ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Disha Patani: ದಿಶಾ ಪಟಾನಿ ಮನೆ ಮೇಲೆ ದಾಳಿ ಮಾಡಿದ್ದ ಇಬ್ಬರು ಎನ್‌ಕೌಂಟರ್‌ಗೆ ಬಲಿ

ಉತ್ತರ ಪ್ರದೇಶದ ಬರೇಲಿಯಲ್ಲಿರುವ ಬಾಲಿವುಡ್‌ ನಟಿ ದಿಶಾ ಪಟಾಣಿ ಅವರ ಮನೆ ಮೇಲೆ ಇತ್ತೀಚೆಗೆ ಗುಂಡಿನ ದಾಳಿ ನಡೆಸಿದ್ದ ಇಬ್ಬರು ಪ್ರಮುಖ ಆರೋಪಿಗಳು ಎನ್‌ಕೌಂಟ್‌ಗೆ ಬಲಿಯಾಗಿದ್ದಾರೆ. ಬುಧವಾರ (ಸೆಪ್ಟೆಂಬರ್‌ 17) ಬೆಳಗ್ಗೆ ಗಾಝಿಯಾಬಾದ್‌ನಲ್ಲಿ ಈ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಿಶಾ ಪಟಾನಿ ಮನೆ ಮೇಲೆ ದಾಳಿ ಮಾಡಿದ್ದ ಇಬ್ಬರು ಎನ್‌ಕೌಂಟರ್‌ಗೆ ಬಲಿ

-

Ramesh B Ramesh B Sep 17, 2025 10:36 PM

ಲಖನೌ: ಉತ್ತರ ಪ್ರದೇಶದ ಬರೇಲಿಯಲ್ಲಿರುವ ಬಾಲಿವುಡ್‌ ನಟಿ ದಿಶಾ ಪಟಾಣಿ (Disha Patani) ಅವರ ಮನೆ ಮೇಲೆ ಇತ್ತೀಚೆಗೆ ಗುಂಡಿನ ದಾಳಿ ನಡೆಸಿದ್ದ ಇಬ್ಬರು ಪ್ರಮುಖ ಆರೋಪಿಗಳು ಎನ್‌ಕೌಂಟ್‌ಗೆ ಬಲಿಯಾಗಿದ್ದಾರೆ. ಬುಧವಾರ (ಸೆಪ್ಟೆಂಬರ್‌ 17) ಬೆಳಗ್ಗೆ ಗಾಝಿಯಾಬಾದ್‌ನಲ್ಲಿ ಈ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ರೋಹ್ಟಕ್‌ ಮೂಲದ ರವೀಂದ್ರ ಆಲಿಯಾಸ್‌ ಕಲ್ಲು ಮತ್ತು ಹರಿಯಾಣದ ಸೋನಿಪತ್‌ನ ಅರುಣ್‌ ಎಂದು ಗುರುತಿಸಲಾಗಿದೆ. ಎನ್‌ಕೌಂಟರ್‌ ವೇಳೆ ದಿಲ್ಲಿ ಪೊಲೀಸ್‌ ಸಿಬ್ಬಂದಿಗೂ ಗಾಯವಾಗಿದ ಎಂದು ಮೂಲಗಳು ತಿಳಿಸಿವೆ.

ಮೃತರು ಪ್ರಮುಖ ಅಂತಾರಾಷ್ಟ್ರೀಯ ಕ್ರಿಮಿನಲ್ ಗ್ಯಾಂಗ್‌ಗೆ ಸೇರಿದವರು. ಆರೋಪಿಗಳನ್ನು ಬಂಧಿಸಲು ತೆರಳಿದಾಗ ಅವರು ಮೊದಲು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಶೂಟ್‌ ಮಾಡಿದ್ದು ಈ ವೇಳೆ ಇಬ್ಬರು ಗಾಯಗೊಂಡಿದ್ದರು. ಅವರನನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬುಧವಾರ ಅಸುನೀಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ.



ಈ ಸುದ್ದಿಯನ್ನೂ ಓದಿ: Disha Patani: ನಾವೂ ಸನಾತನಿಗಳು.... ಗುಂಡಿನ ದಾಳಿ ಬೆನ್ನಲ್ಲೇ ದಿಶಾ ಪಟಾನಿ ತಂದೆ ಹೀಗಂದಿದ್ದೇಕೆ?

ಸನಾತನ ಧರ್ಮದ ಸಂತರ ಬಗ್ಗೆ ದಿಶಾ ಪಟಾನಿ ಸಹೋದರಿ ಖುಷ್ಬೂ ಪಟಾನಿ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಆರೋಪಿಗಳು ಸೆಪ್ಟೆಂಬರ್ 12ರಂದು ನಸುಕಿನ 3.45ರ ಸುಮಾರಿಗೆ ಬರೇಲಿಯ ಸಿವಿಲ್‌ ಲೈನ್ಸ್‌ ಪ್ರದೇಶದಲ್ಲಿರುವ ದಿಶಾ ಪಟಾನಿ ಅವರ ಮನೆ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಬೈಕ್‌ನಲ್ಲಿ ಬಂದ ಅವರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು.

ಈ ವೇಳೆ ಮನೆಯಲ್ಲಿ ದಿಶಾ ಪಟಾನಿ ತಂದೆ, ತಾಯಿ ಮತ್ತಿತರರಿದ್ದರು. ಅದೃಷ್ಟವಶಾತ್‌ ಯಾರಿಗೂ ಗಾಯವಾಗಿರಲಿಲ್ಲ. ಈ ಬಗ್ಗೆ ಗಾಝಿಯಾಬಾದ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಕೃತ್ಯ ಎಸಗಿದವರ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದರು. ದಿಶಾ ಪಟಾನಿ ಮನೆ ಮೇಲಿನ ಗುಂಡಿನ ದಾಳಿಯ ಹೊಣೆಯನ್ನು ರೋಹಿತ್ ಗೋದಾರ ಮತ್ತು ಬೋಲ್ಡಿ ಬ್ರಾರ್ ಗ್ಯಾಂಗ್ ಹೊತ್ತಿಕೊಂಡಿತ್ತು.

ಸಿಸಿಟಿವಿ ದೃಶ್ಯಗಳು, ಗುಪ್ತಚರ ಮಾಹಿತಿ ಮುಂತಾದ ಸಾಕ್ಷಿಗಳನ್ನು ಆಧರಿಸಿ ಕಿಡಿಗೇಡಿಗಳ ಪತ್ತೆಗೆ ಸ್ಪೆಷಲ್ ಟಾಸ್ಕ್ ಫೋರ್ಸ್ ಮುಂದಾಗಿತ್ತು. ದೆಹಲಿ ಕ್ರೈಂ ಬ್ರ್ಯಾಂಚ್ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸಲಾಯಿತು.



ಟ್ರೈಲರ್‌ ಎಂದಿದ್ದ ಗ್ಯಾಂಗ್‌

ದಿಶಾ ಪಟಾನಿ ಮನೆ ಮೇಲಿನ ದಾಳಿ ಬೆನ್ನಲ್ಲೇ ಗೋಲ್ಡಿ ಬ್ರಾರ್ ಗ್ಯಾಂಗ್‌ನ ವಿರೇಂದ್ರ ಚರಣ್ ಮತ್ತು ಮಹೇಂದ್ರ ಸರಣ್ ಸಾಮಾಜಿಕ ಮಾಧ್ಯಮದಲ್ಲಿ, “ಖುಷ್ಬೂ ಮತ್ತು ದಿಶಾ ಸಂತ ಪ್ರೇಮಾನಂದ್ ಜಿ ಮತ್ತು ಅನಿರುದ್ಧಾಚಾರ್ಯ ಅವರನ್ನು ಅವಮಾನಿಸಿದ್ದಾರೆ. ಸನಾತನ ಧರ್ಮಕ್ಕೆ ಅಗೌರವ ತೋರಿದ್ದಾರೆ. ಇದು ಟ್ರೈಲರ್‌ ಮಾತ್ರ. ಮುಂದೆ ಧರ್ಮಕ್ಕೆ ಅಗೌರವ ತೋರಿದರೆ ಯಾರೂ ಬದುಕುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದರು.

ಖುಷ್ಬೂ ಪಟಾನಿ ಅನಿರುದ್ಧಾಚಾರ್ಯರ ಲಿವ್-ಇನ್ ರಿಲೇಶನ್‌ಶಿಪ್ ಹೇಳಿಕೆಯನ್ನು ಟೀಕಿಸಿದ್ದರು. ಆದರೆ ಕೆಲವರು ಇದನ್ನು ಪ್ರೇಮಾನಂದ್ ಜಿ ಮಹಾರಾಜ್‌ಗೆ ಸಂಬಂಧಿಸಿದ್ದು ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದು ಅವರ ಮನೆ ಮೇಲಿನ ದಾಳಿಗೆ ಕಾರಣ ಎನ್ನಲಾಗಿದೆ.