Disha Salian Case: ದಿಶಾ ಸಾಲಿಯನ್ ಸಾವಿನ ಪ್ರಕರಣ; ಆದಿತ್ಯ ಠಾಕ್ರೆ, ಡಿನೋ ಮೋರಿಯಾ, ಸೇರಿದಂತೆ ಹಲವರ ವಿರುದ್ಧ ದೂರು
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವಿನ ಪ್ರಕರಣ ರಾಜಕೀಯ ವಲಯದಲ್ಲಿ ಭಾರೀ ಕಿಚ್ಚು ಹಬ್ಬಿಸಿದೆ. ಸದ್ಯ ದಿಶಾ ತಂದೆ ಪೊಲೀಸರಿಗೆ ದೂರು ಸಲ್ಲಿಸಿದ್ದು, ದೂರಿನಲ್ಲಿ ಶಾಸಕ ಆದಿತ್ಯ ಠಾಕ್ರೆ ಸೇರಿದಂತೆ ಹಲವರ ಹೆಸರನ್ನು ಉಲ್ಲೇಖಿಸಲಾಗಿದೆ.


ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವಿನ (Disha Salian Case) ಪ್ರಕರಣ ರಾಜಕೀಯ ವಲಯದಲ್ಲಿ ಭಾರೀ ಕಿಚ್ಚು ಹಬ್ಬಿಸಿದೆ. ದಿಶಾ ಸಾಲಿಯನ್ ಅವರ ತಂದೆಯ ವಕೀಲರು ಮುಂಬೈ ಪೊಲೀಸರಿಗೆ ಪ್ರಕರಣ ದಾಖಲಿಸಿದ್ದು , ಶಿವಸೇನಾ (ಯುಬಿಟಿ) ಶಾಸಕ ಆದಿತ್ಯ ಠಾಕ್ರೆ, ಮಾಜಿ ಉನ್ನತ ಪೊಲೀಸ್ ಅಧಿಕಾರಿ ಮತ್ತು ಇತರರ ವಿರುದ್ಧ ಆರೋಪಿಸಿದ್ದಾರೆ. ಈ ಬಗ್ಗೆ ಅವರು ದೂರು ನೀಡಿದ್ದು, ದೂರಿನಲ್ಲಿ ಆದಿತ್ಯ ಠಾಕ್ರೆ, ನಟರಾದ ಡಿನೋ ಮೋರಿಯಾ ಮತ್ತು ಸೂರಜ್ ಪಾಂಚೋಲಿ ಮತ್ತು ಅವರ ಸೆಕ್ಯುರಿಟಿ ಮಾಜಿ ಉನ್ನತ ಪೊಲೀಸ್ ಅಧಿಕಾರಿ ಪರಂಬೀರ್ ಸಿಂಗ್, ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಮತ್ತು ರಿಯಾ ಚಕ್ರವರ್ತಿ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ.
ಇಂದು, ನಾವು ಪೊಲೀಸ್ ಆಯುಕ್ತರಿಗೆ (ಸಿಪಿ) ಲಿಖಿತ ದೂರು (ಎಫ್‌ಐಆರ್) ಸಲ್ಲಿಸಿದ್ದೇವೆ ಮತ್ತು ಜಂಟಿ ಪೊಲೀಸ್ ಆಯುಕ್ತರು ಅದನ್ನು ಸ್ವೀಕರಿಸಿದ್ದಾರೆ. ಈ ಎಫ್‌ಐಆರ್‌ನಲ್ಲಿ ಆದಿತ್ಯ ಠಾಕ್ರೆ, ಡಿನೋ ಮೋರಿಯಾ, ಸೂರಜ್ ಪಾಂಚೋಲಿ ಮತ್ತು ಅವರ ಅಂಗರಕ್ಷಕರಾದ ಪರಂಬೀರ್ ಸಿಂಗ್, ಸಚಿನ್ ವಾಜೆ ಮತ್ತು ರಿಯಾ ಚಕ್ರವರ್ತಿ ಹೆಸರನ್ನು ಸೇರಿಸಲಾಗಿದೆ ಎಂದು ದಿಶಾ ತಂದೆ ಪರ ವಕೀಲ ನೀಲೇಶ್ ಓಜಾ ಹೇಳಿದ್ದಾರೆ. ಸೆಲೆಬ್ರಿಟಿ ಮ್ಯಾನೇಜರ್ ಸಾವಿನ ಪ್ರಕರಣದ ಮಾಸ್ಟರ್ ಮೈಂಡ್ ಪರಂಬೀರ್ ಸಿಂಗ್ ಎಂದು ಆರೋಪಿಸಿರುವ ವಕೀಲರು, ಪತ್ರಿಕಾಗೋಷ್ಠಿ ನಡೆಸಿ, ಆದಿತ್ಯ ಠಾಕ್ರೆ ಅವರನ್ನು ರಕ್ಷಿಸಲು ಸುಳ್ಳುಗಳನ್ನು ಸೃಷ್ಟಿಸಿದರು. ಆದಿತ್ಯ ಠಾಕ್ರೆ ಮಾದಕವಸ್ತು ವ್ಯವಹಾರದಲ್ಲಿ ಭಾಗಿಯಾಗಿದ್ದಾರೆಂದು ಎನ್‌ಸಿಬಿಯ ತನಿಖಾ ಪತ್ರಗಳು ಸಾಬೀತುಪಡಿಸುತ್ತವೆ ಮತ್ತು ಈ ವಿವರವನ್ನು ಎಫ್‌ಐಆರ್‌ನಲ್ಲಿಯೂ ಉಲ್ಲೇಖಿಸಲಾಗಿದೆ" ಎಂದು ಹೇಳಿದ್ದಾರೆ.
ನಟರಾದ ಆದಿತ್ಯ ಪಂಚೋಲಿ ಮತ್ತು ಡಿನೋ ಮೋರಿಯಾ ಹಾಗೂ ಶಿವಸೇನೆ (ಯುಬಿಟಿ) ಶಾಸಕ ಆದಿತ್ಯ ಠಾಕ್ರೆ ಮತ್ತು ಅವರ ಅಂಗರಕ್ಷಕರು ಸೆಲೆಬ್ರಿಟಿ ಮ್ಯಾನೇಜರ್ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸುವುದನ್ನು ಕಂಡ ಪ್ರತ್ಯಕ್ಷದರ್ಶಿಗಳು ಇದ್ದಾರೆ ಎಂದು ವಕೀಲರು ಈ ಹಿಂದೆ ಹೇಳಿದ್ದರು. ದಿಶಾ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದು ಈಗ ರಾಜಕೀಯ ತಿರುವನ್ನು ಪಡೆದುಕೊಂಡಿದೆ. ಸಚಿವ ನಿತೇಶ್ ರಾಣೆ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದೀಗ, ಬಿಜೆಪಿ ಸಂಸದ ನಾರಾಯಣ ರಾಣೆ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಆರೋಪಿಸಲಾಗಿದೆ. ಶಂಕಿತರನ್ನು ಬಂಧಿಸಿ ವಿಚಾರಣೆ ನಡೆಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಆದಿತ್ಯ ಠಾಕ್ರೆ ಹೆಸರು ಬಳಸದಂತೆ ಖುದ್ದು ಉದ್ಧವ್ ಠಾಕ್ರೆ ಅವರೇ ನನಗೆ ಎರಡು ಬಾರಿ ಕರೆ ಮಾಡಿ ತಿಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Disha Salian: ದಿಶಾ ಸಾಲಿಯಾನ್ ಆತ್ಮಹತ್ಯೆ ಪ್ರಕರಣಕ್ಕೆ ತಳುಕು ಹಾಕಿಕೊಂಡ ಆದಿತ್ಯ ಠಾಕ್ರೆ ಹೆಸರು; ಮರು ತನಿಖೆಗೆ ಆಗ್ರಹ
ದಿಶಾ ಸಾಲಿಯನ್ ಕೇಸ್
ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ಆಗಿದ್ದ ದಿಶಾ, ಜೂನ್ 8, 2020 ರಂದು ಮುಂಬೈನ ಬಹುಮಹಡಿ ಕಟ್ಟಡದಿಂದ ಬಿದ್ದು ನಿಧನರಾದರು. ನಂತರ ಪೊಲೀಸರು ಅವರ ಸಾವನ್ನು ಆತ್ಮಹತ್ಯೆ ಎಂದು ಹೇಳಿದ್ದರು. ಆದರೆ ದಿಶಾ ತಂದೆ ಈ ಪೊಲೀಸರ ಈ ಹೇಳಿಕೆಯನ್ನು ತಳ್ಳಿ ಹಾಕಿದ್ದರು. ತನ್ನ ಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಅವರು ಹೇಳಿದ್ದರು. ಜೂನ್ 8 ರಂದು ತಮ್ಮ ಮಗಳು ಆದಿತ್ಯ ಠಾಕ್ರೆ, ನಟರಾದ ಸೂರಜ್ ಪಾಂಚೋಲಿ ಮತ್ತು ಡಿನೋ ಮೋರಿಯಾ ಭಾಗವಹಿಸಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂದು ಅವರು ಹೇಳಿದ್ದಾರೆ. ದಿಶಾ ಸಾವಿನ ತನಿಖೆಯನ್ನು ಸರ್ಕಾರ 2023 ರಲ್ಲಿ ರಚಿಸಿದ್ದ ಎಸ್‌ಐಟಿ ನಡೆಸುತ್ತಿದೆ. ಆದಿತ್ಯ ಠಾಕ್ರೆ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು, ಅವು ಆಧಾರರಹಿತ ಎಂದು ಕರೆದಿದ್ದಾರೆ. ಈ ಆರೋಪಗಳು ತಮ್ಮ ಖ್ಯಾತಿಗೆ ಕಳಂಕ ತರುವ ಬಿಜೆಪಿಯ ಪ್ರಯತ್ನ ಎಂದು ಅವರು ಹೇಳಿದ್ದಾರೆ. "ಕಳೆದ 5 ವರ್ಷಗಳಿಂದ ಇದು ನಡೆಯುತ್ತಿದೆ. ವಿಷಯ ನ್ಯಾಯಾಲಯದಲ್ಲಿದ್ದರೆ, ನಾನು ನ್ಯಾಯಾಲಯದಲ್ಲಿ ಪ್ರತಿಕ್ರಿಯಿಸುತ್ತೇನೆ" ಎಂದು ಅವರು ಹೇಳಿದ್ದಾರೆ.