ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮತ್ತೆ ಬಂದ ಸೂಪರ್‌ ಹೀರೋ ‘ಶಕ್ತಿಮಾನ್’: ಪಾಕೆಟ್ ಎಫ್ಎಂನಲ್ಲಿ ಉಚಿತ ಸ್ಟ್ರೀಮಿಂಗ್

Shaktimaan Returns: 1997ರಿಂದ 2005ರವರೆಗೆ ಸುಮಾರು 8 ವರ್ಷಗಳ ಕಾಲ ಮಕ್ಕಳಿಗೆ ಅಚ್ಚುಮೆಚ್ಚಿನ ಸೀರಿಯಲ್ ಆಗಿ ʼಶಕ್ತಿಮಾನ್ʼ ಖ್ಯಾತಿ ಗಳಿಸಿತ್ತು. ಈ ಶೋ ಮೇಲೆ ಹೆಚ್ಚಿನ‌ ಫ್ಯಾನ್ಸ್ ವಿಶೇಷ ಪ್ರೀತಿ ಇಟ್ಟುಕೊಂಡಿದ್ದರು. ಇದೀಗ 90ರ ದಶಕದಲ್ಲಿ ದೂರದರ್ಶನದಲ್ಲಿ ಕೋಟ್ಯಂತರ ಮನ ಗೆದ್ದಿದ್ದ ಈ ಪಾತ್ರ ಇದೀಗ 'ಶಕ್ತಿಮಾನ್ ರಿಟರ್ನ್ಸ್' ಎಂಬ ಶೀರ್ಷಿಕೆಯೊಂದಿಗೆ ಪಾಕೆಟ್ ಎಫ್ಎಂನಲ್ಲಿ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ವಿಶೇಷ ಆಡಿಯೋ ಸರಣಿಯಾಗಿ ಬಿಡುಗಡೆಯಾಗಿದೆ.

ಪಾಕೆಟ್ ಎಫ್ಎಂನಲ್ಲಿ ಶಕ್ತಿಮಾನ್

ನವದೆಹಲಿ: 90ರ ದಶಕದ ಮಕ್ಕಳ ಫೇವರಿಟ್ ಹೀರೋ ಅಂದ್ರೆ ಅದು ಶಕ್ತಿಮಾನ್. ಇದೀಗ ಅತ್ಯಂತ ಜನಪ್ರಿಯ ಸೂಪರ್‌ ಹೀರೋ ಶಕ್ತಿಮಾನ್ (Shaktimaan Series) ಹೊಸ ರೂಪದಲ್ಲಿ ಮರಳಿದ್ದಾನೆ. 1997ರಿಂದ 2005ರವರೆಗೆ ಸುಮಾರು 8 ವರ್ಷಗಳ ಕಾಲ ಮಕ್ಕಳಿಗೆ ಅಚ್ಚುಮೆಚ್ಚಿನ ಸೀರಿಯಲ್ ಆಗಿ ʼಶಕ್ತಿಮಾನ್ʼ ಖ್ಯಾತಿ ಗಳಿಸಿತ್ತು. ಈ ಶೋ ಮೇಲೆ ಹೆಚ್ಚಿನ‌ ಫ್ಯಾನ್ಸ್ ವಿಶೇಷ ಪ್ರೀತಿಯನ್ನು ಇಟ್ಟು ಕೊಂಡಿದ್ದರು. 90ರ ದಶಕದಲ್ಲಿ ದೂರದರ್ಶನದಲ್ಲಿ ಕೋಟ್ಯಂತರ ಮನ ಗೆದ್ದಿದ್ದ ಈ ಪಾತ್ರ ಇದೀಗ 'ಶಕ್ತಿಮಾನ್ ರಿಟರ್ನ್ಸ್' ಎಂಬ ಶೀರ್ಷಿಕೆಯೊಂದಿಗೆ ಪಾಕೆಟ್ ಎಫ್​ಎಂನಲ್ಲಿ ಡಿಜಿಟಲ್ ಪ್ಲಾಟ್‌ ಫಾರ್ಮ್‌ನಲ್ಲಿ ವಿಶೇಷ ಆಡಿಯೋ ಸರಣಿಯಾಗಿ ಬಿಡುಗಡೆಯಾಗಿದೆ.

ಕಳೆದ ವರ್ಷ ಈ ಶೋವನ್ನು ಮತ್ತೆ ಆರಂಭ ಮಾಡುವುದಾಗಿ ʼಶಕ್ತಿಮಾನ್‌ʼ ಪಾತ್ರಧಾರಿ ಮುಕೇಶ್ ಹೇಳಿದ್ದರು. ಇದೀಗ ಈ ಕಾರ್ಯ ಕ್ರಮ ಮತ್ತೆ ಬರಲು ಸಿದ್ದವಾಗಿದೆ. ಆದರೆ,ಇದನ್ನು ನೋಡೋಕೆ ಆಗೋದಿಲ್ಲ. ಆಡಿಯೋ ರೀತಿಯಲ್ಲಿ ಈ ಶೋ ಬರುತ್ತಿದೆ. ಈ ಸರಣಿಯ ವಿಶೇಷ ಏನಪ್ಪಾ ಅಂದ್ರೆ ಶಕ್ತಿಮಾನ್ ಪಾತ್ರಧಾರಿಗೆ ಮುಕೇಶ್ ಖನ್ನಾ ಅವರೇ ಧ್ವನಿ ನೀಡಿದ್ದಾರೆ. ಈ ವಿಶೇಷ ಸರಣಿಯು ಪ್ರಸ್ತುತ ಪಾಕೇಟ್ ಎಫ್ಎಂನಲ್ಲಿ ಎಲ್ಲ ಕೇಳುಗರಿಗೆ ಉಚಿತವಾಗಿ ಸ್ಟ್ರೀಮಿಂಗ್ ಆಗುತ್ತಿದೆ.



ಈ ಆಡಿಯೋ ಸರಣಿಯು, ಒಳ್ಳೆಯದು ಮತ್ತು ಕೆಟ್ಟದ್ದರ ವಿರುದ್ಧ, ಸತ್ಯ ಮತ್ತು ಧರ್ಮ ಹಾಗೂ ಹೊಸ ಪೀಳಿಗೆಗೆ ನೈತಿಕ ಮತ್ತು ದೇಶಭಕ್ತಿಯ ಮೌಲ್ಯಗಳನ್ನು ಪರಿಚಯಿಸುವ ವಿಷಯಗಳನ್ನು ಆಧರಿಸಿದೆ. ʼಶಕ್ತಿಮಾನ್ʼ ಪಾತ್ರವು ಪಂಚಭೂತಗಳು ಹಾಗೂ ಏಳು ಚಕ್ರಗಳಿಂದ ತನ್ನ ಶಕ್ತಿಯನ್ನು ಪಡೆದಿದ್ದು, ಪಂಡಿತ್ ಗಂಗಾಧರ್ ವಿದ್ಯಾದರ್ ಮಾಯಾಧರ್ ಎಂಬ ಸಾಮಾನ್ಯ ಛಾಯಾಗ್ರಾಹಕ ಗುಪ್ತ ಜೀವನವನ್ನು ನಡೆಸುತ್ತಾನೆ. ಮಾಲಿನ್ಯ ಮತ್ತು ಅಪರಾಧಗಳ ವಿರುದ್ಧ ಹೋರಾಡಿ, ತನ್ನ ಮುಖ್ಯ ಶತ್ರು ತಮರಾಜ್ ಕಿಲ್ವಿಶ್‌ನ ದುಷ್ಟತನವನ್ನು ಸೋಲಿಸುವುದು ಅವನ ಮುಖ್ಯ ಉದ್ದೇಶ ಕೂಡ ಆಗಿರುತ್ತದೆ.

ಇದನ್ನು ಓದಿ:Udaala Movie: ಯೋಗರಾಜ್‌ ಭಟ್‌ ನಿರ್ಮಾಣದ ʼಉಡಾಳʼ ಚಿತ್ರದ ಟ್ರೇಲರ್‌ ಔಟ್‌

ತಮ್ಮ ಪಾತ್ರದ ಮರುಪ್ರವೇಶದ ಕುರಿತು ಮಾತನಾಡಿದ ಮುಕೇಶ್ ಖನ್ನಾ, "ಯುವ ಮನಸ್ಸಿನಲ್ಲಿ ಧೈರ್ಯ ಮತ್ತು ನೈತಿಕ ಮೌಲ್ಯಗಳನ್ನು ತುಂಬುವ ಉದ್ದೇಶದಿಂದ ಶಕ್ತಿಮಾನ್ ಪಾತ್ರವನ್ನು ಸೃಷ್ಟಿ ಮಾಡಲಾಗಿದೆ. ಈ ಮೌಲ್ಯಗಳು ಇಂದಿಗೂ ಮಕ್ಕಳಿಗೆ ಅಗತ್ಯ. ಪಾಕೇಟ್ ಎಫ್‌ಎಂ ತಂಡವು ಶಕ್ತಿಮಾನ್‌ ನ ಪಾತ್ರವನ್ನು ಉಳಿಸಿಕೊಂಡು, ಹೊಸ ಕಥಾಹಂದರ ಮತ್ತು ಅತ್ಯುತ್ತಮ ಆಡಿಯೋ ವಿನ್ಯಾಸದ ಮೂಲಕ ಅದನ್ನು ಮರುಸೃಷ್ಟಿಸಿದೆʼʼ ಎಂದು ತಿಳಿಸಿದ್ದಾರೆ. ಈ ಸರಣಿ 40 ಕಂತುಗಳಲ್ಲಿ ಮೂಡಿ ಬರುತ್ತಿದೆ.