ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Air India plane crash: ಇಡೀ ವಿಮಾನ ಸುಟ್ಟು ಕರಕಲಾದ್ರೂ ಭಗವದ್ಗೀತೆ ಮಾತ್ರ ಫುಲ್‌ ಸೇಫ್‌; ವಿಡಿಯೊ ವೈರಲ್‌

ಅಹ್ಮದಾಬಾದ್‌ ವಿಮಾನ ದುರಂತದಲ್ಲಿ ಎಲ್ಲವೂ ಸುಟ್ಟು ಭಸ್ಮವಾಗಿದ್ದು, ಇದಕ್ಕೆ ಸಂಬಂಧಪಟ್ಟ ಆಘಾತಕಾರಿ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇನ್ನೂ ಈ ಅಪಘಾತ ಸಂಭವಿಸಿದ ಸ್ಥಳದಲ್ಲಿನ ರಕ್ಷಣಾ ಕಾರ್ಯಾಚರಣೆಯ ವೇಳೆ ಅವಶೇಷಗಳ ಅಡಿಯಲ್ಲಿ ಭಗವದ್ಗೀತೆಯೊಂದು (Bhagavad gita) ಸಿಕ್ಕಿದ್ದು, ಎಲ್ಲವೂ ಸುಟ್ಟುಕರಕಲಾದರೂ ಈ ಭಗವದ್ಗೀತೆಯ ಪುಸ್ತಕ ಮಾತ್ರ ಏನು ಆಗದೆಯೇ ಇದೆ.

ಅಹ್ಮದಾಬಾದ್‌: ಬರೋಬ್ಬರಿ 246 ಪ್ರಯಾಣಿಕರನ್ನು ಬಲಿ ಪಡೆದ ಅಹ್ಮದಾಬಾದ್‌ ವಿಮಾನ ಪತನ(Air India plane crash) ದೇಶದ ಅತಿ ದೊಡ್ಡ ದುರಂತ ಇದಾಗಿದೆ. ಈ ದುರಂತದಲ್ಲಿ ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿ ಸೇರಿದಂತೆ ಒಟ್ಟು 246 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ಈ ಅಪಘಾತದಲ್ಲಿ ಎಲ್ಲ ವಸ್ತುಗಳೂ ಸುಟ್ಟು ಕರಕಲಾಗಿದೆ. ಆದರೆ ಅಚ್ಚರಿ ಎಂಬಂತೆ ವಿಮಾನದಲ್ಲಿದ್ದ ಭಗವದ್ಗೀತೆ ಗ್ರಂಥ ಮಾತ್ರ ಒಂದಿಷ್ಟೂ ಹಾನಿಯಾಗದೇ ಹಾಗೆಯೇ ಇದೆ. ಇದಕ್ಕೆ ಸಂಬಂಧಪಟ್ಟ ಆಘಾತಕಾರಿ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ವಿಮಾನ ಪತನದ ನಂತರ ಭಾರೀ ಬೆಂಕಿ ಹೊತ್ತಿಕೊಂಡು ಎಲ್ಲವೂ ಸುಟ್ಟು ಕರಕಲಾದರೂ ಅಲ್ಲಿದ್ದ ಭಗವದ್ಗೀತೆಯೊಂದು ಹಾಗೆಯೇ ಇತ್ತು. ಸುಟ್ಟುಕರಕಲಾದ ಅವಶೇಷಗಳ ಅಡಿಯಲ್ಲಿ ಭಗವದ್ಗೀತೆ ಸುರಕ್ಷಿತವಾಗಿ ಪತ್ತೆಯಾಗಿದೆ. ಇನ್ನು ಈ ವಿಡಿಯೊ ಎಷ್ಟು ನಿಜ ಎಂಬುದು ಸ್ಪಷ್ಟವಾಗಿಲ್ಲ. ಅಲ್ಲದೇ ಈ ವಿಡಿಯೊದ ಅಸಲಿಯತ್ತು ತಿಳಿದಿಲ್ಲ.



ಈ ವಿಡಿಯೊವನ್ನು amdavad.clicks ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದ್ದು, "ವಿಮಾನ ಅಪಘಾತದಲ್ಲಿ ಎಲ್ಲವೂ ನಾಶವಾಯಿತು ಆದರೆ ಭಗವದ್ಗೀತೆ ಒಳಗಿನಿಂದ ಹಾಗೆಯೇ ಇತ್ತು" ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಕಾರ್ಯಾಚರಣೆಯ ವೇಳೆ ಸಿಕ್ಕ ಭಗವದ್ಗೀತೆ ಪುಸ್ತಕವನ್ನು ವ್ಯಕ್ತಿಯೊಬ್ಬರು ತೆರೆದು ತೋರಿಸುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಒಟ್ಟಿನಲ್ಲಿ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, 1.1 ಮಿಲಿಯನ್‌ ವ್ಯೂವ್ಸ್‌ ಪಡೆದುಕೊಂಡಿದೆ.