ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ugram Manju Engagement: ಉಗ್ರಂ ಮಂಜುಗೆ ಕೂಡಿ ಬಂತು ಕಂಕಣ ಭಾಗ್ಯ; ಮದುವೆಯಾಗುತ್ತಿರುವ ಹುಡುಗಿ ಯಾರು ಗೊತ್ತಾ?

Ugram Manju: ಬಿಗ್‌ಬಾಸ್‌ 11ರ ಸ್ಪರ್ಧಿ ಹಾಗೂ ಚಿತ್ರನಟ ಉಗ್ರಂ ಮಂಜು ಅಭಿಮಾನಿಳಿಗಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ. ಇದೀಗ ಅವರು ತಮ್ಮ ಬದುಕಿನ ಹೊಸ ಅಧ್ಯಾಯವನ್ನು ಪ್ರಾರಂಭಿಸಲಿದ್ದು, ಮದುವೆಗೆ ಸಜ್ಜಾಗಿದ್ದಾರೆ. ನಿಶ್ಚಿತಾರ್ಥದ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಂಧ್ಯಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಉಗ್ರಂ ಮಂಜು

ಬೆಂಗಳೂರು: ಬಿಗ್‌ಬಾಸ್‌ 11ರ (Bigg Boss) ಸ್ಪರ್ಧಿ ಹಾಗೂ ಚಿತ್ರನಟ ಉಗ್ರಂ ಮಂಜು ಅಭಿಮಾನಿಳಿಗಿಗೆ (Ugram Manju Engagement) ಗುಡ್‌ ನ್ಯೂಸ್‌ ನೀಡಿದ್ದಾರೆ. ಇದೀಗ ಅವರು ತಮ್ಮ ಬದುಕಿನ ಹೊಸ ಅಧ್ಯಾಯವನ್ನು ಪ್ರಾರಂಭಿಸಲಿದ್ದು, ಮದುವೆಗೆ ಸಜ್ಜಾಗಿದ್ದಾರೆ. ನಿಶ್ಚಿತಾರ್ಥದ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದು, ಸಂಧ್ಯಾ ಎಂಬುವವರ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಉಗ್ರಂ ಮಂಜು ಅವರು ಸಂಧ್ಯಾ ಅವರನ್ನು ವಿವಾಹವಾಗಲಿದ್ದು, ಇಬ್ಬರ ನಿಶ್ಚಿತಾರ್ಥ ಕಾರ್ಯಕ್ರಮ ಆತ್ಮೀಯರು, ಸ್ನೇಹಿತರ ಸಮ್ಮುಖದಲ್ಲಿ ನೆರವೇರಿದೆ.

ಮಂಜು ಹೇಳಿದ್ದೇನು?

ಅವರಿಬ್ಬರು ಉಂಗುರ ಬದಲಾಯಿಸುತ್ತಿರುವ ವಿಡಿಯೋವನ್ನು ಮಂಜು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. ಬದುಕಿನ ಹೊಸ ಅಧ್ಯಾಯ ಆರಂಭವಾಗಿದೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ, ದೇವರ ಕೃಪೆಯಿಂದ, ಕುಟುಂಬದ ಆಶೀರ್ವಾದದಿಂದ… ನಾವು ಜೀವನದ ಹೊಸ ಹಾದಿಗೆ ಕಾಲಿಟ್ಟಿದ್ದೇವೆ, ಹೊಸ ಬಂಧದ ಆರಂಭ… ನಿಶ್ಚಿತಾರ್ಥದ ಸುಂದರ ಕ್ಷಣ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ ಎಂದು ಅವರು ಬರೆದುಕೊಂಡಿದ್ದಾರೆ.

ಉಗ್ರಂ ಮಂಜು ನಿಶ್ಚಿತಾರ್ಥ



ಸಂಧ್ಯಾ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲವಾದರೂ, ಅವರು ಸ್ಪರ್ಷ್ ಆಸ್ಪತ್ರೆಯಲ್ಲಿ ಟ್ರಾನ್ಸ್​ಪ್ಲ್ಯಾಂಟ್ ಕೋರ್ಡಿನೇಟರ್‌ ಆಗಿ ಕೆಲಸ ಮಾಡುತ್ತಾರೆ ಎಂದು ತಿಳಿದು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಅವರು, ಆಗಾಗ ವಿಡಿಯೋ ಹಾಗೂ ಫೋಟೋಗಳನ್ನು ಪೋಸ್ಟ್‌ ಮಾಡುತ್ತಿರುತ್ತಾರೆ. ಇದೀಗ ಸಂಧ್ಯಾ ಉಗ್ರಂ ಮಂಜು ಅವರ ಕೈಹಿಡಿಯಲಿದ್ದಾರೆ. ಸದ್ಯ ನಿಶ್ಚಿತಾರ್ಥ ನಡೆದಿದ್ದು, ವಿವಾಹದ ದಿನಾಂಕವಿನ್ನೂ ಬಹಿರಂಗಪಡಿಸಿಲ್ಲ. ಜನವರಿಯಲ್ಲಿ ಮದುವೆ ನಡೆಯಬಹುದು ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: Bigg Boss Kannada 12: ಈ ವಾರ ಬಿಗ್‌ಬಾಸ್‌ ಮನೆಯಿಂದ ಇವರಿಬ್ಬರಲ್ಲಿ ಒಬ್ಬರಿಗೆ ಗೇಟ್‌ಪಾಸ್?

ಉಗ್ರಂ ಸಿನಿಮಾದಿಂದ ಫೇಮಸ್‌ ಆಗಿದ್ದ ಮಂಜು, ಮ್ಯಾಕ್ಸ್‌ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಬಿಗ್‌ ಬಾಸ್‌ 11 ರಲ್ಲಿ ಪ್ರಮುಖ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಸಂಚಿತ್ ಸಂಜೀವ್ ಅವರು ನಾಯಕನಾಗಿ ನಟಿಸುತ್ತಿರುವ ಮ್ಯಾಂಗೋ ಪಚ್ಚದಲ್ಲಿ ಮಂಜು ನಟಿಸುತ್ತಿದ್ದಾರೆ.

ಮಂಜು ಮನೆಯವರು ಕೂಡ ಹಲವು ವರ್ಷಗಳಿಂದ ಮದುವೆ ಆಗುವಂತೆ ಒತ್ತಾಯ ಮಾಡುತ್ತಲೇ ಇದ್ದರು. ಬಿಗ್‌ ಬಾಸ್‌ ಸ್ಟೇಜ್‌ನಲ್ಲಿ ಮಂಜು ತಂದೆ ತಮ್ಮ ಮಗನ ಮದುವೆ ಕುರಿತು ಮಾತನಾಡಿದ್ದರು. ಅವನ ಮದುವೆ ಮಾಡಬೇಕೆಂದು ಆಸೆ ಇದೆ ಎಂದು ಅವರು ಹೇಳಿದ್ದರು. ಇದೀಗ ಅದು ನೆರವೇರಿದೆ.