ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ-ರಾಶಿಕಾ ನಡುವೆ ಹೊತ್ತಿ ಉರಿದ ಬೆಂಕಿ

ಬಿಗ್ ಬಾಸ್ ಈ ವಾರದ ನಾಮಿನೇಷನ್ ಪ್ರಕ್ರಿಯೆ ಈಗ ಶುರುವಾಗಲಿದೆ ಎಂದು ಹೇಳಿದ್ದಾರೆ. ರಕ್ಷಿತಾ, ನಾನು ರಾಶಿಕಾ ಅವರನ್ನು ನಾಮಿನೇಟ್ ಮಾಡ್ತೇನೆ.. ಅವರು ಇಂಡಿವ್ಯೂಜುವಲ್ ಆಗಿ ಇಲ್ಲ.. ಆರ್ಡರ್ ಮಾಡ್ತಾರೆ ಅದನ್ನು ತೆಗೊಂದು ಬಾ.. ಇದನ್ನು ತೆಗೊಂಡು ಬಾ ಅಂತಾರೆ ಎಂಬ ಕಾರಣ ನೀಡಿದ್ದಾರೆ.

Rashika and Rakshita

ನಾಲ್ಕನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಈಗ ದೊಡ್ಡ ತಿರುವು ಪಡೆದುಕೊಂಡಿದೆ. ಮೂವರು ವೈಲ್ಡ್-ಕಾರ್ಡ್ ಸ್ಪರ್ಧಿಗಳು ದೊಡ್ಮನೆಯೊಳಗೆ ಕಾಲಿಟ್ಟ ನಂತರ ಮನೆಯ ವಾತಾವರಣ ಸಂಪೂರ್ಣ ಬದಲಾಗಿದೆ. ಮ್ಯೂಟೆಂಟ್ ರಘು ಹಾಗೂ ರಿಷಾ ಗೌಡ ಎಂಟ್ರಯಿಂದ ಮನೆ ನಡುಗಿ ಹೋಗಿದೆ. ಅತ್ತ ಸೂರಜ್ ಸಿಂಗ್ ಸೈಲೆಂಟ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಹೀಗಿರುವಾಗ ಇಂದು ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಇದರಲ್ಲಿ ರಕ್ಷಿತಾ ಶೆಟ್ಟಿ ಮತ್ತು ರಾಶಿಕಾ ಗೌಡ ನಡುವೆ ದೊಡ್ಡ ಗಲಾಟೆ ನಡೆದಿದೆ.

ಬಿಗ್ ಬಾಸ್ ಈ ವಾರದ ನಾಮಿನೇಷನ್ ಪ್ರಕ್ರಿಯೆ ಈಗ ಶುರುವಾಗಲಿದೆ ಎಂದು ಹೇಳಿದ್ದಾರೆ. ಅದರಂತೆ ರಘು ತಮ್ಮ ಮೊದಲ ಹೆಸರನ್ನು ಗಿಲ್ಲಿ ಎಂದು ತೆಗೆದುಕೊಂಡಿದ್ದಾರೆ. ಕಾಮಿಡಿಯಲ್ಲಿ ಕ್ಯಾರೆಕ್ಟರ್ ಅನ್ನು ಡಮ್ಮಿ ಮಾಡೋದು ಎಂದು ಹೇಳಿದ್ದಾರೆ. ಗಿಲ್ಲಿಯನ್ನು ಐದಕ್ಕೂ ಹೆಚ್ಚು ಮಂದಿ ನಾಮಿನೇಟ್ ಮಾಡಿದ್ದಾರೆ. ಬಳಿಕ ರಕ್ಷಿತಾ, ನಾನು ರಾಶಿಕಾ ಅವರನ್ನು ನಾಮಿನೇಟ್ ಮಾಡ್ತೇನೆ.. ಅವರು ಇಂಡಿವ್ಯೂಜುವಲ್ ಆಗಿ ಇಲ್ಲ.. ಆರ್ಡರ್ ಮಾಡ್ತಾರೆ ಅದನ್ನು ತೆಗೊಂದು ಬಾ.. ಇದನ್ನು ತೆಗೊಂಡು ಬಾ ಅಂತಾರೆ ಎಂಬ ಕಾರಣ ನೀಡಿದ್ದಾರೆ.



ರಕ್ಷಿತಾ ನೀಡಿರುವ ಕಾರಣದಿಂದ ರೊಚ್ಚಿಗೆದ್ದ ರಾಶಿಕಾ, ನಾನು ಯಾರ ಮೇಲೆ ಡಿಪೆಂಡ್ ಆಗಿದ್ದೇನಮ್ಮ.. ನಿನ್ಗೆ ಏನು ಅರ್ಥ ಆಗಲ್ಲ, ಸುಮ್ನೆ ಬಂದು ಬಿಟ್ಟಿದ್ದೀಯಾ ಬಿಗ್ ಬಾಸ್ ಮನೆಗೆ ಚೈಲ್ಡಿಶ್ ಬಿಹೆವಿಯರ್ ಎಂದು ಹೇಳಿದ್ದಾರೆ. ಅದಕ್ಕೆ ರಕ್ಷಿತಾ, ನೀವು ರೆಸ್ಪೆಕ್ಟ್ ಮಾಡ್ಬೇಕು ಎಂದು ಇಬ್ಬರ ನಡುವೆ ಮಾತಿನ ಜಗಳ ನಡೆದಿದೆ.

ರಾಶಿಕಾಗೆ ಕೆಂಪು ಗುಲಾಬಿ ಕೊಟ್ಟ ಸೂರಜ್

ಮೂರನೇ ವೈಲ್ಡ್-ಕಾರ್ಡ್ ಸ್ಪರ್ಧಿಯಾಗಿ ಸೂರಜ್ ಸಿಂಗ್ ಮನೆಗೆ ಆಗಮಿಸಿ ಬಿಗ್‌ ಬಾಸ್‌ ಸ್ಪರ್ಧಿಗಳಿಗೂ ಅಚ್ಚರಿ ಮೂಡಿಸಿದ್ದಾರೆ. ಮನೆಯಲ್ಲಿರುವ ಈಜುಕೊಳದಲ್ಲಿ ನಿಂತು ಎಂಟ್ರಿ ಕೊಟ್ಟರು. ಈಜುಕೊಳದಿಂದ ಆಚೆ ಬಂದ ಸೂರಜ್ ಸಿಂಗ್, ಎಲ್ಲರಿಗೂ ಪರಿಚಯ ಮಾಡಿಕೊಂಡರು. ಬಳಿಕ ಬಿಗ್‌ಬಾಸ್‌, ‘ಸೂರಜ್ ಸಿಂಗ್ ನಿಮ್ಮ ಪ್ರಕಾರ ಈ ಮನೆಯ ಅತಿ ಸುಂದರವಾದ ಸ್ತ್ರೀ ಸದಸ್ಯೆ ಯಾರು’ ಎಂದು ಕೇಳಿದ್ದಾರೆ. ಆಗ ಸೂರಜ್‌, ಕೈಯಲ್ಲಿ ಗುಲಾಬಿಯನ್ನು ಹಿಡಿದುಕೊಂಡು ನೇರವಾಗಿ ರಾಶಿಕಾ ಬಳಿ ಹೋಗಿದ್ದಾರೆ. ಬಳಿಕ ರಾಶಿಕಾ ಕೈಗೆ ಗುಲಾಬಿ ಹೂವನ್ನು ಕೊಟ್ಟು ನೀವು ಈ ಮನೆಯ ಸುಂದರವಾದ ಹುಡುಗಿ ಎಂದಿದ್ದಾರೆ. ಸೂರಜ್ ಗುಲಾಬಿ ಕೊಡುತ್ತಿದ್ದಂತೆ ರಾಶಿಕಾ ನಾಚಿ ನೀರಾಗಿದ್ದಾರೆ.

Bigg Boss Special Story: ರಕ್ಷಿತಾ ಶೆಟ್ಟಿ ಹೀರೋಯಿನ್, ಅಶ್ವಿನಿ-ಜಾನ್ವಿ ವಿಲನ್: ಒಂದು ಘಟನೆಯಿಂದ ಎಲ್ಲವೂ ಬದಲು