ಬೆಂಗಳೂರು: ಈ ವರ್ಷದ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ʼವಾಮನʼ (Vaamana) ಸಿನಿಮಾದ ಟ್ರೈಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಬಿಡುಗಡೆಗೊಳಿಸಿದ್ದಾರೆ (Vamana Trailer Launch). ದರ್ಶನ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಧನ್ವೀರ್ ನಾಯಕನಾಗಿ ನಟಿಸಿರುವ ಚಿತ್ರ ಇದಾಗಿದ್ದು, ಏ. 10ರಂದು ಅದ್ಧೂರಿಯಾಗಿ ತೆರೆ ಕಾಣಲಿದೆ. ಚೇತನ್ ಗೌಡ ನಿರ್ಮಾಣದ ಈ ಚಿತ್ರಕ್ಕೆ ಶಂಕರ್ ರಾಮನ್ ಎಸ್. ಆ್ಯಕ್ಷನ್ ಕಟ್ ಹೇಳಿದ್ದಾರೆ. ಆ್ಯಕ್ಷನ್ ಪಾಕ್ಡ್ ಚಿತ್ರ ಇದು ಎನ್ನುವ ಸೂಚನೆ ಟ್ರೈಲರ್‌ನಲ್ಲಿ ಸಿಕ್ಕಿದೆ.
ಇದುವರೆಗೆ ಬಿನ್ನ ಪಾತ್ರಗಳನ್ನು ಮಾಡುತ್ತ ಬಂದಿರುವ ಧನ್ವೀರ್ ಈ ಸಿನಿಮಾದಲ್ಲಿ ಮಾಸ್ ಅವತಾರ ದಾಳಿದ್ದಾರೆ. ಆ್ಯಕ್ಷನ್ ದೃಶ್ಯಗಳಲ್ಲಿ ಮಿಂಚಿರುವ ಅವರು ತೆರೆ ಮೇಲೆ ರಕ್ತದ ಹೊಳೆಯನ್ನೇ ಹರಿಸಿದ್ದಾರೆ. ಜತೆಗೆ ತಾಯಿ ಸೆಂಟಿಮೆಂಟ್ ಕೂಡ ಚಿತ್ರದಲ್ಲಿ ಇರಲಿದ್ದು, ಭಾವನಾತ್ಮಕ ದೃಶದ ಝಲಕ್ ಕೂಡ ಟ್ರೈಲರ್‌ನಲ್ಲಿ ಕಂಡು ಬಂದಿದೆ.
ದರ್ಶನ್ ಅವರ ಪೋಸ್ಟ್ ಇಲ್ಲಿದೆ:
ದರ್ಶನ್ ಹೇಳಿದ್ದೇನು?
ಸೋಶಿಯಲ್ ಮೀಡಿಯಾದಲ್ಲಿ ಟ್ರೈಲರ್ ಹಂಚಿಕೊಂಡ ದರ್ಶನ್, ʼʼನಮ್ಮ ಪ್ರೀತಿಯ ಹೀರೋ ಧನ್ವೀರ್ ಗೌಡ 'ವಾಮನ'ನಾಗಿ ಏಪ್ರಿಲ್ 10ರಿಂದ ನಿಮ್ಮ ಮುಂದೆ ಬರಲು ಸಜ್ಜಾಗಿದ್ದಾರೆ. ಚಿತ್ರದ ಟ್ರೈಲರ್ ಸೊಗಸಾಗಿ ಮೂಡಿ ಬಂದಿದ್ದು ಜನಮೆಚ್ಚುಗೆ ಗಳಿಸುವಲ್ಲಿ ನಂಬಿಕೆ ಹೆಚ್ಚಾಗಿದೆ. ಕನ್ನಡ ಸಿನಿಪ್ರೇಮಿಗಳ ಪ್ರೋತ್ಸಾಹ ಮತ್ತು ಬೆಂಬಲದಿಂದ ಈ ಚಿತ್ರವು ಎಲ್ಲೆಡೆ ಯಶಸ್ವಿಯಾಗಿ ಅಬ್ಬರಿಸಲಿ ಎಂದು ಆಶಿಸುತ್ತೇನೆ. ಒಳ್ಳೆ ಕನ್ನಡ ಚಿತ್ರಗಳಿಗೆ ನಮ್ಮ ಸೆಲೆಬ್ರಿಟಿಗಳ ಪ್ರೋತ್ಸಾಹ ಎಂದಿನಂತೆ ಸದಾ ಬೆನ್ನೆಲುಬಾಗಿ ನಿಂತಿರಲಿ'' ಎಂದು ಬರೆದುಕೊಂಡಿದ್ದಾರೆ.
ವಾಮನ ಚಿತ್ರದ ಟ್ರೈಲರ್ ಇಲ್ಲಿದೆ:
ವಿಡಿಯೊ ಸಂದೇಶದ ಮೂಲಕ ಅವರು, ಧನ್ವೀರ್ ಸಿನಿಮಾ ಬಗ್ಗೆ ಮಾತನಾಡಿ ಶುಭ ಹಾರೈಸಿದ್ದಾರೆ. 2019ರಲ್ಲಿ ತೆರೆಕಂಡ 'ಬಜಾರ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಕಾಲಿಟ್ಟ ಧನ್ವೀರ್ 'ಬೈ ಟು ಲವ್' ಮತ್ತು 'ಕೈವ' ಸಿನಿಮಾಗಳ ಗಮನ ಸೆಳೆದಿದ್ದಾರೆ. ಅವರು ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಪ್ತ ಸೇಹಿತರೂ ಹೌದು. ಕಠಿಣ ಪರಿಸ್ಥಿತಿಯಲ್ಲಿಯೂ ತಮ್ಮೊಂದಿಗಿದ್ದ ಧನ್ವೀರ್ ಅವರ ಮಂದಿನ ಚಿತ್ರಕ್ಕೆ ಇದೀಗ ದರ್ಶನ್ ಬೆನ್ನೆಲುಬಾಗಿ ನಿಂತಿದ್ದಾರೆ.
ಈ ಸುದ್ದಿಯನ್ನೂ ಓದಿ: Marali Manasagide Movie: ನಾಗರಾಜ್ ಶಂಕರ್ ನಿರ್ದೇಶನದ ʼಮರಳಿ ಮನಸಾಗಿದೆʼ ಚಿತ್ರದ 2ನೇ ಹಾಡು ರಿಲೀಸ್
‘ವಾಮನ’ ಸಿನಿಮಾದಲ್ಲಿ ಧನ್ವೀರ್ಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಈ ಚಿತ್ರದ ಟ್ರೈಲರ್ ಬಿಡುಗಡೆ ಹಾಗೂ ಪ್ರೀ ರಿಲೀಸ್ ಇವೆಂಟ್ ಮಾ. 27ರಂದು ಬೆಂಗಳೂರಿನ ಪ್ರಸನ್ನ ಥಿಯೇಟರ್ನಲ್ಲಿ ಆಯೋಜಿಸಲಾಗಿತ್ತು. ಇದಕ್ಕೆ ದರ್ಶನ್ ಬರುತ್ತಾರೆ ಎನ್ನಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಪ್ಲ್ಯಾನ್ ಬದಲಾಗಿ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಅನಿವಾರ್ಯ ಕಾರಣಗಳಿಂದ ದರ್ಶನ್‌ಗೆ ಬರಲಾಗಲಿಲ್ಲ. ಹೀಗಾಗಿ ಅವರು ಟ್ರೈಲರ್ ಅನ್ನು ಡಿಜಿಟಲ್ ಲಾಂಚ್ ಮಾಡಿರುವ ವಿಡಿಯೊವನ್ನು ಸಿನಿಮಾ ತಂಡ ರಿಲೀಸ್ ಮಾಡಿದೆ.
ಮೊದಲೇ ಹೇಳಿದಂತೆ ʼವಾಮನʼ ಆ್ಯಕ್ಷನ್ ಚಿತ್ರವಾಗಿದ್ದರೂ ಇದರಲ್ಲಿ ತಾಯಿ ಸೆಂಟಿಮೆಂಟ್ ಕೂಡ ಪ್ರಧಾನ ಪಾತ್ರವಹಿಸಲಿದೆ. ತಾಯಿ ಪಾತ್ರದಲ್ಲಿ ತಾರಾ ಕಾಣಿಸಿಕೊಂಡಿದ್ದಾರೆ. ಅಜನೀಶ್ ಬಿ.ಲೋಕನಾಥ್ ಅವರ ಸಂಗೀತ, ಮಹೇನ್ ಸಿಂಹ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಇತ್ತೀಚೆಗೆ ರಿಲೀಸ್ ಆದ ʼಮುದ್ದು ರಾಕ್ಷಸಿಯೇʼ ಹಾಡು ಹಿಟ್ ಲಿಸ್ಟ್ ಸೇರಿದೆ.