Delhi judge: ಮನೆಗೆ ಬೆಂಕಿ ಬಿತ್ತು... ನ್ಯಾಯಾಧೀಶರ ಮನೆಯಲ್ಲಿ ಪತ್ತೆಯಾಯ್ತು ಕೋಟಿ ಕೋಟಿ ಹಣ !
Delhi High Court: ದೆಹಲಿ ಹೈಕೋರ್ಟ್ ನ್ಯಾಯಾಧೀಶರಾದ ಯಶವಂತ ವರ್ಮಾ ಅವರ ನಿವಾಸದಲ್ಲಿ ಸಂಭವಿಸಿದ ಬೆಂಕಿ ಅವಘಡಕ್ಕೆ ದೊಡ್ಡ ಟ್ವಿಸ್ಟ್ ಲಭಿಸಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ನಡೆಸಿದ ಕಾರ್ಯಾಚರಣೆಯ ವೇಳೆ ಅವರ ಮನೆಯಲ್ಲಿ ಕೋಟ್ಯಂತರ ರೂಪಾಯಿ ನಗದು ಪತ್ತೆಯಾಗಿದ್ದು, ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇದೆ ಎಂದು ಹಲವು ವರದಿಗಳು ಹೇಳಿವೆ.

ದೆಹಲಿ ಹೈಕೋರ್ಟ್ ನ್ಯಾಯಾಧೀಶರಾದ ಯಶವಂತ ವರ್ಮಾ

ನವದೆಹಲಿ: ದೆಹಲಿ ಹೈಕೋರ್ಟ್(Delhi High Court) ನ್ಯಾಯಾಧೀಶ (Delhi judge)ರಾದ ಯಶವಂತ ವರ್ಮಾ(Yashwant Verma) ಅವರ ನಿವಾಸದಲ್ಲಿ ಸಂಭವಿಸಿದ ಬೆಂಕಿ ಅವಘಡ(fire Accident)ಕ್ಕೆ ದೊಡ್ಡ ಟ್ವಿಸ್ಟ್(Twist) ಲಭಿಸಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ( Fire department ) ನಡೆಸಿದ ಕಾರ್ಯಾಚರಣೆಯ ವೇಳೆ ಅವರ ಮನೆಯಲ್ಲಿ ಕೋಟ್ಯಂತರ ರೂಪಾಯಿ ನಗದು ಪತ್ತೆಯಾಗಿದ್ದು, ಭ್ರಷ್ಟಾಚಾರ(Corruption) ನಡೆದಿರುವ ಸಾಧ್ಯತೆ ಇದೆ ಎಂದು ಹಲವು ವರದಿ(Reports)ಗಳು ಹೇಳಿವೆ. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಕೊಲೀಜಿಯಂ ನ್ಯಾ. ಯಶವಂತ್ ಅವರಿಗೆ ಮತ್ತೊಂದು ಶಾಕ್ ನೀಡಿದ್ದು, ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕಳೆದ ವಾರ ಹೋಳಿ ಹಬ್ಬದ ರಜೆಯ ಸಮಯದಲ್ಲಿ ಅವರ ಅಧಿಕೃತ ಬಂಗಲೆಯಲ್ಲಿ ಲೆಕ್ಕವಿಲ್ಲದಷ್ಟು ಹಣ ಪತ್ತೆಯಾದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ಮನೆಯಲ್ಲಿ ಅಗ್ನಿ ಅವಘಡ ಸಂಭವಿಸುವಾಗ ಯಶವಂತ್ ಅವರು ಕುಟುಂಬ ಸಮೇತರಾಗಿ ಬೇರೆಡೆ ಪ್ರವಾಸದಲ್ಲಿ ಇದ್ದರು. ಬೆಂಕಿ ಕಾಣಿಸಿಕೊಂಡ ಸುದ್ದಿ ತಿಳಿಯುತ್ತಿದ್ದಂತೆಯೇ ಅವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಇದರ ಬಳಿಕ ಪೊಲೀಸರಿಗೂ ಕರೆ ಮಾಡಿದ್ದಾರೆ. ಪೊಲೀಸರು ಮನೆಯ ತಪಾಸಣೆ ನಡೆಸುವ ವೇಳೆ ನಗದು ಪತ್ತೆಯಾಗಿದೆ. ನಗದು ಪತ್ತೆಯಾದ ಕುರಿತು ನ್ಯಾಯಮೂರ್ತಿ ಯಶವಂತ್ ಅವರು ಇನ್ನೂ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.
ಅಧಿಕೃತ ಮಾರ್ಗಗಳ ಮೂಲಕ ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅವರ ನೇತೃತ್ವದ ಐದು ಸದಸ್ಯರ ಕೊಲಿಜಿಯಂ ನ್ಯಾಯಮೂರ್ತಿ ವರ್ಮಾ ಅವರನ್ನು ವರ್ಗಾಯಿಸಲು ಸರ್ವಾನುಮತದಿಂದ ಒಪ್ಪಿಗೆ ನೀಡಿದೆ ಎಂದು ಮೂಲಗಳು ಹೇಳಿವೆ. ನ್ಯಾಯಾಂಗದ ಖ್ಯಾತಿಗೆ ಕಳಂಕ ಬರುವುದನ್ನು ತಪ್ಪಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಕೊಲೀಜಿಯಂ ತೀರ್ಮಾನಿಸಿದ್ದು, ಕೆಲವು ಮೂಲಗಳ ಪ್ರಕಾರ , ನ್ಯಾಯಮೂರ್ತಿ ವರ್ಮಾ ಅವರ ರಾಜೀನಾಮೆ ಕೇಳುವ ಬಗ್ಗೆಯೂ ಚರ್ಚೆ ನಡೆದಿದೆ.
ಈ ಸುದ್ದಿಯನ್ನು ಓದಿ: Viral Video: ರೀಲ್ಸ್ ಹುಚ್ಚಿಗೆ ಫೇಮಸ್ ಟನಲ್‌ನೊಳಗೆ ಯುವಕರ ಪುಂಡಾಟ; ಅಷ್ಟಕ್ಕೂ ಇವ್ರು ಮಾಡಿದ ಕೆಲ್ಸ ಏನ್ ಗೊತ್ತಾ? ವಿಡಿಯೊ ನೋಡಿ
ಒಂದು ವೇಳೆ ಅವರು ರಾಜೀನಾಮೆ ನೀಡಲು ನಿರಾಕರಿಸಿದರೆ, ಮುಖ್ಯ ನ್ಯಾಯಾಧೀಶರು ಆಂತರಿಕ ತನಿಖೆಯನ್ನು ಪ್ರಾರಂಭಿಸಬಹುದು. ಹೈಕೋರ್ಟ್ ನ್ಯಾಯಾಧೀಶರನ್ನು ಸಂಸತ್ತು ಪದಚ್ಯುತಗೊಳಿಸಲು ಇದು ಮೊದಲ ಹೆಜ್ಜೆಯಾಗಿದೆ.
ಹೈಕೋರ್ಟ್ ನ್ಯಾಯಾಧೀಶರನ್ನು ಪದಚ್ಯುತಗೊಳಿಸುವುದು ಹೇಗೆ?
1999ರಲ್ಲಿ ಸುಪ್ರೀಂ ಕೋರ್ಟ್ ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧದ ಭ್ರಷ್ಟಾಚಾರ, ತಪ್ಪು ಮತ್ತು ನ್ಯಾಯಾಂಗ ಅಕ್ರಮಗಳ ಆರೋಪಗಳ ತನಿಖೆಗೆ ಮಾರ್ಗಸೂಚಿಗಳನ್ನು ರೂಪಿಸಿತು. ಈ ಮಾರ್ಗಸೂಚಿಗಳ ಪ್ರಕಾರ, ದೂರು ಸ್ವೀಕರಿಸಿದ ನಂತರ ಮುಖ್ಯ ನ್ಯಾಯಾಧೀಶರು ಮೊದಲು ಸಂಬಂಧಪಟ್ಟ ನ್ಯಾಯಾಧೀಶರಿಂದ ಉತ್ತರವನ್ನು ಪಡೆಯುತ್ತಾರೆ. ಉತ್ತರದಿಂದ ಅತೃಪ್ತರಾಗಿದ್ದರೆ ಅಥವಾ ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ಭಾವಿಸಿದರೆ, ಅವರು ಆಂತರಿಕ ಸಮಿತಿಯನ್ನು ರಚಿಸುತ್ತಾರೆ. ಈ ಸಮಿತಿಯು ಒಬ್ಬ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮತ್ತು ಇಬ್ಬರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡಿರುತ್ತದೆ.
ಸಮಿತಿ ವರದಿಯನ್ನು ಸಲ್ಲಿಸಿದ ನಂತರ, ಆರೋಪವು ಗಂಭೀರ ಸ್ವರೂಪದ್ದಾಗಿದ್ದು ಎಂದು ಮುಖ್ಯ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರೆ, ಅವರು ನ್ಯಾಯಾಧೀಶರನ್ನು ರಾಜೀನಾಮೆ ನೀಡುವಂತೆ ಕೇಳುತ್ತಾರೆ. ನ್ಯಾಯಾಧೀಶರು ನಿರಾಕರಿಸಿದರೆ, ಸಂವಿಧಾನದ 124(4) ನೇ ವಿಧಿಯ ಅಡಿಯಲ್ಲಿ ಅವರನ್ನು ಪದಚ್ಯುತಗೊಳಿಸುವ ಪ್ರಕ್ರಿಯೆ ಪ್ರಾರಂಭಿಸಲು ಮುಖ್ಯ ನ್ಯಾಯಮೂರ್ತಿಗಳು ಸರ್ಕಾರಕ್ಕೆ ಪತ್ರ ಬರೆಯುತ್ತಾರೆ.