ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕಾರ್ಪೋರೇಟ್‌ ಕಂಪನಿಯಲ್ಲಿ ಇದೂ ಮಾಡ್ಬೇಕಾ? ವಿದೇಶಿ ಕ್ಲೈಂಟ್ಸ್‌ಗಾಗಿ ಡಾನ್ಸ್‌ ಮಾಡಿದ ಉದ್ಯೋಗಿಗಳು- ಈ ವಿಡಿಯೊ ನೋಡಿ

Corporate employees dance: ವಿದೇಶಿ ಕ್ಲೈಂಟ್‌ನನ್ನು ಸ್ವಾಗತಿಸಲು ಕಾರ್ಪೊರೇಟ್ ಉದ್ಯೋಗಿಗಳು ಕಚೇರಿಯಲ್ಲಿ ನೃತ್ಯ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 'ಮೈ ತೇರಾ ಬಾಯ್‌ಫ್ರೆಂಡ್' ಹಾಡಿಗೆ ಕುಣಿಯುತ್ತಾ ಕ್ಲೈಂಟ್ ಅನ್ನು ಸ್ವಾಗತಿಸಿದ್ದಾರೆ. ವೈರಲ್ ವಿಡಿಯೊ ನೋಡಿದ ನಂತರ ನೆಟ್ಟಿಗರು ಆಕ್ರೋಶಗೊಂಡಿದ್ದಾರೆ.

ವಿದೇಶಿ ಕ್ಲೈಂಟ್‌ ಸ್ವಾಗತಿಸಲು ಕಾರ್ಪೊರೇಟ್ ಉದ್ಯೋಗಿಗಳ ನೃತ್ಯ!

Priyanka P Priyanka P Jul 23, 2025 3:46 PM

ನವದೆಹಲಿ: ಕಚೇರಿಗಳಲ್ಲಿ ಏನಾದರೂ ಕಾರ್ಯಕ್ರಮವಿದ್ದರೆ ಹಾಡು, ಕುಣಿತವಿರುವುದು ಸಾಮಾನ್ಯ. ಇಲ್ಲೊಂದೆಡೆ ವಿದೇಶಿ ಕ್ಲೈಂಟ್‌ನನ್ನು ಸ್ವಾಗತಿಸಲು ಕಾರ್ಪೊರೇಟ್ ಉದ್ಯೋಗಿಗಳು ಕಚೇರಿಯಲ್ಲಿ ನೃತ್ಯ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೊ(Viral Video) ನೋಡಿದ ನಂತರ ನೆಟ್ಟಿಗರು ಆಕ್ರೋಶಗೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೊದಲ್ಲಿ ಪುರುಷರು ಮತ್ತು ಮಹಿಳಾ ಉದ್ಯೋಗಿಗಳು, ಅರ್ಜಿತ್ ಸಿಂಗ್ ಅವರ 'ಮೈ ತೇರಾ ಬಾಯ್‌ಫ್ರೆಂಡ್' ಹಾಡಿಗೆ ಕುಣಿಯುತ್ತಾ ಕ್ಲೈಂಟ್ ಅನ್ನು ಸ್ವಾಗತಿಸಿದ್ದಾರೆ. ಈ ನೃತ್ಯ ನೋಡಿದ ವಿದೇಶಿ ಕ್ಲೈಂಟ್ ಕೂಡ ಸಂತೋಷದಿಂದ ತಾವು ಕೂಡ ನಿಂತಲ್ಲೇ ಕುಣಿದಿದ್ದಾರೆ. ಈ ವಿಡಿಯೊ ಇದೀಗ ಭಾರಿ ವೈರಲ್ ಆಗಿದೆ.

ಈ ವಿಡಿಯೊವನ್ನು ನೋಡಿದ ಬಳಿಕ ರೆಡ್ಡಿಟ್‌ನಲ್ಲಿ ಬಳಕೆದಾರರು, ಭಾರತವು ಕಾರ್ಪೊರೇಟ್ ಕಚೇರಿಗಳನ್ನು ಅವಹೇಳನ ಮಾಡುವುದನ್ನು ನಿಲ್ಲಿಸಬೇಕು. ಇಂತಹ ಪ್ರದರ್ಶನವು ಇತರ ದೇಶಗಳು ಭಾರತೀಯ ಕಚೇರಿಗಳನ್ನು ಹೀನಾಯವಾಗಿ ಕಾಣುತ್ತವೆ ಮತ್ತು ಗಂಭೀರ ಕೆಲಸಕ್ಕೆ ಅರ್ಹವಲ್ಲ ಎಂದು ಭಾವಿಸುವಂತೆ ಮಾಡುತ್ತದೆ ಎಂದು ಬರೆದಿದ್ದಾರೆ.

ವಿಡಿಯೊದಲ್ಲಿ, ಉದ್ಯೋಗಿಗಳು ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಮತ್ತು ಅವರ ಸಹೋದ್ಯೋಗಿಗಳು ಅವರ ನೃತ್ಯಕ್ಕೆ ಹುರುಪು ನೀಡುತ್ತಿರುವುದನ್ನು ಸಹ ನೋಡಬಹುದು. ವಿದೇಶಿ ಕ್ಲೈಂಟ್ ಅಂತರ ಕಾಯ್ದುಕೊಂಡು ಮುಖದಲ್ಲಿ ನಗು ತುಂಬಿಕೊಂಡು ನೃತ್ಯವನ್ನು ಆನಂದಿಸುತ್ತಿರುವುದು ಕಂಡುಬಂದಿದೆ.

ವಿಡಿಯೊ ಇಲ್ಲಿದೆ:



ವಿಡಿಯೋ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಈ ನೃತ್ಯವನ್ನು ಭಾರತೀಯ ಆತಿಥ್ಯದ ಪ್ರದರ್ಶನ ಎಂದು ಶ್ಲಾಘಿಸಿದರೆ, ಇನ್ನು ಕೆಲವರು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಇದನ್ನು ವರ್ಕ್ ಲೈಫ್ ಬ್ಯಾಲೆನ್ಸ್ ಎಂದು ಪ್ರಚಾರ ಮಾಡುವ ಕಂಪನಿಗಳಿವೆ. ತಾನು ಅಂತಹ ಕಂಪನಿಗಳಲ್ಲಿ ಕೆಲಸ ಮಾಡದಿರಲು ಇಷ್ಟಪಡುತ್ತೇನೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

ತನ್ನ ಹಿಂದಿನ ಕಂಪನಿಯಲ್ಲಿ, ಕ್ಲೈಂಟ್‌ಗಳ ಭೇಟಿಯ ಸಮಯದಲ್ಲಿ ಇಂತಹ ಮನರಂಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರಿಗೆ ಬಡ್ತಿಯಲ್ಲಿ ಆಡಳಿತ ಮಂಡಳಿ ಆದ್ಯತೆ ಅಥವಾ ಅಂಕಗಳನ್ನು ನೀಡುತ್ತಿತ್ತು ಎಂದು ಮತ್ತೊಬ್ಬ ಬಳಕೆದಾರರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ತಾನು ಕಾಫಿ ಕುಡಿಯುತ್ತಾ ಈ ವಿಡಿಯೊ ನೋಡಿದೆ. ಇದರಿಂದ ನನ್ನ ಇಡೀ ದಿನ ಈಗ ಹಾಳಾಗಿದೆ ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Kalaburagi News: ಸೋಶಿಯಲ್‌ ಮೀಡಿಯಾದಲ್ಲಿ ಫೋಟೊ ವೈರಲ್‌; ಯುವಕನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ!

ಇದು ತುಂಬಾ ವೃತ್ತಿಪರವಲ್ಲದಂತೆ ಕಾಣುತ್ತದೆ ಎಂದು ಮತ್ತೊಬ್ಬ ಬಳಕೆದಾರರು ಹೇಳಿದರು. ಇದು ತುಂಬಾ ಮುಜುಗರದ ಸಂಗತಿ. ಅವರು ಹೇಗೆ ಇಷ್ಟೊಂದು ಸಂತೋಷ ಮತ್ತು ಉತ್ಸುಕರಾಗಿದ್ದಾರೆ ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಇದು ತುಂಬಾ ಭಯಾನಕ. ಇಲ್ಲಿ ಮನರಂಜನೆ ನೀಡಿದವರಿಗೆ ಸ್ವಲ್ಪ ಗೌರವ, ಸ್ವಲ್ಪ ಸ್ವಾಭಿಮಾನವಾದರೂ ಇರಲಿ ಸಿಗಲಿ ಎಂದು ನಾನು ಭಾವಿಸುತ್ತೇನೆ. ಯುರೋಪಿಯನ್ನರನ್ನು ದೇವರಂತೆ ಪರಿಗಣಿಸುವುದನ್ನು ನಿಲ್ಲಿಸಿ. ತಮ್ಮ ಬಗ್ಗೆ ಹೆಚ್ಚು ಸಕಾರಾತ್ಮಕವಾಗಿ ಯೋಚಿಸಲು ಪ್ರಾರಂಭಿಸಬೇಕು ಎಂದು ಎಕ್ಸ್‌ನಲ್ಲಿ ಒಬ್ಬ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.