Mahua Moitra: "ಅಮಿತ್ ಶಾ ತಲೆ ಕತ್ತರಿಸಿ ಪ್ರದರ್ಶನಕ್ಕಿಡಬೇಕು"; ನಾಲಿಗೆ ಹರಿಬಿಟ್ಟ TMC ಸಂಸದೆ
ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Sha) ವಿರುದ್ಧ ತೃಣಮೂಲ ಕಾಂಗ್ರೆಸ್‌ನ ಸಂಸದೆ ಮಹುವಾ ಮೊಯಿತ್ರಾ (Mahua Moitra) ನಾಲಿಗೆ ಹರಿಬಿಟ್ಟಿದ್ದಾರೆ. ಭಾರತದ ಗಡಿಗಳನ್ನು ರಕ್ಷಿಸಲು ಯಾರೂ ಇಲ್ಲದಿದ್ದರೆ, ಇತರ ದೇಶಗಳ ಜನರು ಪ್ರತಿದಿನ ನೂರಾರು, ಸಾವಿರಾರು ಮತ್ತು ಲಕ್ಷಗಳಲ್ಲಿ ಒಳ ನುಸುಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

-

ಕೊಲ್ಕತ್ತಾ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Sha) ವಿರುದ್ಧ ತೃಣಮೂಲ ಕಾಂಗ್ರೆಸ್‌ನ ಸಂಸದೆ ಮಹುವಾ ಮೊಯಿತ್ರಾ (Mahua Moitra) ನಾಲಿಗೆ ಹರಿಬಿಟ್ಟಿದ್ದಾರೆ. ಶುಕ್ರವಾರ, ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಪತ್ರಕರ್ತರು ಸಂಸದೆ ಮೊಯಿತ್ರಾಗೆ ರಾಜ್ಯದಲ್ಲಿ ಅಕ್ರಮ ಒಳನುಸುಳುವಿಕೆಯ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಸಂಸದೆ ವಿವಾದ ಸೃಷ್ಟಿಸಿದ್ದಾರೆ. ಭಾರತದ ಭೂಪ್ರದೇಶಕ್ಕೆ ಅಕ್ರಮ ಬಾಂಗ್ಲಾದೇಶಿ ವಲಸಿಗರ ನುಸುಳುವಿಕೆಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣನಗರ ಲೋಕಸಭಾ ಸಂಸದೆ, ಅಮಿತ್ ಶಾ ಅವರ ಶಿರಚ್ಛೇದ ಮಾಡಿ ಅವರ ಕತ್ತರಿಸಿದ ತಲೆಯನ್ನು ಪ್ರದರ್ಶನಕ್ಕಾಗಿ ಮೇಜಿನ ಮೇಲೆ ಇಡಬೇಕು ಎಂದು ಹೇಳಿದ್ದಾರೆ.
‘Amit Shah's head should be cut off and put on the table’, says Mahua Moitra.
— Pradeep Bhandari(प्रदीप भंडारी)🇮🇳 (@pradip103) August 29, 2025
Disgusting, Disgraceful!
That line from Mahua Moitra is beyond politics, it is pure hate speech, drenched in venom.
Her level has stooped this low under able guidance by Mamata Banerjee’s TMC! pic.twitter.com/VBGwsFd04o
ಭಾರತದ ಗಡಿಗಳನ್ನು ರಕ್ಷಿಸಲು ಯಾರೂ ಇಲ್ಲದಿದ್ದರೆ, ಇತರ ದೇಶಗಳ ಜನರು ಪ್ರತಿದಿನ ನೂರಾರು, ಸಾವಿರಾರು ಮತ್ತು ಲಕ್ಷಗಳಲ್ಲಿ ಒಳ ನುಸುಳುತ್ತಿದ್ದರೆ ಮತ್ತು ನಮ್ಮ ತಾಯಂದಿರು ಮತ್ತು ಸಹೋದರಿಯರ ಮೇಲೆ ಕಣ್ಣಿಟ್ಟು, ನಮ್ಮ ಭೂಮಿಯನ್ನು ಕಸಿದುಕೊಳ್ಳುತ್ತಿದ್ದರೆ, ಮೊದಲು ನೀವು ಅಮಿತ್ ಶಾ ಅವರ ತಲೆಯನ್ನು ಕತ್ತರಿಸಿ ಮೇಜಿನ ಮೇಲೆ ಇಡಬೇಕು. ಗೃಹ ಸಚಿವರು ಮತ್ತು ಗೃಹ ಸಚಿವಾಲಯವು ಭಾರತದ ಗಡಿಗಳನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ಮತ್ತು ಹೊರಗಿನಿಂದ ಬಂದ ಜನರು ನಮ್ಮ ತಾಯಂದಿರು ಮತ್ತು ಸಹೋದರಿಯರ ಮೇಲೆ ಕಣ್ಣಿಟ್ಟು ನಮ್ಮ ಭೂಮಿಯನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಪ್ರಧಾನಿಯೇ ಹೇಳುತ್ತಿದ್ದರೆ, ಇದು ಯಾರ ತಪ್ಪು? ಇದು ನಮ್ಮ ತಪ್ಪೋ ಅಥವಾ ನಿಮ್ಮ ತಪ್ಪೋ? ಇಲ್ಲಿ ಬಿಎಸ್‌ಎಫ್ ಇದೆ. ನಾವು ಕೂಡ ಅವರ ಭಯದಲ್ಲಿ ಬದುಕುತ್ತೇವೆ ಎಂದು ಹೇಳಿದ್ದಾರೆ.
ಮುಂದುವರಿದು, ಪ್ರಧಾನಿ ಮೋದಿಯವರ ಸ್ವಾತಂತ್ರ್ಯ ದಿನಾಚರಣೆಯ ಭಾಷಣವನ್ನು ಉಲ್ಲೇಖಿಸುತ್ತಾ, ಅವರು, "ಕೆಂಪು ಕೋಟೆಯಲ್ಲಿ ನಿಂತು, ಪ್ರಧಾನಿಯವರು ಸ್ವತಃ ನುಸುಳುಕೋರರು ಜನಸಂಖ್ಯಾ ಬದಲಾವಣೆಗಳನ್ನು ಉಂಟುಮಾಡುತ್ತಿದ್ದಾರೆ ಎಂದು ಹೇಳಿದರು. ಆದರೆ ಅವರು ಇದನ್ನು ಹೇಳುತ್ತಿರುವಾಗಲೂ, ಅವರ ಗೃಹ ಸಚಿವರು ಮುಂದಿನ ಸಾಲಿನಲ್ಲಿ ನಿಂತು, ನಗುತ್ತಾ ಮತ್ತು ಚಪ್ಪಾಳೆ ತಟ್ಟುತ್ತಿದ್ದರು. ಗಡಿಯಲ್ಲಿ ಗಡಿ ಭದ್ರತಾ ಪಡೆ ಇದ್ದರೂ ಒಳನುಸುಳುವಿಕೆ ಏಕೆ ಮುಂದುವರೆದಿದೆ ಎಂದು ಮೊಯಿತ್ರಾ ಪ್ರಶ್ನಿಸಿದ್ದಾರೆ.
ಬಿಜೆಪಿ ಪ್ರತಿಕ್ರಿಯೆ
ಈ ವಿಷಯಕ್ಕೆ ಸಂಬಂಧಿಸಿದಂತೆ, ಬಿಜೆಪಿ ನಾಡಿಯಾ ಜಿಲ್ಲೆಯ ಕೃಷ್ಣನಗರದ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಮಹುವಾ ಮೊಯಿತ್ರಾ ವಿರುದ್ಧ ದೂರು ದಾಖಲಿಸಿದೆ. ಈ ಹೇಳಿಕೆಯನ್ನು ಬಿಜೆಪಿಯ ಕಾರ್ಯಕರ್ತರು ತೀವ್ರವಾಗಿ ಖಂಡಿಸಿದ್ದಾರೆ. ಸ್ಥಳೀಯ ನಿವಾಸಿ ಸಂದೀಪ್ ಮಜುಂದಾರ್ ಕೃಷ್ಣನಗರದ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಮೊಯಿತ್ರಾ ವಿರುದ್ಧ ದೂರು ದಾಖಲಿಸಿದ್ದಾರೆ.