ನವದೆಹಲಿ, ನ.16: ಕೇಂದ್ರ ಸರ್ಕಾರದ ವಿರುದ್ಧ ಜಿರೆಳೆಗಳ ಹೋರಾಟದಲ್ಲಿ ಭಾರೀ ಸದ್ದು ಮಾಡಿದ್ದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ (AISA) ಅಧ್ಯಕ್ಷೆ ನೇಹಾ ಬೋರಾ (Neha Bora) ತಮ್ಮ ಲಿಂಗ ಗುರುತಿನ ಬಗ್ಗೆ ಜನರಿಗೆ ಸ್ಪಷ್ಟನೆ ನೀಡಿದ್ದಾರೆ. ಖಾಸಗಿ ವಾಹಿನಿ ಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ನೇಹಾ ಅವರು, ತಮ್ಮನ್ನು ಮಹಿಳೆ ಎಂದು ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ. "ನಾನು ಮಹಿಳೆಯಲ್ಲ, ನಾನು ನಾನ್-ಬೈನರಿ (Non-binary)" ಎಂದು ಸ್ಪಷ್ಟವಾಗಿ ಹೇಳಿರುವ ಅವರು, ವ್ಯಕ್ತಿಗಳ ಲಿಂಗ ಗುರುತನ್ನು ಗೌರವಿಸುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದ್ದಾರೆ.
ನೇಹಾ ಬೋರಾ ಅವರ ಈ ಹೇಳಿಕೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ನಾನ್-ಬೈನರಿ ಲಿಂಗ ಗುರುತು ಕುರಿತು ವ್ಯಾಪಕ ಚರ್ಚೆ ಶುರುವಾಗಿದೆ. ನಾನ್-ಬೈನರಿ ಎಂಬುದು ಸಾಂಪ್ರದಾಯಿಕ ಪುರುಷ-ಮತ್ತು-ಮಹಿಳೆಯ ಲಿಂಗಕ್ಕೆ ಹೊಂದಿಕೆಯಾಗದ ಗುರುತಾಗಿದೆ. ಇದೇ ನನ್ನ ಗುರುತು. ಆದರೆ, ಅನೇಕ ಜನರು ನನ್ನನ್ನು ವಿದ್ಯಾರ್ಥಿ ನಾಯಕಿ, ಅಧ್ಯಕ್ಷೆ, ‘ಅವಳು’ (She, Her) ಎಂದೆಲ್ಲಾ ಕರೆಯುತ್ತಾರೆ. ಅವರದ್ದೇನೂ ತಪ್ಪಿಲ್ಲ. ಅವರಿಗೆ ನನ್ನ ಲಿಂಗ ಗುರುತಿನ ಬಗ್ಗೆ ತಿಳಿದಿಲ್ಲದ ಕಾರಣ ಅವರನ್ನು ಹಾಗೆ ಸಂಬೋಧಿಸುತ್ತಾರೆ ಎಂದು ರಿವೀಲ್ ಮಾಡಿದ್ದಾರೆ.
ವಿಡಿಯೋ ನೋಡಿ
ಏನಿದು 'ನಾನ್-ಬೈನರಿ' ಲಿಂಗ ಗುರುತು?
ಸಾಂಪ್ರದಾಯಿಕವಾಗಿ ಸಮಾಜವು ಮನುಷ್ಯರನ್ನು 'ಪುರುಷ' ಅಥವಾ 'ಮಹಿಳೆ' ಎಂಬ ಎರಡು ವರ್ಗಗಳಲ್ಲಿ ಮಾತ್ರ ಗುರುತಿಸುತ್ತದೆ. ಇದನ್ನು 'ಬೈನರಿ ಜೆಂಡರ್' ವ್ಯವಸ್ಥೆ ಎನ್ನಲಾಗುತ್ತದೆ. ಆದರೆ, ತಮ್ಮನ್ನು ಕೇವಲ ಪುರುಷ ಅಥವಾ ಮಹಿಳೆ ಎಂಬ ಚೌಕಟ್ಟಿನೊಳಗೆ ಗುರುತಿಸಿಕೊಳ್ಳಲು ಇಷ್ಟಪಡದ, ಅಥವಾ ಈ ಎರಡೂ ಲಿಂಗಗಳ ಗುಣಲಕ್ಷಣಗಳ ಮಿಶ್ರಣವನ್ನು ಹೊಂದಿರುವ, ಇಲ್ಲವೇ ಯಾವುದೇ ಲಿಂಗಕ್ಕೆ ಸೀಮಿತವಾಗದ ವ್ಯಕ್ತಿಗಳನ್ನು 'ನಾನ್-ಬೈನರಿ' ಎಂದು ಕರೆಯಲಾಗುತ್ತದೆ.
ಬ್ರಾಹ್ಮಣರ ಬಗ್ಗೆ ನೇಹಾ ಬೋರಾ ಹೇಳಿಕೆ ಅತ್ಯಂತ ಖಂಡನೀಯ: ಕಿಚಿಡಿ ಕೊಟ್ರೇಶ್
ಯಾರು ಈ ನೇಹಾ ಬೋರಾ?
ನೇಹಾ ಬೋರಾ ಉತ್ತರಾಖಂಡದ ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಎಂ.ಎ ಪದವಿ ಪಡೆದಿದ್ದಾರೆ. ಸದ್ಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಮಾಡುತ್ತಿರುವ ಇವರು, ಅಲ್ಲಿನ ಎಡಪಂಥೀಯ ವಿದ್ಯಾರ್ಥಿ ರಾಜಕಾರಣದ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸೋಮ್ ವಾಂಗ್ಚುಕ್ ಅವರೊಂದಿಗೆ ಜಂತರ್ ಮಂತರ್ನಲ್ಲಿ ನಡೆದ ಉಪವಾಸ ಸತ್ಯಾಗ್ರಹದಲ್ಲೂ ಇವರು ಕಾಣಿಸಿಕೊಂಡಿದ್ದರು. ನಂತರ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಮತಗಳ್ಳತನದ ವಿರುದ್ಧದ ಹೋರಾಟದಲ್ಲಿ ಬೀದಿಗಿಳಿದು ಪ್ರತಿಭಟಿಸಿದ್ದರು. ಅಲ್ಲದೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ನೇಹಾ ಬೋರಾ ಆಗಾಗ್ಗೆ ಕಾಣಿಸಿಕೊಳ್ಳುವ ಮೂಲಕ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದಾರೆ.