ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dowry Case: ವರದಕ್ಷಿಣೆಗೆ ಕಿರುಕುಳಕ್ಕೆ ಮತ್ತೊಂದು ಬಲಿ; ಚಿನ್ನದ ಸರಕ್ಕಾಗಿ ಮಹಿಳೆಯನ್ನು ಹೊಡೆದು ಕೊಂದ ಅತ್ತೆ-ಮಾವ

ಬಿಹಾರದಲ್ಲಿ ವರದಕ್ಷಿಣೆಗೆ ಕಿರುಕುಳಕ್ಕೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಬಿಹಾರದ ಖಗಾರಿಯಾ ಜಿಲ್ಲೆಯ ಬರ್ಖಂಡಿ ಟೋಲಾ ಗ್ರಾಮದಲ್ಲಿ 20 ವರ್ಷದ ಡಿ.ಸಿ. ಕುಮಾರಿ ಎಂಬಾಕೆಯನ್ನು ಅವರ ಅತ್ತೆ-ಮಾವ ಸೇರಿ ಕೊಲೆ ಮಾಡಿದ್ದಾರೆ. ವರದಕ್ಷಿಣೆಯಾಗಿ ಚಿನ್ನದ ಸರ ನೀಡಲು ವಿಳಂಬ ಮಾಡಿದ್ದರಿಂದ ಈ ಹತ್ಯೆ ನಡೆದಿದೆ.

ವರದಕ್ಷಿಣೆಗಾಗಿ ಮಹಿಳೆಯನ್ನು ಹೊಡೆದು ಕೊಂದ ಅತ್ತೆ-ಮಾವ

ಸಾಂದರ್ಭಿಕ ಚಿತ್ರ

Ramesh B Ramesh B Aug 27, 2025 4:20 PM

ಪಾಟ್ನಾ: ವರದಕ್ಷಿಣೆ ಕಿರುಕುಳಕ್ಕೆ ದೇಶದಲ್ಲಿ ಮತ್ತೊಂದು ಜೀವ ಬಲಿಯಾಗಿದೆ. ಬಿಹಾರದಲ್ಲಿ ನವವಿವಾಹಿತೆಯನ್ನು ಆಕೆಯ ಗಂಡನ ಮನೆಯವರು ಸೇರಿ ಕೊಲೆ ಮಾಡಿರುವ ಘಟನೆ ನಡೆದಿದ್ದು, ದೇಶ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ (Dowry Demand). ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ ಸಂಬಂಧಿಸಿದ ಅಪರಾಧಗಳ ಸಂಖ್ಯೆ ಹೆಚ್ಚುತ್ತಿರುವ ಮಧ್ಯೆ ಈ ಘಟನೆ ನಡೆದಿದೆ. ಬಿಹಾರದ ಖಗಾರಿಯಾ ಜಿಲ್ಲೆಯ ಬರ್ಖಂಡಿ ಟೋಲಾ ಗ್ರಾಮದಲ್ಲಿ 20 ವರ್ಷದ ಡಿ.ಸಿ. ಕುಮಾರಿ ಎಂಬಾಕೆಯನ್ನು ಅವರ ಅತ್ತೆ-ಮಾವ ಸೇರಿ ಕೊಲೆ ಮಾಡಿದ್ದಾರೆ. ವರದಕ್ಷಿಣೆಯಾಗಿ ಚಿನ್ನದ ಸರ ನೀಡಲು ವಿಳಂಬ ಮಾಡಿದ್ದರಿಂದ ಅತ್ತೆ-ಮಾಮ ಆಕೆಯನ್ನು ಕೊಲೆ ಮಾಡಿ ಮೃತದೇಹವನ್ನು ನೇತು ಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಸಂತ್ರಸ್ತೆಯು ಸುಮಾರು ಒಂದು ವರ್ಷದ ಹಿಂದೆ ವಿಭೀಷಣ ಯಾದವ್‌ನನ್ನು ವಿವಾಹವಾಗಿದ್ದರು. ಅವರ ಪತಿ ಮತ್ತು ಅತ್ತೆ-ಮಾವ ವರದಕ್ಷಿಣೆಗಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಡಿ.ಸಿ. ಕುಮಾರಿ ಅವರ ತಂದೆ ಮುಂಗೇರ್ ನಿವಾಸಿ ಜಾಗೋ ಯಾದವ್ ಆರೋಪಿಸಿದ್ದಾರೆ. ಸ್ವಲ್ಪ ದಿನಗಳ ನಂತರ ಅವರ ಬೇಡಿಕೆಗಳನ್ನೆಲ್ಲ ಈಡೇರಿಸುವುದಾಗಿ ಅತ್ತೆ-ಮಾವನಿಗೆ ಭರವಸೆ ನೀಡಿದ್ದರೂ ಅವರು ಅದಕ್ಕೆ ಒಪ್ಪಲಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Dowry Case: ವರದಕ್ಷಿಣೆಗಾಗಿ ಚಿತ್ರಹಿಂಸೆ; ಬಿಸಿ ಚಾಕುವನ್ನು ಪತ್ನಿ ಬಾಯಿಗಿಟ್ಟ ಪತಿರಾಯ

ʼʼಹಣ ಹೊಂದಿಸಲು ನಾನು ಎರಡು ತಿಂಗಳ ಸಮಯ ಕೇಳಿದೆ" ಎಂದು ಅವರು ಕಣ್ಣೀರು ಸುರಿಸುತ್ತ ತಿಳಿಸಿದ್ದಾರೆ. ಅವರು ಆಕೆಯನ್ನು ಕೊಲ್ಲುವುದಾಗಿ ಬೆದರಿಕೆ ಕೂಡ ಹಾಕಿದ್ದರು ಸಂಬಂಧಿಕರೊಬ್ಬರು ಹೇಳಿದ್ದಾರೆ. ಸಂತ್ರಸ್ತೆಯ ಸಂಬಂಧಿಕರು ಹೇಳುವಂತೆ ಆರೋಪಿ ಪತಿ ಆರಂಭದಲ್ಲಿ ಕೃಷಿ ಮಾಡಿತ್ತಿದ್ದ. ನಂತರ ಗಾಂಜಾ ಮತ್ತು ಮದ್ಯ ಮಾರಾಟ ಮಾಡಲು ಪ್ರಾರಂಭಿಸಿದ್ದ.

ಡಿ.ಸಿ. ಕುಮಾರಿ ಅವರ ಸಹೋದರ ಸಂದೀಪ್ ಕುಮಾರ್ ಮಾತನಾಡಿ, ಅತ್ತೆ ಮಾವ ಮೊದಲು ತನ್ನ ಸಹೋದರಿಯನ್ನು ಹೊಡೆದು ಕೊಂದು ನಂತರ ನೇಣು ಹಾಕಿರುವುದಾಗಿ ತಿಳಿಸಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ದೇಹದಾದ್ಯಂತ ಗಾಯದ ಗುರುತುಗಳಿವೆ ಎಂದು ಹೇಳಿದ್ದಾರೆ.

"ನಾವು ಅವರಿಗೆ ನಮ್ಮ ಕೈಲಾದಷ್ಟು ಕೊಟ್ಟೆವು. ಆದರೆ ಅವರು ಚಿನ್ನದ ಸರ ಮತ್ತು ವಾಹನಕ್ಕಾಗಿ ಬೇಡಿಕೆ ಇಡುತ್ತಲೇ ಇದ್ದರು. ನಾನು ಎರಡು ತಿಂಗಳ ಹಿಂದೆ ಮದುವೆಯಾಗಿದ್ದೆ. ಅದಕ್ಕಾಗಿಯೇ ಅವರ ಚಿನ್ನದ ಸರಕ್ಕಾಗಿ ಬೇಡಿಕೆ ಈಡೇರಿಸಲು ಸಾಧ್ಯವಾಗಲಿಲ್ಲ. ನಾವು ತಕ್ಷಣ ಸಾಧ್ಯವಿಲ್ಲ ಎಂದು ಹೇಳಿ ಎರಡು ತಿಂಗಳು ಸಮಯ ಕೇಳಿದೆವು. ಆದರೆ ಅವರು ಅವಳನ್ನು ಕೊಲೆ ಮಾಡಿದ್ದಾರೆ" ಎಂದು ಸಂದೀಪ್ ಕುಮಾರ್ ತಿಳಿಸಿದ್ದಾರೆ. ಈಗಾಗಲೇ ಅವರು ಪೊಲೀಸ್ ದೂರು ದಾಖಲಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ನಂತರ ಸಂತ್ರಸ್ತೆಯ ಮೃತದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದಾರೆ.

ನೋಯ್ಡಾ ವರದಕ್ಷಿಣೆ ಕೊಲೆ ಪ್ರಕರಣ

ನೋಯ್ಡಾ: ಆಗಸ್ಟ್ 22ರಂದು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ವರದಕ್ಷಿಣೆ ಕಿರುಕುಳದಿಂದಾಗಿ ಮಹಿಳೆಯೊಬ್ಬರನ್ನು ಜೀವಂತವಾಗಿ ಸುಟ್ಟುಹಾಕಿದ ಪ್ರಕರಣ ನಡೆದಿತ್ತು. ಕೊಲೆಯಾದ ನಿಕ್ಕಿ ಭಾಟಿ (26) ಅವರ ತಂದೆ ಭಿಕಾರಿ ಸಿಂಗ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ನಿಕ್ಕಿಯ ಪತಿ, ಆತನ ಸಹೋದರ, ತಾಯಿ ಮತ್ತು ತಂದೆಯನ್ನು ಬಂಧಿಸಿದ್ದಾರೆ.