Disha Salian: ದಿಶಾ ಸಾಲಿಯಾನ್ ಆತ್ಮಹತ್ಯೆ ಪ್ರಕರಣಕ್ಕೆ ತಳುಕು ಹಾಕಿಕೊಂಡ ಆದಿತ್ಯ ಠಾಕ್ರೆ ಹೆಸರು; ಮರು ತನಿಖೆಗೆ ಆಗ್ರಹ
Disha Salian: ದಿಶಾ ಸಾಲಿಯಾನ್ ಅವರ ತಂದೆ ತನ್ನ ಮಗಳ ಸಾವಿನ ಬಗ್ಗೆ ಮತ್ತೆ ಮರು ತನಿಖೆ ಮಾಡುವಂತೆ ಆಗ್ರಹಿಸಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ಆದಿತ್ಯ ಠಾಕ್ರೆ ಹೆಸರು ಕೇಳಿ ಬಂದಿದೆ.

ದಿಶಾ ಸಾಲಿಯಾನ್- ಆದಿತ್ಯ ಠಾಕ್ರೆ

ಮುಂಬೈ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರ ಮ್ಯಾನೇಜರ್ ದಿಶಾ ಸಾಲಿಯಾನ್ (Disha Salian) ಅವರ ಸಾವಿನ ಪ್ರಕರಣ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ದಿಶಾ ಸಾಲಿಯಾನ್ (Disha Salian) ಅವರ ತಂದೆ ತನ್ನ ಮಗಳ ಸಾವಿನ ಬಗ್ಗೆ ಮತ್ತೆ ಮರು ತನಿಖೆ ಮಾಡುವಂತೆ ಆಗ್ರಹಿಸಿ ಬಾಂಬೆ ಹೈಕೋರ್ಟ್ (Bombay High Court) ಮೆಟ್ಟಿಲೇರಿದ್ದಾರೆ.
ನಿಗೂಢವಾಗಿ ಮೃತಪಟ್ಟಿರುವ ದಿಶಾ ಸಾವಿನ ಬಗ್ಗೆ ಅವರ ತಂದೆ ಸತೀಶ್ ಸಾಲಿಯಾನ್ (Satish Salian) ಅನುಮಾನ ವ್ಯಕ್ತಪಡಿಸಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ (CBI) ವರ್ಗಾಯಿಸಲು ಹೈ ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಅಲ್ಲದೇ ದಿಶಾ ತಂದೆ ಸತೀಶ್ ಸಾಲಿಯಾನ್ ಶಿವಸೇನೆ ನಾಯಕ ಆದಿತ್ಯ ಠಾಕ್ರೆ(Aditya thackeray) ವಿರುದ್ಧ ಎಫ್‌ಐಆರ್ ದಾಖಲಿಸುವಂತೆಯೂ ಆಗ್ರಹಿಸಿದ್ದು, ಮಗಳ ಸಾವಿನಲ್ಲಿ ಅನ್ಯಾಯ ನಡೆದಿದೆ ಎಂದು ಆರೋಪಿಸಿದ್ದಾರೆ. ಜತೆಗೆ ನನ್ನ ಮಗಳ ಮೇಲೆ ಅತ್ಯಾಚಾರ ಮಾಡಿ ಆಮೇಲೆ ಕೊಲೆ ಮಾಡಲಾಗಿದ್ದು, ಇದೊಂದು ರಾಜಕೀಯ ಪಿತೂರಿ ಎಂದಿದ್ದಾರೆ.
ಈ ಸುದ್ದಿಯನ್ನು ಓದಿ: Viral Vide: ʼಅಂಕಲ್ʼ ಎಂದಿದ್ದಕ್ಕೆ ಕೋಪಗೊಂಡ ಚಾಯ್‌ವಾಲಾ; ಈ ಸಮಸ್ಯೆಗೆ ಪರಿಹಾರ ತಿಳಿಸಿ ಪ್ಲೀಸ್ ಎಂದ ಯುವತಿ!
ಇನ್ನು ದಿಶಾ ಸಾಲಿಯನ್ ಅವರ ತಂದೆ ಸಲ್ಲಿಸಿದ ಅರ್ಜಿಯಲ್ಲಿ, ಆದಿತ್ಯ ಠಾಕ್ರೆ ಅವರ ಹೆಸರನ್ನು ನೇರವಾಗಿ ಬರೆಯಲಾಗಿದ್ದು, ಯುಬಿಟಿ ಶಿವಸೇನೆ ಶಾಸಕ ಆದಿತ್ಯ ಠಾಕ್ರೆ, ಮಾಜಿ ಮೇಯರ್ ಕಿಶೋರಿ ಪೆಡ್ನೇಕರ್ ಮತ್ತು ಇತರರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಜತೆಗೆ ಆದಿತ್ಯ ಠಾಕ್ರೆ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 376 (ಡಿ), 302, 201, 218, 409, 166, 107, 109, 120 (ಬಿ) ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ಮತ್ತು ಈ ಪ್ರಕರಣವನ್ನು ಸಿಬಿಐಗೆ ನೀಡಬೇಕೆಂದು ಸತೀಶ್ ಸಾಲಿಯನ್ ನ್ಯಾಯಾಲಯವನ್ನು ಮನವಿ ಮಾಡಿಕೊಂಡಿದ್ದಾರೆ. ಸದ್ಯ ಈ ಪ್ರಕರಣ ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಭಾರಿ ಗದ್ದಲ ಸೃಷ್ಟಿಸಿದ್ದು, ಆದಿತ್ಯ ಠಾಕ್ರೆ ಹೆಸರನ್ನು ನೇರವಾಗಿ ಉಲ್ಲೇಖಿಸಿರುವ ಕಾರಣ ಆದಿತ್ಯ ಠಾಕ್ರೆಗೆ ಆತಂಕ ಶುರುವಾಗಿದೆ.