ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼಭಾರತಕ್ಕೆ ಬಯಸಿದ್ದೆಲ್ಲ ಸಿಗಲಿದೆʼʼ: ಫೋನ್‌ ಕರೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಘೋಷಣೆ: ಮೋದಿ ಉತ್ತಮ ಸ್ನೇಹಿತ ಎಂದು ಪುನರುಚ್ಚರಿಸಿದ ಅಮೆರಿಕ ಅಧ್ಯಕ್ಷ

Donald Trump: ʼʼನಾನು ಪ್ರಧಾನಿ ಮೋದಿ ಅವರ ದೊಡ್ಡ ಅಭಿಮಾನಿ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮನ ಬಿಚ್ಚಿ ಹೇಳಿದ್ದಾರೆ. ಅಮೆರಿಕ ಸ್ವಾತಂತ್ರ್ಯ ಘೋಷಣೆಯ 250ನೇ ವಾರ್ಷಿಕೋತ್ಸವದ ಪ್ರಯುಕ್ತ ದೆಹಲಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಆತಿಥ್ಯ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಫೋನ್‌ ಮೂಲಕ ಮಾತನಾಡಿದ ಡೊನಾಲ್ಡ್ ಟ್ರಂಪ್ ಈ ಮಾತು ಹೇಳಿದರು.

ದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಒಳಚಿತ್ರದಲ್ಲಿ ನರೇಂದ್ರ ಮೋದಿ ಮತ್ತು ಡೊನಾಲ್ಡ್‌ ಟ್ರಂಪ್‌

ದೆಹಲಿ, ಮೇ 24: ಪಶ್ಚಿಮ ಏಷ್ಯಾದಲ್ಲಿ ತಲೆದೋರಿರುವ ಸಂಘರ್ಷದಿಂದ ಇಂಧನ ಬಿಕ್ಕಟ್ಟು ಎದುರಿಸುತ್ತಿರುವ ಭಾರತಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಸಿಹಿ ಸುದ್ದಿ ನೀಡಿದ್ದಾರೆ. ಭಾರತ ಪ್ರವಾಸದಲ್ಲಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ (Marco Rubio) ಭಾಗವಹಿಸಿದ ದೆಹಲಿಯ ಕಾರ್ಯಕ್ರಮಕ್ಕೆ ಕರೆ ಮಾಡಿದ ಟ್ರಂಪ್‌, ʼʼಭಾರತ ಏನು ಬಯಸುತ್ತೋ ಅದು ಸಿಗಲಿದೆʼʼ ಎಂದಿದ್ದಾರೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ (Narendra Modi) ತಮ್ಮ ಉತ್ತಮ ಸ್ನೇಹಿತ ಎಂದು ಪುನರುಚ್ಚರಿಸಿದ್ದಾರೆ. ಇದರಿಂದ ಭಾರತದ ನಿರೀಕ್ಷೆ ಗರಿಗೆದರಿದ್ದು, ವ್ಯಾಪಾರ ಒಪ್ಪಂದ, ತೈಲ ವಿಚಾರದಲ್ಲಿ ಅನುಕೂಲವಾಗುತ್ತ ಎನ್ನುವ ಕುತೂಹಲ ಮೂಡಿದೆ.

ಅಮೆರಿಕ ಸ್ವಾತಂತ್ರ್ಯ ಘೋಷಣೆಯ 250ನೇ ವಾರ್ಷಿಕೋತ್ಸವದ ಪ್ರಯುಕ್ತ ದೆಹಲಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಾರ್ಕೊ ರೂಬಿಯೊ ಆತಿಥ್ಯ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಫೋನ್‌ ಮೂಲಕ ಮಾತನಾಡಿದ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಡೊನಾಲ್ಡ್‌ ಟ್ರಂಪ್‌ ಅವರ ಹೇಳಿಕೆ:



"ನಾನು ಎಲ್ಲರಿಗೂ ನಮಸ್ಕಾರ ಹೇಳಲು ಬಯಸುತ್ತೇನೆ. ನಾನು ಪ್ರಧಾನಿ ಮೋದಿ ಅವರನ್ನು ಪ್ರೀತಿಸುತ್ತೇನೆ. ಮೋದಿ ಅದ್ಭುತ ವ್ಯಕ್ತಿ. ಅವರು ನನ್ನ ಸ್ನೇಹಿತ" ಎಂದು ಟ್ರಂಪ್ ಹೇಳಿದ್ದಾರೆ. ಶ್ವೇತ ಭವನಕ್ಕೆ ಭೇಟಿ ನೀಡುವಂತೆ ಟ್ರಂಪ್ ಪರವಾಗಿ ಮಾರ್ಕೊ ರೂಬಿಯೊ ಶನಿವಾರ (ಮೇ 23) ಮೋದಿಗೆ ಅವರಿಗೆ ಅಹ್ವಾನ ನೀಡಿದ್ದರು. ಅಮೆರಿಕದಲ್ಲಿನ ವಲಸೆ ನೀತಿ ಬದಲಾವಣೆಗೆ ಕಳವಳ ವ್ಯಕ್ತಪಡಿಸಿದ ಕೆಲವೇ ದಿನಗಳಲ್ಲಿ ಮಾರ್ಕೊ ರುಬಿಯೊ ಭಾರತಕ್ಕೆ ಆಗಮಿಸಿದ್ದು, ಮಹತ್ವದ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆ ಇದೆ.

ʼʼಕೆಲವೇ ಗಂಟೆಗಳಲ್ಲಿ ಸಿಗಲಿದೆ ಗುಡ್‌ನ್ಯೂಸ್‌ʼʼ: ಹೊರ್ಮುಜ್‌ ಜಲಸಂಧಿ ಬಿಕ್ಕುಟ್ಟು ಬಗೆಹರಿಯುವ ಸೂಚನೆ ನೀಡಿದ ಮಾರ್ಕೊ ರುಬಿಯೋ

ಡೊನಾಲ್ಡ್‌ ಟ್ರಂಪ್‌ ಹೇಳಿದ್ದೇನು?

"ಭಾರತವು ನನ್ನ ಮೇಲೆ ಮತ್ತು ನಮ್ಮ ದೇಶದ ಮೇಲೆ ಶೇಕಡ 100ರಷ್ಟು ಭರವಸೆ ಇಡಬಹುದು. ಭಾರತಕ್ಕೆ ಯಾವುದೇ ಸಹಾಯ ಬೇಕಿದ್ದರೆ ಎಲ್ಲಿಗೆ ಕರೆ ಮಾಡಬೇಕೆಂಬುದು ತಿಳಿದಿದೆ. ನಾವು ಚೆನ್ನಾಗಿದ್ದೇವೆ" ಎಂದು ಟ್ರಂಪ್ ಹೇಳಿದರು. "ನಮ್ಮಲ್ಲಿ ದಾಖಲೆಯ ಆರ್ಥಿಕತೆ, ದಾಖಲೆಯ ಷೇರು ಮಾರುಕಟ್ಟೆ ಇದೆ. ಭಾರತ ಬಯಸಿದ್ದನ್ನು ಪಡೆದುಕೊಳ್ಳಲಿದೆ. ನಾನು ಪ್ರಧಾನಿ ಮೋದಿ ಅವರ ದೊಡ್ಡ ಅಭಿಮಾನಿ" ಎಂದಿದ್ದಾರೆ. ಅಲ್ಲದೆ ರುಬಿಯೊ ಅವರನ್ನು ಶ್ರೇಷ್ಠ ವಿದೇಶಾಂಗ ಕಾರ್ಯದರ್ಶಿ ಎಂದು ಹೊಗಳಿದ್ದಾರೆ.

ವ್ಯಾಪಾರ ಒಪ್ಪಂದ

4 ದಿನಗಳ ಭಾರತದ ಪ್ರವಾಸದಲ್ಲಿರುವ ರುಬಿಯೊ ಈ ಮೊದಲು, ʼʼಅಮೆರಿಕ ಮತ್ತು ಭಾರತವು ಎರಡೂ ದೇಶಗಳ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಹೊಂದಿಕೆಯಾಗುವ ಬಹುನಿರೀಕ್ಷಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವ ಹಂತಕ್ಕೆ ಬಂದಿದೆʼʼ ಎಂದು ಎಂದು ಹೇಳಿದ್ದರು. ವ್ಯಾಪಾರ, ನಿರ್ಣಾಯಕ ಖನಿಜಗಳು, ಇಂಧನ ಭದ್ರತೆ ಮತ್ತು ರಕ್ಷಣಾ ಸಹಯೋಗದಂತಹ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಕುರಿತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದ ನಂತರ ಅವರು ಈ ಹೇಳಿಕೆಗಳನ್ನು ನೀಡಿದ್ದರು. ಸದ್ಯ ಟ್ರಂಪ್‌ ಅವರ ಕುತೂಹಲ ಮೂಡಿಸಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author