Vijay and Rashmika; ನ್ಯೂಯಾರ್ಕ್‌ನಲ್ಲಿ ಕೈ ಕೈ ಹಿಡಿದು ಸುತ್ತಾಟ; ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ್ರು ರಶ್ಮಿಕಾ, ವಿಜಯ್
Vijay and Rashmika: ನಟಿ ರಶ್ಮಿಕಾ ಹಾಗೂ ನಟ ವಿಜಯ್ ದೇವರಕೊಂಡ ಅವರು ಇತ್ತೀಚೆಗಷ್ಟೇ ನ್ಯೂಯಾರ್ಕ್‌ನಲ್ಲಿ ನಡೆದ ಇಂಡಿಯಾ ಡೇ ಪರೇಡ್ ನಲ್ಲಿ ಭಾಗವಹಿಸಿ ಗ್ರ್ಯಾಂಡ್ ಮಾರ್ಷಲ್‌ಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಮೂಲಕ ಪೆರೇಡ್‌ನಲ್ಲಿ ಭಾಗಿಯಾಗಿದ್ದ ಈ ಜೋಡಿಯ ಹಲವಾರು ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

Vijay and Rashmika

ನವದೆಹಲಿ: ಸಾಮಾನ್ಯವಾಗಿ ಸೆಲೆಬ್ರಿಟಿಗಳು ಸಾರ್ವಜನಿಕ ಸ್ಥಳದಲ್ಲಿ ಜೊತೆಯಾಗಿ ಕಾಣಿಸಿ ಕೊಂಡಾಗ ಅವರ ಬಗ್ಗೆ ಗಾಸಿಪ್ ಗಳು ಹರಿದಾಡುತ್ತಲೇ ಇರುತ್ತದೆ. ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ (Vijay Deverakonda) ಅವರು ಈ ಹಿಂದೆ ವಿದೇಶದ ಟ್ರಿಪ್ , ಸಿನಿಮಾ ಸಂಬಂಧಿತ ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಂಡು ಅದು ದೊಡ್ಡ ಮಟ್ಟಿಗೆ ಸುದ್ದಿ ಯಾಗಿತ್ತು. ಹಾಗಿದ್ದರೂ ಸಿನಿಮಾ ಕೆರಿಯರ್ ಗೆ ಇಬ್ಬರು ಅಧಿಕ ಪ್ರಾಶಸ್ತ್ಯ ನೀಡುತ್ತಿದ್ದು ವದಂತಿ ಗಳ ಬಗ್ಗೆ ಅವರು ತಲೆಕೆಡಿಸಿಕೊಂಡಿರಲಿಲ್ಲ. ಇದೀಗ ರಶ್ಮಿಕಾ ಹಾಗೂ ನಟ ವಿಜಯ್ ದೇವರಕೊಂಡ ಅವರು ಇತ್ತೀಚೆಗಷ್ಟೇ ನ್ಯೂಯಾರ್ಕ್‌ನಲ್ಲಿ ನಡೆದ ಇಂಡಿಯಾ ಡೇ ಪರೇಡ್ ನಲ್ಲಿ ಗ್ರ್ಯಾಂಡ್ ಮಾರ್ಷಲ್‌ಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಮೂಲಕ ಪೆರೇಡ್‌ನಲ್ಲಿ ಭಾಗಿಯಾಗಿದ್ದ ಈ ಜೋಡಿಯ ಹಲವಾರು ಚಿತ್ರಗಳು ಮತ್ತು ವಿಡಿಯೋ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಆಗಸ್ಟ್ 17 ರಂದು ಈ ಕಾರ್ಯಕ್ರಮ ನಡೆದಿದ್ದು, ವಿಶ್ವದಲ್ಲೇ ಅತಿ ದೊಡ್ಡದಾದ ಇಂಡಿಯಾ ಡೇ ಪೆರೇಡ್‌ನಲ್ಲಿ ವಿಜಯ್ ಮತ್ತು ರಶ್ಮಿಕಾ ಅವರು ಟ್ರೆಡಿಶನಲ್ ಡ್ರೆಸ್ ನಲ್ಲಿ ಭಾಗಿಯಾಗಿದ್ದಾರೆ. ನಟಿ ರಶ್ಮಿಕಾ ರೆಡ್ ಕಲರ್ ಕಸೂತಿ ವಿನ್ಯಾಸ ಉಟ್ಟು ಅದಕ್ಕೆ ಹೊಂದಿ ಕೊಳ್ಳುವ ಆಭರಣ ತೊಟ್ಟು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಟ ವಿಜಯ್ ದೇವರ ಕೊಂಡ ಅವರು ಕ್ರೀಂ ಕಲರ್ ಶೆರ್ವಾನಿ ಡ್ರೆಸ್ ತೊಟ್ಟು ಮದುಮಗನಂತೆ ಕಂಗೊಳಿಸಿದ್ದಾರೆ. ಈ ಜೋಡಿ ಇತರ ಗಣ್ಯರೊಂದಿಗೆ ವಾಹನವನ್ನು ಹತ್ತಿ ಮ್ಯಾಡಿಸನ್ ಅವೆನ್ಯೂ ಮಾರ್ಗದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಅವರ ವಿಡಿಯೋ ವೈರಲ್ ಆಗುತ್ತಿದೆ.
Celebrating the 79th Independence Day at the India Day Parade in New York, the largest parade celebration outside India.
— India in New York (@IndiainNewYork) August 17, 2025
We extend our sincere thanks to Congressman @RepShriThanedar, Mayor @NYCMayor Eric Adams, and Member of Parliament Shri Satnam Singh Sandhu @satnamsandhuchd ,… pic.twitter.com/WIVQjFPiNk
ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಿದ್ದು ಆಗಸ್ಟ್ 17ರ ಭಾನುವಾರ ನ್ಯೂಯಾರ್ಕ್‌ನಲ್ಲಿ ಅನಿವಾಸಿ ಭಾರತೀಯರು ಈ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ವೈಭವಯುತವಾಗಿ ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಸಾವಿರಾರು ಭಾರತೀಯ-ಅಮೆರಿಕನ್ನರು ಒಟ್ಟುಗೂಡಿದರು. ಇದರೊಂದಿದೆ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಕೂಡ ಒಟ್ಟಿಗೆ ಸಂಭ್ರಮಿಸಲಾಗಿದೆ. ಹೀಗಾಗಿ ನ್ಯೂಯಾರ್ಕ್ ನ ಇಸ್ಕಾನ್ ದೇಗುಲಕ್ಕೂ ಕೂಡ ನೂರಾರು ಭಕ್ತರು ಸೇರಿಕೊಂಡಿದ್ದರು.
ಭಾರತೀಯ ಸಂಘಗಳ ಒಕ್ಕೂಟ (ಎಫ್‌ಐಎ) ಆಯೋಜಿಸಿದ್ದ ಈ ಮೆರವಣಿಗೆಗೆ ನಟ ವಿಜಯ್ ದೇವರ ಕೊಂಡ ಹಾಗೂ ರಶ್ಮಿಕಾ ಜೊತೆಗೆ ಅನೇಕ ಗಣ್ಯರು ಕೂಡ ಪಾಲ್ಗೊಂಡಿದ್ದಾರೆ. ರಾಜ್ಯ ಸಭಾ ಸಂಸದ ಸತ್ನಾಮ್ ಸಿಂಗ್ ಸಂಧು, ಕಾಂಗ್ರೆಸ್ ನಾಯಕ ಥಾನೇದಾರ್ ಮತ್ತು ನ್ಯೂಯಾರ್ಕ್ ನಗರದ ಮೇಯರ್ ಎರಿಕ್ ಆಡಮ್ಸ್ ಸೇರಿದಂತೆ ಹಲವಾರು ಗಣ್ಯರು ಮೆರ ವಣಿಗೆಯಲ್ಲಿ ಭಾಗವಹಿಸಿದ್ದರು. 'ವಿಕ್ಷಿತ್ ಭಾರತ್ 2047' ಎಂಬ ಥೀಂ ಕೂಡ ಕಾರ್ಯಕ್ರಮ ದಲ್ಲಿ ಹೈಲೈಟ್ ಆಗಿದೆ. ಈ ಮೂಲಕ ನಟ ವಿಜಯ್ ದೇವರ ಕೊಂಡ ಜೊತೆಗೆ ನಟಿ ರಶ್ಮಿಕಾ ಕಾಣಿಸಿಕೊಂಡು ಹೊಸ ಸುದ್ದಿ ವೈರಲ್ ಆಗುವಂತಾಗಿದೆ.
ರಶ್ಮಿಕಾ ಮತ್ತು ವಿಜಯ್ ಬಹಳ ಸಮಯದಿಂದ ಒಟ್ಟಿಗೆ ಕಾಣಿಸಿಕೊಂಡು ಸುದ್ದಿಯಲ್ಲಿದ್ದರು. 2023 ರಲ್ಲಿ ಮಾಲ್ಡೀವ್ಸ್‌ನಲ್ಲಿ ಒಟ್ಟಿಗೆ ಪ್ರವಾಸಕ್ಕೆ ತೆರಳಿದ್ದು ಇದರ ಕೆಲವು ಫೋಟೋ ಹರಿದಾಡಿದ್ದ ಬೆನ್ನಲ್ಲೆ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಆನ್‌ಲೈನ್‌ನಲ್ಲಿ ಹರಿದಾಡಿತ್ತು. ಚೆನ್ನೈನಲ್ಲಿ ನಡೆದ ಪುಷ್ಪ 2 ರ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ, ರಶ್ಮಿಕಾ ಅವರನ್ನು ನೀವು ಮದುವೆಯಾಗಲು ಬಯಸುವ ವ್ಯಕ್ತಿ ಚಿತ್ರರಂಗದವರೇ ಎಂದು ಕೇಳಲಾಯಿತು, ಅದಕ್ಕೆ ಅವರು ವಿಜಯ್ ಅವರ ಹೆಸರನ್ನು ಉಲ್ಲೇಖಿಸಿಲ್ಲ ಬದಲಾಗಿ ಎಲ್ಲರಿಗೂ ತಿಳಿದಿದೆ ಎಂದು ಉತ್ತರಿಸಿದ್ದರು. ಇವರಿಬ್ಬರೂ ತಮ್ಮ ಸಂಬಂಧವನ್ನು ಅಧಿಕೃತವಾಗಿ ದೃಢೀಕರಿಸಿಲ್ಲ ಹಾಗಿದ್ದರು ಇವರನ್ನು ಸಿನಿಮಾ ಇಂಡಸ್ಟ್ರಿಯ ಲವ್ ಬರ್ಡ್ಸ್ ಎಂದೇ ಹೇಳಲಾಗುತ್ತದೆ.