Indian Air Force: ಭಾರತದ ಬಳಿ ಕೇವಲ 522 ಫೈಟರ್ ಜೆಟ್‌ಗಳು... ಪಾಕ್, ಚೀನಾದಲ್ಲಿ ಎಷ್ಟಿವೆ ಗೊತ್ತಾ?
ಭಾರತದ ಸೇನಾ (Indian Air Force) ಸಾಮರ್ಥ್ಯ ಕುಸಿಯುತ್ತಿದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಯಾಕೆಂದರೆ ನೆರೆಯ ಶತ್ರು ರಾಷ್ಟ್ರಗಳು ಐದನೇ ತಲೆಮಾರಿನ ಯುದ್ಧವಿಮಾನ ಹೊಂದುವಲ್ಲಿ ದಾಪುಗಾಲು ಇಡುತ್ತಿದ್ದರೂ ಭಾರತ ಇನ್ನೂ ನಾಲ್ಕನೇ ತಲೆಮಾರಿನ ಯುದ್ಧ ವಿಮಾನ ಖರೀದಿಗೆ ಈಗಷ್ಟೇ ಮುಂದಾಗಿದೆ. ಇದರಿಂದ ಭವಿಷ್ಯದಲ್ಲಿ ಭಾರತಕ್ಕೆ ಬಹುದೊಡ್ಡ ಅಪಾಯ ಎದುರಾದರೂ ಅಚ್ಚರಿ ಇಲ್ಲ ಎನ್ನುತ್ತಾರೆ ತಜ್ಞರು.


ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಪಾಕಿಸ್ತಾನದ ವಿರುದ್ಧ ಸಮರ ಸಾರಿದ ಭಾರತೀಯ ವಾಯು ಸೇನೆಯು (Indian Air Force) ಆಪರೇಷನ್ ಸಿಂದೂರ್ ಹೆಸರಿನಲ್ಲಿ ಗಡಿಯಾಚೆಗಿನ ದಾಳಿಯನ್ನು (Fighter Jets) ಕೇವಲ ನಾಲ್ಕು ದಿನಗಳಲ್ಲಿ ಮಾಡಿ ಮುಗಿಸಿತ್ತು. ಇದರಿಂದ ವಿಶ್ವದಾದ್ಯಂತ ಭಾರತೀಯ ವಾಯು ಸೇನೆಯ ಸಾಮರ್ಥ್ಯದ ಬಗ್ಗೆ ಪ್ರಶಂಸೆ ವ್ಯಕ್ತವಾಗಿರುವುದು ಮಾತ್ರವಲ್ಲದೆ ಭಾರತೀಯ ವಾಯು ಸೇನೆ ಹೊಂದಿರುವ ಶಸ್ತ್ರಾಸ್ತ್ರಗಳ ( India’s combat aircraft) ಕುರಿತು ಚರ್ಚೆ ಪ್ರಾರಂಭವಾಗಿದೆ. ಇತ್ತೀಚೆಗೆಷ್ಟೇ ಭಾರತೀಯ ವಾಯು ಸೇನೆ ಸೇರಿರುವ ಅಮೆರಿಕದ ಎಫ್-35 (F-35) ದೇಶದ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
ಪಾಕಿಸ್ತಾನದಲ್ಲಿದ್ದ ಭಯೋತ್ಪಾದಕ ಮೂಲಸೌಕರ್ಯಕ್ಕೆ ಭಾರಿ ಹೊಡೆತವನ್ನು ಭಾರತೀಯ ಸೇನೆ ನೀಡಿದ್ದರೂ ನೆರೆಯ ಶತ್ರು ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಯುದ್ಧ ವಿಮಾನ, ನೌಕಾಪಡೆ ಹೊಂದಿರುವ ಸಾಮರ್ಥ್ಯದ ಪ್ರಮಾಣ ಇಳಿಕೆಯಾಗುತ್ತದೆ. ಆದರೆ ಚೀನಾ, ಪಾಕಿಸ್ತಾನಗಳು ಇದನ್ನು ಹೆಚ್ಚಿಸುವ ಪ್ರಯತ್ನವನ್ನು ಮುಂದುವರಿಸಿದ್ದಾರೆ.
ಚೀನಾ ಮತ್ತು ಪಾಕಿಸ್ತಾನದ ಗಾಡಿಗಳಲ್ಲಿ ದೇಶವನ್ನು ರಕ್ಷಿಸಲು ಭಾರತೀಯ ವಾಯುಪಡೆ (IAF) 42 ಫೈಟರ್ ಸ್ಕ್ವಾಡ್ರನ್‌ಗಳನ್ನು ನಿರ್ವಹಿಸಬೇಕಾಗಿದೆ. ಆದರೆ ಇದರಲ್ಲಿ ಕೇವಲ 31 ಮಾತ್ರ ವಾಯುಪಡೆ ಬಳಿ ಇದೆ. ಇದು ಇನ್ನಷ್ಟು ಇಳಿಕೆಯಾಗಲಿದೆ. ಯಾಕೆಂದರೆ ಈಗಾಗಲೇ ಮಿಗ್ -21ಗಳ ಎರಡು ಸ್ಕ್ವಾಡ್ರನ್‌ಗಳು ನಿವೃತ್ತಿಯನ್ನು ಘೋಷಿಸಿವೆ. ಇದರಿಂದ ಫೈಟರ್ ಸ್ಕ್ವಾಡ್ರನ್‌ಗಳ ಬಲ 29ಕ್ಕೆ ಇಳಿಕೆಯಾಗಲಿದೆ. ಇದರಿಂದ ಸುಮಾರು 522 ಫೈಟರ್ ಜೆಟ್‌ಗಳಿಗೆ ಕಡಿಮೆಯಾಗಲಿದೆ.
ಚೀನಾ ಸುಮಾರು 66 ಸ್ಕ್ವಾಡ್ರನ್‌ಗಳನ್ನು ಹೊಂದಿದೆ. ಇದು ಸುಮಾರು 1,200 ಫೈಟರ್ ಜೆಟ್ ಗಳನ್ನೂ ನಿರ್ವಹಿಸುತ್ತವೆ. ಚೀನಾದ ಕೆಲವು ಘಟಕಗಳು 20 ಜೆಟ್‌ಗಳನ್ನು ಒಳಗೊಂಡಿವೆ. ಪಾಕಿಸ್ತಾನ 25 ಸ್ಕ್ವಾಡ್ರನ್‌ಗಳನ್ನು ಅಂದರೆ ಸರಿಸುಮಾರು 450 ಫೈಟರ್ ಜೆಟ್‌ಗಳನ್ನು ಒಳಗೊಂಡಿದೆ. ಚೀನಾ- ಪಾಕಿಸ್ತಾನ ಮಿಲಿಟರಿ ಸೇರಿದರೆ ಅವುಗಳು ಒಟ್ಟು 1,650 ಫೈಟರ್ ಜೆಟ್‌ಗಳನ್ನು ಸೇರಿಸಲಿದ್ದು, ಇದು ಭಾರತದ ಪ್ರಸ್ತುತ ಫ್ಲೀಟ್‌ಗಿಂತ ಮೂರು ಪಟ್ಟು ಹೆಚ್ಚಾಗಿರುತ್ತದೆ.
ಇದು ಭಾರತೀಯ ವಾಯುಪಡೆಗೆ ತಿಳಿಯದೇ ಇರುವ ವಿಚಾರವೇನಲ್ಲ. ಆದರೆ ಏಕಾಏಕಿ ಫೈಟರ್ ಜೆಟ್‌ಗಳನ್ನು ನಿರ್ಮಿಸಿ ತರಲು ಸಾಧ್ಯವಿಲ್ಲ. ಹೀಗಾಗಿ ಭಾರತವು 2016ರಲ್ಲೇ ರಫೇಲ್ ಒಪ್ಪಂದಕ್ಕೆ ಸಹಿ ಮಾಡಿದೆ. ಈ ಮೂಲಕ ಫ್ರಾನ್ಸ್‌ನಿಂದ 36 ಜೆಟ್‌ಗಳನ್ನು ಒಟ್ಟು 4.68 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಖರೀದಿಸಿದೆ. ಈ ಒಪ್ಪಂದದನ್ವಯ ಪ್ರತಿ ವಿಮಾನದ ಬೆಲೆ ಸರಿಸುಮಾರು 1,600 ಕೋಟಿ ರೂ. ಒಂದು ವೇಳೆ ಭಾರತವು ಉನ್ನತ ದರ್ಜೆಯ ವಿಮಾನ ಆಮದು ಮಾಡಿಕೊಳ್ಳುವ ಬಗ್ಗೆ ಯೋಜನೆ ಮಾಡಿದರೆ ಮತ್ತೆ ಹೆಚ್ಚುವರಿಯಾಗಿ 4.68 ಲಕ್ಷ ಕೋಟಿ ರೂ. ಮೀಸಲಿಡಬೇಕಾಗುವುದು.
ತನ್ನದೇ ಆದ ಫೈಟರ್ ಜೆಟ್ ಹೊಂದಲು ಬಯಸುತ್ತಿದೆ ಭಾರತ
ಯುಎಸ್, ರಷ್ಯಾ ಮತ್ತು ಚೀನಾ ಮಾತ್ರ ಪ್ರಸ್ತುತ ಐದನೇ ತಲೆಮಾರಿನ ಯುದ್ಧವಿಮಾನಗಳನ್ನು ತಯಾರಿಸುತ್ತಿವೆ. ಈಗಾಗಲೇ ಭಾರತಕ್ಕೆ ಯುಎಸ್ ಎಫ್ -35 ಅನ್ನು ನೀಡಿದೆ. ಇದರ ಪ್ರತಿ ಜೆಟ್ 2,000 ಕೋಟಿ ರೂ. ಗಿಂತ ಹೆಚ್ಚು ಖರ್ಚಾಗುವುದರಿಂದ ಇದು ತುಂಬಾ ದುಬಾರಿಯಾಗಿದೆ. ಮಾತ್ರವಲ್ಲದೆ ಭಾರತದಲ್ಲಿ ಪ್ರಸ್ತುತ ಇದಕ್ಕೆ ಸೂಕ್ತವಾದ ವ್ಯವಸ್ಥೆಗಳೂ ಇಲ್ಲ. ಹೀಗಾಗಿ ರಷ್ಯಾದ ಸುಖೋಯ್ ಸು -57 ಸ್ಟೆಲ್ತ್ ಫೈಟರ್ ಭಾರತಕ್ಕಿರುವ ಏಕೈಕ ಆಯ್ಕೆಯಾಗಿದೆ. ದೇಶವು ತನ್ನದೇ ಆದ ಫೈಟರ್ ಜೆಟ್ ಹೊಂದಲು ಬಯಸುತ್ತಿದ್ದರೂ ಅದರ ಯೋಜನೆಯನ್ನು ಕಾರ್ಯಗತಗೊಳಿಸುವುದು ಅತ್ಯಂತ ಕಠಿಣವಾಗಿದೆ.
1984ರಲ್ಲಿ ತೇಜಸ್ ನಿರ್ಮಾಣಕ್ಕೆ ಕೈಹಾಕಿರುವ ಭಾರತ ಈ ನಿಟ್ಟಿನಲ್ಲಿ ಪೂರ್ಣ ಪ್ರಗತಿ ಸಾಧಿಸಿಲ್ಲ. ಇದರಲ್ಲಿ ಎಚ್‌ಎಎಲ್ 83 ತೇಜಸ್ ಎಂಕೆ -1ಎ ಜೆಟ್‌ಗಳು ನಿರ್ಮಾಣಗೊಂಡಿದ್ದರೂ ವಿತರಣೆಯಾಗಿಲ್ಲ. ಎಂಕೆ -2 ಅಭಿವೃದ್ಧಿ ಹಂತದಲ್ಲಿದೆ. ಐದನೇ ತಲೆಮಾರಿನ ಸ್ಟೆಲ್ತ್ ಜೆಟ್ - AMCA (ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್) ಯೋಜನೆ 2035 ರ ವೇಳೆಗೆ ಉತ್ಪಾದನೆಯನ್ನು ಪ್ರಾರಂಭಿಸಬಹುದು. ಇದು ಬಹಳಷ್ಟು ವಿಳಂಬವಾಗುತ್ತದೆ. ಆಗ ನೆರೆಯ ರಾಷ್ಟ್ರಗಳು ಮತ್ತೊಂದು ಹೆಜ್ಜೆ ಮುಂದೆ ಹೋಗಿರುತ್ತದೆ.
ತೊಂದರೆ ಏನು?
ತೇಜಸ್ ನಿರ್ಮಾಣ ಕಾರ್ಯವು ಅಮೆರಿಕನ್ ಜಿಇ ಎಂಜಿನ್‌ಗಳನ್ನು ಅವಲಂಬಿಸಿದೆ. ಆದರೆ ಅವುಗಳ ಪೂರೈಕೆ ವಿಳಂಬವಾಗುತ್ತಿದೆ. ಚೀನಾವು ಈಗಾಗಲೇ ಸುಮಾರು 2005ನೇ ತಲೆಮಾರಿನ J-20 ಸ್ಟೆಲ್ತ್ ಜೆಟ್‌ಗಳ ನಿರ್ಮಾಣಕ್ಕೆ ಮುಂದಾಗಿದ್ದು, ಇದನ್ನು 2030ರ ವೇಳೆಗೆ ದ್ವಿಗುಣಗೊಳಿಸಲು ಯೋಜನೆ ಹಾಕಿಕೊಂಡಿದೆ. ಅದು ಇವುಗಳನ್ನು ಪಾಕಿಸ್ತಾನಕ್ಕೆ ರಫ್ತು ಮಾಡಬಹುದು. ಆಗ ಭಾರತಕ್ಕೆ ಎದುರಾಳಿಗಳ ಆತಂಕ ಹೆಚ್ಚಾಗುವುದರಲ್ಲಿ ಸಂದೇಹವಿಲ್ಲ. ಪಾಕಿಸ್ತಾನದ ನೌಕಾಪಡೆಯು ಪ್ರಸ್ತುತ F-16 ಮತ್ತು JF-17 ಗಳನ್ನು ಒಳಗೊಂಡಿದೆ. ಇದು ಚೀನಾದ ಹೆಚ್ಚು ಸುಧಾರಿತ ತಂತ್ರಜ್ಞಾನವನ್ನು ಒಳಗೊಂಡಿದೆ.
ಭಾರತದ ಬಳಿ ಇರುವ ಜೆಟ್ ಸುಖೋಯ್ ಸು-30MKI ನಾಲ್ಕನೇ ತಲೆಮಾರಿನ ತಂತ್ರಜ್ಞಾನವನ್ನು ಆಧರಿಸಿದೆ. ಇದು ಐದನೇ ತಲೆಮಾರಿನ ಯುದ್ಧವಿಮಾನಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ತನ್ನದೇ ಆದ ಯುದ್ಧ ವಿಮಾನ ಹೊಂದುವುದು ವೆಚ್ಚ ಕಡಿಮೆ ಮಾಡುತ್ತದೆ. ಇದರಿಂದ ದೇಶೀಯ ರಕ್ಷಣಾ ಉದ್ಯಮವೂ ಬಲಗೊಳ್ಳುತ್ತದೆ. ಆದರೆ ಸಮಯ ನಿಲ್ಲುವುದಿಲ್ಲ. ಈ ವೇಳೆ ವಿಶ್ವ ಆರನೇ ತಲೆಮಾರಿನ ವಿಮಾನಗಳನ್ನು ಹೊಂದಿರುತ್ತದೆ. ಯಾಕೆಂದರೆ ಭಾರತ ಈಗ ಐದನೇ ತಲೆ ಮಾರಿನ ಸ್ಕ್ವಾಡ್ರನ್‌ಗಳನ್ನು ಹೊಂದಿರಬೇಕಿತ್ತು. ಆದರೆ ಇದುವೇ ಇನ್ನು ಸಾಧ್ಯವಾಗಿಲ್ಲ. ಎರಡರಿಂದ ಮೂರು ಐದನೇ ತಲೆಮಾರಿನ ಯುದ್ಧವಿಮಾನಗಳ ಸ್ಕ್ವಾಡ್ರನ್‌ಗಳನ್ನು ಪಡೆಯಲು ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದ್ದರೂ ಅದು ಯಾವುದು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.