ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kothalavadi Movie: ಕೊತ್ತಲವಾಡಿ ಚಿತ್ರತಂಡದ ವಿರುದ್ಧ ಯುವ ನಟಿ ಆಕ್ರೋಶ; ಹಣ ಕೇಳಿದ್ದಕ್ಕೆ ನಂಬರೇ ಬ್ಲಾಕ್ ಮಾಡಿದ್ರು!

Kothalavadi Movie: ಸಹ ಕಲಾವಿದರಿಗೆ ನೀಡಬೇಕಿದ್ದ ಹಣವನ್ನು ಸೆಟಲ್ ಮಾಡಿಲ್ಲ ಎಂಬ ಕಾರಣಕ್ಕೆ ನಿರ್ಮಾಪಕಿ ಪುಷ್ಪಾ ವಿರುದ್ಧ ಸಹ ನಟಿಯು ಅಸಮಧಾನ ಹೊರಹಾಕಿದ್ದು ಈ ವಿಚಾರ ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು. ಇದೀಗ ಸಹ ಕಲಾವಿದೆ ಹಣ ಕೇಳುತ್ತಾರೆ ಎಂಬ ಕಾರಣಕ್ಕೆ ಸಿನಿಮಾ ತಂಡ ದವರು ಆಕೆಯ ನಂಬರ್ ಅನ್ನೇ ಬ್ಲಾಕ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ...

ಕೊತ್ತಲವಾಡಿ ಚಿತ್ರತಂಡದ ವಿರುದ್ಧ ಯುವ ನಟಿ ಆಕ್ರೋಶ

-

Profile Pushpa Kumari Sep 24, 2025 4:45 PM

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಲು ಸಾಲು ಹಿಟ್ ಸಿನಿಮಾ ನೀಡಿ ಅಪಾರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಕೆಜಿಎಫ್ ಸಿನಿಮಾದ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಅವರು ಗುರುತಿಸಿಕೊಂಡಿದ್ದಾರೆ. ಅವರ ಪತ್ನಿ ರಾಧಿಕಾ ಪಂಡಿತ್ ಕೂಡ ಕನ್ನಡದ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಪ್ ಹೀರೋಯಿನ್ ಆಗಿದ್ದವರು. ಅಷ್ಟು ಮಾತ್ರವಲ್ಲದೆ ಅವರ ತಾಯಿ ಪುಷ್ಪಾ ಅವರು ಕೂಡ ಇತ್ತೀಚೆಗಷ್ಟೇ ಸಿನಿಮಾ ಒಂದಕ್ಕೆ ನಿರ್ಮಾಪಕಿಯಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ತೊಡಗಿಕೊಂಡಿದ್ದಾರೆ. ಪುಷ್ಪಾ ಅರುಣ್ ಕುಮಾರ್ ನಿರ್ಮಾಣದಲ್ಲಿ ಮೂಡಿಬಂದ ಕೊತ್ತಲವಾಡಿ (Kothalavadi Movie) ಸಿನಿಮಾ ಸಾಧಾರಣ ಯಶಸ್ಸು ಕಂಡಿದ್ದರು ಕೂಡ ಇದೇ ಸಿನಿಮಾದಿಂದ ಯಶ್ ತಾಯಿ ಪುಷ್ಪಾ ಅವರು ಈ ಹಿಂದಿ ನಿಂದಲೂ ಸಾಕಷ್ಟು ವಿವಾಧಗಳಿಗೆ ಗುರಿಯಾಗಿದ್ದಾರೆ. ಸಹ ಕಲಾವಿದರಿಗೆ ನೀಡಬೇಕಿದ್ದ ಹಣವನ್ನು ಸೆಟಲ್ ಮಾಡಿಲ್ಲ ಎಂಬ ಕಾರಣಕ್ಕೆ ನಿರ್ಮಾಪಕಿ ಪುಷ್ಪಾ ವಿರುದ್ಧ ಸಹ ನಟಿಯು ಅಸಮಧಾನ ಹೊರಹಾಕಿದ್ದು ಈ ವಿಚಾರ ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು. ಇದೀಗ ಸಹ ಕಲಾವಿದೆ ಹಣ ಕೇಳುತ್ತಾರೆ ಎಂಬ ಕಾರಣಕ್ಕೆ ಸಿನಿಮಾ ತಂಡದವರು ಆಕೆಯ ನಂಬರ್ ಅನ್ನೇ ಬ್ಲಾಕ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕೊತ್ತಲವಾಡಿ ಚಿತ್ರದಲ್ಲಿ ಅಭಿನಯಿಸಿದ್ದ ಯುವ ನಟಿ ಸ್ವರ್ಣ ಅವರು ಚಿತ್ರ ತಂಡದ ವಿರುದ್ಧ ಕಿಡಿಕಾರಿದ್ದಾರೆ. ಈ ಸಿನಿಮಾದ ನಿರ್ದೇಶಕ ಶ್ರೀರಾಜ್ ಅವರ ವಿರುದ್ಧ ಸಹ ಕಲಾವಿದೆ ಸ್ವರ್ಣ ಅವರು ನಂಬಿಕೆ ದ್ರೋಹದ ಆರೋಪ ಮಾಡಿದ್ದಾರೆ. ಸಿನಿಮಾ ದಲ್ಲಿ ನಟಿಸಿದರೂ ಹಣ ನೀಡಿಲ್ಲ ಎಂಬ ಬಗ್ಗೆ ವಿಡಿಯೋಗಳನ್ನು ಹಂಚಿಕೊಂಡು ಕಣ್ಣೀರಿಟ್ಟು ಆಕ್ರೋಶ ಹೊರಹಾಕಿದ್ದರು. ಇದೀಗ ಮತ್ತೆ ತನ್ನ ಮೊಬೈಲ್ ಸಂಖ್ಯೆ ಬ್ಲಾಕ್ ಮಾಡಿದ್ದ ಬಗ್ಗೆ ಖಾಸಗಿ ಸುದ್ದಿವಾಹಿನಿಗೆ ನೀಡಿದ್ದ ಸಂದ ರ್ಶನದಲ್ಲಿ ಅವರು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ್ದ ಸಹ ಕಲಾವಿದೆ ಸ್ವರ್ಣ ಅವರು, ನನಗೆ ಪೂರ್ತಿ ಹಣ ಬರಬೇಕು ಎಂದು ನಾನು ಹೇಳಿಲ್ಲ. ನನ್ನ ಅಮ್ಮ ಅತ್ತು ಕರೆದು ಗೋಳಾಡಿದ ಅವರ ಆಡಿಯೋ ವೈರಲ್ ಆದ ನಂತರ 35ಸಾವಿರ ಹಣವನ್ನು ನನ್ನ ಖಾತೆಗೆ ಹಾಕಲಾಗಿದೆ. ಇಷ್ಟೆಲ್ಲ ಸುದ್ದಿ ವೈರಲ್ ಆಗುತ್ತಿದ್ದರೂ ಆ ಸಿನಿಮಾದ ನಿರ್ದೇಶಕರು ಒಂದು ಫೋನ್ ಮಾಡಿ ಏನಾಯ್ತು ಎಂದು ಕೇಳಲಿಲ್ಲ. ನಿರ್ಮಾಣ ಸಂಸ್ಥೆಯಿಂದಾಗಲಿ ಆ ಚಿತ್ರದ ನಿರ್ದೇಶಕರಿಂದಾಗಲಿ ನನಗೆ ಕರೆ ಕೂಡ ಬಂದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:Idli Kadai Dhanush Movie: ಧನುಷ್ ನಟನೆಯ ಇಡ್ಲಿ ಕಡೈ ಸಿನಿಮಾಗೆ ಶುಭ ಕೋರಿದ ನಟ ರಿಷಭ್ ಶೆಟ್ಟಿ!

ಸಂಭಾವನೆಯ ವಿಚಾರದಲ್ಲಿ ಮೋಸ ಆಗಿದ್ದು ನಿಜ. ಈ ಸಿನಿಮಾ ಆರಂಭ ಆಗುವಾಗ ಅವರು ಮಾತನಾಡಿದ್ದೇ ಒಂದು ಬಳಿಕ ನೀಡಿದ್ದ ಸಂಭಾವನೆಯೇ ಬೇರೆ. ಮೊದಲು ನನಗೆ ಲೀಡ್ ರೋಲ್ ಎಂದು ಹೇಳಿ 80,000 ನೀಡುವುದಾಗಿ ಹೇಳಿದ್ದರು ಬಳಿಕ ಹಣ ನೀಡಲೇ ಇಲ್ಲ. ಮಾಧ್ಯಮದಲ್ಲಿ ಸುದ್ದಿ ಹರಿದಾಡಿದ್ದ ಬಳಿಕ 35,000 ಹಣ ಕೊಟ್ಟರು. ಹಣ ನೀಡುವಾಗಲೂ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಈ ಮೂಲಕ ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಆದರೆ ಅವೆಲ್ಲವೂ ಸುಳ್ಳು. ಕೊನೆಯಲ್ಲಿ ನನ್ನ ನಂಬರ್ ಕೂಡ ಬ್ಲಾಕ್ ಮಾಡಿದರು ಎಂದು ಹೇಳಿದ್ದಾರೆ. ಇದು ಗೊತ್ತಾದ ನಂತರ ನಾನು ತುಂಬಾ ನೊಂದುಕೊಂಡು ನಿರ್ದೇಶಕರ ಪತ್ನಿಗೆ ನಾನು ಸೂಸೈಡ್ ಮಾಡಿಕೊಳ್ತೀನಿ ಎಂದು ಮೆಸೇಜ್ ಕೂಡ ಮಾಡಿದ್ದೇನೆ. ಅದರೆ ಯಾರು ತಲೆ ಕೆಡಿಸಿಕೊಳ್ಳಲಿಲ್ಲ. ಸುಮಾರು ಜನಕ್ಕೆ ಇಲ್ಲಿ ಮೋಸ ಆಗಿದೆ, ಮರ್ಯಾದೆಗೆ ಹೆದರಿ ಇಲ್ಲಿ ಯಾರೂ ಮಾತನಾಡುತ್ತಿಲ್ಲ ಎಂದು ಸ್ವರ್ಣ ಅವರು ಹೇಳಿದ್ದಾರೆ.

ದಿಯಾ ಸಿನಿಮಾ ಖ್ಯಾತಿಯ ಪೃಥ್ವಿ ಅಂಬಾರ್ ಹಾಗೂ ಕಿರುತೆರೆಯ ನಟಿ ಕಾವ್ಯಾ ಶೈವ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕೊತ್ತಲವಾಡಿ ಸಿನಿಮಾವು ರಿಲೀಸ್ ಗೂ ಮೊದಲೆ ಕೆಲವು ಪ್ರಚಾರದಿಂದ ಪ್ರೇಕ್ಷಕರ ಗಮನ ಸೆಳೆದಿತ್ತು. ಈ ಸಿನಿಮಾವನ್ನು ಶ್ರೀರಾಜ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ಟ್ರೈಲರ್ ಹಾಗೂ ಟೀಸರ್ ಗಳು ಜನರ ಗಮನ ಸೆಳೆದಿದ್ದವು. ಆದರೆ ಸಿನಿಮಾ ಮಾತ್ರ ಅಂದು ಕೊಂಡ ಮಟ್ಟಕ್ಕೆ ಯಶಸ್ಸು ಪಡೆಯಲಿಲ್ಲ.