ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sunita Ahuja: ನಟ ಗೋವಿಂದನಿಂದ ಪ್ರತ್ಯೇಕ ಇರುವುದನ್ನು ಒಪ್ಪಿಕೊಂಡ ಪತ್ನಿ ಸುನೀತಾ ಅಹುಜಾ ಹೇಳಿದ್ದೇನು?

ಗೋವಿಂದ್ ಅವರ ಪತ್ನಿ ಸುನೀತಾ ಅಹುಜಾ ಇತ್ತೀಚೆಗಷ್ಟೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದು, ಈ ವೇಳೆ ಪತಿ ಜತೆಗೆ ವಾಸಿಸುತ್ತಿಲ್ಲ ಎಂದು ದೃಢಪಡಿಸಿದ್ದಾರೆ. ಅವರಿಬ್ಬರು ಪ್ರತ್ಯೇಕ ಮನೆಗಳಲ್ಲಿ ವಾಸಿಸುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.

ನಟ ಗೋವಿಂದ ಜತೆ ವಾಸ ಮಾಡ್ತಿಲ್ಲ ಎಂದ ಪತ್ನಿ ಸುನೀತಾ ಅಹೋಜಾ

Sunita Ahuja -

Profile Pushpa Kumari Sep 30, 2025 6:33 PM

ನವದೆಹಲಿ: ಬಾಲಿವುಡ್ ಖ್ಯಾತ ನಟ ಗೋವಿಂದ (Govinda) ಇತ್ತೀಚೆಗೆ ಸಿನಿಮಾ ರಂಗದಿಂದ ದೂರ ಉಳಿದಿದ್ದರೂ ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. 'ಮಾರ್ಟೆ ದಮ್ ತಕ್', 'ಸ್ವರ್ಗ್', 'ರಾಜಾಬಾಬು', 'ದೀವಾನ ಮಸ್ತಾನಾ', 'ಹೀರೋ ನಂ.1', 'ಪಾರ್ಟ್ ನರ್' ಮತ್ತಿತರ ಬಾಲಿವುಡ್‌ ಸಿನಿಮಾ ಮೂಲಕ ಜನಪ್ರಿಯರಾದ ಗೋವಿಂದ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಸಿನಿಮಾ ಜತೆಗೆ ರಾಜಕೀಯ ರಂಗದಲ್ಲಿ ಸಕ್ರಿಯವಾಗಿರುವ ನಟ ಗೋವಿಂದ್ ತಮ್ಮ ಪತ್ನಿ ಸುನೀತಾ ಸಹುಜಾ (Sunita Ahuja) ಅವರಿಂದ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ವೈರಲ್ ಕೂಡ ಆಗಿತ್ತು. ಈ ಸುದ್ದಿ ನಿಜವೇ ಅಥವಾ ಸುಳ್ಳು ಇರಬಹುದಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಅನೇಕ ಬಾರಿ ಚರ್ಚೆ ಕೂಡ ಆಗಿತ್ತು. ಇದೀಗ ಸುನೀತಾ ಈ ಬಗ್ಗೆ ಮಾತನಾಡಿ, ತಾವು ಗೋವಿಂದ ಜತೆಗೆ ವಾಸಿಸುತ್ತಿಲ್ಲ. ಪ್ರತ್ಯೇಕ ಇರುವುದಾಗಿ ಹೇಳಿಕೆ ನೀಡಿದ್ದಾರೆ. ಸದ್ಯ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.

ಸುನೀತಾ ಇತ್ತೀಚೆಗಷ್ಟೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದು, ಈ ವೇಳೆ ನಟ ಗೋವಿಂದ ಅವರೊಂದಿಗೆ ತಾವು ವಾಸಿಸುತ್ತಿಲ್ಲ ಎಂದು ದೃಢಪಡಿಸಿದ್ದಾರೆ. ತಾವಿಬ್ಬರು ಪ್ರತ್ಯೇಕ ಮನೆಗಳಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದಾರೆ. ಸುನೀತಾ ಈ ಬಗ್ಗೆ ಮಾತನಾಡಿ, ʼʼನಾನು ನನ್ನ ಮಕ್ಕಳಾದ ಯಶ್ವರ್ದನ್ ಮತ್ತು ಟೀನಾ ಜತೆ ಇರುವಾಗ, ಗೋವಿಂದ ಒಬ್ಬಂಟಿಯಾಗಿರುತ್ತಾರೆʼʼ ಎಂದು ಹೇಳಿಕೆ ನೀಡಿದ್ದಾರೆ. ʼʼಇದಕ್ಕೆ ಕಾರಣ ಏನೆಂದರೆ ಅವರ ಕುಟುಂಬದಲ್ಲಿ ಹಾಗೂ ಸ್ನೇಹಿತರ ವಲಯದಲ್ಲಿ ನಾವಿಬ್ಬರು ಜತೆಗಿರುವುದನ್ನು ಕೆಲವರು ಇಷ್ಟಪಡುವುದಿಲ್ಲ‌, ಅವರ ಕುಟುಂಬದ ಕೆಲ ವೊಂದಷ್ಟು ಜನ ನಾವು ದೂರಾಗಬೇಕು ಎಂದೇ ಬಯಸುವವರು ಇದ್ದಾರೆ. ಆದರೆ ನಮ್ಮ ನಡುವೆ ಅಂತರ ಬರಲು ಸಾಧ್ಯವಿಲ್ಲ. ಅವರು ನಾವು ದೂರಾಗಬೇಕು ಎಂದು ಬಯಸಿದಷ್ಟು ನಮ್ಮ ಪ್ರೇಮ ಸಂಬಂಧ ಬಲಶಾಲಿಯಾಗುತ್ತಿದೆʼʼ ಎಂದಿದ್ದಾರೆ.

ʼʼಕೆಟ್ಟ ಜನರೊಂದಿಗೆ ಇದ್ದರೂ ಅವರ ಮಾತಲ್ಲಿ ಯಾವುದು ಕೇಳಬೇಕು ಯಾವುದು ಕೇಳಬಾರದು ಎಂಬ ಮಾನಸಿಕ ಸ್ಥೈರ್ಯ ಇರಬೇಕು. ಇದು ಗೋವಿಂದ ಅವರಿಗೆ ಇದೆ. ಅವರು ಯಾವಾಗಲು ಸರಿ ಎಂದು ಅನಿಸಿದ್ದನ್ನು ಮಾತ್ರ ಮಾಡುತ್ತಾರೆʼʼ ಎಂದು ಹೇಲಿದ್ದಾರೆ. ಬಳಿಕ ಸಂದರ್ಶಕಿಯು ನೀವಿಬ್ಬರು ಪ್ರತ್ಯೇಕ ಜೀವಿಸುತ್ತಿದ್ದೀರಿ ಡಿವೋರ್ಸ್ ಪಡೆಯುದ್ದೀರಿ ಎಂಬ ವದಂತಿ ಇದೆ ಎಂಬ ಬಗ್ಗೆ ಪ್ರಶ್ನೆ ಮಾಡಿದ್ದು ಅದಕ್ಕೂ ಸುನೀತಾ ಸ್ಪಷ್ಟನೆ ನೀಡಿದ್ದಾರೆ.

ಇದನ್ನು ಓದಿ:Kona Movie: ಕಾಂತಾರ 1 ಸಿನಿಮಾ ಬಿಡುಗಡೆಯಾಗುವ ಥಿಯೇಟರ್‌ನಲ್ಲಿ ಕೋಣ ಚಿತ್ರದ ಟ್ರೇಲರ್ ರಿಲೀಸ್!

ʼʼನಾವಿಬ್ಬರು ಕಳೆದ 15 ವರ್ಷಗಳಿಂದ ಬೇರೆ-ಬೇರೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ಅವರು ಯಾವಾಗಲೂ ಮನೆಗೆ ಬರುವುದಿಲ್ಲ. ಹಾಗೆಂದ ಮಾತ್ರಕ್ಕೆ ಪ್ರೀತಿ ಇಲ್ಲ ಎಂದು ಹೇಳುವುದು ಸರಿಯಲ್ಲ. ನಾನು ಅವರನ್ನು ತುಂಬಾ ಪ್ರೀತಿಸುತ್ತೇನೆ. ಇಂತಹ ವದಂತಿಗಳ ಬಗ್ಗೆ ನನಗೂ ಅಸಾಮಧಾನ ಇದೆ ಎಂದು ಹೇಳಿದ್ದಾರೆ.

ಸುನೀತಾ ಮತ್ತು ಗೋವಿಂದ 1980ರಲ್ಲಿ ಪ್ರೀತಿಸಿ ಬಳಿಕ 1987ರ ಮಾರ್ಚ್ 11ರಂದು ವಿವಾಹವಾದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ . ಇತ್ತೀಚೆಗೆ ಈ ದಂಪತಿ‌ ಜತೆಯಾಗಿ ಕಾಣಿಸುತ್ತಿಲ್ಲ, ಒಟ್ಟಿಗೆ ವಾಸವಿಲ್ಲ ಎಂಬ ಕಾರಣಕ್ಕೆ ವಿಚ್ಛೇದನ ಪಡೆಯುತ್ತಾರೆ ಎಂಬ ವದಂತಿ ವೈರಲ್ ಆಗಿತ್ತು. ಬಳಿಕ ಸುನೀತಾ ಅಹುಜಾ ಮತ್ತು ಗೋವಿಂದ ಗಣೇಶ ಚತುರ್ಥಿಯನ್ನು ಒಟ್ಟಿಗೆ ಆಚರಿಸುವ ಮೂಲಕ ವಿಚ್ಛೇದನದ ವದಂತಿಗಳನ್ನು ತಳ್ಳಿ ಹಾಕಿದ್ದರು.