Viral Video: ನೋಡ ನೋಡ್ತಿದ್ದಂತೇ ಕುಸಿದ ಗುಡ್ಡ; ಭೂಕುಸಿತದಿಂದ ಸ್ವಲ್ಪದರಲ್ಲೇ ಪಾರಾದ ಬಿಜೆಪಿ ಸಂಸದ, ವಿಡಿಯೋ ನೋಡಿ
ಉತ್ತರಾಖಂಡ ಮೇಘಸ್ಪೋಟಕ್ಕೆ ತತ್ತರಿಸಿ ಹೋಗಿದೆ. ಧಾರಾಕಾರ ಮಳೆಯಿಂದ ತತ್ತರಿಸಿರುವ ಗುಡ್ಡಗಾಡು ರಾಜ್ಯದ ಪರಿಸ್ಥಿತಿಯನ್ನು ಪರಿಶೀಲಿಸಲು ಭೇಟಿ ನೀಡಿದ್ದ ಉತ್ತರಾಖಂಡ ಬಿಜೆಪಿ ಸಂಸದ ಅನಿಲ್ ಬಲುನಿ, ಭೂಕುಸಿತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಬುಧವಾರ ತಡರಾತ್ರಿ ಚಮೋಲಿ ಜಿಲ್ಲೆಯಲ್ಲಿ ಮೇಘಸ್ಫೋಟ ಸಂಭವಿಸಿದ ನಂತರ ಕನಿಷ್ಠ 10 ಜನರು ಕಾಣೆಯಾಗಿದ್ದಾರೆ.

-

ಡೆಹ್ರಾಡೂನ್: ಉತ್ತರಾಖಂಡ ಮೇಘಸ್ಪೋಟಕ್ಕೆ ತತ್ತರಿಸಿ ಹೋಗಿದೆ. (Viral News) ಧಾರಾಕಾರ ಮಳೆಯಿಂದ ತತ್ತರಿಸಿರುವ ಗುಡ್ಡಗಾಡು ರಾಜ್ಯದ (Uttarakhand) ಪರಿಸ್ಥಿತಿಯನ್ನು ಪರಿಶೀಲಿಸಲು ಭೇಟಿ ನೀಡಿದ್ದ ಉತ್ತರಾಖಂಡ ಬಿಜೆಪಿ ಸಂಸದ ಅನಿಲ್ ಬಲುನಿ, ಭೂಕುಸಿತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ವಿಡಿಯೋವನ್ನು ಅವರು ಹಂಚಿಕೊಂಡಿದ್ದು, ಸಂಸದರು ಸ್ಥಳದಲ್ಲಿದ್ದಾಗಲೇ ಕಲ್ಲುಗಳು ಮತ್ತು ಭಗ್ನಾವಶೇಷಗಳು ಪರ್ವತದ ಕೆಳಗೆ ಉರುಳುತ್ತಿದ್ದಂತೆ ಬೆಟ್ಟವು ಕುಸಿಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವರ್ಷ ಉತ್ತರಾಖಂಡದಲ್ಲಿ ಸಂಭವಿಸಿದ ಭೀಕರ ಮೇಘಸ್ಫೋಟ ಮತ್ತು ಭೂಕುಸಿತಗಳು ಹಲವರನ್ನು ಬಲಿ ಪಡೆದಿದ್ದರೆ, ಹಲವರು ಬೀದಿ ಪಾಲಾಗಿದ್ದಾರೆ.
ನಿನ್ನೆ ಸಂಜೆ, ವಿಪತ್ತು ಪೀಡಿತ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದ ಭಯಾನಕ ದೃಶ್ಯವನ್ನು ನಾನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಈ ದೃಶ್ಯವು ನಮ್ಮ ಉತ್ತರಾಖಂಡವು ಈ ಸಮಯದಲ್ಲಿ ಎದುರಿಸುತ್ತಿರುವ ತೀವ್ರ ನೈಸರ್ಗಿಕ ವಿಕೋಪದ ಬಗ್ಗೆ ಹೇಳುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ. ನಾನು ಎಲ್ಲಾ ಜನರ ಸುರಕ್ಷಿತ ಜೀವನ, ಉತ್ತಮ ಆರೋಗ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುತ್ತೇನೆ. ಈ ವಿಪತ್ತಿನ ಸಮಯದಲ್ಲಿ, ಎಲ್ಲಾ ಅಧಿಕಾರಿಗಳು, NDRF-SDRF ಸಿಬ್ಬಂದಿ, ಆಡಳಿತ ಮತ್ತು ಸವಾಲಿನ ಸಂದರ್ಭಗಳಲ್ಲಿಯೂ ರಸ್ತೆಗಳಿಂದ ಅವಶೇಷಗಳನ್ನು ತೆರವುಗೊಳಿಸುವ ಕಾರ್ಮಿಕರ ಸಮರ್ಪಣೆಯನ್ನು ನಾನು ಪ್ರಶಂಸಿಸುತ್ತೇನೆ" ಎಂದು ಅವರು ಹೇಳಿದರು.
उत्तराखंड में इस वर्ष आई भीषण अतिवृष्टि और भूस्खलन ने इतने गहरे घाव दिए हैं, जिन्हें भरने में बहुत समय लगेगा।
— Anil Baluni (@anil_baluni) September 18, 2025
कल शाम आपदा प्रभावित क्षेत्र में भूस्खलन का एक भयावह दृश्य आप सभी के साथ साझा कर रहा हूं। यह दृश्य स्वयं बता रहा है कि हमारा उत्तराखंड इस समय कितनी भीषण प्राकृतिक आपदा… pic.twitter.com/fdTsXpPsm2
ಉತ್ತರಾಖಂಡದ ಹಲವಾರು ಜಿಲ್ಲೆಗಳಲ್ಲಿ ಭಾರಿ ಭೂಕುಸಿತಗಳು, ಮೇಘಸ್ಫೋಟಗಳು ಮತ್ತು ದಿಢೀರ್ ಪ್ರವಾಹ ಘಟನೆಗಳು ವರದಿಯಾಗಿದ್ದು, ಜನರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಬುಧವಾರ ತಡರಾತ್ರಿ ಚಮೋಲಿ ಜಿಲ್ಲೆಯಲ್ಲಿ ಮೇಘಸ್ಫೋಟ ಸಂಭವಿಸಿದ ನಂತರ ಕನಿಷ್ಠ 10 ಜನರು ಕಾಣೆಯಾಗಿದ್ದಾರೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಘಟನೆಯ ಬಗ್ಗೆ ಎಕ್ಸ್ ನಿಂದ ಮಾಹಿತಿ ನೀಡಿ, "ಚಮೋಲಿ ಜಿಲ್ಲೆಯ ನಂದನ್ ನಗರ ಘಾಟ್ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹತ್ತಿರದ ಮನೆಗಳಿಗೆ ಹಾನಿಯಾಗಿದೆ ಎಂಬ ದುಃಖಕರ ಸುದ್ದಿ ಬಂದಿದೆ. ಸ್ಥಳೀಯ ಆಡಳಿತ, ಮತ್ತು ಪೊಲೀಸ್ ತಂಡಗಳು ತಕ್ಷಣ ಸ್ಥಳಕ್ಕೆ ತಲುಪಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ" ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Cloudburst: ಚಮೋಲಿಯಲ್ಲಿ ಮುಂದುವರಿದ ಮಳೆ ಆರ್ಭಟ; ಮೇಘಸ್ಪೋಟಕ್ಕೆ 10 ಮಂದಿ ನಾಪತ್ತೆ
ರಾಜ್ಯ ಸರ್ಕಾರವು ಡೆಹ್ರಾಡೂನ್, ಚಂಪಾವತ್ ಮತ್ತು ಉಧಮ್ ಸಿಂಗ್ ನಗರಗಳಿಗೆ ರೆಡ್ ಅಲರ್ಟ್ ಘೋಷಿಸಿದ್ದು, ಸೆಪ್ಟೆಂಬರ್ 20 ರವರೆಗೆ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ವೈದ್ಯಕೀಯ ತಂಡ ಮತ್ತು ಮೂರು ಆಂಬ್ಯುಲೆನ್ಸ್‌ಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದ್ದು, ಚಮೋಲಿಯಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.