Terrorist Arrested: ಲಾಡ್ಜ್‌ನಲ್ಲಿದ್ದುಕೊಂಡೇ ಐಸಿಸ್ ಉಗ್ರರಿಗೆ ಬಾಂಬ್ ತಯಾರಿಕೆ; ಈತನ ಸ್ಟೋರಿ ಕೇಳಿದ್ರೆ ರಕ್ತ ಕುದಿಯುತ್ತೆ
ಜಾರ್ಖಂಡ್‌ನ ಇಸ್ಲಾಂ ನಗರದ ತಬಾರಕ್ ಲಾಡ್ಜ್ ಒಂದರಲ್ಲಿ ಐಸಿಸ್ ಜೊತೆ ಸಂಪರ್ಕದಲ್ಲಿದ್ದವನನ್ನು ಬಂಧಿಸಲಾಗಿದೆ. ಬಂಧಿತನನ್ನು ಡ್ಯಾನಿಶ್ ಎಂದು ಗುರುತಿಸಲಾಗಿದ್ದು, ಈತ ಪಾಕಿಸ್ತಾನದ ಜೊತೆ ಸಂಬಂಧ ಹೊಂದಿದ್ದ ಎಂದು ತಿಳಿದು ಬಂದಿದೆ. ದೇಶೀಯ ಪಿಸ್ತೂಲು, ಜೀವಂತ ಮದ್ದುಗುಂಡುಗಳು, ಹೈಡ್ರೋಕ್ಲೋರಿಕ್ ಆಮ್ಲ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

-

ರಾಂಚಿ: ಜಾರ್ಖಂಡ್‌ನ ಇಸ್ಲಾಂ ನಗರದ ತಬಾರಕ್ ಲಾಡ್ಜ್ ಒಂದರಲ್ಲಿ (Terrorist Arrested) ಐಸಿಸ್ ಜೊತೆ ಸಂಪರ್ಕದಲ್ಲಿದ್ದವನನ್ನು ಬಂಧಿಸಲಾಗಿದೆ. ಬಂಧಿತನನ್ನು ಡ್ಯಾನಿಶ್ ಎಂದು ಗುರುತಿಸಲಾಗಿದ್ದು, ಈತ ಪಾಕಿಸ್ತಾನದ ಜೊತೆ ಸಂಬಂಧ ಹೊಂದಿದ್ದ ಎಂದು ತಿಳಿದು ಬಂದಿದೆ. ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿಗಾಗಿ ಸ್ಪರ್ಧಾತ್ಮಕ ಎಸ್‌ಎಸ್‌ಸಿ ಪರೀಕ್ಷೆಗೆ 'ಅಧ್ಯಯನ' ಮಾಡುತ್ತಿರುವ ಯುವಕ ಅಶರ್ ಡ್ಯಾನಿಶ್, ಐಸಿಸ್ ಭಯೋತ್ಪಾದಕ ಗುಂಪುಗಾಗಿ ಬಾಂಬ್‌ಗಳನ್ನು ತಯಾರಿಸುತ್ತಿದ್ದ ಎಂದು ತಿಳಿದು ಬಂದಿದೆ.
ಕಳೆದ ವಾರ ದೆಹಲಿ ಪೊಲೀಸರು ಮತ್ತೊಬ್ಬ ಭಯೋತ್ಪಾದಕ ಅಫ್ತಾಬ್ ಖುರೇಷಿಯನ್ನು ಬಂಧಿಸಿ ವಿಚಾರಣೆ ನಡೆಸಿದ ನಂತರ, ಇತರ ರಾಜ್ಯಗಳಲ್ಲಿ ದಾಳಿಗಳು ನಡೆದವು. ಅಂತಿಮವಾಗಿ, ಅಫ್ತಾಬ್ ಒದಗಿಸಿದ ಮತ್ತು ಈ ದಾಳಿಗಳಲ್ಲಿ ಕಂಡುಬಂದ ಮಾಹಿತಿಯ ಆಧಾರದ ಮೇಲೆ, ರಾಷ್ಟ್ರ ರಾಜಧಾನಿ ಮತ್ತು ಜಾರ್ಖಂಡ್‌ನ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಡ್ಯಾನಿಶ್ ಮತ್ತು ಇತರ ಹನ್ನೆರಡು ಜನರನ್ನು ಪತ್ತೆಹಚ್ಚಲಾಗಿದೆ.
ಡ್ಯಾನಿಶ್ ಕೊಠಡಿಯಿಂದ ಗನ್‌ಪೌಡರ್ ಮತ್ತು ಬಾಂಬ್‌ಗಳು, ಜೊತೆಗೆ ದೊಡ್ಡ ಪ್ರಮಾಣದ ಪೊಟ್ಯಾಸಿಯಮ್ ನೈಟ್ರೇಟ್ ಮತ್ತು ಮನೆಯಲ್ಲಿ ತಯಾರಿಸಿದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ದೇಶೀಯ ಪಿಸ್ತೂಲು, ಜೀವಂತ ಮದ್ದುಗುಂಡುಗಳು, ಹೈಡ್ರೋಕ್ಲೋರಿಕ್ ಆಮ್ಲ, ನೈಟ್ರಿಕ್ ಆಮ್ಲ, ಗಂಧಕ ಪುಡಿ, ತಾಮ್ರದ ಹಾಳೆಗಳು, ಬಾಲ್ ಬೇರಿಂಗ್‌ಗಳು, ಸ್ಟ್ರಿಪ್ ತಂತಿಗಳು, ಎಲೆಕ್ಟ್ರಾನಿಕ್ ಸರ್ಕ್ಯೂಟ್‌ಗಳು, ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ಗಳು ಮತ್ತು ನಗದನ್ನು ತನಿಖಾ ತಂಡ ವಶಪಡಿಸಿಕೊಂಡಿದೆ.
ಈ ಸುದ್ದಿಯನ್ನೂ ಓದಿ: Lashkar Terrorist: ಧ್ವಂಸಗೊಂಡಿರುವ ಉಗ್ರ ನೆಲೆಯನ್ನು ನೋಡಿ ಕಣ್ಣೀರಿಟ್ಟ ಭಯೋತ್ಪಾದಕ! ಈ ವಿಡಿಯೊ ನೋಡಿ
ಕೊಠಡಿಯಿಂದ ವಿವಿಧ ಗಾತ್ರ ಮತ್ತು ತೀವ್ರತೆಯ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಲಾಡ್ಜ್‌ನ ಆ ರೂಂನಲ್ಲಿದ್ದುಕೊಂಡೇ ಆತ ಹಲವು ಯುವಕರನ್ನು ಐಸಿಸ್ ಭಯೋತ್ಪಾದಕ ಗುಂಪುಗಳಿಗೆ ಸೇರಿಸುತ್ತಿದ್ದ ಎಂಬ ಭಯಾನಕ ಸತ್ಯ ತಿಳಿದು ಬಂದಿದೆ. ಕೆಲವು ದಿನಗಳ ಹಿಂದೆ ದೆಹಲಿ ಪೊಲೀಸ್ ವಿಶೇಷ ಘಟಕವು ಸಾಮಾಜಿಕ ಜಾಲತಾಣದ ಮೂಲಕ ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಐವರನ್ನು ಬಂಧಿಸಿದೆ. ಆರೋಪಿಗಳಿಂದ ಸುಧಾರಿತ ಕಚ್ಛಾ ಸ್ಫೋಟಕ(ಐಇಡಿ)ಗಳನ್ನು ತಯಾರಿಸಲು ಬಳಸುವ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂಲಗಳ ಪ್ರಕಾರ, ಆರೋಪಿಗಳು ಪಾಕಿಸ್ತಾನದ ಉಗ್ರ ಸಂಘಟನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಸಂಪರ್ಕದಲ್ಲಿದ್ದರು.