Manish Tewari: ಆಪರೇಷನ್ ಸಿಂದೂರ್ ಚರ್ಚೆಯಿಂದ ಮನೀಶ್ ತಿವಾರಿ ಹೊರಗೆ; ಹಾಡಿನ ಮೂಲಕ ಕಾಂಗ್ರೆಸ್‌ಗೆ ತಿವಿದ ನಾಯಕ
ಸಂಸತ್‌ನಲ್ಲಿ ಆಪರೇಷನ್ ಸಿಂದೂರದ ಕುರಿತು ಚರ್ಚೆ ನಡೆಯುತ್ತಿದೆ. ಅಮೆರಿಕದಲ್ಲಿಯೂ ಆಪರೇಷನ್ ಸಿಂಧೂರ್ ಬಗ್ಗೆ ಮಾತನಾಡಿ ಬಂದಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ಸಂಸತ್‌ನಲ್ಲಿ ಮಾತನಾಡಲು ಅವಕಾವಿರಲಿಲ್ಲ. ಕೇಂದ್ರ ಸರ್ಕಾರವು ಜಾಗತಿಕ ಮಟ್ಟದಲ್ಲಿ 'ಆಪರೇಷನ್ ಸಿಂದೂರ್' ಯಶಸ್ಸನ್ನು ಪ್ರದರ್ಶಿಸಲು ನಿಯೋಗಗಳನ್ನು ಕಳುಹಿಸಿತ್ತು, ಇದರಲ್ಲಿ ಕಾಂಗ್ರೆಸ್ ಸಂಸದರಾದ ಶಶಿ ತರೂರ್, ಮನೀಶ್ ತಿವಾರಿ, ಅಮರ್ ಸಿಂಗ್, ಆನಂದ್ ಶರ್ಮಾ ಮತ್ತು ಸಲ್ಮಾನ್ ಖುರ್ಷಿದ್ ಸೇರಿದ್ದಾರೆ.


ನವದೆಹಲಿ: ಸಂಸತ್‌ನಲ್ಲಿ ಆಪರೇಷನ್ ಸಿಂದೂರದ (Opp Sindoor) ಕುರಿತು ಚರ್ಚೆ ನಡೆಯುತ್ತಿದೆ. ಅಮೆರಿಕದಲ್ಲಿಯೂ ಆಪರೇಷನ್ ಸಿಂಧೂರ್ ಬಗ್ಗೆ ಮಾತನಾಡಿ ಬಂದಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ಸಂಸತ್‌ನಲ್ಲಿ ಮಾತನಾಡಲು ಅವಕಾವಿರಲಿಲ್ಲ. ಈ ಚರ್ಚೆಯಲ್ಲಿ ರಾಹುಲ್ ಗಾಂಧಿ, ಗೌರವ್ ಗೊಗೊಯ್, ಪ್ರಿಯಾಂಕಾ ಗಾಂಧಿ ವಾದ್ರಾ, ದೀಪೇಂದರ್ ಹೂಡಾ, ಪರಿಣೀತಿ ಶಿಂಧೆ, ಶಫಿ ಪರಂಬಿಲ್, ಮಾಣಿಕ್ಕಂ ಟ್ಯಾಗೋರ್ ಮತ್ತು ರಾಜಾ ಬರಾಡ್ ಭಾಗವಹಿಸಿದ್ದಾರೆ. ಈ ಕುರಿತು ತರೂರ್ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಸರ್ವ ಪಕ್ಷ ನಿಯೋಗದ ಸದಸ್ಯರಾಗಿದ್ದ ಮತ್ತೊಬ್ಬ ಸಂಸದನಿಗೆ ಈ ಅವಕಾಶ ಕೈ ತಪ್ಪಿದೆ. ಪಕ್ಷದ ಹಿರಿಯ ನಾಯಕರಾದ ಶಶಿ ತರೂರ್ ಮತ್ತು ಮನೀಶ್ ತಿವಾರಿ (Manish Tewari) ಅವರಿಗೆ ಸಂಸತ್ತಿನಲ್ಲಿ ನಡೆದ ಚರ್ಚೆಯ ಸಮಯದಲ್ಲಿ ಮಾತನಾಡಲು ಕಾಂಗ್ರೆಸ್ ಅವಕಾಶ ನೀಡಲಿಲ್ಲ. ಈಗ ಈ ವಿಷಯದ ಬಗ್ಗೆ ಮನೀಶ್ ತಿವಾರಿ ಟೀಕೆ ಮಾಡಿದ್ದಾರೆ.
ಕಾಂಗ್ರೆಸ್ ಸಂಸದ ಮನೋಜ್ ತಿವಾರಿ ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್' ನಲ್ಲಿ ಸುದ್ದಿ ವರದಿಯ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಇದರೊಂದಿಗೆ, 1970 ರ ಹಿಟ್ ಬಾಲಿವುಡ್ ಚಿತ್ರ 'ಪುರಬ್ ಔರ್ ಪಶ್ಚಿಮ್ ಹಾಡಿನ ಸಾಲೊಂದನ್ನು ಬರೆದಿದ್ದಾರೆ. "ಹೈ ಪ್ರೀತ್ ಜಹಾಂ ಕಿ ರೀತ್ ಸದಾ, ಮೈ ಗೀತ್ ವಹಾಂ ಕೆ ಗಾತಾ ಹೂಂ, ಭಾರತ್ ಕಾ ರೆಹ್ನೆ ವಾಲಾ ಹೂಂ, ಭಾರತ್ ಕಿ ಬಾತ್ ಸುನಾತಾ ಹೂಂ. ಜೈ ಹಿಂದ್ (ನಾನು ಭಾರತದ ನಿವಾಸಿ, ಮತ್ತು ನಾನು ಭಾರತದ ವೈಭವದ ಬಗ್ಗೆ ಮಾತನಾಡುತ್ತೇನೆ) ಎಂದು ಬರೆದಿದ್ದಾರೆ.
ಕೇಂದ್ರ ಸರ್ಕಾರವು ಜಾಗತಿಕ ಮಟ್ಟದಲ್ಲಿ 'ಆಪರೇಷನ್ ಸಿಂದೂರ್' ಯಶಸ್ಸನ್ನು ಪ್ರದರ್ಶಿಸಲು ನಿಯೋಗಗಳನ್ನು ಕಳುಹಿಸಿತ್ತು, ಇದರಲ್ಲಿ ಕಾಂಗ್ರೆಸ್ ಸಂಸದರಾದ ಶಶಿ ತರೂರ್, ಮನೀಶ್ ತಿವಾರಿ, ಅಮರ್ ಸಿಂಗ್, ಆನಂದ್ ಶರ್ಮಾ ಮತ್ತು ಸಲ್ಮಾನ್ ಖುರ್ಷಿದ್ ಸೇರಿದ್ದಾರೆ. ಆದಾಗ್ಯೂ, ಸಂಸತ್ತಿನಲ್ಲಿ 'ಆಪರೇಷನ್ ಸಿಂದೂರ್' ಬಗ್ಗೆ ಚರ್ಚಿಸುತ್ತಿರುವಾಗ, ಕಾಂಗ್ರೆಸ್ ಪಕ್ಷದ ಸ್ಪೀಕರ್‌ಗಳ ಪಟ್ಟಿಯಲ್ಲಿ ಯಾವುದೇ ನಾಯಕ ಸ್ಥಾನ ಪಡೆದಿಲ್ಲ.
ಈ ಸುದ್ದಿಯನ್ನೂ ಓದಿ: Shashi Tharoor: ಇಂದು ಮೌನವ್ರತ... ಮತ್ತೆ ಸ್ವಪಕ್ಷದ ವಿರುದ್ಧ ನಿಂತ್ರಾ ಶಶಿ ತರೂರ್? ʻಆಪರೇಷನ್ ಸಿಂದೂರ್ʼ ಚರ್ಚೆಗೆ ಹಿಂದೇಟು?
ಭಾರತೀಯ ಜನತಾ ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಕೂಡ ಇದೇ ವರದಿಗೆ ಪ್ರತಿಕ್ರಿಯಿಸಿ, ರಾಷ್ಟ್ರಕ್ಕಾಗಿ ಮಾತನಾಡುವ ಜನರಿಗೆ ಕಾಂಗ್ರೆಸ್‌ನಲ್ಲಿ ಸ್ಥಾನವಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಪಕ್ಷವು ರಾಷ್ಟ್ರೀಯತೆಯನ್ನು ಅಪರಾಧವೆಂದು ಪರಿಗಣಿಸುತ್ತದೆ ಎಂದು ಮಾಳವೀಯ ಹೇಳಿದರು. "ಭಾರತದ ಪರವಾಗಿ ನಿಲ್ಲುವುದು, ಭಯೋತ್ಪಾದನೆಯನ್ನು ಖಂಡಿಸುವುದು, ನಮ್ಮ ಸಶಸ್ತ್ರ ಪಡೆಗಳನ್ನು ಬೆಂಬಲಿಸುವುದು - ಇವೆಲ್ಲವೂ ಇಂದಿನ ಕಾಂಗ್ರೆಸ್‌ನಲ್ಲಿ ಇಲ್ಲ ಎಂದು ಅವರು ಕಿಡಿ ಕಾರಿದ್ದಾರೆ.