ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಹು ನಿರೀಕ್ಷಿತ ʼಟಾಕ್ಸಿಕ್‌ʼ ರಿಲೀಸ್‌ ಡೇಟ್‌ ಅನೌನ್ಸ್‌; ರಾಕಿಂಗ್‌ ಸ್ಟಾರ್‌ ಯಶ್‌ ಗ್ಯಾಂಗ್‌ಸ್ಟರ್‌ ಲುಕ್‌ಗೆ ರಿವೀಲ್‌ಗೆ ಕೌಂಟ್‌ಡೌನ್‌

Toxic Trailer Release Date: ಬಹುನಿರೀಕ್ಷಿತ, ಯಶ್‌ ಅಭಿನಯದ ʼಟಾಕ್ಸಿಕ್‌ʼ ಚಿತ್ರದ ಟ್ರೈಲರ್‌ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ. ಸ್ವತಃ ಯಶ್‌ ಈ ಸುದ್ದಿಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆಗಸ್ಟ್‌ 8ರಂದು ಬೆಂಗಳೂರಿನಲ್ಲಿ ಟ್ರೈಲರ್‌ ಲಾಂಚ್‌ ಆಗಲಿದೆ. ಚಿತ್ರ ಆಗಸ್ಟ್‌ 26ರಂದು ತೆರೆ ಕಾಣಲಿದೆ.

ʼಟಾಕ್ಸಿಕ್‌ʼ ಚಿತ್ರದ ಪೋಸ್ಟರ್‌

ಬೆಂಗಳೂರು, ಆ. 1: ʼಕೆಜಿಎಫ್‌ʼ ಸರಣಿ ಚಿತ್ರದ ಮೂಲಕ ಪ್ಯಾನ್‌ ಇಂಡಿಯಾ ಮಾತ್ರವಲ್ಲ ಜಾಗತಿಕ ಸಿನಿಪ್ರಿಯರ ಗಮನ ಸೆಳೆದ ರಾಕಿಂಗ್‌ ಸ್ಟಾರ್‌ ಯಶ್‌ (Yash) ಅವರ ಮುಂದಿನ ಚಿತ್ರ ಯಾವುದು ಎನ್ನುವ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಉತ್ತರವಾಗಿ ಬಂದಿದ್ದೇ ʼಟಾಕ್ಸಿಕ್‌ʼ (Toxic). ಮಲಯಾಳಂ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್‌ ʼಟಾಕ್ಸಿಕ್‌ʼ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಾರೆ ಎನ್ನುವಾಗ ಈ ಕುತೂಹಲ ಮತ್ತಷ್ಟು ಹೆಚ್ಚಾಗಿದ್ದು ಸುಳ್ಳಲ್ಲ. 2009ರ 'ಕಳ್ಳರ ಸಂತೆ' ಚಿತ್ರದ ಬಳಿಕ ನಿರ್ದೇಶಕಿಯೊಬ್ಬರ ಚಿತ್ರದಲ್ಲಿ ಯಶ್‌ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಅಂಶವೂ ಹಲವರ ಗಮನ ಸೆಳೆದಿತ್ತು. ಅದಾದ ಬಳಿಕ ಹೊರ ಬಂದ ಪೋಸ್ಟರ್‌, ಟೀಸರ್‌, ಹಾಡುಗಳು ʼಟಾಕ್ಸಿಕ್‌ʼ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದವು. ತಲಾ 2 ಟೀಸರ್‌, ಹಾಡುಗಳ ಬಳಿಕ ಇದೀಗ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಲು ಟ್ರೈಲರ್‌ ಬರುತ್ತಿದೆ. ಹೌದು, ಜಾಗತಿಕ ಮಟ್ಟದಲ್ಲಿ ಧೂಳೆಬ್ಬಿಸಲು ಸಜ್ಜಾಗಿರುವ ʼಟಾಕ್ಸಿಕ್‌ʼ ಟ್ರೈಲರ್‌ ರಿಲೀಸ್‌ (Toxic Trailer Release Date) ಡೇಟ್‌ ಹೊರ ಬಿದ್ದಿದೆ.

ಸ್ವತಃ ಯಶ್‌ ಅಧಿಕೃತವಾಗಿ ಟ್ರೈಲರ್‌ ರಿಲೀಸ್‌ ಡೇಟ್‌ ಪ್ರಕಟಿಸಿದ್ದಾರೆ. ಆಗಸ್ಟ್‌ 8ರಂದು ಟ್ರೈಲರ್‌ ಅದ್ಧೂರಿಯಾಗಿ ಬಿಡುಗಡೆಯಾಗಲಿದ್ದು, ಯಶ್‌ ಅಭಿಮಾನಿಗಳು ತುದಿಗಾಲಿನಲ್ಲಿ ಕಾದು ನಿಂತಿದ್ದಾರೆ. ಆಗಸ್ಟ್ 8ರಂದು ಬೆಂಗಳೂರಿನಲ್ಲಿ ಈ ಸಿನಿಮಾದ ಟ್ರೈಲರ್‌ ಅದ್ಧೂರಿಯಾಗಿ ಲಾಂಚ್ ಆಗಲಿದೆ. ಯಶ್‌ ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಪೋಸ್ಟರ್‌ ಹಂಚಿಕೊಂಡು ಟ್ರೈಲರ್‌ ರಿಲೀಸ್‌ ಡೇಟ್‌ ಘೋಷಿಸಿದ್ದಾರೆ. ಈ ಪೋಸ್ಟರ್‌ನಲ್ಲಿ ಯಶ್ ಅವರ ನೆರಳು ಮಾತ್ರ ಕಾಣಿಸುತ್ತಿದೆ. ಅವರ ಕೈಯಲ್ಲಿ ಗನ್ ಇರುವುದು ಕೂಡ ಕಂಡು ಬಂದಿದ್ದು, ಇದೊಂದು ಭರ್ಜರಿ ಆ್ಯಕ್ಷನ್‌ ಚಿತ್ರ ಎನ್ನುವುದನ್ನು ಸಾರಿ ಹೇಳಿದೆ.

ಯಶ್‌ ಇನ್‌ಸ್ಟಾಗ್ರಾಮ್‌ ಪೋಸ್ಟರ್‌:



ಇಂಗ್ಲಿಷ್‌ನಲ್ಲೂ ಚಿತ್ರೀಕರಣ

ವಿಶೇಷ ಎಂದರೆ ಬಹು ಕೋಟಿ ರುಪಾಯಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ʼಟಾಕ್ಸಿಕ್‌ʼ ವಿವಿಧ ಭಾಷೆಗಳಲ್ಲಿ ಆಗಸ್ಟ್‌ 26ರಂದು ವಿಶ್ವಾದ್ಯಂತ ರಿಲೀಸ್‌ ಆಗಲಿದೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ಚಿತ್ರೀಕರಣವಾಗಿದ್ದು, ಭಾರತದ ವಿವಿಧ ಭಾಷೆಗಳಿಗೆ ಡಬ್‌ ಆಗಲಿದೆ. ಹೀಗಾಗಿ ಹಾಲಿವುಡ್‌ ಶೈಲಿಯಲ್ಲಿ ಚಿತ್ರ ಮೂಡಿ ಬಂದಿದೆ. ಯಶ್‌ ಜತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್‌, ತಾರಾ ಸುತಾರಿಯಾ ಮತ್ತು ಹುಮಾ ಖುರೇಷಿ ನಾಯಕಿಯರಾಗಿ ನಟಿಸಿದ್ದಾರೆ.

ಟಾಕ್ಸಿಕ್‌ ಸಿನಿಮಾದಲ್ಲಿ ಅಭಿನಯ! ಯಶ್‌ ಹೊಗಳಿ ಈ ಬಾಲಿವುಡ್‌ ನಟಿ ಹೇಳಿದ್ದೇನು?

ಡ್ರಗ್‌ ಮಾಫಿಯಾದ ಸುತ್ತ ಸಾಗುವ ಈ ಕಥೆಯಲ್ಲಿ ಯಶ್‌ ಗ್ಯಾಂಗ್‌ಸ್ಟರ್‌ ಆಗಿ ಅಭಿನಯಿಸುತ್ತಿದ್ದು, ಸಖತ್‌ ಸ್ಪೈಲಿಶ್‌ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಿಲೀಸ್‌ ಆಗಿರುವ ಟೀಸರ್‌ ಮತ್ತು ಹಾಡಿನಲ್ಲಿ ಯಶ್‌ ಮಾಸ್‌ ಆಗಿ ಮಿಂಚಿದ್ದಾರೆ.

ದಾಖಲೆ ಬರೆದ ಹಾಡುಗಳು

ಈಗಾಗಲೇ ರಿಲೀಸ್‌ ಆಗಿರುವ ʼಟಾಕ್ಸಿಕ್‌ʼ ಸಿನಿಮಾದ ʼತಬಾಹಿʼ ಮತ್ತು ʼಮನ ಮೋಹಕʼ ಹಾಡುಗಳು ಇಂಟರ್‌ನೆಟ್‌ನಲ್ಲಿ ಸಂಚಲ ಮೂಡಿಸಿವೆ. ʼತಬಾಹಿʼ ಹಾಡಿನಲ್ಲಿ ಕಿಯಾರಾ ಅಡ್ವಾಣಿ ಜತೆ ಯಶ್‌ ರೊಮಾನ್ಸ್‌ ಮಾಡಿದ್ದರೆ, ʼಮನ ಮೋಹಕʼ ಸಾಂಗ್‌ನಲ್ಲಿ ತಾರಾ ಸುತಾರಿಯ ಜತೆ ಕಾಣಿಸಿಕೊಂಡಿದ್ದಾರೆ.

ಬದಲಾಯ್ತು ಸ್ಯಾಂಡಲ್‌ವುಡ್‌ ಖದರ್‌; ಹಾಲಿವುಡ್‌ ಶೈಲಿಯಲ್ಲಿ ಮೂಡಿ ಬರುತ್ತಿದೆ 'ಟಾಕ್ಸಿಕ್‌'

ʼತಬಾಹಿʼ ಹಾಡಿನಲ್ಲಿ ಕಿಯಾರಾ ಸಖತ್‌ ಗ್ಲ್ಯಾಮರಸ್‌ ಆಗಿ ಅಭಿಮಾನಿಗಳ ಕಣ್ಣು ಕುಕ್ಕಿದ್ದಾರೆ. ಈ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಅವರ ಸಂಗೀತ ಮತ್ತು ಧ್ವನಿ ಇದೆ. ʼಮನಮೋಹಕʼ-ಈ ಮಧುರ ಪ್ರೇಮಗೀತೆಗೆ ತನಿಷ್ಕ್ ಬಾಗ್ಚಿ, ಅರ್ಸ್ಲಾನ್ ನಿಜಾಮಿ ಮತ್ತು ಫಹೀಮ್ ಅಬ್ದುಲ್ಲಾ ಸಂಗೀತ ನೀಡಿದ್ದಾರೆ. ವಿಶೇಷವೆಂದರೆ, ಗಾಯಕ ಸಿದ್ಧಾರ್ಥ್ ಬಸ್ರೂರ್ ಐದೂ ಭಾಷೆಗಳಲ್ಲಿ ಈ ಹಾಡಿಗೆ ಧ್ವನಿಯಾಗಿದ್ದಾರೆ. ಈ ಹಾಡುಗಳು ದಾಖಲೆಯ ವೀವ್ಸ್‌ ಕಂಡಿದ್ದು, ಇನ್ನು ಟ್ರೈಲರ್‌ ಯಾವ ಮಟ್ಟಿಗೆ ಸದ್ದು ಮಾಡಲಿದೆ ಎನ್ನುವ ಕುತೂಹಲ ಮೂಡಿದೆ.

ಮನರಂಜನೆಯ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author