BBK 12: ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಮಲ್ಲಮ್ಮ ಮಹಾ ಎಡವಟ್ಟು
ಬಿಗ್ ಬಾಸ್ ಮನೆಯಲ್ಲಿ ಅಡುಗೆ ಮಾಡಲು ಒಂಟಿ ತಂಡದವರಿಗೆ ಗ್ರೋಸರಿ ತೆಗೆದುಕೊಳ್ಲಲು ಹೇಳಿದ್ದಾರೆ. ಸುಮ್ಮನೆ ಹೋಗಿ ಬೇಕಾದ ಗ್ರೋಸರಿ ತೆಗೆದುಕೊಳ್ಳುವುದಲ್ಲ. ಇದಕ್ಕೆಂದು ಒಂದು ನಿಯಮ ಇರುತ್ತದೆ. ಬಿಗ್ ಬಾಸ್, ಒಂಟಿ ತಂಡದಲ್ಲಿರುವ ಸದಸ್ಯರು ಮಾತ್ರ ಮನೆಯ ದಿನಸಿ ಸಾಮಗ್ರಿಗಳ ಆಯ್ಕೆ ಮಾಡಬೇಕು ಎಂದಿದ್ದಾರೆ. ಇದರಲ್ಲಿ ಮಲ್ಲಮ್ಮ ಎಡವಟ್ಟು ಮಾಡಿದ್ದಾರೆ.

Mallamma BBK 12 -

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶುರುವಾಗಿದ್ದು, ಮೊದಲ ದಿನವೇ ರೋಚಕತೆ ಸೃಷ್ಟಿಸಿದೆ. ಒಟ್ಟು 19 ಸ್ಪರ್ಧಿಗಳು ಮನೆಯೊಳಗೆ ಹೋಗಿದ್ದಾರೆ. ಮೊದಲ ದಿನ ದೊಡ್ಮನೆಯಲ್ಲಿ ಆರಾಮವಾಗಿ ಸಮಯ ಕಳೆಯೋಣ ಎಂದು ಅಂದುಕೊಂಡಿದ್ದ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದರ ಹಿಂದೆ ಒಂದರಂತೆ ಶಾಕ್ ಕೊಡುತ್ತಿದ್ದಾರೆ. ಈಗಾಗೇ ಬಿಡುಗಡೆ ಆಗಿರುವ ಮೊದಲ ಪ್ರೋಮೋದಲ್ಲಿ ಇಂದು ಮೊದಲ ದಿನ ಒಂದು ಎಲಿಮಿನೇಷನ್ ನಡೆಯಲಿದೆ ಎಂದು ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಪ್ರೋಮೋ ಔಟ್ ಆಗಿದ್ದು, ಇದರಲ್ಲಿ ಹಳ್ಳಿ ಪ್ರತಿಭೆ ಮಲ್ಲಮ್ಮ ಮಹಾ ಎಡವಟ್ಟು ಮಾಡಿದ್ದಾರೆ.
ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಒಂಟಿ-ಜಂಟಿ ಎಂದು ಎರಡು ಗ್ರೂಪ್ ಮಾಡಲಾಗಿದೆ. ಸ್ಪರ್ಧಿಗಳು ದೊಡ್ಮನೆಯೊಳಗೆ ಪ್ರವೇಶಿಸುವ ಮುನ್ನ ಸುದೀಪ್ ಅವರು ವೋಟ್ ಆಧಾರದ ಮೇಲೆ ಈ ನಿರ್ಧಾರ ಕೈಗೊಂಡರು. ಸದ್ಯ ಬಿಗ್ ಬಾಸ್ ಮನೆಯಲ್ಲಿ ಅಡುಗೆ ಮಾಡಲು ಒಂಟಿ ತಂಡದವರಿಗೆ ಗ್ರೋಸರಿ ತೆಗೆದುಕೊಳ್ಲಲು ಹೇಳಿದ್ದಾರೆ. ಸುಮ್ಮನೆ ಹೋಗಿ ಬೇಕಾದ ಗ್ರೋಸರಿ ತೆಗೆದುಕೊಳ್ಳುವುದಲ್ಲ. ಇದಕ್ಕೆಂದು ಒಂದು ನಿಯಮ ಇರುತ್ತದೆ. ಬಿಗ್ ಬಾಸ್, ಒಂಟಿ ತಂಡದಲ್ಲಿರುವ ಸದಸ್ಯರು ಮಾತ್ರ ಮನೆಯ ದಿನಸಿ ಸಾಮಗ್ರಿಗಳ ಆಯ್ಕೆ ಮಾಡಬೇಕು ಎಂದಿದ್ದಾರೆ. ಇದರಲ್ಲಿ ಮಲ್ಲಮ್ಮ ಎಡವಟ್ಟು ಮಾಡಿದ್ದಾರೆ.
ಮನೆ ಪಡೆಯುವ ದಿನಸಿ ಸಾಮಗ್ರಿಗಳ ನಿರ್ಧಾರ ಒಂಟಿಗಳದ್ದೇ ಆಗಿರುತ್ತದೆ ಎಂದು ಬಿಗ್ ಬಾಸ್ ಹೇಳಿದ್ದಾರೆ. ಬಳಿಕ ನೆಲದ ಮೇಲೆ ಒಂದು ಗುರುತು ಹಾಕಲಾಗಿದೆ ಅದರ ಮೇಲೆ ನಿಲ್ಲಿ ಎಂದು ಬಿಗ್ ಬಾಸ್ ಮಲ್ಲಮ್ಮ ಅವರಿಗೆ ಹೇಳಿದ್ದಾರೆ. ಆದರೆ, ಮಲ್ಲಮ್ಮ ಅವರಿಗೆ ಏನು ಮಾಡಬೇಕೆಂದು ತಿಳಿಯುವುದಿಲ್ಲ.. ಬಿಗ್ ಬಾಸ್ ಪದೇ ಪದೇ ಗುರುತಿನ ಮೇಲೆ ನಿಲ್ಲಿ ಎಂದು ಹೇಳಿದರು ಮಲ್ಲಮ್ಮಗೆ ಅದು ಅರ್ಥವಾಗಿಲ್ಲ.
ಬಳಿಕ ಬಿಗ್ ಬಾಸ್, ನಿಮ್ಮ ಆಯ್ಕೆಯ ಇಡೀ ಬುಟ್ಟಿಯನ್ನು ಟೇಬಲ್ ಮೇಲೆ ಇಡತಕ್ಕದ್ದು.. ಮನೆ ಯಾವುದೇ ದಿನಸಿ ಸಾಮಗ್ರಿಗಳನ್ನು ಪಡೆಯುವುದಿಲ್ಲ ಎಂದು ಬಿಗ್ ಬಾಸ್ ಹೇಳಿದ್ದಾರೆ. ಇದರಿಂದ ಮನೆಯವರಿಗೆ ಬೇಸರ ಮೂಡಿದೆ. ಊಟಕ್ಕೆ ಏನು ಮಾಡುವುದು ಎಂದು ಟೆನ್ಶನ್ ಮಾಡಿಕೊಂಡಿದ್ದಾರೆ. ಸದ್ಯ ಮಲ್ಲಮ್ಮನ ಮೇಲೆ ಮನೆಯವರಿಗೆ ಕೋಪಬಂದಿದೆ. ಊಟಕ್ಕೆ ಇನ್ನೇನು ಮಾಡುತ್ತಾರೆ ಎಂಬುದು ನೋಡಬೇಕಿದೆ.
BBK 12: ಮೊದಲ ದಿನವೇ ಎಲಿಮಿನೇಷನ್: ಬಿಗ್ ಬಾಸ್ ಕನ್ನಡದಲ್ಲಿ ಬಿಗ್ ಟ್ವಿಸ್ಟ್