ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fake Aadhaar card: ಆಧಾರ್ ಅಸಲಿಯೋ, ನಕಲಿಯೋ ಪತ್ತೆ ಹಚ್ಚುವುದು ಹೇಗೆ?

ಪ್ರತಿಯೊಂದು ವ್ಯವಹಾರಗಳಿಗೂ ನಾವು ದಾಖಲೆಯಾಗಿ ಬಳಸುವ ಆಧಾರ್ ಕಾರ್ಡ್ ಅಸಲಿಯೋ, ನಕಲಿಯೋ ಎನ್ನುವುದನ್ನು ತಿಳಿದುಕೊಳ್ಳುವುದು ಹೇಗೆ ಎಂದು ಯಾವತ್ತಾದರೂ ಯೋಚಿಸಿದ್ದೀರಾ? ಹೌದು ಈಗ ನಿಮ್ಮ ಆಧಾರ್ ಕಾರ್ಡ್ ಅಸಲಿಯೋ, ನಕಲಿಯೋ ಎಂಬುದನ್ನು ಪತ್ತೆ ಹಚ್ಚಲು ದಾರಿ ಇದೆ. ಅದು ಯಾವುದು ಇಲ್ಲಿದೆ ಮಾಹಿತಿ.

ನವದೆಹಲಿ: ಸೈಬರ್ ಸೆಂಟರ್ (Cyber center), ಸೇವಾ ಕೇಂದ್ರಗಳಿಗೆ (Seva Kendra) ನಾವು ಹೋಗಿ ನಾವು ಮಾಡಿಸುವ ಆಧಾರ್ ಕಾರ್ಡ್ (Aadhaar card) ಅಸಲಿಯೋ, ನಕಲಿಯೋ ಎನ್ನುವ ಭಯ ಎಲ್ಲರನ್ನೂ ಕಾಡುತ್ತದೆ. ಯಾಕೆಂದರೆ ಈ ಆಧಾರ್ ಕಾರ್ಡ್ ಗಳು ಹತ್ತಿರದ ಅಂಚೆ ಕಚೇರಿ (Post office) ಮೂಲಕ ವಿತರಣೆಯಾಗುತ್ತದೆ. ಇದಕ್ಕಾಗಿ ಇದು ನಮ್ಮ ಕೈ ಸೇರುವ ಮೊದಲೇ ನೂರಾರು ಮಂದಿಯ ಕೈಗಳಿಗೆ ಹಾದು ಬಂದಿರುತ್ತದೆ. ಹೀಗಾಗಿ ವಂಚನೆ ಎಲ್ಲಿ ಹೇಗೆ ಬೇಕಾದರೂ ಆಗಬಹುದು. ಈಗ ಈ ವಂಚನೆಯನ್ನು ಪತ್ತೆ ಹಚ್ಚಲು ದಾರಿ ಇದೆ. ನಾವು ನಮ್ಮ ಕೈ ಸೇರಿರುವ ಆಧಾರ್ ಕಾರ್ಡ್ ಅಸಲಿಯೋ, ನಕಲಿಯೋ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ.

ಸಾಮಾನ್ಯವಾಗಿ ಈಗ ಎಲ್ಲ ಕಡೆ ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್ ಬಳಕೆಯಾಗುತ್ತದೆ. ಉದ್ಯೋಗಿ, ಮನೆ ಕೆಲಸಗಾರ, ಚಾಲಕ, ಬಾಡಿಗೆದಾರ.. ಹೀಗೆ ಇವರೆಲ್ಲ ಆಧಾರ್ ಕಾರ್ಡ್ ನ ಸತ್ಯಾಸತ್ಯತೆಯನ್ನು ಈಗ ಪರಿಶೀಲಿಸಲೇಬೇಕಾಗುತ್ತದೆ. ಇಲ್ಲವಾದರೆ ನಾವು ಮೋಸ ಹೋಗಬಹುದು. ಯಾರದ್ದೇ ಆಗಿರಲಿ ಗುರುತಿನ ಪುರಾವೆಯಾಗಿ ನಾವು ಆಧಾರ್ ಕಾರ್ಡ್ ಅನ್ನು ಪಡೆದುಕೊಂಡಾಗ ಅದನ್ನು ಪರಿಶೀಲನೆಗೆ ಒಳಪಡಿಸುವುದು ಬಹುಮುಖ್ಯವಾಗಿದೆ. ಇದನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI ) ಕೂಡ ಶಿಫಾರಸು ಮಾಡುತ್ತದೆ.

ಸಾಮಾನ್ಯ ಜನರ ಹಿನ್ನೆಲೆ ಪರಿಶೀಲಿಸಬೇಕಾದರೆ ಆಧಾರ್ ಕಾರ್ಡ್ ಮೂಲಕ ಅದನ್ನು ಸುಲಭವಾಗಿ ಪತ್ತೆ ಮಾಡಬಹುದು. ಇದಕ್ಕಾಗಿ ಯಾವುದೇ ಕೇಂದ್ರಗಳಿಗೆ ಹೋಗಬೇಕಿಲ್ಲ. ನಿಮ್ಮಲ್ಲಿ ಮೊಬೈಲ್ ಇದ್ದರೆ ಸಾಕು. ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಸುಲಭವಾಗ 'ಆಧಾರ್' ಕಾರ್ಡ್‌ನ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಬಹುದು.

ಹೇಗೆ ಪರಿಶೀಲಿಸುವುದು?

ವೆಬ್ ಸೈಟ್ https://myaadhaar.uidai.gov.in/verifyAadhaarಗೆ ಭೇಟಿ ನೀಡಿ ಆಧಾರ್ ಹೊಂದಿರುವವರ ವಯಸ್ಸು, ವರ್ಗ, ಲಿಂಗ, ರಾಜ್ಯ ಮತ್ತು ಅವರ ಫೋನ್ ಸಂಖ್ಯೆಯ ಕೊನೆಯ ಮೂರು ಅಂಕೆಗಳನ್ನು ಪರಿಶೀಲಿಸಬಹುದಾಗಿದೆ.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಎಂಬುದು ಆಧಾರ್ ಕಾಯ್ದೆ 2016 ರ ಅಡಿಯಲ್ಲಿ ಭಾರತ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಶಾಸಕಾಂಗ ಪ್ರಾಧಿಕಾರವಾಗಿದೆ. ಇದು ಪ್ರತಿ ಆಧಾರ್ ಕಾರ್ಡ್, ಪತ್ರ ಅಥವಾ ಇ-ಆಧಾರ್‌ನಲ್ಲಿ ಸುರಕ್ಷಿತ ಕ್ಯೂಆರ್ ಕೋಡ್ ಅನ್ನು ಹಾಕಿರುತ್ತದೆ. ಈ ಕ್ಯೂಆರ್ ಕೋಡ್ ಆಧಾರ್ ಸಂಖ್ಯೆ ಹೊಂದಿರುವವರ ಹೆಸರು, ಲಿಂಗ, ಜನ್ಮ ದಿನಾಂಕ ಮತ್ತು ವಿಳಾಸ, ಜೊತೆಗೆ ಛಾಯಾಚಿತ್ರವನ್ನು ಒಳಗೊಂಡಿರುತ್ತದೆ. ಕ್ಯೂಆರ್ ಕೋಡ್‌ನಲ್ಲಿರುವ ಮಾಹಿತಿಯು ಸುರಕ್ಷಿತವಾಗಿರುತ್ತದೆ. ಇದನ್ನು ಕದಿಯುವುದು, ಬದಲಾಯಿಸುವುದು ಸಾಧ್ಯವಿಲ್ಲ. ಯಾಕೆಂದರೆ ಇದಕ್ಕೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಡಿಜಿಟಲ್ ಸಹಿ ಮಾಡಿರುತ್ತದೆ.

ಇದನ್ನೂ ಓದಿ: Self Harming: ಶಾಲೆಗೆ ಹೋಗಲು ಒತ್ತಾಯಿಸಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ!

ಗೂಗಲ್ ಪ್ಲೇ ಮತ್ತು ಆಪ್ ಸ್ಟೋರ್‌ನಲ್ಲಿ ಲಭ್ಯವಿರುವ ಆಧಾರ್ ಕ್ಯೂಆರ್ ಸ್ಕ್ಯಾನರ್ ಅಪ್ಲಿಕೇಶನ್ ಬಳಸಿ ಈ ಕ್ಯೂಆರ್ ಕೋಡ್ ಅನ್ನು ಪರಿಶೀಲಿಸಬಹುದಾಗಿದೆ. ಈ ಮೂಲಕ ಸುಲಭವಾಗಿ ಆಧಾರ್ ಅಸಲಿಯೋ, ನಕಲಿಯೋ ಎಂಬುದನ್ನು ಪತ್ತೆ ಹಚ್ಚಬಹುದು.

ವಿದ್ಯಾ ಇರ್ವತ್ತೂರು

View all posts by this author