ಇದರಲ್ಲಿ ಗಾಯಕ ಮಾಳು, ಸ್ಪಂದನಾ ಹಾಗೂ ರಕ್ಷಿತಾ ಶೆಟ್ಟಿ ಅವರ ಫೋಟೋ ಇದೆ. ಜೊತೆಗೆ ಬಿಗ್ ಬಾಸ್ ಮನೆಗೆ ಬೈ ಬೈ ಹೇಳೋದ್ಯಾರು? ಎಂದು ಬರೆಯಲಾಗಿದೆ. ಈ ಮೂವರಲ್ಲಿ ಯಾರು ಇಂದು ಎಲಿಮಿನೇಟ್ ಆಗುತ್ತಾರೆ ಎಂಬುದು ನೋಡಬೇಕಿದೆ. ಬೆಳಗ್ಗೆ ಪ್ರೋಮೋ ನೋಡಿದ ಜನರು, ಇದು ತಮಾಷೆಯಾಗರುತ್ತೆ ಎಂದು ಕಮೆಂಟ್ ಮಾಡಿದ್ದರು. ಕೆಲವರು ಬಿಗ್ ಬಾಸ್ ಅಂದ್ರೆ ಹೀಗೆ. ಮನೆಯೊಳಗೆ ಎಲ್ಲರೂ ಬಂದ ಮರುಕ್ಷಣವೇ ಆಟ ಶುರು. ಇನ್ನೇನಿದ್ರೂ ಬಿಗ್ ಬಾಸ್ ಆಟ ಎಂದು ಹೇಳಿದ್ದರು.
ಸ್ಪರ್ಧಿಗಳು ಕೆಲವೊಂದು ಕಾರಣಗಳನ್ನು ನೀಡಿ ಎಲಿಮಿನೇಟ್ ಮಾಡಬೇಕಾಗುತ್ತದೆ. ಅದರಂತೆ ಮನೆಯಲ್ಲಿ ಬಿಗ್ ಚರ್ಚೆ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ತಪ್ಪು-ತಪ್ಪು ಮಾತಾಡಿ ಫೇಮಸ್ ಆಗೋದು ಒಂದಿ ಇರುತ್ತೆ ಎಂದು ರಕ್ಷಿತಾ ಶೆಟ್ಟಿ ಬಗ್ಗೆ ಜಾಹ್ಮವಿ ಕಾರಣ ನೀಡಿದ್ದಾರೆ. ಮತ್ತೊಂದೆಡೆ ಅಶ್ವಿನಿ ಅವರು ಸ್ಪಂದನಾ ಬಗ್ಗೆ, ಸ್ಪಂದನಾ ಅವರಿಗೆ ಹೊರಗಡೆ ಸಾಕಷ್ಟು ಅವಕಾಶ ಸಿಗಬಹುದು.. ಹೀಗಾಗಿ ಅವರು ಬಿಗ್ ಬಾಸ್ನಿಂದ ಹೊರಹೋಗಲಿ ಎಂದು ಹೇಳಿದ್ದಾರೆ.