ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Modi: ಸ್ವಂತ ಮನೆ, ಕಾರು ಇಲ್ಲದ ಪ್ರಧಾನಿ ಮೋದಿ ಬಳಿ ಇರೋದು ಎಷ್ಟು ಆಸ್ತಿ?

ಸೆಪ್ಟೆಂಬರ್‌ 17ರಂದು ಪ್ರದಾನಿ ಮೋದಿ ಅವರ ಮೋದಿ ಹುಟ್ಟುಹಬ್ಬ. ಸತತ ಮೂರನೇ ಬಾರಿಗೆ ಪ್ರಧಾನಿ ಆಗಿರುವ ಮೋದಿ ಒಟ್ಟು ಆಸ್ತಿ ಎಷ್ಟು ಹೊಂದಿದ್ದಾರೆ ಎಂಬ ಚರ್ಚೆ ಮುನ್ನಲೆಗೆ ಬಂದಿದೆ. ವಿಶೇಷವೆಂದರೆ ಪ್ರಧಾನಿ ಬಳಿ ಇರುವ ಆಸ್ತಿಗಳೆಲ್ಲವೂ ಚರಾಸ್ತಿಗಳಾಗಿದ್ದು, ಯಾವುದೇ ಸ್ಥಿರಾಸ್ತಿಗಳು ಅವರ ಬಳಿ ಇಲ್ಲ. ಅಷ್ಟೇಕೆ ಕಾರು ಸೇರಿದಂತೆ ಯಾವುದೇ ವಾಹನಗಳೂ ಇಲ್ಲ. ಸ್ವಂತಕ್ಕೊಂದು ಮನೆಯನ್ನೂ ಅವರು ಹೊಂದಿಲ್ಲ.

3 ಬಾರಿ ಪ್ರಧಾನಿ...11 ವರ್ಷದಲ್ಲಿ ನರೇಂದ್ರ ಮೋದಿ ಗಳಿಸಿದ ಆಸ್ತಿ ಎಷ್ಟು?

ಪ್ರಧಾನಿ ಮೋದಿ -

Profile Sushmitha Jain Sep 17, 2025 9:19 PM

ನವದೆಹಲಿ: ಪ್ರಧಾನ ಮಂತ್ರಿ (Prime Minister) ನರೇಂದ್ರ ಮೋದಿ (Narendra Modi) ಸೆಪ್ಟೆಂಬರ್‌ 17ರಂದು ತಮ್ಮ 75ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಭಾರತ ಮಾತ್ರವಲ್ಲ, ವಿಶ್ವಾದ್ಯಂತ ಜನರು ಅವರನ್ನು ಕೊಂಡಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ರಾಜಕೀಯ, ವೈಯಕ್ತಿಕ ಜೀವನದ ಜತೆಗೆ ಆಸ್ತಿಯ (Property) ಬಗ್ಗೆ ಚರ್ಚೆಯೂ ಜೋರಾಗಿದೆ. 2024ರ ಲೋಕಸಭಾ ಚುನಾವಣೆಯ ಪ್ರಮಾಣ ಪತ್ರದ ಪ್ರಕಾರ, ಮೋದಿ ಅವರ ಒಟ್ಟು ಆಸ್ತಿ 3.02 ಕೋಟಿ ರೂ.ಗೂ ಅಧಿಕ. ಆದರೆ ಅವರ ಹೆಸರಿನಲ್ಲಿ ಸ್ವಂತ ಮನೆ, ಕಾರು, ಅಥವಾ ಭೂಮಿ ಇಲ್ಲ.

ಆದಾಯದ ಮೂಲಗಳು

ಮೋದಿ ಅವರ ಆದಾಯವು ಪ್ರಧಾನ ಮಂತ್ರಿಯ ಸಂಬಳ ಮತ್ತು ಬ್ಯಾಂಕ್ ಠೇವಣಿಯ ಬಡ್ಡಿಯಿಂದ ಬರುತ್ತದೆ. ಇವು ಬಿಟ್ಟರೆ ಬೇರೆ ಆದಾಯದ ಮೂಲಗಳಿಲ್ಲ. ಅವರು ತಿಂಗಳಿಗೆ ₹1.66 ಲಕ್ಷ ಸಂಬಳ, ₹45,000 ಸಂಸದೀಯ ಭತ್ಯೆ, ₹3,000 ವೆಚ್ಚ ಭತ್ಯೆ ಮತ್ತು ₹2,000 ದೈನಿಕ ಭತ್ಯೆ ಪಡೆಯುತ್ತಾರೆ.

2018-2023ರ ಆದಾಯ: 2018-19 (₹11.14 ಲಕ್ಷ), 2019-20 (₹17.20 ಲಕ್ಷ), 2020-21 (₹17.07 ಲಕ್ಷ), 2021-22 (₹15.41 ಲಕ್ಷ), 2022-23 (₹23.56 ಲಕ್ಷ).

ಬ್ಯಾಂಕ್ ಠೇವಣಿ ಮತ್ತು ಆಸ್ತಿ

ಮೋದಿ ಎಸ್‌ಬಿಐ ಬ್ಯಾಂಕಿನಲ್ಲಿ ₹2.86 ಕೋಟಿ ಠೇವಣಿ ಇರಿಸಿದ್ದಾರೆ. ಇದರಿಂದ ಬಡ್ಡಿಯ ಆದಾಯ ಬರುತ್ತದೆ. ಅವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿಲ್ಲ, ಯಾವುದೇ ಬಾಂಡ್‌ಗಳನ್ನು ಹೊಂದಿಲ್ಲ. ರಾಷ್ಟ್ರೀಯ ಉಳಿತಾಯ ಯೋಜನೆಯಲ್ಲಿ (NSS) ₹9 ಲಕ್ಷಕ್ಕಿಂತ ಹೆಚ್ಚು ಠೇವಣಿಯಿದೆ. ಅವರ ಬಳಿ ನಾಲ್ಕು ಚಿನ್ನದ ಉಂಗುರಗಳಿದ್ದು, 2024ರಲ್ಲಿ ಅವುಗಳ ಮೌಲ್ಯ ₹2.67 ಲಕ್ಷವಾಗಿತ್ತು. ಚಿನ್ನದ ದರ ಏರಿಕೆಯಿಂದ ಈಗ ಸುಮಾರು ₹4 ಲಕ್ಷ ದಾಟಿರಬಹುದು. ಜೀವ ವಿಮೆ ಅಥವಾ ಇತರ ವಿಮಾ ಯೋಜನೆಗಳನ್ನು ತೆಗೆದುಕೊಂಡಿಲ್ಲ.

ಈ ಸುದ್ದಿಯನ್ನು ಓದಿ: PM Modi: 75 ವರ್ಷ ತುಂಬಿತು... ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುತ್ತಾರಾ ಮೋದಿ? ಪಕ್ಷದ ನಿಯಮ ಪಾಲಿಸ್ತಾರಾ?

ಸ್ವಂತ ಮನೆ, ಕಾರು ಇಲ್ಲ

2001ರಿಂದ ಗುಜರಾತ್ ಮುಖ್ಯಮಂತ್ರಿಯಾಗಿ, ನಂತರ 2014ರಿಂದ ಪ್ರಧಾನಮಂತ್ರಿಯಾಗಿರುವ ಮೋದಿ ಅವರು ಸರ್ಕಾರಿ ವಸತಿಯಲ್ಲೇ ವಾಸಿಸುತ್ತಾರೆ. ಗುಜರಾತ್‌ನಲ್ಲಿ ಗಾಂಧಿನಗರದ ಸರ್ಕಾರಿ ಬಂಗಲೆ, ದೆಹಲಿಯಲ್ಲಿ ಪಂಚವಟಿಯ ಸರ್ಕಾರಿ ನಿವಾಸದಲ್ಲಿ ಇದ್ದಾರೆ. ಭದ್ರತೆಯ ಕಾರಣದಿಂದ ಸರ್ಕಾರಿ ವಾಹನಗಳನ್ನೇ ಬಳಸುತ್ತಾರೆ. ಕುಟುಂಬದವರು ಜತೆ ಇಲ್ಲದ ಕಾರಣ, ಸ್ವಂತ ಕಾರು ಅಥವಾ ಮನೆ ಖರೀದಿಯ ಅಗತ್ಯವಿಲ್ಲ ಎಂದು ನಿರ್ಧರಿಸಿದ್ದಾರೆ.

ಮೋದಿ ಅವರ ಸರಳ ಜೀವನಶೈಲಿ ಮತ್ತು ಆಸ್ತಿಯ ವಿವರಗಳು ಜನರ ಗಮನ ಸೆಳೆದಿವೆ. ಅವರ ಸಂಬಳ ಮತ್ತು ಠೇವಣಿಯಿಂದ ಬಂದ ಆಸ್ತಿಯು ರಾಜಕಾರಣಿಗಳಲ್ಲಿ ಸರಳತೆಯ ಮಾದರಿ ಎನಿಸಿಕೊಂಡಿದೆ. ಯಾವುದೇ ಸಾಲ ಕೊಡದೆ, ಪಡೆಯದೆ ಇರುವುದು ಜನರ ಚರ್ಚೆಗೆ ಕಾರಣವಾಗಿದೆ.