ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನರೇಂದ್ರ ಮೋದಿ ಉತ್ತಮ ಸ್ನೇಹಿತ ಎಂದ ಕಾಂಗ್ರೆಸ್‌ ನಾಯಕ ಸ್ಯಾಮ್ ಪಿತ್ರೋಡಾ; ಪ್ರಧಾನಿ ಪ್ರತಿಕ್ರಿಯೆ ಹೇಗಿತ್ತು?

Narendra Modi: ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ ನಾಯಕ ಸ್ಯಾಮ್ ಪಿತ್ರೋಡಾ ರಾಜಕೀಯ ವೈರತ್ವ ಮರೆತು ಪರಸ್ಪರ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಮೋದಿಯನ್ನು ಉತ್ತಮ ಸ್ನೇಹಿತ ಎಂದು ಸ್ಯಾಮ್ ಪಿತ್ರೋಡಾ ಬಣ್ಣಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಮೋದಿ ಅವರಿಗೆ ದೀಪಾವಳಿ ಶುಭಾಶಯ ತಿಳಿಸಿದರು.

ಸ್ಯಾಮ್ ಪಿತ್ರೋಡಾ ಮತ್ತು ನರೇಂದ್ರ ಮೋದಿ (ಸಂಗ್ರಹ ಚಿತ್ರ)

ದೆಹಲಿ, ನ. 13: ಅಪರೂಪದ ರಾಜಕೀಯ ಬೆಳವಣಿಗೆಯೊಂದಕ್ಕೆ ಗುರುವಾರ (ನವೆಂಬರ್‌ 13) ದೇಶ ಸಾಕ್ಷಿಯಾಯಿತು. ರಾಜಕೀಯ ವೈರತ್ವ ಮರೆತು ಬಿಜೆಪಿ ಮತ್ತು ಕಾಂಗ್ರೆಸ್‌ ಮುಖಂಡರು ಮೆಚ್ಚುಗೆಯ, ಆತ್ಮೀಯ ಮಾತುಗಳನ್ನಾಡಿದರು. ಹೌದು, ಕಾಂಗ್ರೆಸ್ ನಾಯಕ ಹಾಗೂ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ (Sam Pitroda) ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ಸ್ನೇಹಿತರಂತೆ ಪರಸ್ಪರ ಸೌಹಾರ್ದಯುತವಾಗಿ ನಡೆದುಕೊಂಡರು. ಮೋದಿ ಒಬ್ಬ ಒಳ್ಳೆಯ ವಾಗ್ಮಿ, ಕಠಿಣ ಪರಿಶ್ರಮಿ ಹಾಗೂ ವೈಯಕ್ತಿಕವಾಗಿ ಆತ್ಮೀಯ ವ್ಯಕ್ತಿ ಎಂದು ಸ್ಯಾಮ್ ಪಿತ್ರೋಡಾ ಮೆಚ್ಚುಗೆ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ ಎಕ್ಸ್‌ನಲ್ಲಿ ಸ್ಯಾಮ್ ಪಿತ್ರೋಡಾ ಮತ್ತು ಅವರ ಪತ್ನಿಗೆ ದೀಪಾವಳಿ ಮತ್ತು ಹೊಸ ವರ್ಷದ ಶುಭ ಕೋರಿದರು. ಈ ಕೂಲಕ ಗಮನ ಸೆಳೆದರು.

ಐಎಎನ್‌ಎಸ್ ಸುದ್ದಿಸಂಸ್ಥೆ ಜತೆಗಿನ ಸಂದರ್ಶನವೊಂದರಲ್ಲಿ ಪಿತ್ರೋಡಾ ಪ್ರಧಾನಿ ಮೋದಿಯವರೊಂದಿಗಿನ ತಮ್ಮ ವೈಯಕ್ತಿಕ ಬಾಂಧವ್ಯದ ಬಗ್ಗೆ ಮಾತನಾಡಿದರು. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಪ್ರಧಾನಿ ಅವರೊಂದಿಗೆ ತಮಗೆ ಸೌಹಾರ್ದಯುತ ಸಂಬಂಧವಿದೆ ಎಂದು ಹೇಳಿದರು. ತಾವು ಮೋದಿ ಅವರನ್ನು ಒಬ್ಬ ವ್ಯಕ್ತಿಯಾಗಿ ಗೌರವಿಸುವುದಾಗಿ ತಿಳಿಸಿದ ಅವರು, ಪತ್ನಿಯೊಂದಿಗೆ ಹಲವು ಬಾರಿ ಅವರನ್ನು ಭೇಟಿಯಾಗಿದ್ದನ್ನು ನೆನಪಿಸಿಕೊಂಡರು.

ಸ್ಯಾಮ್ ಪಿತ್ರೋಡಾ ಅವರಿಗೆ ಶುಭಾಶಯ ಕೋರಿದ ಮೋದಿ:



ಸ್ಯಾಮ್ ಪಿತ್ರೋಡಾ ಹೇಳಿದ್ದೇನು?

ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಮಾತನಾಡಿದ ಪಿತ್ರೋಡಾ, "ಅವರು (ಮೋದಿ) ಗುಜರಾತಿ ಮೂಲದ ಸ್ನೇಹಿತರು. ಒಬ್ಬ ವ್ಯಕ್ತಿಯಾಗಿ ನಾನು ಅವರನ್ನು ಗೌರವಿಸುತ್ತೇನೆ. ನನ್ನ ಪತ್ನಿ ಮತ್ತು ನಾನು ಅವರನ್ನು ಭೇಟಿಯಾಗಿದ್ದೇವೆ" ಎಂದು ಹೇಳಿದರು.

ಸಂಸತ್ತಿನಲ್ಲಿ ನರೇಂದ್ರ ಮೋದಿ-ಮಲ್ಲಿಕಾರ್ಜುನ ಖರ್ಗೆ ನಡುವೆ ಲಘು ಹಾಸ್ಯ, ಹಸ್ತಲಾಘವ; ಅಂಬೇಡ್ಕರ್ ಜಯಂತಿ ವೇಳೆ ಅಪರೂಪದ ಕ್ಷಣ

"ವೈಯಕ್ತಿಕ ಮಟ್ಟದಲ್ಲಿ ಅವರು ಅತ್ಯಂತ ಆತ್ಮೀಯರು. ಅವರು ದಯಾಳು, ಪ್ರೀತಿಪಾತ್ರರು ಮತ್ತು ಕಾಳಜಿ ವಹಿಸುವ ವ್ಯಕ್ತಿ. ಸಹಜವಾಗಿಯೇ ಅವರು ಒಬ್ಬ ಉತ್ತಮ ವಾಗ್ಮಿ ಮತ್ತು ಕಠಿಣ ಪರಿಶ್ರಮಿ. ನಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯವಿದೆ. ನಮಗೆ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯಗಳಿಲ್ಲ. ಗುಜರಾತಿ ನಾಯಕರಾಗಿ, ಸ್ನೇಹಿತರಾಗಿ ಅಥವಾ ಹಿತೈಷಿಯಾಗಿ ನರೇಂದ್ರ ಮೋದಿ ಅವರ ಬಗ್ಗೆ ನನಗೆ ಯಾವುದೇ ವಿರೋಧವಿಲ್ಲ. ಅವರು ನನ್ನೊಂದಿಗೆ ಬಹಳ ಆತ್ಮೀಯತೆಯಿಂದ ನಡೆದುಕೊಂಡಿದ್ದಾರೆ. ಅದನ್ನು ನಾನು ಗೌರವಿಸುತ್ತೇನೆ. ನಾನು ಗುಜರಾತ್‌ನಲ್ಲಿರುವ ಅವರ ಮನೆಗೆ ಹಲವು ಬಾರಿ ಭೇಟಿ ನೀಡಿದ್ದೇನೆʼʼ ಎಂದು ತಿಳಿಸಿದರು.

ʼʼನಾನು ಮೋದಿ ಅವರ ಸೈದ್ಧಾಂತಿಕ ನಿಲುವನ್ನು ವಿರೋಧಿಸುತ್ತೇನೆ. ಮತ್ತು ಅವರೊಂದಿಗೆ ನಗುತ್ತ ಊಟ ಮಾಡುತ್ತೇನೆ. ಅವರೊಂದಿಗೆ ನನಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲʼʼ ಎಂದು ಅವರು ವಿವರಿಸಿರು.

ಎಕ್ಸ್‌ ಮೂಲಕ ಮೋದಿ ಪ್ರತಿಕ್ರಿಯೆ

ಇದಕ್ಕೆ ಎಕ್ಸ್‌ ಮೂಲಕ ನರೇಂದ್ರ ಮೋದಿ ಪ್ರತಿಕ್ರಿಯಿಸಿದರು. ʼʼದೀಪಾವಳಿ ಮತ್ತು ನೂತನ ವರ್ಷದ ಶುಭಾಶಯಗಳು ಸ್ಯಾಮ್‌ ಭಾಯಿ ಮತ್ತು ಅಂಜಾನಾ ಬೆನ್‌. ಉತ್ತಮ ವರ್ಷ ನಿಮ್ಮದಾಗಲಿ ಎಂದು ಪ್ರಾರ್ಥಿಸುತ್ತೇನೆʼʼ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ನಾಯಕ ಈ ನಡೆ ದೇಶಾದ್ಯಂತ ಭಾರಿ ಕುತೂಹಲ ಕೆರಳಿಸಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

Ramesh Ballamoole

View all posts by this author