Sholay Movie: ಭಾರತ ಸಿನಿರಂಗದಲ್ಲಿ ಅಚ್ಚಳಿಯದೇ ಉಳಿದಿರುವ ಶೋಲೆ ಸಿನಿಮಾ ರೀ ರಿಲೀಸ್!
Sholay Movie ಬಾಲಿವುಡ್ ಆ್ಯಕ್ಷನ್ ಸಿನಿಮಾದಲ್ಲಿ ಶೋಲೆ ಸಿನಿಮಾವು ಈಗಲೂ ಶ್ರೇಷ್ಠ ಸಿನಿಮಾಗಳ ಸಾಲಿನಲ್ಲಿ ಒಂದು ಎಂದು ಖ್ಯಾತಿ ಪಡೆದಿದೆ. ಇದೀಗ ಇದೇ ಸಿನಿಮಾವನ್ನು ಹೆಚ್ಚಿನ ತಂತ್ರಜ್ಞಾನಗಳನ್ನು ಬಳಸಿ, ಅಡ್ವಾನ್ಸ್ ಟೆಕ್ನಾಲಜಿ ಬಳಸಿ ಹೆಚ್ ಡಿ ಕ್ವಾಲಿಟಿ ಯಲ್ಲಿ ಮರು ಬಿಡುಗಡೆ ಮಾಡಲು ತಯಾರಿ ನಡೆಸಲಾಗುತ್ತದೆ. ಸಿಡ್ನಿಯ ಭಾರತೀಯ ಚಲನಚಿತ್ರೋತ್ಸವವು ಇದೇ ಅಕ್ಟೋಬರ್‌ನಲ್ಲಿ ನಡೆಯಲಿದ್ದು ಈ ಸಂದರ್ಭದಲ್ಲಿ ಶೋಲೆ ಸಿನಿಮಾಕ್ಕೆ 50 ವರ್ಷ ಪೂರೈಸಿದ್ದ ಹಿನ್ನೆಲೆಯಲ್ಲಿ ಈ ಐಕಾನಿಕ್ ಸಿನಿಮಾವನ್ನು ಮರು ಬಿಡುಗಡೆ ಮಾಡಲು ಈಗಾಗಲೇ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ

-

ನವದೆಹಲಿ: ಭಾರತೀಯ ಸಿನೆಮಾ ರಂಗದಲ್ಲಿ ಬಾಲಿವುಡ್ ಆ್ಯಕ್ಷನ್ ಸಿನಿಮಾದಲ್ಲಿ ಶೋಲೆ ಸಿನಿಮಾವು (Sholay Movie) ಈಗಲೂ ಶ್ರೇಷ್ಠ ಸಿನಿಮಾಗಳ ಸಾಲಿನಲ್ಲಿ ಒಂದು ಎಂದು ಖ್ಯಾತಿ ಪಡೆದಿದೆ. 1975ರಲ್ಲಿ ತೆರೆ ಕಂಡ ಈ ಸಿನಿಮಾವು ಬರೋಬ್ಬರಿ 5ವರ್ಷಕ್ಕೂ ಅಧಿಕ ಕಾಲ ಸಿನಿಮಾ ಮಂದಿರದಲ್ಲಿ ಪ್ರದರ್ಶನ ಕಂಡು ದೊಡ್ಡ ದಾಖಲೆಯನ್ನೇ ಮಾಡಿತು. ಈ ಸಿನಿಮಾ ಬಿಡುಗಡೆ ಯಾಗಿ 50ವರ್ಷಗಳು ಕಳೆದಿದ್ದರೂ ಕೂಡ ಆ ಸಿನಿಮಾ ಮಾಡಿದ್ದ ದಾಖಲೆಗಳನ್ನು ಇಂದಿಗೂ ಮರೆಯುವಂತಿಲ್ಲ. ಇದೀಗ ಇದೇ ಸಿನಿಮಾವನ್ನು ಹೆಚ್ಚಿನ ತಂತ್ರಜ್ಞಾನಗಳನ್ನು ಬಳಸಿ, ಅಡ್ವಾನ್ಸ್ ಟೆಕ್ನಾಲಜಿ ಬಳಸಿ HD ಕ್ವಾಲಿಟಿಯಲ್ಲಿ ಮರು ಬಿಡುಗಡೆ ಮಾಡಲು ತಯಾರಿ ನಡೆಸಲಾಗುತ್ತಿದೆ. ಸಿಡ್ನಿಯ ಭಾರತೀಯ ಚಲನಚಿತ್ರೋತ್ಸವವು ಇದೇ ಅಕ್ಟೋಬರ್‌ನಲ್ಲಿ ನಡೆಯಲಿದ್ದು ಈ ಸಂದರ್ಭದಲ್ಲಿ ಶೋಲೆ ಸಿನಿಮಾಕ್ಕೆ 50 ವರ್ಷ ಪೂರೈಸಿದ್ದ ಹಿನ್ನೆಲೆಯಲ್ಲಿ ಈ ಐಕಾನಿಕ್ ಸಿನಿಮಾವನ್ನು ಮರು ಬಿಡುಗಡೆ ಮಾಡಲು ಈಗಾಗಲೇ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ.
ಚಲನಚಿತ್ರ ಇತಿಹಾಸದಲ್ಲೇ ಅತ್ಯಂತ ಪ್ರಸಿದ್ಧ ಚಲನಚಿತ್ರದಲ್ಲಿ ಒಂದಾದ ಶೋಲೆ ಸಿನಿಮಾಕ್ಕೆ ಈಗಲೂ ಅಭಿಮಾನಿ ಬಳಗವಿದ್ದು ಆ ಸಿನಿಮಾದ ಕೆಲವು ಹೆಗ್ಗುರುತನ್ನು ಜನರ ಮುಂದೆ ಪ್ರಸ್ತುತ ಪಡಿಸಲು ಮರುಬಿಡುಗಡೆಯ ಆಲೋಚನೆಯನ್ನು ಮಾಡಲಾಗಿದೆ. ಭಾರತೀಯ ಚಲನಚಿ ತ್ರೋತ್ಸವ ಮೆಲ್ಬೋರ್ನ್ (IFFM) ನ ತಂಡವು ಪ್ರಸ್ತುತಪಡಿಸುವ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಸಿಡ್ನಿ (IFFS) ಯನ್ನು ಆಯೋಜಿಸಿದ್ದು ಈ ಬಾರಿ ಈ ಕಾರ್ಯಕ್ರಮದಲ್ಲಿ ಶೋಲೆಯ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ.
ಅಕ್ಟೋಬರ್ 9 ರಿಂದ 11 ರವರೆಗೆ ನಡೆಯುವ ಈ ಸಿನಿಮಾ ಉತ್ಸವವು ಮೂರು ದಿನಗಳ ಕಾಲ ನಡೆಯಲಿದ್ದು ಭಾರತೀಯ ಚಲನಚಿತ್ರೋದ್ಯಮದ ಅನೇಕ ಸಿನಿಮಾಗಳನ್ನು ಇಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಶೋಲೆಯನ್ನು ಫಿಲ್ಮ್ ಹೆರಿಟೇಜ್ ಫೌಂಡೇಶನ್, ಸಿಪ್ಪಿ ಫಿಲ್ಮ್ಸ್ ಸಹಯೋಗ ದೊಂದಿಗೆ ಉತ್ತಮ ಗುಣಮಟ್ಟದಲ್ಲಿ ಈ ಸಿನಿಮಾವನ್ನು ಅದೇ ಕಾರ್ಯಕ್ರಮದಂದು ರೀ ರಿಲೀಸ್ ಮಾಡಲಾಗುತ್ತದೆ. ಈ ಸಿನಿಮಾ ಬಹಳ ಹಿಂದಿನದ್ದಾಗಿದ್ದು ಮೂಲ ಕ್ಯಾಮೆರಾ ವರ್ಕ್ ಮತ್ತು ಅಳಿಸಲಾದ ದೃಶ್ಯಗಳನ್ನು ಮರುಪಡೆಯಲು ಕೂಡ ಹೊಸ ತಂತ್ರಜ್ಞಾನ ಬಳಸಲಾಗುತ್ತಿದೆ.
ಇದನ್ನೂ ಓದಿ:Dad Movie: ಶಿವರಾಜ್‍ಕುಮಾರ್ ಅಭಿನಯದ ‘ಡ್ಯಾಡ್ʼ ಚಿತ್ರಕ್ಕೆ ನಂದಿ ಬೆಟ್ಟದಲ್ಲಿ 2ನೇ ಹಂತದ ಚಿತ್ರೀಕರಣ
ರಮೇಶ್ ಸಿಪ್ಪಿ ಅವರ ನಿರ್ದೇಶನದ ಈ ಸಿನಿಮಾವನ್ನು ಮೂಲ ಪ್ರತಿಯಂತೆ ಮಾಡಲಾಗುತ್ತದೆ. ಅದರಲ್ಲಿ ಯಾವುದೇ ಮಾರ್ಪಾಡು ಮಾಡಲಾಗುದಿಲ್ಲ ಎಂದು ಸಿಪ್ಪಿ ಫಿಲ್ಮ್ಸ್ ಈ ಬಗ್ಗೆ ತಿಳಿಸಿದೆ. ಇತ್ತೀಚೆಗಷ್ಟೇ ಶೋಲೆ ಸಿನಿಮಾವನ್ನು ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (TIFF) ಪ್ರದರ್ಶಿಸಲಾಗಿತ್ತು. ಈಗ ಸಿಡ್ನಿಯಲ್ಲಿ ಮತ್ತೆ ಈ ಸಿನಿಮಾ ಪ್ರದರ್ಶನಗೊಳ್ಳಲಿದೆ.ಶೋಲೆ ಸಿನಿಮಾಕ್ಕೆ 50 ವರ್ಷಗಳು ಪೂರೈಸಿದ್ದು ಅದರ ಸವಿನೆನಪಿಗೆ ಈ ಸಿನಿಮಾ ರೀ ರಿಲೀಸ್ ಮಾಡಲು ಇಚ್ಛಿಸಿದ್ದೇವೆ. ಸಿಡ್ನಿ ಪ್ರೇಕ್ಷಕರು ಈಗ ಚಿತ್ರವನ್ನು ವೀಕ್ಷಿಸಿ ಹಳೆ ಕಾಲದ ವಿಚಾರ, ಕಥಾ ವಸ್ತು, ಪಾತ್ರ ಹಾಗೂ ಅಭಿನಯ ಕಂಡು ಖುಷಿ ಪಡುತ್ತಾರೆ ಎಂಬ ನಂಬಿಕೆ ಇದೆ ಎಂದು ಉತ್ಸವದ ನಿರ್ದೇಶಕಿ ಮಿತು ಭೌಮಿಕ್ ಲ್ಯಾಂಗೆ ಹೇಳಿದ್ದಾರೆ. ಧರ್ಮೇಂದ್ರ, ಸಂಜೀವ್ ಕುಮಾರ್, ಹೇಮಾ ಮಾಲಿನಿ, ಅಮಿತಾಬ್ ಬಚ್ಚನ್ ಮತ್ತು ಅಜರ್ ಅಲಿ ಖಾನ್ ಸೇರಿದಂತೆ ಅನೇಕ ಶ್ರೇಷ್ಠ ನಟ ನಟಿಯರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.