ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಂತ್ರಸ್ತೆ ನಿಕ್ಕಿ ಭಾಟಿ ಅಣ್ಣನ ಮೇಲೆಯೂ ಕೇಳಿಬಂತು ವರದಕ್ಷಿಣೆ ಕಿರುಕುಳ ಆರೋಪ

29 ವರ್ಷದ ನಿಕ್ಕಿಯ ಪತಿ ವಿಪಿನ್​ ಮತ್ತು ಆತನ ತಂದೆ, ತಾಯಿ ಗುರುವಾರ ವರದಕ್ಷಿಣೆ ಬೇಡಿಕೆ ಇಟ್ಟು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಬಳಿಕ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಈ ಕುರಿತು ಮೃತಳ ಸಹೋದರಿ ನೀಡಿದ ದೂರಿನ ಮೇರೆಗೆ ಆರೋಪಿ ಪತಿಯನ್ನು ಬಂಧಿಸಲಾಗಿದೆ. ಆದರೆ ಇದೀಗ ಮೃತ ನಿಕ್ಕಿ ಕುಟುಂಬದ ಮೇಲೆಯೇ ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿದೆ.

ನೋಯ್ಡಾ ವರದಕ್ಷಿಣೆ ಕೊಲೆ ಪ್ರಕರಣ; ಹೊರಬಿತ್ತು ಆಘಾತಕಾರಿ ಮಾಹಿತಿ

ನಿಕ್ಕಿ ಭಾಟಿಯ

Profile Sushmitha Jain Aug 27, 2025 6:54 PM

ಲಖನೌ: ಗ್ರೇಟರ್ ನೋಯ್ಡಾದ (Greater Noida) ವರದಕ್ಷಿಣೆ (Dowry) ಸಾವಿನ ಪ್ರಕರಣ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಮತ್ತೊಂದು ಆಘಾತಕಾರಿ ಮಾಹಿತಿಯೊಂದು ಹೊರ ಬಿದ್ದಿದೆ. ನಿಕ್ಕಿ ಭಾಟಿ (Nikki Bhati) ಅವರ ಕುಟುಂಬವು ಪತಿ ವಿಪಿನ್ ಮತ್ತು ಮಾವನ ವರದಕ್ಷಿಣೆ ಕಿರುಕುಳದಿಂದ ಸಾವಿಗೀಡಾದಳು ಎಂದು ಆರೋಪಿಸಿತ್ತು. ಇದೀಗ ನಿಕ್ಕಿಯ ಸಹೋದರ ರೋಹಿತ್‌ ಮತ್ತು ಅವರ ತಂದೆ ತನಗೂ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ರೋಹಿತ್‌ ಪತ್ನಿ ಮೀನಾಕ್ಷಿ ಆರೋಪಿಸಿದ್ದಾರೆ.

ಮೀನಾಕ್ಷಿ ಅವರ ವಿವಾಹವು 2016ರಲ್ಲಿ ರೋಹಿತ್‌ನೊಂದಿಗೆ ನಡೆದಿತ್ತು. ನಿಕ್ಕಿಯ ಕುಟುಂಬವು ವರದಕ್ಷಿಣೆಗಾಗಿ ನನಗೆ ಕಿರುಕುಳ ನೀಡಿದೆ ಎಂದು ಅವರು ದೂರಿದ್ದಾರೆ. ತನ್ನ ತಂದೆ ಮದುವೆ ವೇಳೆ ಮಾರುತಿ ಸಿಯಾಜ್ ಕಾರು ಮತ್ತು 31 ತೊಲ ಚಿನ್ನ ನೀಡಿದ್ದರೂ, ರೋಹಿತ್‌ ಕುಟುಂಬವು ಸ್ಕಾರ್ಪಿಯೊ ಎಸ್‌ಯುವಿ ಬೇಡಿಕೆ ಇಟ್ಟಿತು ಎಂದು ಹೇಳಿದ್ದಾರೆ.

ನಿಕ್ಕಿ ಮತ್ತು ಆಕೆಯ ಸಹೋದರಿ ಕಾಂಚನ್ ಕೂಡ ತನ್ನ ಮೇಲೆ ಹಲ್ಲೆ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ. ರೋಹಿತ್ ತನ್ನ ಮೇಲೆ ಹಲ್ಲೆ ಮಾಡಿ, ಒಮ್ಮೆ ತನ್ನ ಸಹೋದರನ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಮೀನಾಕ್ಷಿ ದೂರಿದ್ದಾರೆ. ಎರಡು ಬಾರಿ ಗರ್ಭಪಾತಕ್ಕೆ ಒಳಗಾಗುವಂತೆ ಒತ್ತಾಯಿಸಲಾಯಿತು ಎಂದು ಅವರು ತಿಳಿಸಿದ್ದಾರೆ. ವಿಪಿನ್‌ನ ಕುಟುಂಬವು ಶ್ರೀಮಂತ ಮತ್ತು ಒಳ್ಳೆಯವರು ಎಂದು ಆಕೆ ಸಮರ್ಥಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಓದಿ: Viral News: ನೀಲಿ ಮೊಟ್ಟೆಯಿಟ್ಟ ನಾಟಿ ಕೋಳಿ; ದಾವಣಗೆರೆಯಲ್ಲಿ ನಡೆಯಿತು ವಿಚಿತ್ರ ಘಟನೆ

ನಿಕ್ಕಿಯನ್ನು ಆಕೆಯ ಆರು ವರ್ಷದ ಮಗ ಮತ್ತು ಸಹೋದರಿಯ ಮುಂದೆ ವಿಪಿನ್ ಮತ್ತು ಆತನ ಕುಟುಂಬವು ಕಿರುಕುಳ ನೀಡಿ, ಬೆಂಕಿ ಹಚ್ಚಿತು ಎಂದು ಆರೋಪಿಸಲಾಗಿದೆ. ಆಕೆಯ ಮಗ, “ನನ್ನ ಅಮ್ಮನ ಮೇಲೆ ಏನೋ ಸುರಿದರು. ಕಪಾಳಕ್ಕೆ ಹೊಡೆದು, ಲೈಟರ್‌ನಿಂದ ಬೆಂಕಿ ಹಚ್ಚಿದರು” ಎಂದು ಹೇಳಿದ್ದಾನೆ. ಈ ಘಟನೆಯ ಎರಡು ವಿಡಿಯೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿವೆ. ಇದರಲ್ಲಿ ನಿಕ್ಕಿಯನ್ನು ಹೊಡೆಯುವುದು, ಕೂದಲು ಎಳೆಯುವುದು ಮತ್ತು ಬೆಂಕಿ ಹಚ್ಚಿದ ನಂತರ ಆಕೆ ಕುಸಿದು ಬೀಳುವ ದೃಶ್ಯಗಳಿವೆ.

ನಿಕ್ಕಿಯ ಸಹೋದರಿ ಕಾಂಚನ್‌ ಅವರ ದೂರಿನ ಆಧಾರದ ಮೇಲೆ ವಿಪಿನ್ ಮತ್ತು ಆತನ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಿಪಿನ್, ಸಿರ್ಸಾ ಚೌರಾಹದ ಬಳಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಾಲಿಗೆ ಗುಂಡು ಹಾರಿಸಲಾಗಿದೆ. “ನಾನು ಯಾರನ್ನೂ ಕೊಂದಿಲ್ಲ, ಆಕೆ ಸ್ವತಃ ಸತ್ತಿದ್ದಾಳೆ” ಎಂದು ಆತ ಪಶ್ಚಾತ್ತಾಪವಿಲ್ಲದೆ ಹೇಳಿದ್ದಾನೆ. ವಿಪಿನ್‌ನ ಸಹೋದರ, ತಾಯಿ ಮತ್ತು ತಂದೆಯನ್ನು ಬಂಧಿಸಲಾಗಿದೆ.