Shashi Tharoor: ಇಂದು ಮೌನವ್ರತ... ಮತ್ತೆ ಸ್ವಪಕ್ಷದ ವಿರುದ್ಧ ನಿಂತ್ರಾ ಶಶಿ ತರೂರ್? ʻಆಪರೇಷನ್ ಸಿಂದೂರ್ʼ ಚರ್ಚೆಗೆ ಹಿಂದೇಟು?
Discussion on Op Sindoor: ಇಂದು ಸಂಸತ್ ಅಧಿವೇಶನದಲ್ಲಿ ನಿರ್ಧರಿಸಲಾಗಿದ್ದ ಆಪರೇಷನ್ ಸಿಂದೂರ್ ಮೇಲಿನ ಚರ್ಚೆ ವೇಳೆ ಕಾಂಗ್ರೆಸ್ ಪರ ಧ್ವನಿ ಎತ್ತಲು ಶಶಿ ತರೂರ್ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರಕ ಎಂಬಂತೆ ಅವರು ಸಂಸತ್‌ಗೆ ಎಂಟ್ರಿ ಕೊಡುವ ಮುನ್ನ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ತಾವು ಇವತ್ತು ಮೌನವ್ರತ ಎಂದಿದ್ದಾರೆ.


ನವದೆಹಲಿ: ಇತ್ತೀಚಿನ ಕೆಲವು ದಿನಗಳಿಂದ ತಮ್ಮ ಅಚ್ಚರಿ ನಡೆಯಿಂದ ಸ್ವಪಕ್ಷದವರ ಕೆಂಗಣ್ಣಿಗೆ ಗುರಿಯಾಗುತ್ತಿರುವ ಕಾಂಗ್ರೆಸ್ ನಾಯಕ ಶಶಿ ತರೂರ್(Shashi Tharoor) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಇಂದು ಸಂಸತ್ ಅಧಿವೇಶನದಲ್ಲಿ ನಿರ್ಧರಿಸಲಾಗಿದ್ದ ಆಪರೇಷನ್ ಸಿಂದೂರ್(Operation Sindoor) ಮೇಲಿನ ಚರ್ಚೆ ವೇಳೆ ಕಾಂಗ್ರೆಸ್ ಪರ ಧ್ವನಿ ಎತ್ತಲು ಶಶಿ ತರೂರ್ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರಕ ಎಂಬಂತೆ ಅವರು ಸಂಸತ್‌ಗೆ ಎಂಟ್ರಿ ಕೊಡುವ ಮುನ್ನ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ತಾವು ಇವತ್ತು ಮೌನವ್ರತ ಎಂದಿದ್ದಾರೆ. ಆ ಮೂಲಕ ತಾವು ಪಕ್ಷದ ನಿಲುವಿಗೆ ಬೆಂಬಲ ಕೊಡುತ್ತಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.
ಸಂಸತ್‌ಗೆ ಪ್ರವೇಶಿಸುವ ವೇಳೆ ಕೆಲವು ಪತ್ರಕರ್ತರು ನೀವು ಇಂದು ಆಪರೇಷನ್ ಸಿಂದೂರ್ ವಿಚಾರ ಮೇಲೆ ನಡೆಯುವ ಚರ್ಚೆಯಲ್ಲಿ ಭಾಗಿಯಾಗುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ತರೂರ್, ಇವತ್ತು ಮೌನವ್ರತ... ಮೌನವ್ರತ ಎಂದು ಹೇಳುತ್ತಾ ಪ್ರಶ್ನೆಯನ್ನು ತಳ್ಳಿಹಾಕಿದ್ದಾರೆ.
ಏತನ್ಮಧ್ಯೆ, ಭಾರತದ 'ಆಪರೇಷನ್ ಸಿಂಧೂರ್' ಬಗ್ಗೆ ಸಂಸತ್ತಿನಲ್ಲಿ ಮಾತನಾಡಲು ಕೇಳಿಕೊಂಡರೂ ಅದು ಯಶಸ್ವಿಯಾಗಿದೆ ಎಂದು ತರೂರ್ ಸಮರ್ಥಿಸಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವಿನ ಕುರಿತು ವಿವಿಧ ದೇಶಗಳಿಗೆ ಬಹುಪಕ್ಷಗಳ ನಿಯೋಗವನ್ನು ಮುನ್ನಡೆಸಿದ ಅನುಭವದ ಕುರಿತು ಮಂಗಳವಾರ ಸದನದಲ್ಲಿ ಮಾತನಾಡಲು ಸ್ಪೀಕರ್ ತರೂರ್ ಅವರನ್ನು ಆಹ್ವಾನಿಸಬಹುದು ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: Shashi Tharoor: ಸ್ವಪಕ್ಷದ ಕಾರ್ಯಕ್ರಮಗಳಿಗೆ ಶಶಿ ತರೂರ್‌ಗೆ ನೋ ಎಂಟ್ರಿ!
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಮಿಲಿಟರಿ ಪ್ರತಿಕ್ರಿಯೆಯಾದ 'ಆಪರೇಷನ್ ಸಿಂಧೂರ್' ಕುರಿತು ಲೋಕಸಭೆಯಲ್ಲಿ ವಿಶೇಷ ಚರ್ಚೆ ನಡೆಯುತ್ತಿದೆ. ಆಡಳಿತ ಮೈತ್ರಿಕೂಟ ಮತ್ತು ವಿರೋಧ ಪಕ್ಷದ ಉನ್ನತ ನಾಯಕರ ನಡುವೆ ಸಂಸತ್ತಿನಲ್ಲಿಆಪರೇಷನ್ ಸಿಂದೂರ್ ಕುರಿತ ಚರ್ಚೆ ತಾರಕಕ್ಕೇರಿ ಸ್ಪೀಕರ್ ಅಧಿವೇಶವನವನ್ನು ಮುಂದೂಡಿದ್ದಾರೆ.