ಝೀ ಕನ್ನಡದಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಭರ್ಜರಿ ಬ್ಯಾಚ್ಯುಲರ್ಸ್ (Bharjari bachelors) ಸೀಸನ್ 2 ಪ್ರಸಾರವಾಗುತ್ತಿದೆ. ಈ ಶೋಗೆ ಅಮೋಘ ರೆಸ್ಪಾನ್ಸ್ ಕೇಳಿಬರುತ್ತಿದೆ. ಹತ್ತು ಬ್ಯಾಚುಲರ್ಸ್ಗೆ ಹತ್ತು ಸುಂದರಿಯರು ಮೆಂಟರ್ಸ್ ಆಗಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಪ್ರತಿವಾರ ವೇದಿಕೆ ಮೇಲೆ ತಮ್ಮ ಅನುಭವಗಳನ್ನು ಹಂಚಿಗೊಳ್ಳುತ್ತ ಗಮನ ಸೆಳೆಯುತ್ತಿದ್ದಾರೆ. ಈಗ ರವಿಚಂದ್ರನ್ ಅವರು ಮದುವೆ ಯಾಕೆ ಆಗ ಬೇಕು ಎನ್ನುವ ಬಗ್ಗೆ ಮುತ್ತಿನಂತ ಮಾತು ಹೇಳಿದ್ದಾರೆ. ಅವರ ಮಾತುಗಳಿಗೆ ಚಪ್ಪಾಳೆ ಬಿದ್ದಿದೆ.
ಸರ್ಪ್ರೈಸ್ ಟು ಬ್ಯಾಚುಲರ್ಸ್ ರೌಂಡ್‌ನಲ್ಲಿ ಏಂಜಲ್‌ಗಳ ಸರ್ಪ್ರೈಸ್ ನೋಡಿ ಬ್ಯಾಚುಲರ್ಸ್ ಭಾವುಕರಾಗಿದ್ದಾರೆ. ಯಾವಾಗಲೂ ಭರ್ಜರಿ ಬ್ಯಾಚುಲರ್ಸ್ಗೆ ತಮ್ಮ ಜೀವನದ ಅನುಭವದ ಕುರಿತು ಒಂದಲ್ಲಾ ಒಂದು ಪಾಠ ಮಾಡುವ ಕ್ರೇಜಿಸ್ಟಾರ್ ಅವರು ವೇದಿಕೆಯಲ್ಲಿ ಕೂತು, ಅಭಿಜ್ಞಾ ಭಟ್ ಅವರಿಗೆ ಮದುವೆ ಯಾಕೆ ಆಗಬೇಕು ಎಂದು ವಿವರಿಸಿದ್ದಾರೆ. ಕ್ರೇಜಿಸ್ಟಾರ್ ಲೆಕ್ಚರ್‌ಗೆ ಬ್ಯಾಚುಲರ್ಸ್ ಮತ್ತು ಏಂಜಲ್ಸ್ ಫಿದಾ ಆಗಿದ್ದಾರೆ.
ವೇದಿಕೆ ಮೇಲೆ ನಿರೂಪಕ ನಿರಂಜನ್ ದೇಶಪಾಂಡೆ ಅವರು ಮದುವೆ ಏಕೆ ಆಗಬೇಕು ಅಂತ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಅವರು, ಮದುವೆ ಅನ್ನೋದು ಜೀವನದಲ್ಲಿ ಒಂದು ಕಂಪ್ಯಾನಿಯನ್ (ಜತೆಗಾರ) ಬೇಕು. ನೀವು ನಿಮ್ಮ ಭಾವನೆಗಳನ್ನು ಶೇರ್ ಮಾಡಿಕೊಳ್ಳಬೇಕು. ನಿಮಗೆ ಕೆಲಸಗಾರ ಬೇಕು. ಇಲ್ಲ ಅಂದ್ರೆ ನಿಮ್ಮ ಖರ್ಚನ್ನು ನಿಭಾಸೋಕೆ ಬೇಕು ಅಂತೀರಾ ಇದಲ್ಲ ಬೇಕಾಗಿರೋದು. ನಿಮಗೆಲ್ಲಾ ಬೇಕಾಗಿರೋದು ಒಬ್ಬ ಜೊತೆಗಾರ ಎಂದು ಹೇಳಿದ್ದಾರೆ.
ನಿಮ್ಮ ಫಿಲಿಂಗ್ಸ್, ನಿಮ್ಮ ಯೋಚನೆಗಳನ್ನು ಶೇರ್ ಮಾಡಿಕೊಳ್ಳುವುದಕ್ಕೆ ಬೇಕು. ಸಂಜೆ ಮನೆಗೆ ಹೋದಾಗ ನಮಗೆ ಅಂತ ಯಾತಿ ಕಾಯ್ತಾ ಇರುತ್ತಾರೆ. ಆ ತಾಯಿಗೆ ಒಂದು ವಯಸ್ಸು ಆಗುತ್ತೆ, ಆ ವಯಸ್ಸಿನ ಜೊತೆಗೆ ಒಂದು ಕಂಪನಿ ಬೇಕು. ಅದಕ್ಕೆ ನನ್ನ ಹೆಂಡತಿ ಆದ್ರೆ ನನ್ನ ತಾಯಿಗೆ ಜೊತೆಯಾಗುತ್ತಾಳೆ, ಅವರ ಕೆಲಸಕ್ಕೆ ಸಹಾಯ ಮಾಡುತ್ತಾಳೆ, ಇಬ್ಬರು ಒಬ್ಬರಿಗೊಬ್ಬರು ವಿಚಾರದ ಬಗ್ಗೆ ಮಾತಾಡುತ್ತಾರೆ. ಒಂದು ಹೆಣ್ಣು ಮನೆಯೊಳಗೆ ಕಾಲಿಟ್ಟರೆ ಒಂದು ಲಕ್ಷ್ಮೀ ಬಂದ ಹಾಗೇ ಎಂದಿದ್ದಾರೆ. ಈ ಮಾತನ್ನು ಕೇಳಿ ಕಾರ್ಯಕ್ರಮದಲ್ಲಿ ನರೆದಿದ್ದ ಎಲ್ಲಾರು ಫಿದಾ ಆಗಿ ಚಪ್ಪಾಳೆ ತಟ್ಟಿದ್ದಾರೆ.
Shivraj Kumar: ಕ್ಯಾನ್ಸರ್ನಿಂದ ಚೇತರಿಸಿಕೊಂಡು ಸರಿಗಮಪ ವೇದಿಕೆ ಮೇಲೆ ಧೂಳೆಬ್ಬಿಸಿದ ಶಿವಣ್ಣ: ವಿಡಿಯೋ