Physical Abuse: ನಾಲ್ಕು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ- ಶಾಲಾ ಮಹಿಳಾ ಸಿಬ್ಬಂದಿ ಅರೆಸ್ಟ್
ಮುಂಬೈನ ಗೋರೆಗಾಂವ್ ಶಾಲೆಯೊಂದರಲ್ಲಿ ನಾಲ್ಕು ವರ್ಷದ ವಿದ್ಯಾರ್ಥಿನಿ ಮೇಲೆ ಶಾಲಾ ಆವರಣದಲ್ಲೇ ಮಹಿಳಾ ಸಿಬ್ಬಂದಿಯೊಬ್ಬಳು ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ. ಈ ಕುರಿತು ಬಾಲಕಿ ಮನೆಯಲ್ಲಿ ದೂರು ನೀಡಿದ ಬಳಿಕ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದು, ಮಹಿಳೆಯನ್ನು ಬಂಧಿಸಲಾಗಿದೆ.

-

ಮುಂಬೈ: ಶಾಲೆಯಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ (Physical Abuse) ಎಸಗಿದ ಮಹಿಳಾ ಸಿಬ್ಬಂದಿಯನ್ನು (School Staff Arrested) ಪೊಲೀಸರು ಬಂಧಿಸಿದ್ದಾರೆ. ಮುಂಬೈನ (Mumbai) ಗೋರೆಗಾಂವ್‌ನಲ್ಲಿ (Goregaon) 40 ವರ್ಷದ ಮಹಿಳಾ ಶಾಲಾ ಸಿಬ್ಬಂದಿಯೊಬ್ಬಳು ಶಾಲಾ ಆವರಣದಲ್ಲಿ ನಾಲ್ಕು ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಳು. ಈ ಕುರಿತು ಬಾಲಕಿ ಮನೆಯವರಿಗೆ ತಿಳಿಸಿದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ. ಮಗುವಿನ ಪೋಷಕರ ನೀಡಿರುವ ದೂರಿನ ಮೇರೆಗೆ ಮಹಿಳಾ ಸಿಬ್ಬಂದಿಯನ್ನು ಕಳೆದ ಮಂಗಳವಾರ ಬಂಧಿಸಲಾಗಿದೆ.
ಮುಂಬೈನ ಗೋರೆಗಾಂವ್ ಶಾಲೆಯೊಂದರಲ್ಲಿ ನಾಲ್ಕು ವರ್ಷದ ವಿದ್ಯಾರ್ಥಿನಿಗೆ ಶಾಲಾ ಆವರಣದಲ್ಲೇ ಮಹಿಳಾ ಸಿಬ್ಬಂದಿಯೊಬ್ಬಳು ಲೈಂಗಿಕ ಕಿರುಕುಳ ನೀಡಿದ್ದಳು. ಈ ಘಟನೆ ಸೋಮವಾರ ಅಜ್ಜಿ ಬಾಲಕಿಯನ್ನು ಶಾಲೆಗೆ ಬಿಟ್ಟು ಹೋದ ಬಳಿಕ ನಡೆದಿದೆ. ಮಗುವಿನ ಪೋಷಕರ ಸೆಪ್ಟೆಂಬರ್ 16 ರಂದು ಈ ಕುರಿತು ದೂರು ನೀಡಿದ ಬಳಿಕ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಗೋರೆಗಾಂವ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಲಕಿ ಮನೆಗೆ ಹಿಂದಿರುಗಿದಾಗ ಆಕೆಯ ಖಾಸಗಿ ಭಾಗಗಳಲ್ಲಿ ನೋವು ಇದೆ ಎಂದು ಮನೆಯವರಿಗೆ ತಿಳಿಸಿದ್ದಳು. ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಬಾಲಕಿಯ ಕುಟುಂಬವು ಶಾಲಾ ಆಡಳಿತಕ್ಕೆ ಮಾಹಿತಿ ನೀಡಿ, ಪೊಲೀಸ್ ದೂರು ದಾಖಲಿಸಿದೆ.
ದೂರಿನ ಆಧಾರದ ಮೇರೆಗೆ ಪೊಲೀಸರು ಮಹಿಳೆ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆಕೆಯನ್ನು ಬಂಧಿಸಿದ್ದಾರೆ. ಮಹಿಳೆಯು ಈ ಶಾಲೆಯಲ್ಲಿ ಎರಡು ವರ್ಷಗಳಿಗೂ ಹೆಚ್ಚು ಕಾಲ ಉದ್ಯೋಗದಲ್ಲಿದ್ದಳು. ಶೌಚಾಲಯದಲ್ಲಿ ಮಹಿಳೆ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾಳೆ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸಿಸಿಟಿವಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದು, ಶಾಲೆಯ ಮೂವರು ಮಹಿಳಾ ಸಹಾಯಕ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: Narendra Modi: 75 ನೇ ಜನ್ಮದಿನಕ್ಕೆ ಪ್ರಧಾನಿಗೆ ಸ್ಪೆಷಲ್ ವಿಶ್; ಬುರ್ಜ್ ಖಲೀಫಾ ಮೇಲೆ ಬೆಳಗಿದ ಮೋದಿ ಭಾವಚಿತ್ರ
ಮುಖ್ಯೋಪಾಧ್ಯಾಯರ ಮೇಲೆ ಹಲ್ಲೆ
ಪಶ್ಚಿಮ ಬಂಗಾಳದ 24 ದಕ್ಷಿಣ ಪರಗಣ ಜಿಲ್ಲೆಯ ಸರ್ಕಾರಿ ಶಾಲೆಯ ಹಂಗಾಮಿ ಮುಖ್ಯೋಪಾಧ್ಯಾಯರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ತೃಣಮೂಲ ಕಾಂಗ್ರೆಸ್ ಪಂಚಾಯತ್ ಸದಸ್ಯರನ್ನು ಬುಧವಾರ ಬಂಧಿಸಲಾಗಿದೆ. ಪ್ರವಾಸಕ್ಕಾಗಿ ಹಣ ಸಂಗ್ರಹಿಸುವ ವಿವಾದದಿಂದಾಗಿ ಇದು ನಡೆದಿದೆ. ಕಾಕ್‌ಡ್ವಿಪ್‌ನ ಬೀರೇಂದ್ರ ವಿದ್ಯಾನಿಕೇತನದಲ್ಲಿ ಮಂಗಳವಾರ ವಿದ್ಯಾರ್ಥಿಗಳ ಮುಂದೆ ಹಂಗಾಮಿ ಮುಖ್ಯೋಪಾಧ್ಯಾಯರ ಮೇಲೆ ಶಾಲಾ ಆಡಳಿತ ಸಮಿತಿ (ಎಂಸಿ) ಅಧ್ಯಕ್ಷನಾಗಿರುವ ತ್ರಿದಿಬ್ ಬರುಯಿ ಎಂಬಾತ ಹಲ್ಲೆ ನಡೆಸಿದ್ದ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.