ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bangladesh Criminal: ಸನ್ಯಾಸಿ ವೇಷ ಧರಿಸಿ 30 ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ವಾಸವಾಗಿದ್ದ ಬಾಂಗ್ಲಾ ಅಪರಾಧಿ ಅರೆಸ್ಟ್‌

ಬಾಲಿವುಡ್‌ನ ʼಜಾಲಿ ಎಲ್‌ಎಲ್‌ಬಿʼ ಚಿತ್ರದಲ್ಲಿ ಬರುವ ರೀತಿಯದ್ದೇ ಒಂದು ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಬಾಂಗ್ಲಾದೇಶದ ಅಪರಾಧಿಯೊಬ್ಬ ಕಳೆದ ಮೂವತ್ತು ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ವಾಸವಾಗಿದ್ದಾನೆ. ಆತ ಸನ್ಯಾಸಿ ವೇಷಧರಿಸಿ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ವಾಸಿಸುತ್ತಿದ್ದ. ಆತನನ್ನು ಇದೀಗ ಬಂಧಿಸಲಾಗಿದೆ.

30 ವರ್ಷಗಳಿಂದ ಬಂಗಾಳದಲ್ಲಿದ್ದ ಬಾಂಗ್ಲಾ ಅಪರಾಧಿಯ ಬಂಧನ

ಕೋಲ್ಕತಾ: ಮೂವತ್ತು ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ (West Bengal) ವಾಸವಾಗಿರುವ ಬಾಂಗ್ಲಾದೇಶದ ಅಪರಾಧಿಯೊಬ್ಬನನ್ನು (Bangladeshi criminal) ಬಂಧಿಸಲಾಗಿದೆ. ಆತನನ್ನು ತೃಣಮೂಲ ಕಾಂಗ್ರೆಸ್ (Trinamool congress) ಅಡಗಿಸಿ ಇಟ್ಟಿತ್ತು ಎಂದು ಬಿಜೆಪಿ (BJP) ಆರೋಪಿಸಿದೆ. ಬಾಂಗ್ಲಾದೇಶದ ಅಪರಾಧಿಯಾಗಿರುವ 60 ವರ್ಷದ ಹಶೀಮ್ ಅಲಿ ಮಲ್ಲಿಕ್ ಕಳೆದ 30 ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ಸನ್ಯಾಸಿಯಾಗಿ ಜೀವನ ನಡೆಸುತ್ತಿದ್ದ. ʼʼಆತನನ್ನು ತೃಣಮೂಲ ಕಾಂಗ್ರೆಸ್ ಅಡಗಿಸಿಟ್ಟಿದೆ. ಹಶೀಮ್ ಅಲಿ ಮಲ್ಲಿಕ್ ಬಾಂಗ್ಲಾದೇಶದಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿರುವ ಆರೋಪಿʼʼ ಎಂದು ಬಿಜೆಪಿ ಹೇಳಿದೆ.

ಪಶ್ಚಿಮ ಬಂಗಾಳದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಸನ್ಯಾಸಿ ವೇಷಧರಿಸಿ ಅಡಗಿಕೊಂಡಿದ್ದ ಬಾಂಗ್ಲಾದೇಶದ ಅಪರಾಧಿಯನ್ನು ಶನಿವಾರ ರಾತ್ರಿ ಬಂಧಿಸಲಾಗಿದೆ. ಮೊಹಮ್ಮದ್ ಹಶೀಮ್ ಮಲ್ಲಿಕ್ ಕಳೆದ 30 ವರ್ಷಗಳಿಂದ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ವಾಸಿಸುತ್ತಿದ್ದ. 60 ವರ್ಷದ ಹಶೀಮ್ ಅಲಿ ಮಲ್ಲಿಕ್ ಬಾಂಗ್ಲಾದೇಶದಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿರುವವನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ವಿಶೇಷ ಕಾರ್ಯಪಡೆ (ಎಸ್‌ಟಿಎಫ್)ಯ ಸಬ್-ಇನ್‌ಸ್ಪೆಕ್ಟರ್ ಮೊಹಮ್ಮದ್ ಅಬ್ದುನ್ ನೂರ್ ಚೌಧರಿ ದೂರು ದಾಖಲಿಸಿದ ಅನಂತರ ಮಲ್ಲಿಕ್‌ನನ್ನು ಬಂಧಿಸಲು ಹುಡುಕಾಟ ನಡೆಸಲಾಗುತ್ತಿತ್ತು. ನಾಡಿಯ ಜಿಲ್ಲೆಯಲ್ಲಿ ಆತ ಇರುವ ಬಗ್ಗೆ ಸುಳಿವು ದೊರೆತ ಹಿನ್ನೆಲೆಯಲ್ಲಿ ಎಸ್‌ಟಿಎಫ್ ಮತ್ತು ಸ್ಥಳೀಯ ಪೊಲೀಸರು ತೆಹಟ್ಟಾ ಪ್ರದೇಶದಲ್ಲಿ ದಾಳಿ ನಡೆಸಿ ಆತನನ್ನು ಬಂಧಿಸಿದರು.

ವಿಚಾರಣೆ ವೇಳೆ ಮಲ್ಲಿಕ್ ತಾನು ಬಾಂಗ್ಲಾದೇಶದಲ್ಲಿ ಮಾಡಿದ ಅಪರಾಧಗಳಿಗಾಗಿ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಗಡಿ ದಾಟಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹಶೀಮ್ ಅಲಿ ಮಲ್ಲಿಕ್ ನನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಅಗ್ನಿಮಿತ್ರ ಪಾಲ್, ʼʼಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರವು ರಾಜ್ಯವನ್ನು ಭಯೋತ್ಪಾದಕರಿಗೆ ಸ್ವರ್ಗವನ್ನಾಗಿ ಮಾಡಿದೆʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: Elephant Mahadevi: ಸರಪಳಿಯಲ್ಲಿ ಬಂಧನ.. ಬೀದಿಯಲ್ಲಿ ಭಿಕ್ಷಾಟನೆ.. ಬದುಕಿನುದ್ದಕ್ಕೂ ನೋವುಂಡ ಆನೆ ಮಹಾದೇವಿಯ ಕಣ್ಣೀರ ಕಥೆ ಇದು!

ʼʼಬಂಗಾಳ ಭಯೋತ್ಪಾದಕರಿಗೆ ಸ್ವರ್ಗವಾಗಿದೆ. ಅವರು ಅದನ್ನು ಬಾಂಗ್ಲಾದೇಶವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಮಮತಾ ಬ್ಯಾನರ್ಜಿ ಅವರ ಪೊಲೀಸರಿಗೆ ಇದರ ಬಗ್ಗೆ ತಿಳಿದಿರಲಿಲ್ಲವೇ, ಅವರ ಗುಪ್ತಚರ ಘಟಕ ಏನು ಮಾಡುತ್ತಿತ್ತು?ʼʼ ಎಂದು ಪ್ರಶ್ನಿಸಿದ್ದಾರೆ.