Viral Video: ಅಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯ ಮೇಲೆ ನಿರಾಶ್ರಿತ ವ್ಯಕ್ತಿಯಿಂದ ಅತ್ಯಾಚಾರ; ಓಡಿಹೋದ ಆರೋಪಿ, ಸಿಸಿಟಿವಿಯಲ್ಲಿ ದೃಶ್ಯ ಸೆರೆ
36 ವರ್ಷದ ಮಹಿಳೆಯೊಬ್ಬಳ ಮೇಲೆ ಆಕೆಯ ಅಪಾರ್ಟ್‌ಮೆಂಟ್ ಕಟ್ಟಡದೊಳಗೆ ಹಲ್ಲೆ ಹಾಗೂ ಅತ್ಯಾಚಾರ ನಡೆಸಲಾದ ಭಯಾನಕ ಘಟನೆ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದಿದೆ. ಅತ್ಯಾಚಾರ ಮಾಡದಂತೆ ತಡೆಯಲು ಎಷ್ಟು ಹಣ ಬೇಕಾಗುತ್ತದೆ ಎಂದು ಸಂತ್ರಸ್ತೆಯು ಆತನಲ್ಲಿ ಬೇಡಿಕೊಂಡಿದ್ದಾಳೆ.

-

ನ್ಯೂಯಾರ್ಕ್: ಮಹಿಳೆಯೊಬ್ಬಳ ಮೇಲೆ ಆಕೆಯ ಅಪಾರ್ಟ್‌ಮೆಂಟ್ ಒಳಗೆ ಹಲ್ಲೆ ಹಾಗೂ ಅತ್ಯಾಚಾರ ನಡೆಸಲಾದ ಭಯಾನಕ ಘಟನೆ ಅಮೆರಿಕದ (America) ನ್ಯೂಯಾರ್ಕ್‌ನಲ್ಲಿ (New York) ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 28ರ ಮುಂಜಾನೆ, ನಿರಾಶ್ರಿತ ವ್ಯಕ್ತಿಯೊಬ್ಬ 36 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಅತ್ಯಾಚಾರ ಮಾಡದಂತೆ ತಡೆಯಲು ಎಷ್ಟು ಹಣ ಬೇಕಾಗುತ್ತದೆ ಎಂದು ಸಂತ್ರಸ್ತೆಯು ಆತನಲ್ಲಿ ಬೇಡಿಕೊಂಡಿದ್ದಾಳೆ.
ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ, ನಾರ್ವುಡ್‌ನ ಪುಟ್ನಮ್ ಪ್ಲೇಸ್ ಬಳಿಯ ಈಸ್ಟ್ ಗನ್ ಹಿಲ್ ರಸ್ತೆಯಲ್ಲಿರುವ ವಸತಿ ಕಟ್ಟಡದೊಳಗೆ ಈ ದಾಳಿ ನಡೆದಿದೆ. ಆರೋಪಿಯನ್ನು 21 ವರ್ಷದ ಕೆನ್ನೆತ್ ಸಿರಿಬೋ ಎಂದು ಗುರುತಿಸಲಾಗಿದೆ. ಶಂಕಿತನು ಸ್ಥಳದಿಂದ ಪರಾರಿಯಾಗುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವರದಿಯ ಪ್ರಕಾರ, ಬೆಳಗ್ಗೆ 5 ಗಂಟೆ ಸುಮಾರಿಗೆ ಆರೋಪಿ ಕಟ್ಟಡಕ್ಕೆ ಪ್ರವೇಶಿಸಿ ಮಹಿಳೆಯ ಬಳಿ ಬಂದು ಅತ್ಯಾಚಾರ ಮಾಡಿದ್ದಾನೆ. ಒಂದು ಕೈಯಿಂದ ಆಕೆಯ ಬಾಯಿಯನ್ನು ಮುಚ್ಚಿ, ಇನ್ನೊಂದು ಕೈಯನ್ನು ಆಕೆಯ ಗಂಟಲಿನ ಮೇಲೆ ಒತ್ತಿ ಹಿಡಿದಿದ್ದಾನೆ. ನಂತರ ಮಹಿಳೆಯನ್ನು ನೆಲಕ್ಕೆ ಬೀಳಿಸಿದ್ದಾನೆ. ಅಲ್ಲಿ ಆರೋಪಿಯು ಆಕೆಗೆ ಪದೇ ಪದೇ ಹೊಡೆದಿದ್ದಾನೆ ಎನ್ನಲಾಗಿದೆ.
ವಿಡಿಯೊ ವೀಕ್ಷಿಸಿ:
🚨WANTED FOR A Rape: on Sunday, September 28, 2025, at approximately 5:00 A.M., in the vicinity of East Gun Hill Road and Putnam Place, in the confines of the 52nd Precinct, a 36-year-old female victim was sexually assaulted by an unknown individual pic.twitter.com/hhkCCqUTZ3
— NYPD Crime Stoppers (@NYPDTips) September 29, 2025
ನಂತರ ನಿರಾಶ್ರಿತ ವ್ಯಕ್ತಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಈ ವೇಳೆ ಆಕೆ ಅತ್ಯಾಚಾರ ಮಾಡದಂತೆ ಮನವಿ ಮಾಡಿದ್ದಾಳೆ. ಅಲ್ಲದೆ ಎಷ್ಟು ಹಣ ಬೇಕೆಂದು ಕೇಳಿಕೊಂಡಿದ್ದಾಳೆ. ಬಳಿಕ ದಾಳಿಕೋರನು ಕಟ್ಟಡದಿಂದ ಪರಾರಿಯಾಗುವ ಮೊದಲು ಮಹಿಳೆಯ ಪರ್ಸ್ ಅನ್ನು ತೆಗೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಅದರಲ್ಲಿ ಡಾಲರ್ 250 ನಗದು, ಆಕೆಯ ಐಡಿ ಮತ್ತು ಕೀಲಿಗಳು ಇದ್ದವು.
ದಾಳಿಯ ಕೆಲವು ಗಂಟೆಗಳ ನಂತರ, ನ್ಯೂಯಾರ್ಕ್ ನಗರ ಪೊಲೀಸ್ ಇಲಾಖೆ (NYPD) ಸಿರಿಬೋ ಅಪಾರ್ಟ್ಮೆಂಟ್ ಕಟ್ಟಡದ ಮೆಟ್ಟಿಲುಗಳ ಕೆಳಗೆ ತಪ್ಪಿಸಿಕೊಳ್ಳುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಯನ್ನು ಬಿಡುಗಡೆ ಮಾಡಿತು. ವಿಡಿಯೊದಲ್ಲಿ ಅವನು ಕುತ್ತಿಗೆಗೆ ಟವಲ್ ಸುತ್ತಿಕೊಂಡು ಪ್ಯಾಂಟ್ ಅನ್ನು ಮೇಲಕ್ಕೆ ಎಳೆದುಕೊಂಡು ಓಡಿದ್ದಾನೆ. ಅವನು ಕಟ್ಟಡದೊಳಗೆ ಹೇಗೆ ಪ್ರವೇಶಿಸಿದ ಎಂಬ ಬಗ್ಗೆ ಇನ್ನೂ ತಿಳಿದುಬಂದಿಲ್ಲ.
ಮರುದಿನ ಮಧ್ಯಾಹ್ನ ಬ್ರಾಂಕ್ಸ್‌ನಲ್ಲಿರುವ ಮತ್ತೊಂದು ಕಟ್ಟಡದೊಳಗೆ ಸಿರಿಬೋನನ್ನು ಬಂಧಿಸಲಾಯಿತು. ಸ್ಥಳದಿಂದ ಸುಮಾರು ಎರಡು ಮೈಲು ದೂರದಲ್ಲಿ ಆತನ ಬಂಧನವಾಯ್ತು. ಅಧಿಕಾರಿಗಳು ಸಿಸಿಟಿವಿ ವಿಡಿಯೊದಿಂದ ಅವನನ್ನು ಗುರುತಿಸಿದರು. ವರದಿಯ ಪ್ರಕಾರ, ಆತನ ಮೇಲೆ ಅತ್ಯಾಚಾರ, ದರೋಡೆ, ಕಳ್ಳತನ ಮತ್ತು ಕ್ರಿಮಿನಲ್ ಆರೋಪ ಹೊರಿಸಲಾಗಿದೆ. ನ್ಯೂಜೆರ್ಸಿಯ ಯೂನಿಯನ್ ಬೀಚ್‌ನಲ್ಲಿ ಉಳಿದಿದ್ದ ಸಿರಿಬೋ, ನ್ಯೂಯಾರ್ಕ್ ನಗರದಲ್ಲಿ ಯಾವುದೇ ಆರೋಪಗಳನ್ನು ಹೊಂದಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ: Viral News: ಇದಪ್ಪ ಮಾನವೀಯತೆ ಅಂದ್ರೆ; ಗಾಯಗೊಂಡ ಮಹಿಳೆಯನ್ನು ಬೆನ್ನಮೇಲೆ ಹೊತ್ತು ಆಸ್ಪತ್ರೆಗೆ ದಾಖಲಿಸಿದ ಕಾನ್ಸ್‌ಟೇಬಲ್