ಉತ್ತರಾಖಂಡ: ಕೇದಾರನಾಥದ (Kedarnath) ಬಳಿ ಏರ್ ಆಂಬ್ಯುಲೆನ್ಸ್ (Air ambulance crash) ವೊಂದು ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಶನಿವಾರ ನಡೆದಿದೆ. ಚಾರ್ ಧಾಮ ಯಾತ್ರೆಯ (Char Dham Yatra) ಋತುವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಓಡಾಡುತ್ತಿರುತ್ತಾರೆ. ಈ ವೇಳೆ ತುರ್ತು ಅಗತ್ಯಕ್ಕೆಂದು ಕಲ್ಪಿಸಲಾಗಿರುವ ಏರ್ ಆಂಬ್ಯುಲೆನ್ಸ್ ಶನಿವಾರ ಕೇದಾರನಾಥ ಧಾಮದ ಬಳಿ ಅಪಘಾತಕ್ಕೀಡಾಯಿತು. ಯಾತ್ರಾ ಸ್ಥಳದ ಸಮೀಪ ಈ ಘಟನೆ ನಡೆದಿದ್ದು, ಇದರಲ್ಲಿದ್ದ ಮೂವರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಹೆಲಿಕಾಪ್ಟರ್ ನ ಹಿಂಭಾಗಕ್ಕೆ ಹಾನಿಯಾಗಿದೆ.
ಚಾರ್ ಧಾಮ ಯಾತ್ರೆಯ ಋತುವಾಗಿರುವುದರಿಂದ ಈ ಪ್ರದೇಶದಲ್ಲಿ ಹೆಲಿಕಾಪ್ಟರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿರುತ್ತವೆ. ಶನಿವಾರ ಹೀಗೆ ಸಂಚರಿಸುತ್ತಿದ್ದ ಏರ್ ಆಂಬ್ಯುಲೆನ್ಸ್ ಪವಿತ್ರ ಯಾತ್ರಾ ಸ್ಥಳದ ಸಮೀಪದಲ್ಲಿ ಅಪಘಾತಕ್ಕೀಡಾಯಿತು. ಇದರಿಂದ ಹೆಲಿಕಾಪ್ಟರ್‌ನ ಹಿಂಭಾಗಕ್ಕೆ ಹಾನಿಯಾಗಿದೆ. ಏಮ್ಸ್ ರಿಷಿಕೇಶದ ಹೆಲಿ ಆಂಬ್ಯುಲೆನ್ಸ್ ಇದಾಗಿದೆ ಎಂದು ಗರ್ವಾಲ್ ಆಯುಕ್ತ ವಿನಯ್ ಶಂಕರ್ ಪಾಂಡೆ ತಿಳಿಸಿದ್ದಾರೆ. ಹೆಲಿಕಾಪ್ಟರ್‌ನಲ್ಲಿದ್ದ ಮೂವರು ಪ್ರಯಾಣಿಕರಲ್ಲಿ ಒಬ್ಬ ವೈದ್ಯರು, ಮತ್ತೊಬ್ಬ ಕ್ಯಾಪ್ಟನ್, ಇನ್ನೊಬ್ಬ ವೈದ್ಯಕೀಯ ಸಿಬ್ಬಂದಿ ಇದ್ದು, ಇವರೆಲ್ಲ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: Bomb threat: ಅಫ್ಜಲ್ ಗುರುನನ್ನು ಅನ್ಯಾಯವಾಗಿ ಗಲ್ಲಿಗೇರಿಸಲಾಗಿದೆ... ಬಾಂಬ್ ಸ್ಫೋಟಿಸುತ್ತೇವೆ; ತಾಜ್ ಹೊಟೇಲ್‌ಗೆ ಬೆದರಿಕೆ
ಉತ್ತರಾಖಂಡದ ಚಾರ್ ಧಾಮಗಳಲ್ಲಿ ಒಂದಾದ ಕೇದಾರನಾಥ ಧಾಮವು ಆರು ತಿಂಗಳ ಚಳಿಗಾಲದ ವಿರಾಮದ ನಂತರ ಮೇ 2 ರಂದು ಭಕ್ತರಿಗೆ ಮತ್ತೆ ತೆರೆಯಲ್ಪಟ್ಟಿತು. ಯಾತ್ರೆಯ ಋತುವಿನಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಹೆಲಿಕಾಪ್ಟರ್ ಸಂಚಾರವನ್ನು ವೀಕ್ಷಿಸುವ ಪವಿತ್ರ ಯಾತ್ರಾ ಸ್ಥಳದ ಸಮೀಪದಲ್ಲೇ ಈ ಅಪಘಾತ ನಡೆದಿದೆ.
ಏಮ್ಸ್, ರಿಷಿಕೇಶ್ ನಿರ್ವಹಿಸುತ್ತಿದ್ದ ಈ ಏರ್ ಆಂಬ್ಯುಲೆನ್ಸ್ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಯಾತ್ರಿಕರನ್ನು ರಕ್ಷಿಸಲು ಕೇದಾರನಾಥಕ್ಕೆ ಹೋಗಿದ್ದಾಗ ಅದರ ಟೈಲ್ ರೋಟರ್ ಮುರಿದುಹೋಯಿತು. ಇದರಿಂದಾಗಿ ಪೈಲಟ್ ತುರ್ತು ಲ್ಯಾಂಡಿಂಗ್ ಮಾಡಬೇಕಾಯಿತು ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಅಧಿಕಾರಿ ರಾಹುಲ್ ಚೌಬೆ ತಿಳಿಸಿದ್ದಾರೆ. ಏರ್ ಆಂಬ್ಯುಲೆನ್ಸ್ ತುರ್ತು ಲ್ಯಾಂಡಿಂಗ್ ಮಾಡಿದಾಗ ಮೂವರು ಅದರಲ್ಲಿದ್ದರು. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಹೆಲಿ ಸೇವೆಯ ನೋಡಲ್ ಅಧಿಕಾರಿಯೂ ಆಗಿರುವ ಚೌಬೆ ತಿಳಿಸಿದ್ದಾರೆ.