ಹುಬ್ಬಳ್ಳಿ, ಆ. 12: ಭಾರತದ ಕೆಂಪು ಕೋಟೆ, ಸಂಸತ್ ಭವನ, ರಾಷ್ಟ್ರಪತಿ ಭವನ ಸೇರಿ ದೇಶದೆಲ್ಲೆಡೆ ಹಾರಾಡುವ ಭಾರತದ ಅಧಿಕೃತ ರಾಷ್ಟ್ರ ಧ್ವಜ (National Flag) ಎಲ್ಲಿ ತಯಾರಾಗುತ್ತೆ ಎಂಬ ಕುತೂಹಲ ನಿಮಗಿದಿಯೇ? ಅದರಲ್ಲೂ ಭಾರತದ ಅಧಿಕೃತ ರಾಷ್ಟ್ರ ಧ್ವಜಗಳನ್ನು ತಯಾರಿಸುವ ಏಕೈಕ ಪ್ರಮಾಣಿಕೃತ ಕೇಂದ್ರ ಕರ್ನಾಟಕದಲ್ಲಿದೆ (80th Independence Day Special). ಹೌದು, ರಾಷ್ಟ್ರ ಧ್ವಜ ತಯಾರಾಗುವುದು ಹುಬ್ಬಳ್ಳಿಯಲ್ಲಿ. ಈ ಕುರಿತಾದ ವಿವರ ಇಲ್ಲಿದೆ.
ಭಾರತದ ಅಧಿಕೃತ ರಾಷ್ಟ್ರ ಧ್ವಜಗಳನ್ನು ತಯಾರಿಸುವ ಏಕೈಕ ತಾಣ ಕರ್ನಾಟದಲ್ಲಿದೆ. ವರ್ಷಗಳಿಂದ ಕುಟುಂಬವೊಂದು ಈ ರಾಷ್ಟ್ರ ಧ್ವಜಗಳನ್ನ ತಯಾರಿಸುವ ಅಧಿಕಾರವನ್ನು ಹೊಂದಿದೆ. ಇದು ಕೇವಲ ಒಂದು ಕೆಲಸವಾಗಿ ಅಲ್ಲ, ಬದಲಿಗೆ ಆ ಕುಟುಂಬಕ್ಕೆ ಇದು ಹೆಮ್ಮೆಯ ಮತ್ತು ಗೌರವದ ಸಂಗತಿ ಎನಿಸಿಕೊಂಡಿದೆ.
ಸಾವಾಲುಗಳೇನು?
ದೇಶದ ಅಧಿಕೃತ ರಾಷ್ಟ್ರ ಧ್ವಜವನ್ನ ತಯಾರಿಸುವುದು ಸುಲಭದ ಕೆಲಸವಲ್ಲ. ಸರ್ಕಾರ ನಿಗದಿಪಡಿಸಿದ ಅಳತೆ, ಬಣ್ಣ, ಬಟ್ಟೆಯ ಗುಣಮಟ್ಟದ ಮಾನದಂಡಗಳನ್ನ ಚಾಚೂ ತಪ್ಪದೆ ಪಾಲಿಸಬೇಕಾಗುತ್ತದೆ. ಸಣ್ಣ ತಪ್ಪಾದರೂ ಆ ಧ್ವಜವನ್ನ ಬಳಸುವುದಿಲ್ಲ. ತಲೆಮಾರುಗಳಿಂದ ಈ ಹಳ್ಳಿಯಲ್ಲಿಯೇ ಧ್ವಜವನ್ನ ತಯಾರಿಸುತ್ತಿರುವುದರಿಂದ ಕುಟುಂಬಸ್ಥರು ಹಿರಿಯರಿಂದ ಎಲ್ಲ ಕೌಶಲ್ಯಗಳನ್ನ ಕಲಿಯುತ್ತ ಬಂದಿದ್ದಾರೆ. ಈ ವಿಶಿಷ್ಟ ಪರಂಪರೆಯಿಂದಾಗಿ ಈ ಹಳ್ಳಿಯು ಇಡೀ ದೇಶದಲ್ಲೇ ಅತ್ಯಂತ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ.

ರಾಷ್ಟ್ರ ಧ್ವಜವನ್ನು ತಯಾರಿಸುವ ಹಳ್ಳಿ ಯಾವುದು ಗೊತ್ತಾ?
ಕರ್ನಾಟಕದ ಹುಬ್ಬಳಿಯ ಬೆಂಗೇರಿ ಹಳ್ಳಿಯು ಸರ್ಕಾರದ ನಿಯಮಗಳಿಗೆ ಅನುಸಾರವಾಗಿ ರಾಷ್ಟ್ರ ಧ್ವಜವನ್ನು ತಯಾರಿಸುವ ಏಕೈಕ ಅಧಕೃತ ಕೇಂದ್ರವಾಗಿ ಜನಪ್ರಿಯವಾಗಿದೆ. ಕರ್ನಾಟಕದ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವು ಕೈಯಿಂದಲೇ ನೇಯ್ದ ಖಾದಿ ಬಟ್ಟೆಗಳಿಂದ ಧ್ವಜವನ್ನು ತಯಾರಿಸುತ್ತದೆ. ಪ್ರತಿಯೊಂದು ಧ್ವಜದ ಅಳತೆ, ಬಣ್ಣ, ಬಟ್ಟೆಯ ಗುಣಮಟ್ಟ ಮತ್ತು ಅಶೋಕ ಚಕ್ರದ ವಿನ್ಯಾಸ ಎಲ್ಲವನ್ನು ಸರ್ಕಾರವೇ ನಿರ್ಧರಿಸುತ್ತದೆ. ಇಲ್ಲಿ ತಯಾರಾಗುವ ಸಾವಿರಾರು ಧ್ವಜಗಳನ್ನು ಪ್ರಮುಖ ರಾಷ್ಟ್ರೀಯ ಹಬ್ಬ ಹಾಗೂ ಸಮಾರಂಭಗಳಲ್ಲಿ ಅಧಿಕೃತ ಬಳಕೆಗಾಗಿ ದೇಶಾದ್ಯಂತ ಪೂರೈಸಲಾಗುತ್ತದೆ.
ಸ್ವಾತಂತ್ರ್ಯ ದಿನಾಚರಣೆಗೆ ದೆಹಲಿಯಲ್ಲಿ ಹೈ ಅಲರ್ಟ್: 19 ಮೋಸ್ಟ್ ವಾಂಟೆಡ್ ಉಗ್ರರ ಪೋಸ್ಟರ್ ಬಿಡುಗಡೆ
ಬೆಂಗೇರಿಗೆ ಮಾತ್ರ ಏಕೆ ಈ ಅಧಿಕಾರ?
ಭಾರತ ಸರ್ಕಾರವು ಪ್ರಮಾಣಿಕೃತ ಸಂಸ್ಥೆಗಳಿಗೆ ಮಾತ್ರ ರಾಷ್ಟ್ರ ಧ್ವಜವನ್ನು ತಯಾರಿಸುವ ಅನುಮತಿ ನೀಡುತ್ತದೆ. ಭಾರತೀಯ ಮಾನಕ ಸಂಸ್ಥೆ ರಾಷ್ಟ್ರ ಧ್ವಜದ ಉತ್ಪಾದನೆಗೆ ಬೆಂಗೇರಿಯಲ್ಲಿರುವ ಈ ಘಟಕಕ್ಕೆ ಮಾತ್ರ ಅನುಮೋದನೆ ನೀಡಿದೆ. ಕಾರಣ ಭಾರತದ ರಾಷ್ಟ್ರ ಧ್ವಜವನ್ನ ಭಾರತೀಯ ಧ್ವಜ ಸಂಹಿತೆಯಲ್ಲಿ ವಿವರಿಸಿದ ರೀತಿಯಲ್ಲೇ ತಯಾರಿಸಬೇಕು. ಬಟ್ಟೆಯಿಂದ ಹಿಡಿದು ಹೊಲಿಗೆಯವರೆಗೆ ಪ್ರತಿಯೊಂದು ವಿವರವೂ ನಿಗದಿಪಡಿಸಿದ ವಿನ್ಯಾಸಕ್ಕೆ ಹೊಂದಿಕೆಯಾಗಬೇಕು. ಈ ನಿಖರತೆಯನ್ನು ಕಾಯ್ದುಕೊಳ್ಳಲು ತರಬೇತಿ ಪಡೆದ ಕಾರ್ಮಿಕರು ಮತ್ತು ಉಪಕರಣಗಳು ಬೆಂಗೇರಿ ಘಟಕದಲ್ಲಿವೆ.