ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi Bomb Blast: ದಿಲ್ಲಿ ಕಾರ್ ಬಾಂಬ್ ಸ್ಫೋಟ; ಜಿಹಾದಿ ಕೃತ್ಯ ಬಯಲಿಗೆಳೆಯುತ್ತಿದೆ ಮೋದಿ ಸರ್ಕಾರ

Delhi Red Fort blast: ಫರೀದಾಬಾದ್‌ ಕೇವಲ ಕಾಕತಾಳೀಯ ಘಟನೆಯಲ್ಲ. ಇದು ಪೂರ್ವನಿಯೋಜಿತ ಭಯೋತ್ಪಾದಕ ಕೃತ್ಯ. ವೈದ್ಯರ ನಿವಾಸದಿಂದ 2,900 ಕಿಲೋ ಗ್ರಾಮ್‌‌‌ನಷ್ಟು ಸ್ಫೋಟಕಗಳು ಹಾಗೂ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು. ಈ ಸಲ ಉಗ್ರರು ತಲೆಗೆ ರುಮಾಲು ಧರಿಸಿರಲಿಲ್ಲ, ಹರಿದ ಬ್ಯಾಗ್‌ ಹೆಗಲಿನಲ್ಲಿ ಹಾಕಿಕೊಂಡಿರಲಿಲ್ಲ. ಈ ಸಲ ಬಿಳಿಯ ಕೋಟ್‌ ಧರಿಸಿದ್ದರು. ಸುಶಿಕ್ಷಿತ ಉಗ್ರರಾಗಿದ್ದರು.

ಭಯೋತ್ಪಾದನೆ ವಿರುದ್ಧ ಮೋದಿ ಸರ್ಕಾರ ಕಠಿಣ ಕ್ರಮ(ಸಂಗ್ರಹ ಚಿತ್ರ)

ದೇಶದ ಹೆಮ್ಮೆಯ ಮತ್ತು ಸಾರ್ವಭೌಮತೆಯ ಪ್ರತೀಕವಾಗಿದ್ದ ಕೆಂಪುಕೋಟೆಯ ಬಳಿ ಸೋಮವಾರ ಸಂಜೆ ನಡೆದ ಭಯೋತ್ಪಾದಕರ ದಾಳಿ ದೇಶಾದ್ಯಂತ ತಲ್ಲಣ ಮೂಡಿಸಿದೆ. ಫರೀದಾಬಾದ್‌ನಲ್ಲಿ ಪತ್ತೆಯಾಗಿದ್ದ ಭಾರಿ ಸ್ಫೋಟಕಗಳಿಗೂ ದಿಲ್ಲಿಯಲ್ಲಿ ನಡೆದಿರುವ ಸ್ಫೋಟಕ್ಕೂ ಸಂಬಂಧ ಇರುವ ಶಂಕೆ ವ್ಯಕ್ತವಾಗಿದೆ. ಭಾರತದ ಹೃದಯ ಭಾಗದಲ್ಲಿ ಜನ ಸಂದಣಿ ಇದ್ದ ಪ್ರದೇಶದಲ್ಲಿ ರಾಷ್ಟ್ರ ವಿದ್ರೋಹಿ, ವಿಧ್ವಂಸಕ ಕೃತ್ಯ ಎಸಗಲಾಗಿದೆ. ಆದರೆ ಉಗ್ರರ ಬೃಹತ್ ದಾಳಿಯ ಷಡ್ಯಂತ್ರಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭೇದಿಸಲಾಗುತ್ತಿದೆ.

ಪೂರ್ವ ನಿಯೋಜಿತ ಭಯೋತ್ಪಾದಕ ಕೃತ್ಯ:

ಫರೀದಾಬಾದ್‌ ಕೇವಲ ಕಾಕತಾಳೀಯ ಘಟನೆಯಲ್ಲ. ಇದು ಪೂರ್ವನಿಯೋಜಿತ ಭಯೋತ್ಪಾದಕ ಕೃತ್ಯ. ವೈದ್ಯರ ನಿವಾಸದಿಂದ 2,900 ಕಿಲೋ ಗ್ರಾಮ್‌‌‌ನಷ್ಟು ಸ್ಫೋಟಕಗಳು ಹಾಗೂ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು. ಈ ಸಲ ಉಗ್ರರು ತಲೆಗೆ ರುಮಾಲು ಧರಿಸಿರಲಿಲ್ಲ, ಹರಿದ ಬ್ಯಾಗ್‌ ಹೆಗಲಿನಲ್ಲಿ ಹಾಕಿಕೊಂಡಿರಲಿಲ್ಲ. ಈ ಸಲ ಬಿಳಿಯ ಕೋಟ್‌ ಧರಿಸಿದ್ದರು. ಸುಶಿಕ್ಷಿತ ಉಗ್ರರಾಗಿದ್ದರು. ಬೀದಿ ರೌಡಿಗಳಾಗಿರಲಿಲ್ಲ. ಶಾಂತಿ ಕದಡಲು ಸಿದ್ಧರಾಗಿದ್ದ ವೈಟ್‌ ಕೋಟಿನ ಸುಶಿಕ್ಷಿತರಾಗಿದ್ದರು. ಆದರೆ ಮೋದಿ ಸರಕಾರದ ರಚನಾತ್ಮಕ ಬುದ್ಧಿಮತ್ತೆ ಉಗ್ರರ ದೊಡ್ಡ ಮಟ್ಟದ ವಿಧ್ವಂಸಕ ಷಡ್ಯಂತ್ರವನ್ನು ವಿಫಲಗೊಳಿಸಿದೆ.

Delhi Blast

ಈ ಸುದ್ದಿಯನ್ನೂ ಓದಿ: Delhi Blast: ಓದಿದ್ದು MBBS ಆದದ್ದು ಭಯೋತ್ಪಾದಕ; ಆತ್ಮಾಹುತಿ ಬಾಂಬರ್‌ ಡಾ. ಉಮರ್‌ನ ಹಿಸ್ಟರಿ ಕೇಳಿದ್ರೆ ರಕ್ತ ಕುದಿಯುತ್ತೆ

ಗುಜರಾತ್‌ನಲ್ಲಿ ನಡೆದ ರೆಸಿನ್‌ ಷಡ್ಯಂತ್ರವನ್ನು ಇದೇ ರೀತಿ ವಿಫಲಗೊಳಿಸಲಾಗಿತ್ತು. ಇಲ್ಲೂ ಸುಶಿಕ್ಷಿತ ಭಯೋತ್ಪಾದಕರಿದ್ದರು. ವಿಜ್ಞಾನವನ್ನು ಜಿಹಾದಿ ಕೃತ್ಯಕ್ಕೆ ದುರ್ಬಳಕೆ ಮಾಡಲಾಗಿತ್ತು. ಮೋದಿ ಸರಕಾರದ ಅಡಿಯಲ್ಲಿ ಒಂದೇ ಒಂದು ಜೀವ ಇದಕ್ಕೆ ಬಲಿಯಾಗುವುದಕ್ಕೆ ಮೊದಲೇ ಸಂಚನ್ನು ವಿಫಲಗೊಳಿಸಲಾಗಿತ್ತು. ಬಡತನದ ಪರಿಣಾಮ ಭಯೋತ್ಪದನೆ ನಡೆಯುತ್ತದೆ ಎಂದು ಕಾಂಗ್ರೆಸ್‌ ನಾಯಕರು ಸದಾ ಹೇಳುತ್ತಿರುತ್ತಾರೆ. ಆ ಸುಳ್ಳು ಈಗ ಬಯಲಾಗಿದೆ. ಭಯೋತ್ಪಾದಕರು ಬಡವರಾಗಿರಲಿಲ್ಲ. ಆದರೆ ಸೈದ್ಧಾಂತಿಕವಾಗಿ ವಿಷಪೂರಿತರಾಗಿದ್ದರು.

ಮೋದಿ ಆಡಳಿತದಲ್ಲಿ ಕ್ಷಮೆ ಇಲ್ಲ:

ಮೋದಿಯವರ ಆಡಳಿತದಲ್ಲಿ ಅಂಥವರಿಗೆ ಕ್ಷಮೆ ಇಲ್ಲ. ತಕ್ಕ ಶಿಕ್ಷೆ ಎದುರಿಸಲೇಬೇಕಾಗುತ್ತದೆ. ವೈಟ್‌ ಕಾಲರ್‌ ಜಿಹಾದ್‌ ಈಗ ವಾಸ್ತವವಾಗಿದೆ. ಪ್ರಬಲ ಸರಕಾರ ಇದನ್ನು ಹತ್ತಿಕ್ಕಬಲ್ಲುದು. ಬಿಜೆಪಿ ವೈಟ್‌ ಕಾಲರ್‌ ಭಯೋತ್ಪದನೆಯ ವಿರುದ್ಧ ಸ್ಪಷ್ಟವಾಗಿ ನಿಂತಿದೆ. ಆದರೆ ಕಾಂಗ್ರೆಸ್‌‌ ನಾಯಕರ ಪ್ರತಿಕ್ರಿಯೆಯಲ್ಲಿ ಮಾತ್ರ ಗೊಂದಲ ಕಾಣುತ್ತಿದೆ.

Delhi Blast  (1)

150 ಬಾಂಬ್‌ಗಳು ಬಾಂಗ್ಲಾದೇಶದ ಗಡಿ ಭಾಗದ ಮುರ್ಷಿದಾಬಾದ್‌‌ನಲ್ಲಿ ಪತ್ತೆಯಾಗಿತ್ತು. ತುಷ್ಟೀಕರಣ ಮತ್ತು ನಿಷ್ಕ್ರಿಯತೆಯಿಂದ ಭಯೋತ್ಪಾದನೆಗೆ ಕುಮ್ಮಕ್ಕು ಸಿಕ್ಕಿತ್ತು. ಬಿಜೆಪಿ ದೇಶದ ಗಡಿಯನ್ನು ಕಾಯುತ್ತದೆ. ಕಾಂಗ್ರೆಸ್‌ ತನ್ನ ಮತಬ್ಯಾಂಕ್‌ ಕಾಯ್ದುಕೊಳ್ಳಲು ಸದಾ ತವಕಿಸುತ್ತದೆ ಎನ್ನುವುದಕ್ಕೆ ಈಗ ಮತ್ತೊಮ್ಮೆ ಸಾಕ್ಷಿ ಸಿಕ್ಕಿದೆ.

ಕಾಂಗ್ರೆಸ್‌ ಆಳ್ವಿಕೆಯ ದಶಕಗಳಲ್ಲಿ ಭಾರತದಲ್ಲಿ ಸುರಕ್ಷತೆ ಇದ್ದಿರಲಿಲ್ಲ. ಮುಂಬಯಿನಿಂದ ದಿಲ್ಲಿ ತನಕ ಸ್ಫೋಟಗಳು ನಿರಂತರ ನಡೆಯುತ್ತಿತ್ತು. ಆಗ ಸರಕಾರಗಳು ಕಠಿಣವಾಗಿ ಕ್ರಮ ಕೈಗೊಳ್ಳುತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಯೋತ್ಪಾದಕ ಕೃತ್ಯಗಳು ನಡೆಯುವುದಕ್ಕೆ ಮೊದಲೇ ನಿರ್ಮೂಲನೆಯಾಗುತ್ತಿದೆ.

delhi car blast (2)

ಸೋನಿಯಾ ಹುಸಿ ಕಣ್ಣೀರು:

ದಿಲ್ಲಿಯ ಬಾಟ್ಲಾಹೌಸ್‌ ಕಾರ್ಯಾಚರಣೆಯ ಬಳಿಕ ಸೋನಿಯಾ ಗಾಂಧಿಯವರು ಕಣ್ಣೀರು ಹಾಕಿದ್ದರು. ಆದರೆ ಅಲ್ಲಿ ಪೊಲೀಸ್‌ ಅಧಿಕಾರಿ ಮೃತಪಟ್ಟಿದ್ದಾಗಿರಲಿಲ್ಲ, ಭಯೋತ್ಪಾದಕರೇ ಅವರನ್ನು ಕೊಂದಿದ್ದರು. ಕಾಂಗ್ರೆಸ್‌ನ ಪೂರ್ವಗ್ರಹಪೀಡಿತ ನಿಷ್ಠೆಯನ್ನು ಇದು ಬಿಂಬಿಸಿತ್ತು. ಬಾಟ್ಲಾ ಹೌಸ್ ಪೊಲೀಸ್ ಕಾರ್ಯಾಚರಣೆಯ ವಿರುದ್ಧವೇ ಕಾಂಗ್ರೆಸ್ ನಾಯಕರು ಆಗ ದನಿ ಎತ್ತುವ ಮೂಲಕ ಉಗ್ರರಿಗೆ ಪರೋಕ್ಷವಾಗಿ ಬೆಂಬಲಿಸಿದ್ದರು. ಆಗ 'ಹಿಂದೂ ಭಯೋತ್ಪಾದನೆʼ ಎಂಬ ಪದವನ್ನೂ ಬಳಸಲಾಗಿತ್ತು. ಜಿಹಾದಿಗಳ ಕೃತ್ಯವನ್ನು ಸಣ್ಣದೆಂಬಂತೆ ಬಿಂಬಿಸುವ ಕೆಲಸ ನಡೆದಿತ್ತು. ಆದರೆ ಬಿಜೆಪಿ ರಾಷ್ಟ್ರದ ಗೌರವವನ್ನು ಮರು ಸ್ಥಾಪಿಸಿತು.

ಈ ಸುದ್ದಿಯನ್ನೂ ಓದಿ: Delhi Blast: ಕೆಂಪು ಕೋಟೆ ಬಳಿ ಸ್ಫೋಟ ಪ್ರಕರಣ; i20 ಕಾರು ಮಾಲೀಕ ತಾರೀಕ್‌ ಬಂಧನ

ತನಿಖಾ ಸಂಸ್ಥೆಗಳಿಗೆ ಫ್ರೀ ಹ್ಯಾಂಡ್:

ಮೋದಿಯವರ ನೇತೃತ್ವದಲ್ಲಿ ಭದ್ರತಾ ಏಜೆನ್ಸಿಗಳು ನಿರ್ಭೀತಿಯಿಂದ, ಸರ್ವ ಸ್ವಾತಂತ್ರ್ಯದಿಂದ ಕಾರ್ಯನಿರ್ವಹಿಸುತ್ತಿವೆ. ಅಲ್ಲಿ ಯಾವುದೇ ರಾಜಕೀಯ ಮಧ್ಯಪ್ರವೇಶ ಇರುವುದಿಲ್ಲ. ಭಾರತದ ವಿರುದ್ಧದ ಯಾವುದೇ ಬೆದರಿಕೆಯನ್ನು ಮಟ್ಟ ಹಾಕಲಾಗುತ್ತಿದೆ. ಇವತ್ತು ಭಯೋತ್ಪಾದಕರು ಲ್ಯಾಪ್‌‌‌ಟಾಪ್‌ ಹಿಂದೆ ಇರುತ್ತಾರೆ. ಎನ್‌‌‌ಕ್ರಿಪ್ಟೆಡ್‌ ಚಾಟ್‌‌‌ಗಳನ್ನು ನಡೆಸುತ್ತಾರೆ. ತಂತ್ರಜ್ಞಾನ ಬಳಸುತ್ತಾರೆ. ಆದರೆ ಬಿಜೆಪಿ ಸರಕಾರ ಇವರನ್ನೂ ಪರಿಣಾಮಕಾರಿಯಾಗಿ ಮಟ್ಟ ಹಾಕುತ್ತಿದೆ.

modi govt

ಕಾಂಗ್ರೆಸ್‌ ಸರಕಾರದಲ್ಲಿ ಅಧಿಕಾರಿಗಳು ಭೀತರಾಗಿ ಕೆಲಸ ಮಾಡುತ್ತಿದ್ದರು. ಆದರೆ ಮೋದಿ ಆಡಳಿತದಲ್ಲಿ ಅವರು ದೇಶದ ರಕ್ಷಣೆಗಾಗಿ ಮುಕ್ತವಾಗಿ ಮತ್ತು ದಿಟ್ಟತನದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ದುರ್ಬಲ ರಾಜಕೀಯ ಮತ್ತು ಪ್ರಬಲ ಆಡಳಿತದ ನಡುವೆ ಈ ವ್ಯತ್ಯಾಸವನ್ನು ನಾವು ಗಮನಿಸಬಹುದಾಗಿದೆ.

ಕಾಂಗ್ರೆಸ್ ಹುಸಿ ಜಾತ್ಯತೀತತೆ:

ಕಾಂಗ್ರೆಸ್‌ ಹುಸಿ ಜಾತ್ಯತೀತತೆಯನ್ನು ಬಿಂಬಿಸುತ್ತದೆ. ಬಿಜೆಪಿ ನಿಜವಾದ ರಾಷ್ಟ್ರ ಭಕ್ತಿಯನ್ನು ಎತ್ತಿ ಹಿಡಿಯುತ್ತಿದೆ. ಆದ್ದರಿಂದ ಭಾರತ ಈಗ ದಶಕದ ಬಳಿಕ ಸುರಕ್ಷಿತವಾಗಿದೆ. ಕೆಂಪುಕೋಟೆಯ ಬಳಿಯ ದಾಳಿಯು ಕೇವಲ ಕಲ್ಲು, ಉಕ್ಕಿನ ಮೇಲೆ ನಡೆದ ದಾಳಿಯಲ್ಲ, ಭಾರತದ ಆತ್ಮದ ಮೇಲೆ ನಡೆದಿರುವ ದಾಳಿ. ಈ ಸಂಚನ್ನು ಸಮರ್ಥ ಭಾರತ ಸರಕಾರ ದಿಟ್ಟವಾಗಿ ಎದುರಿಸಿ ಬಯಲುಗೊಳಿಸಲಿದೆ. ಏಕೆಂದರೆ ಭಾರತ ಈಗ ಪ್ರಬಲವಾಗಿದೆ. ಸುರಕ್ಷಿತವಾದ ನಾಯಕತ್ವ ಇಲ್ಲಿದೆ.

ಪ್ರಧಾನಿ ನರೇಂದ್ರ ಮೋದಿಯವರ ನಾಯಕ್ವದಲ್ಲಿ ಭಯೋತ್ಪಾದಕರ ಯಾವ ಸಂಚುಗಳೂ ರಹಸ್ಯವಾಗಿ ಉಳಿಯಲು ಸಾಧ್ಯವಿಲ್ಲ. ಏಕೆಂದರೆ ಇದು ನವ ಭಾರತ. ಉಗ್ರರ ಪ್ರತಿಯೊಂದು ಸಂಚೂ ಇಲ್ಲಿ ವಿಫಲವಾಗುತ್ತವೆ.

ವಿಶ್ಲೇಷಣೆ: ವೀರಶೇಖರ್ ಎಂ ಆರ್